ಅಭಿಪ್ರಾಯ / ಸಲಹೆಗಳು

Crime Reported in : Urva PS

ಪಿರ್ಯಾದಿ ಸುದರ್ಶನ್ ಕೆ ಬಿ ರವರು ಕಲ್ಬಾವಿ ರೋಡ್, ಸಾಗರ್ ಕೋರ್ಟ್, ಕೊಟ್ಟಾರ, ಮಂಗಳೂರು ವಾಸಿಯಾಗಿದ್ದು, ದಿನಾಂಕ 13-03-2023 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿದಾರರ  ಎರಡನೇ ಮಗ ಸರೋಶ್ ದೇವಸ್ಥಾನಕ್ಕೆ ಹೋಗುತ್ತೇನೆಂದು ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ.  ಈ ಬಗ್ಗೆ ಪಿರ್ಯಾಧಿದಾರರು ತನ್ನ ಸಂಬಂಧಿಕರೊಂದಿಗೆ ಹಾಗೂ ಸ್ನೇಹಿತರಲ್ಲಿ ಎಲ್ಲಾಕಡೆ ವಿಚಾರಿಸಿದಲ್ಲಿ ಪಿರ್ಯಾದಿದಾರರ ಮಗ ಸರೋಶ್ ರವರು ಸಿಗದೇ ಇದ್ದು ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

(ಕಾಣೆಯಾದವರ ವಿವರ: ಹೆಸರು ಸರೋಶ್, ಪ್ರಾಯ 29 ವರ್ಷ, 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ದಪ್ಪ ಮೈಕಟ್ಟು, ದುಂಡು ಮುಖ, ಸಪೂರ ಮೀಸೆ ಮತ್ತು ಸ್ವಲ್ಪ ಗಡ್ಡ ಬಿಟ್ಟಿರುತ್ತಾರೆ. ಕನ್ನಡ, ತುಳು, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾರೆ.)

