ಅಭಿಪ್ರಾಯ / ಸಲಹೆಗಳು

Crime Reported in :  Mangalore East Traffic PS        

ದಿನಾಂಕ 18-01-2023 ರಂದು ಪಿರ್ಯಾದಿ ಸಾನಿಕ ಹಾಗೂ ಅವರ ಸ್ನೇಹಿತೆ ಜೆನೀಶ ಪಿರೇರಾ ರವರು ಪದವು ಕಾಲೇಜಿಗೆ ಹೋಗುವರೇ  KA-19-AB-4774  ನೊಂದಣಿ ನಂಬ್ರದ ಖಾಸಗಿ ಬಸ್ಸಿನಲ್ಲಿ ಬೆಳಿಗ್ಗೆ ಸುಮಾರು 8.30 ಗಂಟೆಗೆ ನಂತೂರ್ ಬಸ್ ನಿಲ್ದಾಣಕ್ಕೆ ಬಂದಿದ್ದು, ಇತರ ಪ್ರಯಾಣಿಕರು ಹಾಗೂ ಪಿರ್ಯಾದಿದಾರರು ಒಬ್ಬೊಬ್ಬರಾಗಿ ಬಸ್ಸಿನಿಂದ ಇಳಿದಿದ್ದು, ಪಿರ್ಯಾದಿದಾರರ ಹಿಂದೆ ಇದ್ದ ಸ್ನೇಹಿತೆ ಜೆನೀಶಾ ಪಿರೇರಾ ರವರು ಬಸ್ಸಿನಿಂದ ಇಳಿಯುತ್ತಿರುವಾಗ ಬಸ್ಸಿನ ಚಾಲಕನಾದ ರಾಜೇಶ್ ಎಂಬಾತನು ಅಜಾಗರೂಕತೆಯಿಂದ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಒಮ್ಮೇಲೆ ಏಕಾಏಕಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಜೆನೀಶಾ ಪಿರೇರಾ ರವರು ರಸ್ತೆಗೆ ಬಿದ್ದು, ಎಡ ಅಂಗಾಲಿಗೆ ಚರ್ಮಹರಿದ ಆಳವಾದ ರಕ್ತಗಾಯ, ತಲೆಯ ಹಿಂಭಾಗದಲ್ಲಿ ಗುದ್ದಿದ ರೀತಿಯ ಗಾಯಗಳಾದವರನ್ನು ಪಿರ್ಯಾದಿದಾರರು ಹಾಗೂ ಸಾರ್ವಜನಿಕರು ಆಟೋರಿಕ್ಷಾ ಒಂದರಲ್ಲಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ

           

