ಅಭಿಪ್ರಾಯ / ಸಲಹೆಗಳು

Crime Reported in : CEN Crime PS Mangaluru City

    ದಿನಾಂಕ 17-11-2022 ರಂದು 6-15 ಗಂಟೆಗೆ  ಮುಡಿಪುನಿಂದಾಗಿ ಮೇಲ್ಕಾರ್  ಕಡೆಗೆ ಹೋಗುವ ರಸ್ತೆಯಲ್ಲಿ ಕಾಯರ್ ಗೋಳಿ ಎಂಬಲ್ಲಿ  ಪಿರ್ಯಾದಿ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ. ರಾಜೇಂದ್ರ.ಬಿ ದಾರರು ಹಾಗೂ ಸಿಬ್ಬಂದಿಯವರು ವಾಹನ ತಪಾಸಣೆ ನಡೆಸುತ್ತಿರುವ ಸಮಯ ಮಾಹಿತಿಯOತ     KL-14-P-7775 ನಂಬ್ರದ ಮಹೇಂದ್ರ XUV ಕಾರು ಬರುವುದನ್ನು ನೋಡಿ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು  ನಿಲ್ಲಿಸಲು ಸೂಚಿಸಿದಾಗ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದವರನ್ನು ಸಿಬ್ಬಂದಿಯವರು ವಶಕ್ಕೆ ಪಡೆದು ಹೆಸರು ವಿಳಾಸ ವಿಚಾರಿಸಿದಾಗ 1) ರಮೀಝ್ ರಾಝ್, ಪ್ರಾಯ(30), ತಂದೆ: ಹುಸೈನ್, ವಾಸ: ಡೋರ್ ನಂಬ್ರ: 2-392, ತೌಡುಗೋಳಿ ಕ್ರಾಸ್, ನರಿಂಗಾನ ಗ್ರಾಮ, ಬಂಟ್ವಾಳ ತಾಲೂಕು 2) ಅಬ್ದುಲ್ ಖಾದರ್ ಹ್ಯಾರಿಸ್, ಪ್ರಾಯ(31), ತಂದೆ: ಮೂಸಬ್ಬ, ವಾಸ: ಜೀಲಾನಿ ಮಂಝಿಲ್, ಮದಂಗಲ್ ಕಟ್ಟ, ಮೀಯಪದವು, ಮಂಜೇಶ್ವರ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು, ಇವರನ್ನು ವಿಚಾರಿಸಿದಾಗ ತಾವು ಮಾಧಕ ವಸ್ತುವಾದ ಗಾಂಜಾವನ್ನು ಕಾರಿನಲ್ಲಿ ಇಟ್ಟುಕೊಂಡಿರುವ ಬಗ್ಗೆ ತಡವರಿಸುತ್ತಾ ತಾವು ತಮ್ಮ ಸ್ನೇಹಿತರಾದ  ರಪೀಕ್ ಚಿಗುರುಪಾದೆ, ಸಫಾಜ್ ತೌಡುಗೋಳಿ, ಮೊಯಿದು ಸುಳ್ಯ, ಕೇರಳದ ಲಾಲಾ ಕಬೀರ್ ಹಾಗು ಇತರರು ಸೇರಿ ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ಆಂಧ್ರಪ್ರದೇಶದ ವಿಜಯವಾಡ, ವಿಶಾಖ ಪಟ್ಟಣದಿಂದ ರವಿ ಮತ್ತು ರಿಕ್ಷಾ ಚಾಲಕ ಸುರೇಶ್ ಎಂಬವರಿಂದ ಪಡೆದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ  132 ಕೆ.ಜಿ 400 ಗ್ರಾಂ ತೂಕದ ಗಾಂಜಾವನ್ನು, ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ 9 ಲಕ್ಷ ರೂಪಾಯಿ ಮೌಲ್ಯದ KL-14-P-7775 ನಂಬ್ರದ ಮಹೇಂದ್ರ XUV ಕಾರನ್ನು,  13,000/- ರೂಪಾಯಿ ಮೌಲ್ಯದ 2 ಮೊಬೈಲ್ ಪೋನ್ ಗಳನ್ನು,  ಆರೋಪಿತರ ಬಳಿಯಿದ್ದ ನಗದು ಹಣ 2,180/-ರೂಪಾಯಿ,  ಕಾರು ಲೀಸ್ ಗೆ ಪಡೆದ ಕರಾರುಪತ್ರದ ಜೆರಾಕ್ಸ್ ಪ್ರತಿಯನ್ನು ಹಾಗೂ  ಅಕ್ರಮವಾಗಿ ಗಾಂಜಾ ಸಾಗಾಟ ಮಾಡುವಾಗ ಪೊಲೀಸರು ಅಥವಾ ಸಾರ್ವಜನಿಕರು ತಡೆ ಮಾಡಿದರೆ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಇಟ್ಟು ಕೊಂಡಿರುವ 3 ತಲವಾರುಗಳನ್ನು ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿ  ಮುಂದಿನ ಕ್ರಮದ ಬಗ್ಗೆ ಆರೋಪಿ ಮತ್ತು ವಶಪಡಿಸಿಕೊಂಡ ಒಟ್ಟು ರೂ 39,15,180-00 ಮೌಲ್ಯದ ಸೊತ್ತುಗಳನ್ನು ಹಸ್ತಾಂತರಿಸಿರುವುದಾಗಿದೆ ಎಂಬಿತ್ಯಾದಿ. 

