Feedback / Suggestions

Crime Reported in : Mulki PS

ದಿನಾಂಕ: 15-01-2023 ರಂದು ಸಂಜೆ 18.30 ಗಂಟೆಯಿಂದ ದಿನಾಂಕ: 16-01-2023 ರಂದು ಬೆಳಗ್ಗೆ 09.00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿ  Vishwanatha Shetty ಗೆಳೆಯನಾದ ಶ್ರೀ ಹರೀಶ್ ರಾಮಣ್ಣ ಶೆಟ್ಟಿ ಎಂಬವರ ಮನೆಯಾದ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ, ಗುತ್ತಕಾಡು ಎಂಬಲ್ಲಿರುವ ಚಂದ್ರಿಕಾ ಎಂಬ ಹೆಸರಿನ ಮನೆಯ ಎದುರಿನ ಬಾಗಿಲಿನ ಲಾಕನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿದ್ದ ದೇವರ ಕೋಣೆ, ಅಡುಗೆ ಕೋಣೆ ಮತ್ತು ಎರಡು ಬೆಡ್ ರೂಂ ಗಳಲ್ಲಿ ಮತ್ತು ಮೇಲಿನ ಅಂತಸ್ತಿನಲ್ಲಿರುವ 3 ಬೆಡ್ ರೂಮ್ ಗಳಲ್ಲಿ ಜಾಲಾಡಿ ಕೆಳಗಿನ 1 ಬೆಡ್ ರೂಮಿನ ಬದಿಯ ಕೋಣೆಯಲ್ಲಿದ್ದ ಕನ್ನಡಿ ಇರುವ ಡ್ರೆಸ್ಸಿಂಗ್ ಟೇಬಲಿನ ಕೆಳಗಿನ ಲಾಕರಿನ ಲಾಕನ್ನು ಒಡೆದು ಲಾಕರಿನ ಒಳಗಿದ್ದ ಸುಮಾರು 6 ಲಕ್ಷ ನಗದು ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವು ಆದ ಚಿನ್ನಾಭರಣಗಳ ಪ್ರಮಾಣ ಮತ್ತು ಮೌಲ್ಯ ಮುಂದಕ್ಕೆ ಮನೆ ಮಾಲೀಕರಾದ ಶ್ರೀ ಹರೀಶ್ ರಾಮಣ್ಣ ಶೆಟ್ಟಿ ಯವರು ಬಂದು ಪರಿಶೀಲಿಸಿ ನೀಡುವುದಾಗಿದೆ.” ಎಂಬಿತ್ಯಾದಿ.

 

