ಅಭಿಪ್ರಾಯ / ಸಲಹೆಗಳು

Crime Reported in : : Kavoor PS      

ಪಿರ್ಯಾದಿ NAGARAJA ದಾರರ ಮಗನಾದ ಹಿತೇಶ್ (21 ವರ್ಷ) ಎಂಬವನು ದಿನಾಂಕ 15/12/2022 ರಂದು ಸ್ವಂತ ಮನೆಯಾದ ಆಕಾಶಭವನ ಆನಂದ ನಗರದಿಂದ  ಕೆಲಸದ ನಿಮಿತ್ತ ಅಶೋಕನಗರಕ್ಕೆ ಬೆಳಿಗ್ಗೆ 9.00 ಗಂಟೆಗೆ  ತೆರಳಿದ್ದು. ನಂತರ ಕೆಲಸಕ್ಕೂ ಹೋಗದೆ ಈ ವರೆಗೆ ಮನೆಗೂ ಕೂಡಾ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾಣೆಯಾದ ವಿಚಾರವನ್ನು ಮನೆಯ ಅಕ್ಕಪಕ್ಕದವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸದ್ದಾಗ ಯಾರಿಗೂ ತಿಳಿದಿಲ್ಲವಾಗಿ ತಿಳಿಸಿರುತ್ತಾರೆ. ಆದ್ದುದರಿಂದ ಕಾಣೆಯಾದ ಹಿತೇಶ್ (21 ವರ್ಷ)  ನನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ

ಹೆಸರು: ಹಿತೇಶ್ (21 ವರ್ಷ)   ಎತ್ತರ: 5.4 ಅಡಿ, ಕೋಲು ಮುಖ, ಗೋಧಿ ಮೈ ಬಣ್ಣ,ಸಾದಾರಣಾ ಮೈಕಟ್ಟು       ಧರಿಸಿರುವ ಬಟ್ಟೆ:  ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಮೈರೂನ್ ಬಣ್ಣದ ಬನಿಯಾನ್ , ಕಪ್ಪು ಬಣ್ಣದ ಅಯ್ಯಪ್ಪ ಮಾಲೆ ಧರಿಸಿರುವ ಶಾಲು  ಧರಿಸಿರುತ್ತಾರೆ,   ಮಾತನಾಡುವ ಭಾಷೆ: ಕನ್ನಡ, ತುಳು, ಹಿಂದಿ.ಉರ್ದು

Mangalore East Traffic PS                        

ಪಿರ್ಯಾದಿದಾರರಾದ ಡಿಯೋನ್ ಜಾಯ್ ಎಂಬುವರು ದಿನಾಂಕ 16-12-2022 ರಂದು ತಮ್ಮ ಕಾರು  ನೊಂದಣಿ ಸಂಖ್ಯೆ GJ-10-DA-0532 ನೇಯದನ್ನು ಚಲಾಯಿಸಿಕೊಂಡು ಕಾಸರಗೋಡು ಕಡೆಯಿಂದ ಪಡುಬಿದ್ರೆ ಕಡೆಗೆ ಹೋಗಲೆಂದು ಮಂಗಳೂರು ನಗರದ  ಪಂಪ್ ವೆಲ್ ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ರಾ.ಹೆ. 66 ನೇಯದರಲ್ಲಿ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 07.50 ಗಂಟೆಗೆ ಹೆದ್ದಾರಿಯ  ನಾಯಕ್ ಡಿಸೆಲ್ಸ್ ಶಾಪ್ ಬಳಿ ತಲುಪುತ್ತಿದ್ದಂತೆ ಅವರ ಎಡ ಹಿಂಭಾಗದಿಂದ ಕಾರು ನೊಂದಣಿ ಸಂಖ್ಯೆ KA-19-MF-1494 ನೇಯದನ್ನು ಅದರ ಚಾಲಕ ಆದಿತ್ಯ ಸುವರ್ಣ ಎಂಬುವರು ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸುತ್ತಾ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರು ಬಲಕ್ಕೆ ಚಲಿಸಿ ಡಿವೈಡರ್ ಹಾಗೂ ರೈಲಿಂಗ್ ಗೆ ಡಿಕ್ಕಿಯಾಗಿ ರಸ್ತೆಗೆ ಮುಗುಚಿ ಬಿದ್ದು ಸಂಪೂರ್ಣವಾಗಿ ಜಖಂಗೊಂಡಿರುತ್ತದೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

Traffic South Police Station  

ದಿನಾಂಕ:15-12-2022 ರಂದು ಪಿರ್ಯಾದಿದಾರರಾದ ಅನಿಲ್ ಕುಮಾರ್ ರವರು ಅವರ ಬಾಬ್ತು ಕಾರು ನಂಬ್ರ: KA-19-MK-8209 ನೇದನ್ನು ಚಲಾಯಿಸಿಕೊಂಡು ಕುಲಶೇಖರ ಕಛೇರಿಯಿಂದ ಮನೆಯಾದ ಶಕ್ತಿನಗರ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 6-30 ಗಂಟೆಗೆ ಶಕ್ತಿನಗರ ರಸ್ತೆಯ ಕಾಸ್ತೆಲಿನೋ ಕಾಲೋನಿ ಕಡೆಗೆ ಅವರ ಕಾರನ್ನು ಇಂಡಿಕೆಟರ್ ಹಾಕಿಕೊಂಡು ರಸ್ತೆಯ ಬಲಬದಿಗೆ ತಿರುಗಿಸುತ್ತಿರುವಾಗ ಶಕ್ತಿನಗರ ಕಡೆಯಿಂದ ಕುಲಶೇಖರ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ:KL-79-8831 ನೇದರ ಸವಾರ ಅಶ್ಬೀನ್ ಚಾಕೋ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮೋಟಾರ್ ಸೈಕಲ್  ನ್ನು ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ಕಾರಿನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿರುತ್ತದೆ ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಜನರು ಮತ್ತು ಪಿರ್ಯಾದಿದಾರರು ಸೇರಿ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 16-12-2022 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080