ಅಭಿಪ್ರಾಯ / ಸಲಹೆಗಳು

Crime Reported in : : Mangalore West Traffic PS              

ದಿನಾಂಕ 16-12-2022 ರಂದು ಪಿರ್ಯಾದಿ Rahul Sherigar ದಾರರು ಮಾರ್ನೆಮಿ ಕಟ್ಟೆಯಲ್ಲಿರುವ ರೆಸ್ಟೋರೆಂಟ್ ನಲ್ಲಿ ವ್ಯಾಪಾರ ಮುಗಿಸಿಕೊಂಡು ರಾತ್ರಿ ಮನೆ ಕಡೆಗೆ ತನ್ನ ಬಾಬ್ತು ಕಾರು ನಂಬ್ರ KA 20-MA 5959  ನೇ ದರಲ್ಲಿ ಬರುತ್ತಾ ಉರ್ವ್ ಸ್ಟೋರ್ ಅಶೋಕ ನಗರ ಮಾರ್ಗ ವಾಗಿ ಬಂದು ತನ್ನ ಪ್ಲಾಟಿನ ಎದುರುಗಡೆ ರಸ್ತೆಯಲ್ಲಿ ಕಾರಿನ ಬಲ ಬದಿಯ ಇಂಡಿಕೇಟರ್ ಲೈಟ್ ನ್ನು ಹಾಕಿ ಕಾರನ್ನು ಪ್ಲಾಟಿನ ಕಂಪೌಂಡ ಒಳಗಡೆ ತಿರಗಿಸುವಷ್ಟರಲ್ಲಿ ಸಮಯ ಸುಮಾರು 23-35 ಗಂಟೆಗೆ ಅಶೋಕ ನಗರ ಕಡೆಯಿಂದ ಉರ್ವ್ ಸ್ಟೋರ್ ಕಡೆಗೆ ನೊಂದಣಿ ಯಾಗದ ಹೊಸ .KTM  ಕಂಪನಿಯ ಮೊಟಾರ್ ಸೈಕಲ್ ನ್ನು ಸವಾರ ಸಂತೋಷ ಎಂಬಾತನು ಹಿಂದುಗಡೆ ಮಲ್ಲೇಶ  ಎಂಬುವವರನ್ನು ಕುಳ್ಳಿರಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಎಡ ಬದಿಯ ಮುಂದಿನ ಡೋರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕಿನಿಂದ ರಸ್ತೆಗೆ ಬಿದ್ದು ಈ ಪೈಕಿ ಸಂತೋಷ  ಎಂಬವರ ತಲೆಯ ಭಾಗ ಕಣ್ಣಿನ ಭಾಗ ಹಾಗೂ ಕಿವಿಯಲ್ಲಿ  ರಕ್ತ ಬಂದಿದ್ದಲ್ಲದೇ ಮಲ್ಲೇಶ  ಎಂಬವರಿಗೆ  ತರಚಿದ ನಮೂನೆಯ ಗಾಯವಾಗಿದ್ದು ಗಾಯಾಳು  ಮಲ್ಲೇಶ ವೆನ್ ಲಾಕ್ ಚಿಕಿತ್ಸೆ ಪಡೆದಿದ್ದು ಸಂತೋಷ ಎಂಬಾತನು  ಸರ್ಕಾರಿ    ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿವುದಾಗಿ ಪಿರ್ಯಾದಿ.