Crime Reported in : Traffic North Police Station                               

 ಪಿರ್ಯಾದಿ ಅಬ್ದುಲ್ ರಹಿಮಾನ್ (48 ವರ್ಷ) ರವರು ದಿನಾಂಕ: 16-01-2023 ರಂದು ಅವರ ಬಾಬ್ತು KA-19-X-6407 ನಂಬ್ರದ ಮೋಟಾರು ಸೈಕಲಿನಲ್ಲಿ ಮನೆಯಿಂದ ಕಾರ್ನಾಡು ಮಾರ್ಗವಾಗಿ ಮಂಗಳೂರು ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 08:30 ಘಂಟೆಗೆ ಕೊಲ್ನಾಡು ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂದಿನಿಂದ KA-14-P-3801 ನಂಬ್ರದ Ritz ಕಾರನ್ನು ಅದರ ಚಾಲಕ ಶಂಕರಪ್ಪ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ NH 66ನೇ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎದುರಿನಲ್ಲಿ ಮಂಗಳೂರು ಕಡೆಗೆ ಹರೀಶ್ ಕಂದಾವರ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ KA-20-MB-3787 ನಂಬ್ರದ ಕಾರಿನ ಹಿಂದಿನ ಎಡ ಭಾಗಕ್ಕೆ ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಹರೀಶ್ ಕಂದಾವರ್ ರವರ ಕಾರು ಮುಂದಕ್ಕೆ ಬಲಬದಿಗೆ ತಿರುಗಿ ರಸ್ತೆಯಲ್ಲಿ ಇರಿಸಲಾಗಿದ್ದ ಕಬ್ಬಿಣದ ಬ್ಯಾರಿಕೇಡಿಗೆ ಡಿಕ್ಕಿಯಾಗಿದ್ದು Ritz ಕಾರು ಡಿಕ್ಕಿ ಪಡಿಸಿದ ಬಳಿಕ ಕಾರು ಮುಂದಕ್ಕೆ ಎಡ ಬದಿಗೆ ಚಲಿಸಿ ಪಿರ್ಯಾದಿದಾರರ ಮೋಟಾರು ಸೈಕಲಿನ ಹಿಂಭಾಗಕ್ಕೆ ಹಾಗೂ ಪಿರ್ಯಾದಿದಾರರ ಮೋಟಾರ್ ಸೈಕಲ್ಲಿನ ಪಕ್ಕದಲ್ಲಿ ಹೋಗುತ್ತಿದ್ದ  ಶರತ್ ಕುಮಾರ್ ರವರ KA-19-EM-6039  ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಶರತ್ ಕುಮಾರ್ ರವು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಸೊಂಟದ ಭಾಗಕ್ಕೆ ಮೂಳೆ ಬಿರುಕು ಬಿಟ್ಟ ರೀತಿಯ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in : Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Rajamohan Shetty ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿರುವ ಶ್ರೀ ಆಧಿ ಶಕ್ತಿ ಮಹಾಕಾಳಿ ದೇವಸ್ಥಾನದ ಆಡಳಿತ ಮೋಕ್ತೇಶ್ವರರಾಗಿದ್ದು ದಿನಾಂಕ 15-01-2023 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ 16-01-2023 ರಂದು ಬೆಳಿಗ್ಗೆ 7.00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಯಾವುದೋ ಆಯುಧದಿಂದ ದೇವಸ್ಥಾನದ ಗದ್ದುಗೆ ಮಂಟಪದ ಮುಂಬಾಗಿಲಿನ ಬೀಗವನ್ನು ಮೀಟಿ ತೆಗೆದು ಗದ್ದುಗೆ ಮಂಟಪದ ಒಳಗಿದ್ದ ಮೂರು ಸ್ಟೀಲಿನ ಕಾಣಿಕೆ ಡಬ್ಬಿಗಳ ಮುಚ್ಚಳಕ್ಕೆ ಹಾಕಿದ ಬೀಗವನ್ನು ಮೀಟಿ ತೆಗೆದು ಕಾಣಿಕೆ ಡಬ್ಬಿಗಳಲ್ಲಿದ್ದ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾದ ನಗದು ಹಣ ಒಟ್ಟು ಸುಮಾರು 40,000/- ರೂಪಾಯಿ ಆಗಬವುದು ಎಂಬಿತ್ಯಾದಿಯಾಗಿದೆ.

 

