ಅಭಿಪ್ರಾಯ / ಸಲಹೆಗಳು

Crime Reported in : Kankanady Town PS                                                  

ಪಿರ್ಯಾದಿ Abdul Hameed ದಾರರು ನಾಗುರಿ ಬಳಿ ಇಕ್ರಾ ಎಂಬ  ಒಂದು ಅಂತಸ್ತಿನ  ವಾಣಿಜ್ಯ ಕಟ್ಟಡವನ್ನು ಹೊಂದಿದ್ದು,ಅದೇ ಕಟ್ಟಡದ ಒಂದನೇ ಅಂತಸ್ತಿನಲ್ಲಿ ವಾಸ್ತವ್ಯವಾಗಿ ಹಾಗೂ ನಾಗುರಿ ಬಳಿ ರೇಷನ್ ಅಂಗಡಿಯನ್ನು ಹೊಂದಿರುತ್ತಾರೆ. ದಿನಾಂಕ:14-11-2022 ರಂದು ರೇಷನ್ ಅಂಗಡಿಯ ಕಾಮಗಾರಿ ನಡೆಯುತ್ತಿರುವುದರಿಂದ ರೇಷನ್ ಸಾಮಾನನ್ನು ಟೆಂಪೋದಲ್ಲಿ ಲೋಡ್ ಮಾಡಿ ಟೆಂಪೋದ ಹಿಂದುಗಡೆ ಪಿರ್ಯಾದಿದಾರರು ಸ್ಕೂಟರ್ KA 19 HJ 7027 ನೇ  SUZUKU ACCESS 125 ನೇದರಲ್ಲಿ ಮನೆಯ ಕಡೆ ಸುಮಾರು ಬೆಳಗ್ಗೆ 11:00 ಗಂಟೆಗೆ ಬಂದು ಸ್ಕೂಟರ್ ನ್ನು ಮನೆಯ ಬಳಿ ಇಟ್ಟು ಸ್ಕೂಟರ್ ನ ಕೀ ಯನ್ನು ಮರೆತು ಸ್ಕೂಟರ್ ನಲ್ಲಿಯೇ ಬಿಟ್ಟು ರೇಷನ್ ಸಾಮಾನನ್ನು ಮನೆಗೆ ಕೊಟ್ಟು ಬೆಳಿಗ್ಗೆ 11:15 ಗಂಟೆಗೆ ಸ್ಕೂಟರ್ ಇಟ್ಟ ಸ್ಥಳಕ್ಕೆ ಪಿರ್ಯಾದಿದಾರರು ಬಂದು ನೋಡಿದಾಗ ಸ್ಕೂಟರ್ ಅಲ್ಲಿ ಇಲ್ಲದೇ ಇದ್ದು ಕೂಡಲೇ  ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಸ್ಕೂಟರ್ ಕಂಡು ಬರದೇ ಇದ್ದು ಯಾರೋ ಕಳ್ಳರು ಕಳವು  ಮಾಡಿ ಹೋಗಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.ಕಳವಾದ ಸ್ಕೂಟರಿನ ಅಂದಾಜು ಮೌಲ್ಯ ರೂ 85,000/- ಆಗಬಹುದು.ಸ್ಕೂಟರರ್ ನ ಚಾಸಿಸ್ ಸಂಖ್ಯೆ :MB8DP12DBNBA71487 ಮತ್ತು ಇಂಜಿನ್ ಸಂಖ್ಯೆ :AF216968233 ಆಗಿರುತ್ತದೆ