Mangalore East Traffic PS        

ಪಿರ್ಯಾದಿದಾರರಾದ ಗೋಪಾಲಕೃಷ್ಣ ಭಟ್ ಕೆ ರವರು ದಿನಾಂಕ 16-12-2022 ರಂದು  ಸಂಜೆ ತನ್ನ ಮಗನ ಮಾಲೀಕತ್ವದ KA-19-MD-0273 ನೊಂದಣಿ ನಂಬ್ರದ ಮಾರುತಿ ಸುಜುಕಿ ಡಿಸೈರ್ ಕಾರನ್ನು ಚಲಾಯಿಸಿಕೊಂಡು ಎ.ಜೆ. ಆಸ್ಪತ್ರೆಯ ಕಡೆಯಿಂದ  ಬಂಟ್ವಾಳ ಕಡೆಗೆ ಹೋಗುವಾಗ ಸಮಯ ಸುಮಾರು 7.00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರ ಪದವು ಜಂಕ್ಷನ್ ಬಳಿ ವಾಹನ ಸಂಚಾರವು ನಿಧಾನಗತಿಯಲ್ಲಿದ್ದು, ಪಿರ್ಯಾದಿದಾರರು ಕಾರನ್ನು ರಸ್ತೆಯ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಾರಿನ ಎಡಗಡೆಯಿಂದ KA-19-AD-2723 ನೊಂದಣಿ ನಂಬ್ರದ ಗೂಡ್ಸ್ ಟೆಂಪೊವನ್ನು ಅದರ ಚಾಲಕ ಸಂಜಯ್ ಕುಮಾರ್ ಎಂಬಾತನು ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿನ ಎಡಬದಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ಪರಿಣಾಮ ಕಾರಿನ ಎಡಬದಿಯ ಮುಂಭಾಗದ ಬಾಗಿಲಿಗೆ, ಸೈಡ್ ಮಿರರ್, ಬಂಪರ್ ಹಾಗೂ ಪೆಂಡರ್ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಗೂಡ್ಸ್ ಟೆಂಪೊ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Traffic North Police Station                                                

ದಿನಾಂಕ 16.12.2022 ರಂದು ಪಿರ್ಯಾದಿ Ravi M.ದಾರರ ಸ್ನೇಹಿತ ಧನರಾಜ್ ಎಸ್. (27 ವರ್ಷ) ಎಂಬವರ ಸಂಬಂಧಿಕರ ಮದರಂಗಿ ಶಾಸ್ತ್ರ ಕಾರ್ಯಕ್ರಮಕ್ಕೆ ಮಂಡ್ಕೂರಿಗೆ ಮಂಗಳೂರಿನಿಂದ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತ ನಾಗೇಶ ದ್ವಿಚಕ್ರ ವಾಹನ ನಂಬ್ರ KA-19-EN-6323 ಮತ್ತು ಧನರಾಜ್ ರವರು ಮತ್ತು ಅವನ ಸ್ನೇಹಿತ ನಾಗರಾಜ ಶೇಷ ಎಂಬವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-HH-2429 ನೇಯದಲ್ಲಿ ಹೋಗಿದ್ದು, ಮದರಂಗಿ ಕಾರ್ಯಕ್ರಮ ಮುಗಿಸಿ ರಾತ್ರಿ ವೇಳೆಗೆ ವಾಪಾಸ್ಸು ಸದರಿ ಮೋಟಾರ್ ಸೈಕಲ್ ಗಳಲ್ಲಿ ಮಂಗಳೂರಿಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ದಿನಾಂಕ 17-12-2022 ರಂದು ಮುಂಜಾನೆ 00:15 ಗಂಟೆಗೆ ಮಂಗಳೂರು ತಾಲೂಕು, ಮುಲ್ಕಿ ಏಳಿಂಜೆ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಟಾಟಾ ಏಸ್ ತರದ ವಾಹನ ಒಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಧನರಾಜ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA-19-HH-2429 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಧನರಾಜ್ ಮತ್ತು ನಾಗರಾಜ ಶೇಷರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಧನರಾಜರವರ ಬಲಕೈಯ ಹೆಬ್ಬೆರಳು, ತೋರು ಬೆರಳು ಮಧ್ಯದ ಬೆರಳುಗಳಿಗೆ ಮತ್ತು ಬಲ ಕೈ ಮಣಿಗಂಟಿಗೆ ಮೂಳೆ ಮುರಿದ ಗಂಭೀರ ಸ್ವರೂಪದ ಗಾಯವಾಗಿದ್ದು ನಾಗರಾಜ ಶೇಷರವರಿಗೆ ಯಾವುದೇ ರೀತಿಯ ಗಾಯ ಆಗಿರುವುದಿಲ್ಲ, ಗಾಯಗೊಂಡ ಧನರಾಜ್ ರವರನ್ನು ಚಿಕಿತ್ಸೆಯ ಬಗ್ಗೆ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗ ಆಂಬ್ಯುಲೆನ್ಸ್ ನಲ್ಲಿ ಕರೆ ತಂದಲ್ಲಿ ಅಲ್ಲಿಯ ವೈದ್ಯರು ಧನರಾಜರವರನ್ನು ಪರೀಕ್ಷಿಸಿ ಚಿಕತ್ಸೆ ನೀಡಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಅಫಘಾತ ಪಡಿಸಿದ ವಾಹನ ಚಾಲಕನು ವಾಹನವನ್ನು  ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 17-12-2022 04:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080