ಅಭಿಪ್ರಾಯ / ಸಲಹೆಗಳು

Crime Reported in : Mangalore North PS

ಪಿರ್ಯಾದಿ Smt Chandra ದಾರರು ಮೂಲತಃ ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಆತೂರು ತಾಲೂಕು ನಿವಾಸಿಯಾಗಿದ್ದು, ಪಿರ್ಯಾದಿದಾರರು ಸುಮಾರು 27 ವರ್ಷಗಳ ಹಿಂದೆ ಮಾಯಾವೇಳ್ (57)ಎಂಬವರೊಂದಿಗೆ ಮದುವೆಯಾಗಿದ್ದು ಪಿರ್ಯಾದಿದಾರರು ಮತ್ತು ಅವರ ಗಂಡ ಮಾಯಾವೇಳ್ ಪೆರಿಯಸಾಮಿರವರು ಸುಮಾರು 15 ವರ್ಷಗಳಿಂದ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವುದಾಗಿದೆ. ಮುಂದಿನ ತಿಂಗಳು ದೀಪಾವಳಿ ಹಬ್ಬವಾಗಿರುವುದರಿಂದ ದೀಪಗಳನ್ನು ಮಾರಾಟ ಮಾಡುವರೇ ಪಿರ್ಯಾದಿದಾರರು ಮತ್ತು ಅವರ ಗಂಡ ಮಾಯಾವೇಳ್ ಪೆರಿಯಸಾಮಿ ರವರೊಂದಿಗೆ ದಿನಾಂಕ 14-10-2022 ರಂದು ಬೆಳಿಗ್ಗೆ 10-00 ಗಂಟೆಗೆ ಕೇರಳ ಕಾಂಞಗಾಡ್ ನಿಂದ ಮಂಗಳೂರಿಗೆ ರೈಲು ಮುಖಾಂತರ ಬಂದಿದ್ದು, ನಂತರ ಅಲ್ಲಿಂದ ಮಂಗಳೂರಿನ ಕುದ್ರೋಳಿ ಎಂಬಲ್ಲಿರುವ ಅಳಕೆ ಮಾರ್ಕೆಟ್ ಬಳಿಯಲ್ಲಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡಿದ್ದು, ಅದೇ ದಿನ ಸಂಜೆ ಸುಮಾರು 6-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಿಗೆ ಹಾಗೂ ಅವರ ಗಂಡನಿಗೆ ಪರಿಚಯದವರಾದ ಹೂವಿನ ಹಡಗಲಿ ನಿವಾಸಿಯಾದ ರವಿ ಎಂಬಾತನು ಪಿರ್ಯಾದಿದಾರರು ಇರುವಲ್ಲಿಗೆ  ಬಂದು ಆತನ ಪರಿಚಯದ ಒಬ್ಬರಿಗೆ 10 ರಿಂದ 20 ಚೀಲ ಮಣ್ಣಿನ ದೀಪ ಬೇಕೆಂದು ಕೇಳಿರುತ್ತಾರೆ ಎಂದು ಪಿರ್ಯಾದಿದಾರರು ಹಾಗೂ ಅವರ ಗಂಡನವರಲ್ಲಿ ಹೇಳಿ ನಾವಿಬ್ಬರು ಅವರಲ್ಲಿ ಮಾತನಾಡಿ ಬರುತ್ತೇವೆ ಎಂದು ಹೇಳಿ ಪಿರ್ಯಾದಿದಾರರ ಗಂಡನಾದ ಮಾಯವೇಳ್ ಪೆರಿಯಸಾಮಿರವರು  ರವಿಯವರ ಜೊತೆಯಲ್ಲಿ ಹೋಗಿರುತ್ತಾರೆ. ಪಿರ್ಯಾದಿದಾರರ  ಗಂಡ ಸಂಜೆ 6-30 ಗಂಟೆ ಆದರೂ ವಾಪಾಸ್ಸು ಬಾರದೇ ಇದ್ದುದರಿಂದ ಪಿರ್ಯಾದಿದಾರರು  ತನ್ನ ಗಂಡನ ಮೊಬೈಲ್ ಸಂಖ್ಯೆ  ನೇಯದಕ್ಕೆ ಫೋನ್ ಮಾಡಿ ವಿಚಾರಿಸಿದಲ್ಲಿ ನಾವಿಬ್ಬರು ವಾಪಾಸ್ಸು ಬರುತ್ತಿದ್ದೇವೆ ಎಂದು ಹೇಳಿರುತ್ತಾರೆ. ನಂತರ ಸಂಜೆ 7-30 ಗಂಟೆಗೆ ಮತ್ತೊಮ್ಮೆ ತನ್ನ ಗಂಡನಿಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಅವರ ಜೊತೆ ಹೋಗಿದ್ದ ರವಿ ಎಂಬಾತನ ಫೋನ್ ನಂಬ್ರ  ನೇದಕ್ಕೆ ಫೋನ್ ಮಾಡಿದಾಗ ರವಿಯವರ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ. ತನ್ನ ಗಂಡ ಮಾಯಾವೇಳ್ ಪೆರಿಯಸಾಮಿ ರವರು ಈವರೆಗೂ ವಾಪಾಸ್ಸು ಬಾರದೆ ಇರುವುದರಿಂದ ನಂತರ ಪಿರ್ಯಾದಿದಾರರು ಅವರ ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದು, ತಾವೆಲ್ಲರೂ ಸೇರಿ ಹುಡುಕಾಡಿದಲ್ಲಿ ತಮ್ಮ ಊರಿಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಆದ್ದರಿಂದ ಕಾಣೆಯಾದ ಪಿರ್ಯಾದಿದಾರರ ಗಂಡ ಮಾಯಾವೇಳ್ ಪೆರಿಯಸಾಮಿ ರವರನ್ನು ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ ದೂರಿನ ಸಾರಾಂಶ.