Crime Reported in : Mangalore East Traffic PS                 

ಪಿರ್ಯಾದಿ ಅಬ್ದುಲ್ ರಹಮಾನ್, ಪ್ರಾಯ: 65 ವರ್ಷ ಎಂಬುವರು ದಿನಾಂಕ 08/01/2023 ರಂದು ಮಧ್ಯಾಹ್ನ ತಮ್ಮ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-EY-8486 ನೇಯದನ್ನು ಚಲಾಯಿಸಿಕೊಂಡು ಪಡೀಲ್ ಕಡೆಯಿಂದ ಮರೋಳಿ ಮಾರ್ಗವಾಗಿ ನಂತೂರು ಕಡೆಗೆ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬರುತ್ತಿರುವಾಗ ಸಮಯ ಸುಮಾರು 1-50 ಗಂಟೆ ವೇಳೆಗೆ ಕೈಕಂಬ ಬಳಿ ಇರುವ ಆಸ್ಟೀನ್ ವಾಲ್ & ಕಂಪನಿ ಎಂಬ ಕಟ್ಟಡದ ಎದುರು ತಲುಪುತ್ತಿದ್ದಂತೆ ಅವರ ಹಿಂಭಾಗದಿಂದ  ಚಲಾಯಿಸಿಕೊಂಡು ಬರುತ್ತಿದ್ದ ಕಾರು ನೊಂದಣಿ ಸಂಖ್ಯೆ: KA-19-MM-3676 ನೇಯದನ್ನು ಅದರ ಚಾಲಕನು ಪಿರ್ಯಾದಿದಾರರ ಮೋಟಾರ್ ಸೈಕಲನ್ನು ಬಲಗಡೆಯಿಂದ ಓವರ್ ಟೇಕ್ ಮಾಡುವ ವೇಳೆ ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಸದ್ರಿ ಕಾರಿನ ಎಡ ಮುಂಭಾಗದ ಡೋರ್ ಮೋಟಾರ್ ಸೈಕಲಿಗೆ ಢಿಕ್ಕಿಯಾಗಿ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅವರ ತಲೆಗೆ ಹಾಗೂ ಎರಡೂ ಕೈ ಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು ಎದೆಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ, ಸದ್ರಿ ಅಪಘಾತ ಪಡಿಸಿದ ಕಾರು ಚಾಲಕನು ಕಾರನ್ನು ನಿಲ್ಲಿಸುವಂತೆ ನಟಿಸಿ ಬಳಿಕ ಸ್ಥಳದಿಂದ ಪರಾರಿಯಾಗಿರುತ್ತಾನೆ, ಈ ಅಪಘಾತದಲ್ಲಿ ಗಾಯಗೊಂಡಿದ್ದ ಪಿರ್ಯಾದಿದಾರರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