Panambur PS    

 ಪಿರ್ಯಾದಿ ವಿಠ್ಠಲ್ ಕುಲಾಲ್, ಯಾಯ್ಯಾಡಿ, ಮಂಗಳೂರು ಇವರು ಬೈಕಂಪಾಡಿ ಇಂಡಸ್ಟೀಯಲ್ ಏರಿಯಾದಲ್ಲಿರುವ ಮನಿಷ್ಕ್ ಎಂಟರ್ ಪ್ರೈಸಸ್ ಎಂಬ ಫರ್ನಿಚರ್ ಉತ್ಪಾದನಾ ಸಂಸ್ಥೆಯ ಮಾಲಕರಾಗಿದ್ದು, ಪೀಠೋಪಕರಣ ತಯಾರಿಕೆ, ರಿಪೇರಿ ಕೆಲಸವನ್ನು ನಿರ್ವಹಿಸುತ್ತಿದ್ದು, ಸದರಿ ಕಾರ್ಖಾನೆಯು ಬೈಕಂಪಾಡಿ ಕೈಗಾರಿಕಾ ಪ್ರದೇಶ ಮಂಗಳೂರಿನಲ್ಲಿದ್ದು, 1ನೇ ಆರೋಪಿ ಹರೀಶ್ ಎಂಬವನು 2021 ನೇ ಇಸವಿಯಿಂದ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಸದರಿ ವಹಿವಾಟನ್ನು ನೋಡಿಕೊಳ್ಳಲು ಮಾಲಕರಾದ ಪಿರ್ಯಾದಿಯು ಹರೀಶನನ್ನು ನಂಬಿಕೆಯ ಮೇಲೆ ಕೆಲಸಕ್ಕೆ ನೇಮಿಸಿದ್ದು,  2 ನೇ ಆರೋಪಿಯಾದ ವಿಕ್ರಮ್ ಮಾಲಿ ಹಾಗೂ 3ನೇ ಆರೋಪಿ ಕಿರಣ್ ಸಿಂಗ್ ಬಾಲಾಜಿ ಹಾರ್ಡ್ ವೇರ್ ಮಂಗಳೂರು ನಗರ ಇದರ ಮಾಲಕರಾಗಿದ್ದು,  ಪಿರ್ಯಾದಿದಾರರ ಕಾರ್ಖಾನೆಗೆ ಬೇಕಾಗುವ ಸಮಾಗ್ರಿಗಳನ್ನು ಬಾಲಾಜಿ ಹಾರ್ಡ್ ವೇರ್ ನಿಂದ ಕಳೆದ ಐದು ವರ್ಷಗಳಿಂದ ತರಿಸಿಕೊಳ್ಳುತ್ತಿದ್ದರು. 1ನೇ ಆರೋಪಿಗೆ ಪಿರ್ಯಾದುದಾರರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ, ಪೀಠೋಪಕರಣಗಳ ಮಾರಾಟಕ್ಕೆ ಸಂಬಂದಿಸಿದಂತೆ ನಂಬಿಕೆಯ ಆಧಾರದ ಮೇಲೆ ವ್ಯವಹಾರ ಬಿಟ್ಟುಕೊಟ್ಟಿದ್ದರು. ಹೀಗಿರುವಾಗ  ಮಾರಟವಾದ ಪೀಠೋಪಕರಣಗಳಿಗೂ, ತಯಾರಾದ ವಸ್ತುಗಳಿಗೂ ಹಾಗೂ ಬಿಲ್ಲುಗಳಲ್ಲಿ ವ್ಯಾತ್ಯಾಸ ಕಂಡುಬಂದಿದ್ದು, ಇದರಿಂದ ಅನುಮಾನಗೊಂಡ ಪಿರ್ಯಾದುದಾರರು ದಾಖಲಾತಿಗಳನ್ನು ಪರಿಶೀಲಿಸಿದಾಗ ಪಿಠೋಪಕರಣದ ದಾಸ್ತನಿನ ಬಗ್ಗೆ ವ್ಯಾತ್ಯಾಸ ಕಂಡುಬಂದಿದ್ದು, 1 ನೇ ಆರೋಪಿ ಹರೀಶ್ ರವರನ್ನು ಈ ಬಗ್ಗೆ  ಕೇಳಿದಾಗ ಹಾರ್ಡ್ ವೇರ್ ಕಂಪೆನಿಯ ಆರೋಪಿ 2 ಮತ್ತು ಆರೋಪಿ 3ನೇರವರು  ಆರೋಪಿ 1 ನೇರವರೊಂದಿಗೆ ಸೇರಿಕೊಂಡು ಬಾಲಾಜಿ ಹಾರ್ಡ್ ವೇರ್ ನಿಂದ ಖರೀದಿಸಿದ ಸಾಮಗ್ರಿಗಳಿಗೆ ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡಿರುವುದು ಹಾಗೂ ಖರೀದಿಸಿದ ಸದರಿ ಸಾಮಾಗ್ರಿಗಳು ಮಾರುಕಟ್ಟೆ ಬೆಲೆಗಿಂತ ಅತ್ಯಧಿಕ ಬೆಲೆಗೆ ಖರೀದಿಸಿದಂತೆ ಮಾಡಿರುವುದು ಕಂಡುಬಂದಿರುತ್ತದೆ. ಆರೋಪಿ 1 ನೇಯವನು ಸದ್ರಿ ಕಂಪೆನಿಯ ನೌಕರನಾಗಿದ್ದು, ಮಾಲೀಕರಿಗೆ ನಂಬಿಕೆ ದ್ರೋಹ ಮಾಡುವ ಉದ್ದೇಶದಿಂದ ಆರೋಪಿ 2 ಮತ್ತು 3 ನೇ ಆರೋಪಿಗಳೊಂದಿಗೆ ಸೇರಿ ಒಳಸಂಚು ಮಾಡಿ ಅಕ್ರಮ ಕಮೀಷನ್ ಪಡೆದು, ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಅಕ್ರಮ ಸಂಪಾದನೆ ಮಾಡಿ ಮಾಲಿಕರಿಗೆ ನಷ್ಟವನ್ನುಂಟು ಮಾಡಿರುತ್ತಾರೆ. ಆದುದರಿಂದ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Traffic North Police Station                                    

