ಅಭಿಪ್ರಾಯ / ಸಲಹೆಗಳು

Crime Reported in : Traffic South Police Station       

 ಪಿರ್ಯಾದಿ JAYASHREE  ಮಗನಾದ ಸುಶಿತ್ ರಾಜ್ (28 ವರ್ಷ) ಎಂಬಾತನು ದಿನಾಂಕ:16-01-2023 ರಂದು MRPL ನಲ್ಲಿ ಕೆಲಸ ಮುಗಿಸಿಕೊಂಡು ಪಿರ್ಯಾದಿದಾರರ ಇನ್ನೊಬ್ಬ ಮಗನಾದ ಶ್ರೀಜಿತ್ ರಾಜ್ ರವರ ಬಾಬ್ತು ಮೋಟರ್ ಸೈಕಲ್ ನಂಬ್ರ KA-19-EW-4968 ನೇದನ್ನು ಸವಾರಿ ಮಾಡಿಕೊಂಡು MRPL ನಿಂದ ಮಾರಿಪಲ್ಲ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 11:15 ಗಂಟೆಗೆ ವಳಚ್ಚಿಲ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ಸುಶಿತ್ ರಾಜ್ ರವರು ಚಲಾಯಿಸುತ್ತಿದ್ದ ಮೋಟರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಬಲ ಭಾಗಕ್ಕೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ತಲೆಗೆ ಪೆಟ್ಟಾಗಿದ್ದು, ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಸುಶಿತ್ ರಾಜ್ ರವರನ್ನು ಆ್ಯಂಬುಲೆನ್ಸ್ ವೊಂದರಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಐಸಿಯುನಲ್ಲಿ ಚಿಕಿತ್ಸೆಗೆಂದು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ, ಎಂಬಿತ್ಯಾದಿ

 

Crime Reported in : Traffic South Police Station               

ದಿನಾಂಕ  16-01-2023 ರಂದು  ಪಿರ್ಯಾದಿ AYYA DORAI   TN-24- M-1871  ನೇ ಲಾರಿಯಲ್ಲಿ  ಸಹ ಪ್ರಯಾಣಿಕರಾಗಿ ಮತ್ತು ನಾಗರಾಜ್ ಎಂಬುವರು ಲಾರಿ  ಚಾಲಕನಾಗಿ ಮಂಗಳೂರಿನ ಬೈಕಂಪಾಡಿಯಲ್ಲಿ ಯೂರಿಯ  ಗೊಬ್ಬರವನ್ನು ಲೋಡ್ ಮಾಡಿಕೊಂಡು  ತಮಿಳುನಾಡು ಕಡೆಗೆ  ತಲಪಾಡಿ ಮಾರ್ಗವಾಗಿ ಹೋಗುವರೇ ಬೈಕಂಪಾಡಿಯಿಂದ ತಲಪಾಡಿ ಕಡೆಗೆ ರಾಷ್ರೀಯ ಹೆದ್ದಾರಿ  66 ರಲ್ಲಿ ಲಾರಿಯನ್ನು  ಚಲಾಯಿಸಿಕೊಂಡು  ಹೋಗುತ್ತಿರುವ  ಸಮಯ  ಸುಮಾರು  ರಾತ್ರಿ 07:00 ಗಂಟೆಗೆ ಜಪ್ಪಿನಮೊಗರು  ಯೆನಪೋಯ ಶಾಲೆಯ ಎದುರು ತಲುಪಿದಾಗ ಲಾರಿ ಚಾಲಕ ಲಾರಿಯನ್ನು  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ಚಲಾಯಿಸಿದ  ಪರಿಣಾಮ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು  ರಸ್ತೆಯ  ಎಡಬದಿಯಲ್ಲಿದ್ದ ಚರಂಡಿಗೆ   ಮಗುಚಿ ಬಿದ್ದು ಪಿರ್ಯಾದಿದಾರರಿಗೆ ಬಲಗಾಲು ಕೋಲುಕಾಲಿಗೆ , ಎಡಕಾಲು ಕೋಲುಕಾಲಿಗೆ ಎಡಮೊಣಕೈಗೆ ಮತ್ತು  ಎಡಕೈ ಬೆರಳಿಗೆ ತರಚಿದ ಗಾಯಗಳಾಗಿದ್ದು  ಕೂಡಲೇ ಅಲ್ಲಿ  ಸೇರಿದ  ಸಾರ್ವಜನಿಕರು  ಅವರನ್ನು  ಚಿಕಿತ್ಸೆ  ಬಗ್ಗೆ  ಮಂಗಳೂರು  ಇಂಡಿಯಾನ  ಆಸ್ಪತ್ರೆಗೆ ಕರೆದುಕೊಂಡು ಹೊಗಿ ದಾಖಲು ಮಾಡಿದ್ದು ಅಲ್ಲಿ ಪಿರ್ಯಾದಿದಾರರೂ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು . ಎಂಬಿತ್ಯಾದಿ

