ಅಭಿಪ್ರಾಯ / ಸಲಹೆಗಳು

Crime Reported in : Panambur PS

ದಿನಾಂಕ 16-9-2022 ರಂದು 17-00  ಗಂಟೆಗೆ ಅಂಗಾರಗುಂಡಿ ರೈಲ್ವೇ ಟ್ರಾಕ್ ಸಮೀಪ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ  ಅಬ್ದುಲ್ ಸುಹೈನ್ @ ಸಿನಾನ್ ಪ್ರಾಯ 19 ವರ್ಷ, ಡೋರ್ ನಂಬ್ರ 5-83, ಅಂಗಾರಗುಂಡಿ ಮಸೀದಿ ಬಳಿ, ಬೈಕಂಪಾಡಿ ಗ್ರಾಮ. ಮಂಗಳೂರು ತಾಲೂಕು  ಎಂಬವನನ್ನು   ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ಪರೀಕ್ಷಿಸಿ ಆಪಾದಿತನಾದ ಸುಹೈನ್ @ ಸಿನಾನ್ ಎಂಬಾತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

Crime Reported in : Traffic South PS

ದಿನಾಂಕ:16-09-2022 ರಂದು ಪಿರ್ಯಾದಿದಾರರು NARAYANA ಕುಂಪಲ ಬೈಪಾಸ್ ನಲ್ಲಿ ಸಾಯಿ ಕೃಪಾ ಎಂಬ ಸೆಲೂನ್ ಅವರ ಅಂಗಡಿ ಇದ್ದು ಅದರ ಎದುರು ಇರುವ ಆಟೋರಿಕ್ಷಾ ಪಾರ್ಕ್ ಹತ್ತಿರ ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು ಮಧ್ಯಾಹ್ನ 3-25 ಗಂಟೆಗೆ ಅವರ ಎದುರಿನಲ್ಲಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹಾದು ಹೋಗಿರುವ ರಾ.ಹೆ -66 ರ ರಸ್ತೆಯ ಎಡಬದಿಯಲ್ಲಿ ಮೋಟಾರ್ ಸೈಕಲ್ ನಂಬ್ರ: KL-14-W-4859 ನೇದರ ಸವಾರ ನೀತಿನ್ ಎಂಬುವರು ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆತನ ಹಿಂದಿನಿಂದ ಬರುತ್ತಿದ್ದ ಮೀನಿನ ಲಾರಿ ನಂಬ್ರ: KA-20-AA-4279 ನೇದರ ಚಾಲಕ ಅಬ್ದುಲ್ ಲತೀಫ್ ಎಂಬಾತನು ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೀನಿನ ಲಾರಿಯ ಎಡಭಾಗವನ್ನು ಮೋಟಾರ್ ಸೈಕಲಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಎಡಬದಿಗೆ ಬಿದಿದ್ದು  ಮೋಟಾರ್ ಸೈಕಲ್ ಸವಾರ ಮೀನಿನ ಲಾರಿಯ ಎಡಬದಿಯ ಹಿಂಬದಿಯ ಚಕ್ರದೊಳಗೆ ಬಿದ್ದಾಗ ಲಾರಿಯ ಚಕ್ರ ನಿತೀನ್ ರವರ ಮೇಲೆ ಹರಿದು ನಿತೀನ್ ಅವರ ತಲೆಗೆ ಗಂಭೀರ  ಸ್ವರೂಪದ ರಕ್ತಗಾಯ ಹಾಗೂ ಎಡಗೈಗೆ ಗಂಭೀರ ಗಾಯವಾಗಿದ್ದ ಅವರನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಕುಂಪಳದ ಬೈಪಾಸ್ ಸ್ಥಳಿಯರು ರಸ್ತೆಯ ಬದಿಯಲ್ಲಿ ತಂದು ಉಪಚರಿಸಿ ಚಿಕಿತ್ಸೆ ಬಗ್ಗೆ ಅಂಬುಲೇನ್ಸ್ ವೊಂದರಲ್ಲಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ನಿತೀನ್ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ: 16-09-2022 ರಂದು ಆಟೋರಿಕ್ಷಾ ನಂಬ್ರ: KA19-AD-4017 ನೇದರಲ್ಲಿ ಪಿರ್ಯಾದಿದಾರರು ROSHAN D SOUZA  ಮತ್ತು ಹರೀಶ್ ಕುಲಾಲ್ ರವರು ಪ್ರಯಾಣಿಕರಾಗಿ ಹಾಗೂ ಅಜಯ್ ಡಿ ಸೋಜಾ ಎಂಬುವರು ಚಾಲಕರಾಗಿಯೂ ಗ್ರಾಮಚಾವಡಿ ಕಡೆಯಿಂದ ಮಲಾರ್ ಕಡೆಗೆ ಪ್ರಯಾಣಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 8-30 ಗಂಟೆಗೆ ಮಲಾರ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ಚಾಲಕ ಅಜಯ್ ಡಿ ಸೋಜಾ ರವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರು, ಸಹ ಪ್ರಯಾಣಿಕ ಹರೀಶ್ ಕುಲಾಲ್ ಹಾಗೂ ಚಾಲಕ ಅಜಯ್ ಡಿ ಸೋಜಾ ರವರು ಆಟೋರಿಕ್ಷಾ ಮಗುಚಿ ಆಟೋರಿಕ್ಷಾ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಮುಖದ ಬಲಬದಿಗೆ ಗುದ್ದಿದ ರೀತಿಯ ಮೂಳೆ ಮುರಿತದ ಗಾಯ ಹಾಗೂ ಕುತ್ತಿಗೆ ಮತ್ತು ಎದೆಗೆ ಗುದ್ದಿದ ರೀತಿಯ ಗಾಯವಾಗಿದ್ದು, ಹರೀಶ್ ಕುಲಾಲ್ ರವರಿಗೆ ಬಲ ಕೈಗೆ ಮೂಳೆಮುರಿತದ ಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮತ್ತು ಆಟೋರಿಕ್ಷಾ ಚಾಲಕ ಅಜಯ್ ಡಿ ಸೋಜಾ ರವರಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ವಾಹನವೊಂದರಲ್ಲಿ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 17-09-2022 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080