Crime Reported in : Ullal PS
ಪಿರ್ಯಾದಿದಾರರು ಕೋಟೆಕಾರು ಪಟ್ಟಣ ಪಂಚಾಯಿತಿನ ಮುಖ್ಯ ಅಧಿಕಾರಿಯಾಗಿದ್ದು, ಮಾನ್ಯ ತಹಶೀಲ್ದಾರರು ಉಳ್ಳಾಲ ತಾಲೂಕು ರವರ ನಡವಳಿಯಂತೆ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ/ಸಾಗಾಟ/ದಾಸ್ತಾನು ಚಟುವಟಿಕೆಗಳ ನಿಯಂತ್ರಣದ ಬಗ್ಗೆ ನಿಯೋಜಿಸಲಾಗಿದ್ದು, ದಿನಾಂಕ 15-09-2022 ರಂದು ಬೆಳಿಗ್ಗೆ 05-40 ರಿಂದ 6-14 ಗಂಟೆಯ ಮಧ್ಯೆ ಅಲ್ ಮದೀನ ಎಂಬ ಹೆಸರಿನ ಪಿಕ್ ಅಪ್ ವಾಹನದಲ್ಲಿ ಅನಧಿಕೃತವಾಗಿ ಮರಳು ಸಾಗಾಟ ಮಾಡುತ್ತಿರುವುದು ತಲಪಾಡಿ ವಿಜಯ ಬ್ಯಾಂಕಿನ ಬಳಿ ಅಳವಡಿಸಾದ ಸಿಸಿ ಕ್ಯಾಮರದಲ್ಲಿ ಕಂಡು ಬಂದಿದ್ದು ಸದ್ರಿ ಮರಳನ್ನು ತಲಪಾಡಿ ಕುದ್ರು ಎಂಬಲ್ಲಿಂದ ಕಳವು ಮಾಡಿಕೊಂಡು ಅನಧಿಕೃತವಾಗಿ ಸಾಗಾಟ ಮಾಡಿರುವುದು ಎಂಬಿತ್ಯಾದಿ ಸಾರಾಂಶ
Crime Reported in : Bajpe PS
ದಿನಾಂಕ 14.09.2022 ರಂದು ಪಿರ್ಯಾದಿದಾರರ Smt Suma B ಮಗನಾದ ಶಶಾಂಕ್ (11 ವರ್ಷ) ರವರು ಬಜಪೆ ಚರ್ಚ ಜಂಕ್ಷನ್ ಬಳಿ ಇರುವ ಸಮಯ ಪೆರ್ಮುದೆ ಕಡೆಯಿಂದ ಬಜಪೆ ಕಡೆಗೆ ಬಂದ KA 19 MF 3474 ನೇ ನಂಬ್ರದ ಕಾರು ಚಾಲಕನು ಅತಿವೇಗ ಮತ್ತು ಅಜಾಗರುಕತೆಯಿಂದ ಕಾರನ್ನು ಚಲಾಯಿಸಿ ಪಿರ್ಯಾದಿದಾರರ ಮಗನಾದ ಶಶಾಂಕ್ ನಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಗನಿಗೆ ಮೂಗಿನ ಕೆಳಗೆ ರಕ್ತಗಾಯಗಳು ಮತ್ತು ಎಡ ಕಾಲಿನ ಬಳಿ ಮೂಳೆ ಮುರಿತದ ಗುದ್ದಿದಂತಹ ಗಾಯಗಳು ಉಂಟಾಗಿದ್ದು ನಂತರ ಪಿರ್ಯಾದಿದಾರರ ಮಗನನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಲಾಗಿದೆ ಎಂಬಿತ್ಯಾದಿ
Crime Reported in : Traffic North PS
