ಅಭಿಪ್ರಾಯ / ಸಲಹೆಗಳು

Crime Reported in : Mulki PS

ದಿನಾಂಕ16-03-2023 ರಂದು 16-50 ಗಂಟೆಗೆ  ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ನಾಗ ಬನ ಬಳಿ ಇರುವ ಸಾರ್ವಜನಿಕ ಬಾವಿಯ ಕಟ್ಟೆಯಲ್ಲಿ ಲಕ್ಷ್ಮಣ್ ಎಂಬಾತನು ಗಾಂಜಾವನ್ನು ಹೊಗೆಬತ್ತಿಯೊಂದಿಗೆ ಸೇದುತ್ತಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ  ಮಂಗಳೂರು ಎ.ಜೆ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದ್ದು ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ದಿನಾಂಕ: 17-03-2023 ರಂದು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

Mulki PS

ದಿನಾಂಕ16-03-2023 ರಂದು 19-20 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಆಶ್ರಯ ಕಾಲನಿ ಬಳಿ ಇರುವ ಸಾರ್ವಜನಿಕ ರಸ್ತೆಯ ಬದಿಗೆ ಕಟ್ಟಿರುವ ಮೋರಿಯ ಮೇಲೆ ಕುಳಿತ ನವೀನ್ ಕುಮಾರ್ ಎಂಬಾತನು ಗಾಂಜಾವನ್ನು ಹೊಗೆಬತ್ತಿಯೊಂದಿಗೆ ಸೇದುತ್ತಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ  ಮಂಗಳೂರು ಎ.ಜೆ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದ್ದು ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ದಿನಾಂಕ: 17-03-2023 ರಂದು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

Moodabidre PS

ಪಿರ್ಯಾದಿ Shoukath ದಿನಾಂಕ 11.03.2023 ರಂದು ತನ್ನ ಬಾಬ್ತು KA-20-EC-9940 ನಂಬರಿನ ಆಕ್ಟಿವಾದಲ್ಲಿ ತನ್ನ ಸ್ನೇಹಿತ ಲತೀಫ್ ರವರ ಹೆಂಡತಿ ಶೌಶಾನ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅವರ ಮನೆಯಾದ ಮೂಡಬಿದ್ರೆ ತಾಲೂಕು ಕಲ್ಲಬೆಟ್ಟು ಗ್ರಾಮದ ನೀರಳಿಕೆಯಿಂದ ಅಲ್ಲೇ ಇರುವ ಕಿಲೇರಿಯಾ ಮದರಸಾಕ್ಕೆ ಬಿಟ್ಟು ಬರುವರೇ ಸಮಯ ಬೆಳಿಗ್ಗೆ 6.30 ಗಂಟೆಗೆ ನೀರಳಿಕೆಯ ಅಬೂಬಕ್ಕರ್ ಎಂಬವರ ಮನೆಯ ಬಳಿ ತಲುಪುತ್ತಿದ್ದಂತೆ ಎದುರಿನಿಂದ KA-19-D-2166 ನಂಬರಿನ ಆಟೋ ರಿಕ್ಷಾದ ಚಾಲಕ ಮುನೀರ್ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನಕ್ಕೆ ಡಿಕ್ಕಿಪಡಿಸಿದ್ದು, ಈ ಅಪಘಾತದ ಪರಿಣಾಮ ಶೌಶಾನ ಎಂಬವರಿಗೆ ಬಲ ಮತ್ತು ಎಡ ಕೈಗೆ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ತೆರಳಿ ಅಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ತೆರಳಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Moodabidre PS