Crime Reported in : Mangalore South PS                                                  

ಪಿರ್ಯಾದಿ ದರ್ಶನ್ ರೈ ಎಂಬವರ ತಂದೆಯ ಹಿರಿಯ ಸಹೋದರಿ ಶ್ರೀಮತಿ. ಗೀತಾ ಟಿ ಪೂಂಜಾ ಮತ್ತು ಅವರ ಪತಿ ಪಿ. ತಿಮ್ಮಪ್ಪ ಪೂಂಜಾ ಎಂಬವರಾಗಿದ್ದು, ಶ್ರೀಮತಿ. ಗೀತಾ ಟಿ ಪೂಂಜಾರವರು ದಿನಾಂಕ 03-02-2022 ರಂದು ಮೃತರಾಗಿರುತ್ತಾರೆ. ಶ್ರೀ. ಪಿ. ತಿಮ್ಮಪ್ಪ ಪೂಂಜಾರವರು ದಿನಾಂಕ 05-11-2022 ರಂದು ಮೃತರಾಗಿರುತ್ತಾರೆ. ಮೃತ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ದಿವಂಗತ ಡಾ||. ತಿಮ್ಮಪ್ಪ ಪೂಂಜಾರವರು ಜೀವಂತವಿದ್ದಾಗ ಮಾಡಿಸಿದ ವಿಲ್ ನಾಮೆ ಪ್ರಕಾರ ಅವರ ಮಾಲಕತ್ವದ KA 19 MM 9630 ನೇ ನಂಬ್ರದ SKODA ಕಾರು ಶ್ರೀಮತಿ. ವೀಣಾ ಕೆ ರೈ ಮತ್ತು ಶ್ರೀಮತಿ. ಆಶಾಜ್ಯೋತಿ ಎ ರೈ ಎಂಬವರಿಗೆ ಸೇರಬೇಕಾಗಿರುತ್ತದೆ. ಹೀಗಿರುವಲ್ಲಿ ರಾಜೇಶ್ ಕುಮಾರ್ ಶೆಟ್ಟಿ ಎಂಬವರು ಡಾ||. ತಿಮ್ಮಪ್ಪ ಪೂಂಜಾರವರು ಮೃತ ಪಟ್ಟ ಬಳಿಕ ದಿನಾಂಕ 01-12-2022 ರಂದು ಪಾರಂ ನಂಬ್ರ 29, 30 ನೇಯದರಲ್ಲಿ ಡಾ|. ತಿಮ್ಮಪ್ಪ ಪೂಂಜಾರವರ ನಕಲಿ ಸಹಿಯನ್ನು ಸೃಷ್ಠಿಸಿ ಅವುಗಳನ್ನ ನೈಜವೆಂದು ಬಿಂಬಿಸಿ ಸುಳ್ಳು ದಾಖಲಾತಿಗಳನ್ನು ಮಂಗಳೂರು ಆರ್.ಟಿ.ಓ ಕಛೇರಿಗೆ ಸಲ್ಲಿಸಿ ಡಾ|. ತಿಮ್ಮಪ್ಪ ಪೂಂಜಾರವರ ಮಾಲಕತ್ವದ ಸುಮಾರು 24 ಲಕ್ಷ ಮೌಲ್ಯದ KA 19 MM 9630 ನೇ ನಂಬ್ರದ SKODA ಕಾರನ್ನು ಮೋಸ ಮತ್ತು ವಂಚನೆಯ ಮೂಲಕ ತನ್ನ ಹೆಸರಿಗೆ ರಾಜೇಶ್ ಕುಮಾರ್ ಶೆಟ್ಟಿರವರು ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುತ್ತಾರೆ ಎಂಬಿತ್ಯಾದಿಯಾಗಿ

 

Crime Reported in:Kankanady Town PS   

ಪಿರ್ಯಾದಿ Koragappa ಮಂಗಳೂರಿನ ಕಣ್ಣೂರು ಗ್ರಾಮದವರಾಗಿದ್ದು, ಸಂಸಾರದೊಂದಿಗೆ ವಾಸಮಾಡಿಕೊಂಡು ಗಾರ್ಡನ್ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಮಗ ಧನುಷ್ ಕೆ ಪ್ರಾಯ 21 ವರ್ಷ ಎಂಬಾತನು ಖಾಸಗೀ ಪಬ್ ನಲ್ಲಿ ಡಿಜೆ ಅಪರೇಟರ್ ಆಗಿ ಕೆಲಸಮಾಡುತ್ತಿದ್ದು.ದಿನಾಂಕ 15-01-2023 ರಂದು ಪಿರ್ಯಾದಿದಾರರ ಮಗ ಕೆಲಸ ಮುಗಿಸಿಕೊಂಡು ಮೇರಿ ಹಿಲ್ ನಲ್ಲಿರುವ ಮಾವನ ಮನೆಗೆ ಹೋಗಿ ರಾತ್ರಿ ಉಳಿದುಕೊಂಡಿದ್ದು ಮರು ದಿನ ದಿನಾಂಕ 16-01-2023 ರಂದು ಅಲ್ಲಿಂದ ಪಿರ್ಯಾದಿದಾರರ ಮನೆಗೆ ಹೋಗಿರುವುದಾಗಿ ಮಾವನಿಗೆ ತಿಳಿಸಿ ಬೆಳಗ್ಗೆ 7-45 ಗಂಟೆಗೆ ಮನೆಯಿಂದ ಹೊರಟಿರುತ್ತಾರೆ.ಪಿರ್ಯಾದಿದಾರರು ಅದೇ ದಿನ ಕೆಲಸಕ್ಕೆ ಹೋಗಿದ್ದು ಮನೆಗೆ ಬಂದ ಮೇಲೆ ಪಿರ್ಯಾದಿದಾರರು ಮಗನ ಬಗ್ಗೆ ವಿಚಾರಿಸಲು ಮಗನಾದ ಧನುಷ್ ಗೆ ದೂರವಾಣಿ ಕರೆಯನ್ನು ಮಾಡಿದ್ದು ಆತನ ಪೋನ್ ಸ್ವಿಚ್ ಆಪ್ ಬಂದಿದ್ದು, ನಂತರ ಪಿರ್ಯಾದಿದಾರರು ಆತನ ಮಾವನಾದ ಕೃಷ್ಣ ವರಿಗೆ  ಹಾಗೂ ಕೆಲಸ ಮಾಡುವ ಸ್ಥಳಕ್ಕೂ ಕೂಡ ದೂರವಾಣಿ ಕರೆಯನ್ನು ಮಾಡಿ ವಿಚಾರಿಸಿದ್ದಲ್ಲಿ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದು,ಪಿರ್ಯಾದಿದಾರರು ಸುತ್ತಮುತ್ತಲಿನ ಪರಿಸರದವರಲ್ಲಿ ವಿಚಾರಿಸಿ ನಂತರ ಪಿರ್ಯಾದಿದಾರರ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದಲ್ಲಿ ಪತ್ತೆ ಯಾಗಿರುವುದಿಲ್ಲ. ಆದುದರಿಂದ ನಾಪತ್ತೆಯಾದ ಪಿರ್ಯಾದುದಾರರ ಮಗ ಧನುಷ್ ಕೆ ರವರನ್ನು.ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in : Moodabidre PS 