ಪಿರ್ಯಾದಿ ಉಮಾನಾಥ್ ಶೆಟ್ಟಿಗಾರ್ (43 ವರ್ಷ) ರವರು ಈ ದಿನ ದಿನಾಂಕ: 17-03-2023 ರಂದು ಅವರಬಾಬ್ತು KA-19-HK-9342 ನಂಬ್ರದ ಸ್ಕೂಟರಿನಲ್ಲಿ ಅವರ ಹೆಂಡತಿ ಶ್ರೀಮತಿ ಸಂಧ್ಯಾ ಯು ಶೆಟ್ಟಿಗಾರ್ ರವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿಗೆ ಹೋಗಿ ವಾಪಾಸು ಮನೆ ಕಡೆಗೆ ರಾಹೆ 66ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಮದ್ಯಾಹ್ನ 2:30 ಘಂಟೆಗೆ ಸುರತ್ಕಲಿನ ಶ್ರೀ ವೀರಭದ್ರ ದೇವಸ್ಥಾನದ ಹತ್ತಿರ ತಲುಪುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರಿನ ಬಲಬದಿಯಿಂದ KA-19-AD-7013 ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕ IMRAN KHAN  ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯಾವುದೇ ಮುನ್ಸೂಚನೇ ಇಲ್ಲದೇ ಆಟೋ ರಿಕ್ಷಾವನ್ನು ಎಡಕ್ಕೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರೆ ಇಬ್ಬರೂ ರಸ್ತೆಗೆ ಬಿದ್ದು ಈ ಅಪಘಾತದಿಂದ ಪಿರ್ಯಾದಿದಾರರಿಗೆ ಎಡ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದು ಎಡಕೈ ಮಣಿಗಂಟಿಗೆ ತರಚಿದ ಗಾಯ ಮತ್ತು ಬಲಕೈ ಅಂಗೈಗೆ ಗುದ್ದಿದ ಗಾಯ ಹಾಗೂ ಸಹಸವಾರೆ ಶ್ರೀಮತಿ ಸಂದ್ಯಾ ಯು ಶೆಟ್ಟಿಗಾರ್ ರವರಿಗೆ ಬೆನ್ನಿನ ಹಿಂಬದಿಯಲ್ಲಿ ತರಚಿದ ಗಾಯ, ಎರಡೂ ಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Ullal PS

ದಿನಾಂಕ  17.03.2023 ರಂದು ಪ್ರಕರಣದ ಪಿರ್ಯದಿದಾರರಾದ ಕೃಷ್ಣ ಕೆ ಹೆಚ್ ಪಿಎಸ್ಐ ಉಳ್ಳಾಲ ಠಾಣೆ ರವರು ಸಿಬ್ಬಂದಿಗಳ ಜೊತೆ ರೌಂಡ್ಸ ಕರ್ತವ್ಯದಲ್ಲಿರುವಾಗ ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲ ಗ್ರಾಮದ ತೊಕ್ಕೊಟ್ಟು ಒಳಪೇಟೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ 1)ಕಿಶೋರ್, 2)ಬಿನೋಯ್ ಆರ್, 3)ಧ್ಯಾನ್ ಕರ್ಕೇರ ರವರು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆಯನ್ನು ಹೊಂದಿ ಸಾರ್ವಜನಿಕರಿಗೆ ತೊಂದರೆ ನೀಡುವ ಬಗ್ಗೆ ಮಾಹಿತಿ ಬಂದಂತೆ ಸ್ಥಳಕ್ಕೆ 18-00 ಗಂಟೆಗೆ ಧಾವಿಸಿ  ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ನಂತರ ಆರೋಪಿಗಳನ್ನು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಗಳು ಮಾದಕ ವಸ್ತು ಗಾಂಜಾ ಸೇವನೆ ಬಗ್ಗೆ ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್ ನ್ನು  ಪಡೆದುಕೊಂಡು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಪಿರ್ಯಾದಿದಾರರು  ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

ಇತ್ತೀಚಿನ ನವೀಕರಣ​ : 21-08-2023 12:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080