ಪಿರ್ಯಾದಿದಾರರು Dr Wafiya Rihan ದಿನಾಂಕ: 15/09/2022 ರಂದು ತನ್ನ ಬಾಬ್ತು KL-65-S-2556 ನಂಬ್ರದ ಮೋಟಾರ್ ಸೈಕಲನಲ್ಲಿ ಡಾ|ಅಪರ್ಣ.ಎ.ಎಸ್ ಎಂಬುವರನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಮುಕ್ಕದಿಂದ ಮಂಗಳೂರಿಗೆ NH 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 3.00 ಗಂಟೆಗೆ ಮುಕ್ಕದ ಇಂಡಿಯನ್ ಪೆಟ್ರೋಲ್ ಪಂಪ್ ನ ಎದುರು ತಲುಪುತ್ತಿದ್ದಂತೆ ಹಿಂದುಗಡೆಯಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-20-EY-7602 ನೇ ಮೋಟಾರ್ ಸೈಕಲನ್ನು ಅದರ ಸವಾರನಾದ ಅಜಯ್ ಬಿ ಟಿ ಎಂಬಾತನು ಅತೀ ವೇಗ ಮತ್ತು ನಿರ್ಲಕ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂಬಂದಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ವಾಹನಗಳಲ್ಲಿದ್ದ ಸವಾರ ಹಾಗೂ ಸಹಸವಾರರು ವಾಹನಗಳ ಸಮೇತ ರಸ್ತೆಗೆ ಬಿದ್ದಿರುತ್ತಾರೆ, ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಎಡಭುಜದ ಬಳಿ ಗುದ್ದಿದ ಗಾಯ, ಬಲಗೈ ಮೊಣಗಂಟಿನ ಬಳಿ ಮತ್ತು ಎಡಕಾಲಿನ ಮಂಡಿಯ ಬಳಿ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರೊಂದಿಗಿದ್ದ ಸಹಸವಾರೆಯಾದ ಡಾ| ಅಪರ್ಣ ಎ ಎಸ್ ರವರಿಗೆ ಬೆನ್ನು ಮೂಳೆ ಮುರಿತದ ರೀತಿಯ ಗಂಬೀರ ಸ್ವರೂಪದ ಹಾಗೂ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬೈಕ್ ಸವಾರ ಅಜಯ್ ಬಿ ಟಿ ರವರಿಗೆ ಎಡಕಾಲಿನ ಮಣಿಗಂಟಿನ ಬಳಿ ರಕ್ತಗಾಯವಾಗಿದ್ದು, ಅದರಲ್ಲಿದ್ದ ಸಹಸವಾರೆ ಕವಿತಾ ಎಂಬವರಿಗೆ ತಲೆಯ ಎಡಭಾಗ ಕತ್ತರಿಸಿದ ರೀತಿಯ ರಕ್ತಗಾಯ, ಎಡಭುಜದ ಬಳಿ ಮೂಳೆ ಮುರಿತದ ಗಂಭೀರ ಗಾಯ, ಎಡಕೈಯ ಮೊಣಗಂಟಿನ ಬಳಿ ಹಾಗೂ ಎಡಕೈಯ ನಾಲ್ಕು ಬೆರಳುಗಳಿಗೆ ರಕ್ತಗಾಯ, ಎಡಕಾಲಿನ ಮಣಿಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಎಲ್ಲರೂ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಎಂಬಿತ್ಯಾದಿ.