 ದಿನಾಂಕ 17-01-2023 ರಂದು ಮುಂಬೈಯಲ್ಲಿ ವ್ಯಾಪಾರ ನಡೆಸಿಕೊಂಡಿರುವ ಲಕ್ಷ್ಮಣ ತನಿಯಪ್ಪ ಪೂಜಾರಿ ಎಂಬುವರು ಠಾಣೆಗೆ ಬಂದು, ವ್ಯವಹಾರದ ಬಿಡುವಿನ ಸಂದಂರ್ಭದಲ್ಲಿ ಊರಿಗೆ ಬಂದಾಗ ಉಳಿದುಕೊಳ್ಳುವ ಸಲುವಾಗಿ ಮೂಡಬಿದ್ರೆ ಮಾರ್ಪಾಡಿ ಗ್ರಾಮದ ಮಾರಿಗುಡಿಯ ಬಳಿಯಲ್ಲಿ ನಿರ್ಮಿಸಿಕೊಂಡಿರುವ ಮನೆಯಲ್ಲಿ ಇತ್ತೀಚಿಗೆ ಮುಂಬೈಯಿಂದ ಬಂದು ಉಳಕೊಂಡಿದ್ದು ದಿನಾಂಕ 12-01-2023 ರಂದು ನಾವುಗಳು ಮರಳಿ ಮುಂಬೈಗೆ ಹೋಗಿದ್ದು, ದಿನಾಂಕ 14-01-2023 ರಂದು ನಮ್ಮ ಮನೆಯಲ್ಲಿ ಗಿಡಗಳಿಗೆ ನೀರು ಬಿಡಲೆಂದು ನೇಮಿಸಿದ ಮಾಲಿ ನವೀನ ಎಂಬುವವರು ಸಂಜೆಯ ವೇಳೆಗೆ ದೂರವಾಣಿ ಕರೆಮಾಡಿ ನಮ್ಮ ಮಾರ್ಪಾಡಿ ಗ್ರಾಮದ ಮನೆಯ ಎದುರುಗಡೆಯ ಬಾಗಿಲನ್ನು ಯಾರೋ ಕಳ್ಳರು ಹೊಡೆದಿರುವುದಾಗಿ ತಿಳಿಸಿದ್ದರಿಂದ ನಾವು ಮರುದಿನ ಬೆಳಿಗ್ಗೆ ಮುಂಬೈಯಿಂದ ಹೊರಟು ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಒಳಗಡೆ ಪ್ರವೇಶಿಸಿ ಮನೆಯ ಒಳಗಿನ ಮೂರು ಬಾಗಿಲುಗಳನ್ನು ಮುರಿದು ಮತ್ತು ಕಬ್ಬಿಣದ ಕಪಾಟನ್ನು ಹೊಡೆದು ಅದರೊಳಗಿದ್ದ 25,000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಒಟ್ಟಾರೆಯಾಗಿ ನಮಗೆ ಸುಮಾರು 50,000/- ರೂಪಾಯಿಗಳವರೆಗೆ ನಷ್ಟ ಉಂಟಾಗಿರುತ್ತದೆ ಎಂಬಿತ್ಯಾದಿಯಾಗಿದೆ.

ಇತ್ತೀಚಿನ ನವೀಕರಣ​ : 18-01-2023 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080