ಮೂಡಬಿದ್ರೆಯ ಪಿಂಟೋ ಕಾಂಪ್ಲೆಕ್ಸ್ ನಲ್ಲಿ ಪಂಚವಟಿ ಮಲ್ಟಿ ಸ್ಟೇಟ್ ಕೋ-ಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಎಂಬ ಸಂಸ್ಥೆ 2014 ರಲ್ಲಿ ತೆರೆದಿದ್ದು, ಈ ಸಂಸ್ಥೆಯಲ್ಲಿ ಪಿರ್ಯಾದಿದಾರರು  ಖಾತೆಗಳನ್ನು ತೆರೆದು ಆಗಾಗ ಹಣ ಪಾವತಿಸುತ್ತಿದ್ದು, ಅಲ್ಲದೇ ಇನ್ನು ಕೆಲವರು ಸಹ ಇದೇ ಸೊಸೈಟಿಯಲ್ಲಿ ಖಾತೆಗಳನ್ನು ತೆರೆದು ಹಣವನ್ನು ಪಾವತಿಸಿದ್ದು, ಅವರಿಗೂ ಸಹ ಹಣ ಮರು ಸಂದಾಯ ಆಗಿರುವುದಿಲ್ಲ. ಈ ಸೊಸೈಟಿಯ ಚೇರ್ ಮೆನ್ ಎನ್.ಹೆಚ್ ರಾಜು ಹಾಗೂ  ಮಂಗಳೂರು ಶಾಖೆಯ ನಿರ್ದೇಶಕರಾದ ಸುಮತಿ ಹೆಗ್ಡೆ ಹಾಗೂ ಇತರೆ 7 ಮಂದಿ ನಿರ್ದೇಶಕರು ಹಾಗೂ ಬ್ಯಾಂಕ್ ಮ್ಯಾನೇಜರ್ ಆಗಿರುವ ಹರ್ಷಿತಾ ಹಾಗೂ ಹಣ ಡೆಫಾಸಿಟ್ ಮಾಡುವಂತೆ ಒತ್ತಾಯ ಮಾಡಿ ಸೇರಿಸಿರುವ ರಮೇಶ್ ಭೋದಿ ಹಾಗೂ ಆಗಿನ ಮ್ಯಾನೇಜರ್ ಆಗಿದ್ದ ಜಾನ್ ಡೇವಿಡ್ ಸೆರಾವೊ ಪಿರ್ಯಾದುದಾರರಿಂದ ವಿವಿಧ ಖಾತೆಗಳನ್ನು ತೆರೆಯಿಸಿ ಹಣವನ್ನು ಪಡೆದುಕೊಂಡು ಮೆಚ್ಯೂರಿಟಿ ಆದ ಬಾಂಡ್ ಗಳ ಬಗ್ಗೆ ಕೂಡಾ ಹಣವನ್ನು ಖಾತೆದಾರರಿಗೆ ಮರು ಸಂದಾಯ ಮಾಡದೇ ಒಟ್ಟು ರೂ. 26,41,771/- ಗಳಿಗೂ ಹೆಚ್ಚಿನ ಮೊತ್ತದ ಹಣವನ್ನು ಪಡೆದು ಮೂಡಬಿದ್ರೆಯಲ್ಲಿದ್ದ ಶಾಖೆಯನ್ನು ಮುಚ್ಚಿ ಮೋಸ, ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Abdul Nawaz KA19AD5707 ನೇ ನಂಬ್ರದ ಲಾರಿಯ ಚಾಲಕರಾಗಿದ್ದು ಈ ದಿನ ದಿನಾಂಕ 16.03.2023 ರಂದು ಸಂಜೆ 4.00 ಗಂಟೆಯ ಸಮಯಕ್ಕೆ ಕೂಳೂರಿನಿಂದ ಗಂಜೀಮಠ ಕಡೆಗೆ ಬಜಪೆ ಮಾರ್ಗವಾಗಿ ಹೋಗುತ್ತಿರುವ ಸಮಯ ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಮುರ ಬಳಿ ತಲುಪಿದಾಗ ಬಜಪೆ ಪೊಲೀಸ್ ಸ್ಟೇಷನ್ ಕಡೆಯಿಂದ ನೊಂದಣಿಯಾಗದ SWIFT ಕಾರು ಅತೀ ವೇಗ ಮತ್ತು ನಿರ್ಲಕ್ಷದಿಂದ ಚಾಲನೆ ಮಾಡುತ್ತಿರುವ ಕಾರನ್ನು ನೋಡಿ ಪಿರ್ಯಾದಿದಾರರು ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು ನಂತರ SWIFT ಕಾರಿನ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಹಲವಾರು ಬಾಗಗಳು ಡ್ಯಾಮೇಜ್ ಆಗಿದ್ದು ಹಾಗೂ ಕಾರಿಚ ಚಾಲಕನಿಗೂ ಎದೆಯ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ ಎಂಬಿತ್ಯಾದಿ

Traffic South Police Station      

ಪಿರ್ಯಾದಿ ABUSALI ತಮ್ಮನಾದ ರವೂಫ್ (21 ವರ್ಷ) ರವರು ದಿನಾಂಕ: 16-03-2023 ರಂದು ಮೋಟಾರ್ ಸೈಕಲ್ ನಂಬ್ರ: KA-19-HJ-5230 ನೇದನ್ನು ಕಲ್ಮಿಂಜ ಕಡೆಯಿಂದ ತೌಡುಗೋಳಿ ಕ್ರಾಸ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 7-30 ಗಂಟೆಗೆ ತೌಡುಗೋಳಿ ಜಂಕ್ಷನ್ ಗಿಂತ ಸ್ವಲ್ಪ ಮುಂದೆ ತಲುಪಿದಾಗ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ  ರವೂಫ್ ಎಂಬುವನು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ನಾಯಿಯೊಂದು ಅಡ್ಡ ಬಂದಾಗ ಆತನು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಆತನ ಎಡಕಾಲು ಮತ್ತು ಎಡ ಕೈಗೆ ಮೂಳೆ ಮುರಿತದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Ullal PS