Surathkal PS

 ದಿನಾಂಕ 15-10-2022 ರಂದು ಪಿರ್ಯಾದಿ ನವೀನ್ ಕಲ್ಕೂರ ರವರಿಗೆ MRPL ನಲ್ಲಿ ರಾತ್ರಿ ಪಾಳಿಯ ಕರ್ತವ್ಯವಾಗಿದ್ದರಿಂದ ರಾತ್ರಿ 9:30 ಗಂಟೆಗೆ MRPL ಟೌನ್ ಶಿಪ್ ವಸತಿ ಗೃಹ ನಂ  ನೇಯದಕ್ಕೆ ಮುಂಭಾಗದ ಬಾಗಲಿಗೆ ಡೋರ್ ಲಾಕ್ ಮಾಡಿ ಹೋಗಿದ್ದು ದಿನಾಂಕ 16-10-2022 ರಂದು ಬೆಳಿಗ್ಗೆ 06:30 ಗಂಟೆಗೆ ಕರ್ತವ್ಯ ಮುಗಿಸಿ ವಾಪಸು ವಸತಿ ಗೃಹಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಮುಂಭಾಗದ ಬಾಗಿಲಿನ ಬೀಗವನ್ನು ಯಾವುದೇ ಆಯುಧದಿಂದ ಒಡೆದು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಗೊದ್ರೋಜ್ ಒಳಗಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿ ಬಿಸಾಡಿ ಜ್ಯುವೆಲ್ ಬಾಕ್ಸ್ ಒಳಗಿದ್ದ 3 ನೆಕ್ಲೇಸ್, ಗ್ರೀನ್ ಸ್ಟೋನ್ ಅಳವಡಿಸಿರುವ ಬಳೆ 2, ಚೈನ್ 2, ಮುತ್ತಿನ ಸರ 1, ಮ್ಯಾಚಿಂಗ್ ಪೆಂಡೆಂಟ್ 1, ಲಾಂಗ್ ನೆಕ್ಲೇಸ್ ಪ್ಲೈನ್ 1, ಪೆಂಡೆಂಟ್ 4, ಡೈಮೆಂಡ್ ಮುಗಿತಿ 1, ಇಯರ್ ರಿಂಗ್ 4, ಚಿನ್ನದ ಉಂಗುರಗಳು 4, ಪ್ಲಾಟಿನಮ್ ಉಂಗುರ 1, ಕಡ್ಗ 1, ಬ್ರಾಸ್ ಲೇಟ್ 1, ಗೋಲ್ಡ್ ಕಾಯಿನ್ 15 ಗ್ರಾಂ, ಮುಗುವಿನ ಬ್ರಾಸ್ ಲೇಟ್ 1, ಹಾಗೂ ಬೆಳ್ಳಿಯ ಪೂಜಾ ಸಾಮಾಗ್ರಿ ಮತ್ತು ನಗದು 2000 ಇತ್ಯಾದಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಮೌಲ್ಯ 5 ಲಕ್ಷ ರೂಪಾಯಿ ಆಗಬಹುದು ಈ ಕೃತ್ಯವು ದಿನಾಂಕ 15-10-2022 ರ ರಾತ್ರಿ 9:45 ಗಂಟೆಯಿಂದ ದಿನಾಂಕ 16-10-2022 ರ ಬೆಳಿಗ್ಗೆ 06:15 ಗಂಟೆ ಒಳಗೆ ನಡೆದಿರಬಹುದು ಎಂಬಿತ್ಯಾದಿ.                             