Crime Reported in : Kankanady Town PS

ಪಿರ್ಯಾದಿ ಅಕಾಶ್ ಸಿ ಪಿ ರವರು  ಮಂಜಡ್ಕ, ಶಕ್ತಿನಗರ, ಮಂಗಳೂರು ನವರಾಗಿದ್ದು ಮಂಗಳೂರಿನ ಮೇರಿಹಿಲ್ ವೆಂಕಟರಮಣ ದೇವಸ್ಥಾನದ ಹಿಂದುಗಡೆ ದೇವಸ್ಥಾನಕ್ಕೆ ಸಂಬಂಧಿಸಿದ ಕಾಶಿ ಮಠ ಕಟ್ಟಡದಲ್ಲಿ JAZZ UP THE FASION PARADISE ಹೆಸರಿನ ಬಟ್ಟೆ ಅಂಗಡಿಯನ್ನು ಸುಮಾರು ಮೂರು ತಿಂಗಳ ಹಿಂದೆ ತೆರದು ವ್ಯಾಪಾರ ನಡೆಸಿಕೊಂಡಿದ್ದು, ಪಿರ್ಯಾದಿದಾರರು ಅಂಗಡಿಯಲ್ಲಿ ಯುವಕರ ಪ್ಯಾಂಟ್, ಶರ್ಟ್, ಟಿ-ಶರ್ಟ್, ಜ್ಯಾಕೆಟ್ಸ್, ಹುಡ್ಡೀಸ್, ಶೂಸ್ ಗಳನ್ನು ಮಾರಾಟ ಮಾಡಿ ವ್ಯಾಪಾರದಿಂದ ಬಂದ ಹಣವನ್ನು ಪಿರ್ಯಾದಿದಾರರು ಕ್ಯಾಶ್ ಡ್ರಾಯರ್ ನಲ್ಲಿಯೇ ಇಟ್ಟು ವಾರಕ್ಕೊಮ್ಮೆ ಬ್ಯಾಂಕಿಗೆ ಹಾಕುವುದಾಗಿದೆ. ದಿನಾಂಕ: 15.01.2023 ರಂದು ಬೆಳಿಗ್ಗೆ ಪಿರ್ಯಾದಿದಾರರು  10:30 ಗಂಟೆಗೆ ಅಂಗಡಿಗೆ ಬಂದಾಗ ಅಂಗಡಿಯ ಶಟರ್ ಡೋರಿನಲ್ಲಿ ಬೀಗ ಇರದೇ ಇದ್ದು, ಕೂಡಲೇ ಪಿರ್ಯಾದಿದಾರರು  ಶಟರನ್ನು ಮೇಲಕ್ಕೆ ಎತ್ತಿದಾಗ ಸ್ಲೈಡ್ ಡೋರ್ ಕೂಡಾ ಒಪನ್ ಆಗಿದ್ದು, ಅಂಗಡಿಯ ಒಳಗೆ ಹೋಗಿ ನೋಡಿದಾಗ ಕ್ಲೋತ್ ಹ್ಯಾಂಗರ್ ನಲ್ಲಿದ್ದ ಬಟ್ಟೆ ಬರೆಗಳು ಅಸ್ತವ್ಯಸ್ತವಾಗಿರುವುದನ್ನು ಕಂಡು ಪಿರ್ಯಾದಿದಾರರು ಹ್ಯಾಂಗರ್ ನಲ್ಲಿದ್ದ ಮತ್ತು ಸ್ಟಾಕ್ ರೂಮಿನ ರಾಕ್ ನಲ್ಲಿದ್ದ ಬಟ್ಟೆಗಳನ್ನು ಹಾಗೂ ಶೂ ಸ್ಟ್ಯಾಂಡ್ ನ್ನು ಪರಿಶೀಲಿಸಿದಾಗ ಕೆಲವು ಜೀನ್ಸ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಜ್ಯಾಕೇಟ್, ಹುಡ್ಡೀಸ್ ಮತ್ತು ಮೂರು ಶೂಗಳು ಇರದೇ ಇರುವುದು ಕಂಡು ಪಿರ್ಯಾದಿದಾರರು ಕ್ಯಾಶ್ ಡ್ರಾಯರನ್ನು ತೆರೆದು ನೋಡಿದಾಗ ಕ್ಯಾಶ್ ಡ್ರಾಯರ್ ನಲ್ಲಿ ಪಿರ್ಯಾದಿದಾರರು  ನಿನ್ನೆ ದಿನ ವ್ಯಾಪಾರ ಮಾಡಿ ಇಟ್ಟು ಹೋಗಿದ್ದ ಸುಮಾರು ರೂ. 20,000/- ಹಣ ಇಲ್ಲದಿರುವುದು ಕಂಡು ಬಂತು. ನಿನ್ನೆ ದಿನ ದಿನಾಂಕ: 14.01.2023 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 15.01.2023 ರಂದು ಬೆಳಿಗ್ಗೆ 10:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು JAZZ UP THE FASION PARADISE ಹೆಸರಿನ ಬಟ್ಟೆ ಅಂಗಡಿಯ ಶಟರ್ ಡೋರಿನ ಬೀಗವನ್ನು ಒಡೆದು ಸ್ಲೈಡ್ ಡೋರಿನ ಬೀಗವನ್ನು ತೆಗೆದು ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ ಸುಮಾರು 52,000/- ರೂ. ಮೌಲ್ಯದ ಬಟ್ಟೆಬರೆಗಳನ್ನು ಹಾಗೂ ಕ್ಯಾಶ್ ಡ್ರಾಯರ್ ನಲ್ಲಿದ್ದ ಸುಮಾರು ರೂ. 20,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾದ ಬಟ್ಟೆಬರೆಗಳನ್ನು ಹಾಗೂ ನಗದು ಹಣವನ್ನು ಪತ್ತೆಮಾಡಿ ಕಳ್ಳತನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