ದಿನಾಂಕ 16-03-2023 ರಂದು ಪಿರ್ಯಾದಿ ಶ್ರೀಮತಿ ಲತಾ ಇವರು ಠಾಣೆಗೆ ಬಂದು ಅವರ ಮಗಳಾದ ಆಶಿಕಾಳು ಕಳೆದ 4 ತಿಂಗಳ ಹಿಂದೆ ಕೇರಳ  ರಾಜ್ಯದ ಕಾಂಞಗಾಡ್ ಕಲ್ಯೋಟ್ಟು  ಶ್ರೀನಾಥರವರಿಗೆ  ಮದುವೆ ಮಾಡಿ ಕೊಟ್ಟಿದ್ದು ದಿನಾಂಕ 11-03-2023 ರಂದು ಪಿರ್ಯಾದಿಯ ಮಗಳು ಗಂಡನ ಜೊತೆಯಲ್ಲಿ ಮನೆಗೆ ಬಂದು ಉಳಕೊಂಡವಳು ದಿನಾಂಕ 16-03-2023 ರಂದು ಬೆಳಿಗ್ಗೆ ಅವಳು ಅವಳ ಗಂಡನೊಂದಿಗೆ ಊರಿಗೆ ಹೋಗುವುದಾಗಿ ಹೇಳಿ ಬೆಳಿಗ್ಗೆ 5-15 ಗಂಟೆಗೆ ಅವಳ ಗಂಡನಲ್ಲಿ ಸ್ನಾನ ಮಾಡಿ ಬನ್ನಿ ನಾನು ಕೂಡ ನಿಮ್ಮ ಜೊತೆ  ಬರುತ್ತೇನೆ ಎಂದು ಹೇಳಿ ತಿಳಿಸಿದಂತೆ ಅಳಿಯನು ಸ್ನಾನ ಮಾಡಿ ಬಂದು ನೋಡಿದಾಗ ನನ್ನ ಮಗಳು ಕಾಣದೇ ಇದ್ದು ಈ ಬಗ್ಗೆ ಪಿರ್ಯಾದಿ ಮತ್ತು ಅವರ ಅಳಿಯ ಹುಡುಕಾಡಿದಲ್ಲಿ  ಪಿರ್ಯಾದಿಯ ಮಗಳು ಮನೆಯಲ್ಲಿ ಪಿರ್ಯಾದಿ ಮತ್ತು ಅವಳ ಗಂಡನಲ್ಲಿ ತಿಳಿಸದೇ ಕಾಣೆಯಾಗಿರುತ್ತಾಳೆ ಎಂಬಿತ್ಯಾದಿ

Ullal PS

ಉಳ್ಳಾಲ  ಗ್ರಾಮದ ಉಳ್ಳಾಲ ಕೋಟೆಪುರ ಲಾಂಚ್ ಜೆಟ್ಟಿ ಎಂಬಲ್ಲಿ ಪಿರ್ಯಾದಿದಾ ಶ್ರೀ ಅಬ್ದುಲ್ ಹಮೀದ್  ಎಂಬವರ ಬಾಬ್ತು  ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿಗಳಾದ ಸುಮಾರು 25-30 ವರ್ಷ ಪ್ರಾಯದ ನಯೀಮ್ ಶೇಖ್ ಮತ್ತು ಹೆಸರು ವಿಳಾಸ ತಿಳಿಯದ ಇನ್ನೊಬ್ಬ ವ್ಯಕ್ತಿಯು ಸೇರಿಕೊಂಡು ತಮ್ಮ ಜೊತೆಯಲ್ಲಿ ವಾಸವಾಗಿದ್ದ ಸುಮಾರು 45-50 ವರ್ಷ ಪ್ರಾಯದ ಹೆಸರು ವಿಳಾಸ ತಿಳಿಯದ ಮಹಿಳೆಯೊಬ್ಬರನ್ನು ದಿನಾಂಕ. 13-3-2023 ರಂದು ರಾತ್ರಿ 8-00 ರಿಂದ ದಿನಾಂಕ. 16-3-2023 ರ ಸಾಯಂಕಾಲ 3-30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣಕ್ಕೆ ಯಾವುದೋ ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿ ಶೌಚಾಲಯದಲ್ಲಿ ಬಚ್ಚಿಟ್ಟು  ಪರಾರಿಯಾಗಿದ್ದು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿದಾರರ ಲಿಖಿತ ದೂರನ ಸಾರಾಂಶವಾಗಿದೆ.

ಇತ್ತೀಚಿನ ನವೀಕರಣ​ : 17-03-2023 07:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080