 

Crime Reported in : Konaje PS

 ಪಿರ್ಯಾದಿ  ಅವನೀಶ್ ರೈ ಯು ಕೆ ರವರು ಆನ್ ಲೈನ್ ಮುಖೇನ E-FIR ನಲ್ಲಿ ತನ್ನ ಬಾಬ್ತು ಹೀರೋ ಹೊಂಡ ಸ್ಪ್ಲೆಂಡರ್ KA19L5347 ನೇ ಬೈಕ್ ನ್ನು ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಕಲ್ಲೆಗುಂಡಿ ಎಂಬಲ್ಲಿ ಉಪಯೋಗಿಸಲು ಅಸಾಧ್ಯವಾಗಿದ್ದಕ್ಕೆ ನಿಲ್ಲಿಸಿದ್ದು, ಸದ್ರಿ ಬೈಕ್ ನ್ನು ದಿನಾಂಕ 12.08.2021 ರಿಂದ ದಿನಾಂಕ 08.03.2022 ರ ಮದ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳೆದು ಹೋದ ಬೈಕಿನ ಅಂದಾಜು ಮೌಲ್ಯ ರೂಪಾಯಿ 1000/- ಆಗಬಹುದು. ಕಳೆದು ಹೋದ ಬೈಕ್ ನ ಬಗ್ಗೆ ಸಂಬಂಧಿಕರೊಂದಿಗೆ ಚರ್ಚಿಸಿ,  ನಂತರ ಆನ್ ಲೈನ್ ನಲ್ಲಿ ದೂರು ನೀಡಿರುವುದಾಗಿದೆ. ಆದುದರಿಂದ ಕಳವು ಮಾಡಿದ  ಬೈಕ್ ನ್ನು ಹುಡುಕಿಕೊಡಬೇಕಾಗಿ ಎಂಬಿತ್ಯಾದಿ.

 

Crime Reported in : Konaje PS

 ದಿನಾಂಕ 16.01.2023 ರಂದು ಪಿರ್ಯಾದಿ Sharanappa Bhandari  ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 15.30 ಗಂಟೆಗೆ ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ಮೌಂಟುಗೋಳಿ ಬಸ್ ನಿಲ್ದಾಣದ  ಬಳಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಅಬ್ದುಲ್ ರಹಿಮಾನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಾಗ Amphetamine ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Crime Reported in : Konaje PS

ದಿನಾಂಕ 16.01.2023 ರಂದು ಪಿರ್ಯಾದಿ Sharanappa Bhandari  ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 17-50 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ಕಣಚೂರು ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಭರತ್ ರಾಜ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Crime Reported in : Traffic North Police Station                               

 ಪಿರ್ಯಾದಿ RAVINDRA POOJARY  ದಿನಾಂಕ 16/01/2023 ರಂದು ತನ್ನ ಬಾಬ್ತು KA-19-EJ-9262 ನಂಬ್ರದ ಮೋಟಾರ್ ಸೈಕಲಿನಲ್ಲಿ ಮುಲ್ಕಿ ಕಡೆಗೆ ಹೋಗುತ್ತಿದ್ದ ಸಮಯ ಸುಮಾರು 14.00 ಗಂಟೆಗೆ ಕಾರ್ನಾಡು ಜಂಕ್ಷನ್ ನಿಂದ ಸ್ವಲ್ಪ ದೂರದಲ್ಲಿರುವ ಮೋದಿ ಕೇರ್ ಮೆಡಿಕಲ್ ಶಾಪ್ ಎದುರಿನಲ್ಲಿ ತನ್ನ ಬಾಬ್ತು ಮೋಟಾರ್ ಸೈಕಲನ್ನು ನಿಲ್ಲಿಸಿ ಅಂಗಡಿಗೆ ಹೋಗಿ ವಾಪಸ್ ತನ್ನ ಬಂದು ಮೋಟಾರ್ ಸೈಕಲ್ ಬಳಿ ಬಂದು ಮೋಠಾರ್ ಸೈಕಲನ್ನು ಚಾಲನೆ ಮಾಡುವ ಸಮಯ ಪಿರ್ಯಾದಿದಾರರ ಹಿಂಬದಿಯಿಂದ ಅಂದರೆ ಕಾರ್ನಾಡು ಕಡೆಯಿಂದ KA-19-ML-9166 ನಂಬ್ರದ ಕಾರನ್ನು ಅದರ ಚಾಲಕನಾದ ವಿಜಯ ಕುಮಾರ್ ಶೆಟ್ಟಿ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಸಿಮೆಂಟ್ ರಸ್ತೆಗೆ ಬಿದ್ದು, ಸೊಂಟಕ್ಕೆ ತೀವ್ರ ಸ್ವರೂಪದ ಬಿರುಕು ಬಿಟ್ಟ ಒಳಗಾಯವಾಗಿ ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆಕೊಂಡು, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುರತ್ಕಲಿನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in : Traffic North Police Station                                                        