Mangalore West Traffic PS               

ದಿನಾಂಕ:16-10-2022 ರಂದು ಪಿರ್ಯಾದಿ NARAYAN BELCHAD ದಾರರ ಮನೆಯ ಗೃಹಪ್ರವೇಶವಿದ್ದು ದಿನಾಂಕ:17-10-2022 ರಂದು ತನ್ನ ಮನೆಯಲ್ಲಿದ್ದ ಪೂಜಾ ಕಾರ್ಯಕ್ರಮಕ್ಕೆ ಬೇಕಾದ ಸಾಮಾನು ಖರೀದಿಸಲೆಂದು ತನ್ನ ಬಾಬ್ತು KA-19-HC-9505  ನೇ ನೊಂದಣಿ  ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಪಿರ್ಯಾದಿದಾರರ ಸಂಬಂಧಿ ಕರುಣಾಕರ ಬೆಳ್ಚಡ ರವರ ಮಗ ರಕ್ಷಣ್ ಪ್ರಾಯ 13 ವರ್ಷ ಎಂಬಾತನನ್ನು ಸಹ ಸವಾರನನ್ನಾಗಿ  ಕುಳ್ಳಿರಿಸಿಕೊಂಡು ಮಂಗಳೂರು ಸೆಂಟ್ರಲ್ ಮಾರ್ಕೆಟ್ ಕಡೆಗೆ ಲೇಡಿಹಿಲ್ ನಿಂದಾಗಿ ಲಾಲ್ ಭಾಗ್ ಕಡೆಯ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು ಮಧ್ಯಾಹ್ನ 12-00 ಗಂಟೆಯ ವೇಳೆಗೆ ಲಾಲ್ ಭಾಗ್ ಬಳಿಯಿರುವ ಮಾನ್ಯ ಸೆಷನ್ಸ್ ಜಡ್ಜ್ ರವರ ಮನೆಯ ಬಳಿ ತಲುಪುವಾಗ ಹಿಂದುಗಡೆಯಿಂದ KA-19-C-6157 ನೊಂದಾಣಿ ಸಂಖ್ಯೆಯ ಸಿಟಿ ಬಸ್ಸನ್ನು ಅದರ ಚಾಲಕ ಮಹಮ್ಮದ್ ಸಫ್ವಾನ್  ಎಂಬಾತನು  ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನದ ಹಿಂಬದಿಗೆ  ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ದ್ವಿ ಚಕ್ರ ವಾಹನದ ಹಿಂಬದಿ ಸವಾರನಾಗಿದ್ದ ರಕ್ಷಣ್ ನು ಪಿರ್ಯಾದಿದಾರರ ಬಲ ಬದಿ ರಸ್ತೆಗೆ ಎಸೆಯಲ್ಪಟ್ಟಿದ್ದು ಪಿರ್ಯಾದಿದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಯ ಎಡಗಡೆಗೆ ಎಸೆಯಲ್ಪಟ್ಟಿರುತ್ತಾರೆ. ಬಲ ಬದಿ ರಸ್ತೆಗೆ ಬಿದ್ದ ರಕ್ಷಣ್ ನ ತಲೆಯ ಮೇಲೆ ಬಸ್ಸಿನ ಎಡ ಬದಿಯ ಚಕ್ರವು ಹಾದು ಹೋಗಿದ್ದು ರಕ್ಷಣ್ ನ ತಲೆಯು ಛಿದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಪಿರ್ಯಾದಿದಾರರ ಬಲ ಕೈಯ ಅಂಗೈಯಲ್ಲಿ ತರಚಿದ ನಮೂನೆಯ ಮತ್ತು ಸೊಂಟಕ್ಕೆ ಗುದ್ದಿದ ನಮೂನೆಯ ನೋವು ಉಂಟಾಗಿರುತ್ತದೆ ಎಂಬಿತ್ಯಾದಿ