Crime Reported in : : Kankanady Town PS
ಪಿರ್ಯಾದು Vishwanath ಕೊಡೆಕ್ಕಲ್, ಕಣ್ಣೂರು ಗ್ರಾಮ, ಮಂಗಳೂರು ವಾಸಿಯಾಗಿದ್ದು, KA-19-A-1054ನೇ ನಂಬ್ರದ ಮಹೇಂದ್ರ ಕಂಪೆನಿಯ ಜೀಪು ಹೊಂದಿದ್ದು, ಇದನ್ನು ಬೀಡಿ ಕೆಲಸಕ್ಕೆ ಉಪಯೋಗಿಸುತ್ತಿರುವುದಾಗಿದೆ. ದಿನಾಲು ಜೀಪನ್ನು ಮನೆಯ ಕಾಂಪೌಂಡ್ ಒಳಗೆ ಪಾರ್ಕ್ ಮಾಡುತ್ತಿದ್ದು, ದಿನಾಂಕ: 15.09.2022 ರಂದು ಪಿರ್ಯಾದುದಾರರು ಮತ್ತು ಅವರ ಭಾವ ಸೀತರಾಮರ ಜೊತೆ ಕೆಸಲದ ನಿಮಿತ್ತ ಮಂಗಳೂರಿನ ಬೆಸೆಂಟ್ ಎಂಬಲ್ಲಿಗೆ ಹೋಗಿ ಸಂಜೆ 6:30 ಗಂಟೆ ಸಮಯಕ್ಕೆ ಮನೆಗೆ ಬಂದು ಜೀಪನ್ನು ಮನೆಯ ಮುಂದಿನ ಗೇಟ್ ಎದುರು ಪಾರ್ಕ್ ಮಾಡಿ ನಂತರ ರಾತ್ರಿ ಊಟವಾದ ಬಳಿಕ ಸುಮಾರು 11:00 ಗಂಟೆ ಸಮಯಕ್ಕೆ ಮನೆಯ ಕಂಪೌಂಡಿನ ಗೇಟ್ ಹಾಕುವಾಗ ಜೀಪು ಪಾರ್ಕ್ ಮಾಡಿದ ಸ್ಥಳದಲ್ಲಿಯೇ ಇದ್ದು, ದಿನಾಂಕ: 16.09.2022 ರಂದು ಬೆಳಿಗ್ಗೆ ಸುಮಾರು 07:00 ಗಂಟೆ ಸಮಯಕ್ಕೆ ಮನೆಯ ಕಂಪೌಂಡಿನ ಗೇಟ್ ತೆಗೆಯಲೆಂದು ಹೊರಗಡೆ ಬಂದಾಗ ಪಿರ್ಯಾದುದಾರರ ಜೀಪು ಪಾರ್ಕ್ ಮಾಡಿದ ಸ್ಥಳದಲ್ಲಿ ಇದ್ದಿರುವುದಿಲ್ಲ. ನಂತರ ಪಿರ್ಯಾದುದಾರರು ಸುತ್ತ ಮುತ್ತ ವಿಚಾರಿಸಿ ಹುಡುಕಾಡಿದಾಗ ಎಲ್ಲಿಯೂ ಜೀಪು ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು KA-19-A-1054ನೇ ನಂಬ್ರದ ಮಹೇಂದ್ರ ಕಂಪೆನಿಯ ಜೀಪನ್ನು ದಿನಾಂಕ: 15.09.2022 ರಂದು ರಾತ್ರಿ 11:00 ಗಂಟೆ ಯಿಂದ ದಿನಾಂಕ: 16.09.2022 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾದ ಜೀಪ್ ನ ಅಂದಾಜು ಮೌಲ್ಯ 75,000 ಆಗಿದ್ದು, ಕಳವಾದ ಜೀಪನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂವಿತ್ಯಾದಿ
Crime Reported in : : Mangalore North PS
ಪಿರ್ಯಾದಿದಾರರಾದ ರವಿರಾಜ ವಾಸುದೇವ ನಾಯಕ್ ತಂದೆ:ವಾಸುದೇವ ನಾಯಕ್, ವಾಸ: 150, ಹೆಬ್ಬೈಲ್ ಕುಮಾಟಾ,ಹೆಬೈಲ್, ಉತ್ತರ ಕನ್ನಡ ರವರು ಮಂಗಳೂರಿನಲ್ಲಿ ಅವರ ಮಗಳಾದ ವಸುಂದರಾ ರವೀರಾಜ ನಾಯಕ್ (20) ಎಂಬವರ ವಿದ್ಯಾಭ್ಯಾಸದ ವೀಸಾದ ಬಗ್ಗೆ ಮಗಳು ಹಾಗೂ ಹೆಂಡತಿಯೊಂದಿಗೆ ಬಂದಿದ್ದು . ಮಂಗಳೂರು