ಪಿರ್ಯಾದಿ RAMANNA HADAPADA  ದಿನಾಂಕ 15/01/2023 ರಂದು ತನ್ನ ಬಾಬ್ತು KA-28-EP-5501 ನಂಬ್ರದ ಮೋಟಾರ್ ಸೈಕಲಿನಲ್ಲಿ ಸಹಸವಾರೆಯಾಗಿ ತನ್ನ ಸ್ನೇಹಿತನ ತಂಗಿಯಾದ ಕವಿತಾ ಶರಣಪ್ಪ ಕಿತ್ತಲಿ @ ರೇಖಾ ಮತ್ತು ಅವರ ಮಗು ಶ್ರೀಕಾಂತ (07 ತಿಂಗಳು) ರನ್ನು ಕುಡುಪು ದೇವಸ್ಥಾನಕ್ಕೆ ಹೋಗುವವರನ್ನು ಕೊಟ್ಟಾರಚೌಕಿ ಬಸ್ ಸ್ಟಾಪ್ ಗೆ ಬಿಟ್ಟು ಬರಲು ಹೋಗುತ್ತಿದ್ದ ಸಮಯ ಸುಮಾರು 12.50 ಗಂಟೆಗೆ ಕೊಟ್ಟಾರ ಚೌಕಿಯ ಜಲ್ಲಿಗುಡ್ಡೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ KA-19-HJ-4976 ನಂಬ್ರದ ಸ್ಕೂಟರನ್ನು ಅದರ ಸವಾರನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲಿನ ಮುಂಭಾಗದ ಬಲಬದಿಯ ಕ್ರಾಶ್ ಗಾರ್ಡ್ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರೆ ಕವಿತಾ ಶರಣಪ್ಪ ಕಿತ್ತಲಿ @ ರೇಖಾ ರವರು ಮತ್ತು ಮಗು ಶ್ರೀಕಾಂತ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕ್ಕೆ ಮುಂಗೈ ಮತ್ತು ಮೊಣಕಾಲಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಸಹಸವಾರೆ ಕವಿತಾ ಶರಣಪ್ಪ ಕಿತ್ತಲಿ @ ರೇಖಾ ರವರಿಗೆ ಬಲಕಾಲಿಗೆ ಸಣ್ಣ ಪ್ರಮಾಣದ ಗುದ್ದಿದ ರೀತಿಯ ಗಾಯವಾಗಿದ್ದು, ಇಬ್ಬರೂ ಸಹ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ, ಮಗು ಶ್ರೀಕಾಂತನಿಗೆ ಎರಡೂ ಕಣ್ಣಿನ ಹುಬ್ಬು ಮತ್ತು ಎರಡೂ ಕಣ್ಣುಗಳಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ,  ಅಪಘಾತ ಪಡಸಿದ ಸ್ಕೂಟರ್ ಸವಾರನಿಗೆ ಕೂಡಾ ಅಪಘಾತದಿಂದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಎಂಬಿತ್ಯಾದಿ,

 

Crime Reported in : Surathkal PS

ದಿನಾಂಕ 16-01-2023 ರಂದು ಬೆಳಿಗ್ಗೆ 07:00 ಗಂಟೆಗೆ ಕೆಲಸಕ್ಕೆ ತೆರಳಿದ್ದ ಪಿರ್ಯಾದಿ ಕಮಲಾಕ್ಷರವರ ಮಗಳು ಶಿವಾನಿ ಪ್ರಾಯ 20 ವರ್ಷ ರವರು ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಫೈನಾನ್ಸ್ ಗೆ ಕೆಲಸಕ್ಕೆ ತೆರಳಿದ್ದು ಈ ತನಕ ಅಂದರೆ ಸಂಜೆ 6:00 ಗಂಟೆಗೆ ಯಾವಾಗಲು ಮನೆಗೆ ಬರುವವರು ಮನೆಗೆ ಬಾರದೇ ಇದ್ದು, ನಂತರ ಫೈನಾನ್ಸ್ ನಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ಶಿವಾನಿ ರವರು ಇರುವಿಕೆಯ ಬಗ್ಗೆ ತಿಳಿದು ಬಂದಿಲ್ಲ, ಅದುದರಿಂದ ಶಿವಾನಿ ರವರನ್ನು ಪತ್ತೆ ಮಾಡಿ ಕೊಡುವರೇ ಕೋರಿಕೆ.

ಇತ್ತೀಚಿನ ನವೀಕರಣ​ : 17-01-2023 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080