 

Traffic North Police Station                       

ದಿನಾಂಕ 17-10-2022 ರಂದು ಪಿರ್ಯಾದಿ VIDYA KESHAVA POOJARY ದಾರರು ಮನೆಯಿಂದ ಶ್ರೀನವಾಸ ಆಸ್ಪತ್ರೆ ಮುಕ್ಕ ಕಡೆಗೆ ಕೆಲಸದ ನಿಮಿತ್ತ ಹೊರಟು ಅಂದರೆ ಕಾನದಿಂದ ಬಸ್ಸಿನಲ್ಲಿ ಸುರತ್ಕಲ್ ಜಂಕ್ಷನಿಗೆ ಬಂದು ಬಸ್ಸಿನಿಂದ ಇಳಿದು ಸಮಯ ಸುಮಾರು 8.30 ಗಂಟೆಗೆ ಶ್ರೀನಿವಾಸ ಆಸ್ಪತ್ರೆಗೆ ಹೋಗಲು ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ NH-66ನೇ ಡಾಮಾರು ರಸ್ತೆಯನ್ನು ಪೂರ್ವದಿಂದ ಪಶ್ಚಿಮಕ್ಕೆ ಅಂದರೆ ಸದಾನಂದ ಹೋಟೆಲ್ ಮುಂಭಾಗದಲ್ಲಿ ಡಾಮಾರು ರಸ್ತೆಯನ್ನು ನಡೆದುಕೊಂಡು ದಾಟುತ್ತೀರುವಾಗ ಉಡುಪಿ ಕಡೆಗೆ ಹೋಗುವ ಎಕ್ಸಪ್ರೆಸ್ ಬಸ್ಸು ನಿಲ್ದಾಣದಿಂದ ರಾಂಗ್ ಸೈಡಿನಿಂದ ಸುರತ್ಕಲ್ ಜಂಕ್ಷನ್ ಕಡೆಗೆ ಅದೇ ರಸ್ತೆಯಲ್ಲಿ KA-19-MK-5933 ವ್ಯಾಗನರ್ ಕಾರು ಚಾಲಕ ಅಬ್ದುಲ್ ಅಜೀಜ್ ಎಂಬವರು ತೀರಾ ಬಲಬದಿಗೆ ಬಂದು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ್ದ ಪರಿಣಾಮ ಪಿರ್ಯಾಧಿದಾರರ ಬಲಕಾಲಿನ ತೋಡೆಯ ಭಾಗಕ್ಕೆ ತರಚಿದ ಗಾಯ ಮತ್ತು ಬಲಸೊಂಟಕ್ಕೆ ಗುದ್ದಿದ ರೀತಿಯ ಗಾಯ ಹಾಗೂ ಬಲ ಕೈ ಹೆಬ್ಬೆರಳಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಅಲ್ಲಿದ್ದ ಸಾರ್ವಜನಿಕರು ಅದೇ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 17-10-2022 07:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080