Crime Reported in :  Traffic North Police Station                   

ಪಿರ್ಯಾದಿ ವಾಸು ಡಿ ಸಾಲಿಯಾನ್ (56) ರವರು  ದಿನಾಂಕ: 15-01-2023 ರಂದು ಅವರ ಬಾಬ್ತು KA-19-HJ-7202 ನಂಬ್ರದ ಸ್ಕೂಟರಿನಲ್ಲಿ ಮುಲ್ಕಿಗೆ ಬಂದು ಪೆಟ್ರೋಲ್ ಹಾಕಿಸಿ ಅಲ್ಲಿಂದ ಅವರ ಅಂಗಡಿ ಪಂಜಿನಡ್ಕ ಕಡೆಗೆ ಹೋಗುವರೇ ಕಾರ್ನಾಡು ಜಂಕ್ಷನ್ ಮೂಲಕ ದರ್ಗಾ ರಸ್ತೆಯಾಗಿ ಪಂಜಿನಡ್ಕ ಕಡೆಗೆ ಹೋಗುವ ಕೆಂಪುಗುಡ್ಡೆ ಏರು ರಸ್ತೆಯ ಬಳಿ ಬೆಳಿಗ್ಗೆ ಸಮಯ ಸುಮಾರು 8:15 ಘಂಟೆಗೆ ತಲುಪಿದಾಗ ಕೆಂಪುಗುಡ್ಡೆ ಕಡೆಯಿಂದ KA-19-MM-2121 ನಂಬ್ರದ ಕಾರನ್ನು ಅದರ ಚಾಲಕ ಶ್ರೀವತ್ಸ ಉಪಾದ್ಯಾಯ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಬಲಕ್ಕೆ ಹೋಗುವರೇ ಸ್ಕೂಟರನ್ನು ನಿಲ್ಲಿಸಿ ಕಾಯುತ್ತಿದ್ದಲ್ಲಿಗೆ ಬಂದು ಸ್ಕೂಟರಿನ ಮುಂದಿನ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಮಣಿಗಂಟಿನ ಬಳಿ, ಎಡಕೈ ಹೆಬ್ಬೆರಳಿನ ಬಳಿ ಮೂಳೆ ಮುರಿತ ಉಂಟಾಗಿದ್ದು, ತುಟಿಯ ಬಳಿ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

 

Crime Reported in : Surathkal PS

ದಿ: 15-01-2023 ರಂದು ಕಾಟಿಪಳ್ಳ ಗ್ರಾಮದ 9ನೇ ಬ್ಲಾಕಿನ ನಂದನವನ ಲೇಔಟ್ ಬಳಿ ರಾತ್ರಿ 7.00 ಗಂಟೆಗೆ ವಿನೋದ್ ಪ್ರಾಯ 18ವರ್ಷ ವಾಸ: ಶ್ರೀಮತಿ ಮಮತಾರವರ ಬಾಡಿಗೆ ಮನೆ, ಮಿಸ್ಬಾ ಕಾಲೇಜಿನ ಬಳಿ, 5 ನೇ ಬ್ಲಾಕ್ ಕೃಷ್ಣಾಪುರ, ಕಾಟಿಪಳ್ಳ ಗ್ರಾಮ ಮಂಗಳೂರು ತಾಲೂಕು, ಎಂಬಾತನು ಮಾದಕ ದ್ರವ್ಯ ಸೇವನೆ ಮಾಡಿ ಅಮಲಿನಲ್ಲಿರುವವನ್ನು ವಶಕ್ಕೆ ಪಡೆದು   ವಿಚಾರಿಸಲಾಗಿ ಸೀಗರೇಟ್ ಬತ್ತಿಯೊಂದಿಗೆ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿದ್ದಾಗಿಯೂ. ತಿಳಿಸಿದಂತೆ ಆತನನ್ನು ಪರೀಕ್ಷೆಗೊಳಪಡಿಸುವರೇ   ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ “ Tetrahydracannabinoid : POSITIVE, The drug one step screen test panel (Urine) is an immunoassay based on the principle of competitive binding” ಎಂಬುದಾಗಿ ನೀಡಿದ ವರದಿಯನ್ನು ಸ್ವೀಕರಿಸಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿಯಾಗಿರುತ್ತದೆ.

Last Updated: 16-01-2023 06:46 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080