ನಗರದ ಕೆಎಸ್ ಆರ್ ರಸ್ತೆಯಲ್ಲಿರುವ ಕರುಣಾ ರೇಸಿಡೆನ್ಸಿಗೆ ಬಂದು ಅಲ್ಲಿ ಪಿರ್ಯಾದಾರರು ಹಾಗೂ ಅವರ ಹೆಂಡತಿಯಾದ ಗೀತಾ ಮತ್ತು ಅವರ ತಮ್ಮನ ಮಗಳಾದ ಈಶಾ ಮಂಗಳ ಕುಮಾರ್ ರವರ ಜೊತೆಯಲ್ಲಿ ಇದ್ದು, ದಿನಾಂಕ: 16.09.2022 ರಂದು ಬೆಳಿಗ್ಗ 09.00 ಗಂಟೆಗೆ ಎಲ್ಲರೂ ಜೊತೆಯಲ್ಲಿ ಶರವು ದೇವಸ್ಥಾನದ ಬಳಿ ಇರುವ ಐಡಿಯಲ್ ಕೆಫೆ ನಲ್ಲಿ ತಿಂಡಿ ತಿನ್ನುವ ಸಮಯ 09:20 ಗಂಟೆಗೆ ಫಿರ್ಯಾದಿದಾರರ ಮಗಳಾದ ವಸುಂದರಾ ರವರು ಕರುಣಾ ರೇಸಿಡೆನ್ಸಿಗೆ ವಾಶ್ ರೂಮ್ ಗೆ ಹೋಗುವುದಾಗಿ ಹೇಳಿ ಹೋಗಿದ್ದು ಪಿರ್ಯಾದಿದಾರರು 09:45 ಗಂಟೆಗೆ ಕರುಣಾ ರೇಸಿಡೆನ್ಸಿ ಬಂದು ನೋಡಿದಾಗ ವಸುಂದರಾ ಇರದೇ ಇದ್ದು ಪಿರ್ಯಾದಿದಾರರು ವಸುಂದರಾ ರವರ ಮೊಬೈಲ್ ನಂಬ್ರ ಕ್ಕೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ನಂತರ ಪಿರ್ಯಾದಿದಾರು ಕರುಣಾ ರೆಸಿಡೆನ್ಸಿಯ ಸ್ವಾಗತಗಾರರಲ್ಲಿ ವಿಚಾರಿಸಲಾಗಿ , ಹಾಗೂ ಕರುಣಾ ರೆಸಿಡೆನ್ಸಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು ಹಾಗೂ ಮಂಗಳೂರು ನಗರದ ಹಳೆಯ ಬಸ್ ನಿಲ್ದಾಣದಲ್ಲಿ ಹುಡಕಾಡಿದ್ದಲ್ಲಿ ಎಲ್ಲಿಯೂ ಪತ್ತಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾದ ತಮ್ಮ ಮಗಳಾದ ವಸುಂದರಾ ರವೀರಾಜ ನಾಯಕ್ (20) ಎಂಬವರನ್ನು ಪತ್ತೆ ಹಚ್ಚಬೇಕೆಂಬಿತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಸಾರಾಂಶ.
Crime Reported in : Mangalore East PS
ದಿನಾಂಕ:15-09-2022 ರಂದು ಸಂಜೆ 06-30 ಗಂಟೆಯ ವೇಳೆಗೆ ಮರೋಳಿಯ ಗಣಪತಿ ಕಟ್ಟೆಯ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಪ್ರಣಿತ್, ಪ್ರಾಯ: 20 ವರ್ಷ, ವಾಸ: ಜಯಶ್ರೀ ನಿವಾಸ, ಕೆಳಗಿನ ತುಂಬೆ, ಬಂಟ್ವಾಳ ತಾಲೂಕು, ಎಂಬಾತನು ಮಾದಕ ವಸ್ತುವನ್ನು ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ಆರೋಪಿತನು ಅಮಲು ಪದಾರ್ಥವನ್ನು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ಧೃಡಪಟ್ಟಿರುವುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.