Traffic North Police Station                       

ಪಿರ್ಯಾದಿ VIJAY KUMAR UPADYAYA ದಾರರು ಉತ್ತರ ಪ್ರದೇಶದ ರಾಜ್ಯದವನಾಗಿದ್ದು, ಪ್ರಸ್ತುತ ಬಾಡಿಗೆ ಮನೆ ಸತ್ಯ ನಾರಾಯಣ ಬಿಲ್ಡಿಂಗ್ ಕುಲಾಯಿ ಮಂಜುನಾಥ ಕಿರಣ್ ಸ್ಟೋರ್ ಬಳಿ ಕುಳಾಯಿ ಮೇನ್ ರೋಡ್ ಎಂಬಲ್ಲಿ ವಾಸವಾಗಿದ್ದು, ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪತಂಜಲಿ ಪುಡ್ಸ್ ಲಿಮಿಟೆಡ್ ಕಂಪನಿಯಲ್ಲಿ ಬಾಯ್ಲರ್ ಆಪರೇಟರ್ ಆಗಿ ಕಳೆದ 14 ವರ್ಷಗಳಿಂದ ಕೆಲಸ ಮಾಡಿಕೊಂಡಿರುತ್ತಾರೆ, ಪಿರ್ಯಾದಿದಾರರು ದಿನಾಂಕ 15/11/2022 ರಂದು ಸಮಯ ಸುಮಾರು ರಾತ್ರಿ 7:55 ಗಂಟೆಗೆ ವಿಷ್ಣುಮೂರ್ತಿ ದ್ವಾರದ ಕಡೆಗೆ ಹೋಗುವರೇ ಯಮುನಾ ಆಶಾ ಶೆಟ್ಟಿ ಕಡೆಯಿಂದ ರಸ್ತೆ ದಾಟಲು ಅಂದರೆ ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿನ ಕಡೆಗೆ NH 66ನೇ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ನಿಂತಿದ್ದಾಗ ಬೈಕಂಪಾಡಿ ಕಡೆಯಿಂದ ಸ್ಕೂಟರ್ ನಂಬ್ರ KA-19-HH-1417 ನೇಯದನ್ನು ಅದರ ಸವಾರ ಯೂಸೂಫ್ ಶಾಹಿರ್ ಎಂಬಾತನು ನಿರ್ಲಕ್ಷ್ಯತನ ಮತ್ತು ದುಡುಕುತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು, ಬಲಕಾಲು ಕೋಲು ಕಾಲಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಸುರತ್ಕಲಿನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Bajpe PS

ಪಿರ್ಯಾದಿ Naveen Kumar Shenai ದಾರರು ದಿನಾಂಕ 12.11.2022 ರಂದು ಬೆಳಗ್ಗೆ ಸುಮಾರು 09.45 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ತನ್ನ ಬೈಕ್ ನಂ ಕೆಎ 19 ಹೆಚ್ ಜೆ 2778 ನೇದರಲ್ಲಿ ಹೊರೆಟು ಮಂಗಳೂರು ತಾಲೂಕು ಕಿಲಿಂಜಾರು ಗ್ರಾಮದ  ಕುಪ್ಪೆಪದವು ಕಾಪಿಕಾಡಿನ ಮಾದವ ಗೌಡ ರವರ ಮನೆಯ ಬಳಿ ತಲುಪಿದಾಗ ಕುಪ್ಪೆಪದವು ಕಡೆಯಿಂದ ಪೊಪಾಡಿಕಲ್ಲು ಕಡೆಗೆ ಅತೀವೇಗ ಮತ್ತು ದುಡುಕುತನದಿಂದ ಸ್ಕೂಟರ್ ನಂ ಕೆಎ 19 ಹೆಚ್ ಕೆ 5369 ನೇ ಚಲಾಕನಾದ ಜಾಮಾಲುದ್ದೀನ್ ಮತ್ತು ಸಹಸವಾರನಾಗಿ ಮಹಮ್ಮದ್ ಮೊದಿನ್ (10 ವರ್ಷ) ಇದ್ದು ಚಾಲಕನಾದ ಜಾಮಾಲುದ್ದಿನನು ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸ್ಕೂಟರ್ ಸವಾರ ಮತ್ತು ಸಹ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈನ ಉಂಗುರದ ಬೆರಳಿಗೆ ಮೂಳೆ ಮುರಿತದ ಗಾಯವಾಗಿದ್ದು ಎಡಕಾಲಿನ ಗಂಟು ಮತ್ತು ಪಾದಕ್ಕೆ ರಕ್ತಗಾಯವಾಗಿದ್ದು ಅಪಘಾತಕ್ಕೆ ಕಾರಣವಾದ ಸ್ಕೂಟರ್ ಸವಾರನಿಗೆ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ಸಹ ಸವಾರನಿಗೆ ಬಲಾಕಾಲಿನ ಪಾದಕ್ಕೆ ರಕ್ತಗಾಯವಾಗದ್ದು ಕಂಡು ಬಂದಿರುತ್ತದೆ ನಂತರ ಪಿರ್ಯಾದಿದಾರರನ್ನು ಪರಿಚಯದ ಶೇಖರ್ ಮತ್ತು ಧನಂಜಯ್ ರವರು ಉಪಚರಿಸಿ ಮೂಡಬಿದರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-11-2022 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080