Ullal PS   

ದಿನಾಂಕ. 17-11-2022 ರಂದು ರಾತ್ರಿ ಸಮಯದಲ್ಲಿ ಫಿರ್ಯಾದಿದಾರರಾದ ಹರ್ಷಿತ್ ರವರು ಔಷಧಿ ಖರೀದಿ ಮಾಡಲು ಮನೆಯಿಂದ ಮಂಗಳೂರು ಗಣೇಶ ಮೆಡಿಕಲ್ ಗೆ ಕೆಎ-19-ಹೆಚ್.ಜೆ.9526 ನೇ ಆ್ಯಕ್ಸಸ್ 125 ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ ರಾತ್ರಿ 11:10 ಗಂಟೆಯ ಸಮಯಕ್ಕೆ ಸೊಮೇಶ್ವರ ಗ್ರಾಮದ ಉಚ್ಚಿಲ ಬಸ್ ಸ್ಟಾಪ್ ಬಳಿಗೆ ತಲುಪುವಾಗ್ಗೆ ಅಲ್ಲಿದ್ದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈಯನ್ನು ಅಡ್ಡತಂದು ಫಿರ್ಯಾದಿದಾರರ ವಾಹನವನ್ನು ಸೂಚನೆ ಕೊಟ್ಟು ನಿಲ್ಲಿಸಿ ಫಿರ್ಯಾದಿದಾರರಿಗೆ ಹಿಂದಿ ಭಾಷೆಯಲ್ಲಿ ಅವಾಚ್ಯಶಬ್ದಗಳಿಂದ ಬೈದು ಅವರುಗಳ ಪೈಕಿ ಒಬ್ಬಾತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಫಿರ್ಯಾದಿದಾರರ ಎಡಭುಜಕ್ಕೆ ಹೊಡೆದು ನೋವುಂಟು ಮಾಡಿದಲ್ಲದೆ ಉಳಿದಿಬ್ಬರು ಕೈಗಳಿಂದ ಫಿರ್ಯಾದಿದಾರರ ಮೈಕೈಗೆ ಯದ್ವಾತದ್ವಾ ಹೊಡೆದು ನೋವುಂಟು ಮಾಡಿ ಫಿರ್ಯಾದಿದಾರರನ್ನು ದ್ವಿಚಕ್ರ ವಾಹನದಿಂದ ಎಳೆದು ಕೆಳಗೆ ದೂಡಿ ಹಾಕಿ ಬಳಿಕ ಆರೋಪಿಗಳು ಫಿರ್ಯಾದಿದಾರರ ದ್ವಿಚಕ್ರ ವಾಹನವನ್ನು ಆರೋಪಿಗಳು ಕಿತ್ತುಕೊಂಡು ಹೋಗಿದ್ದು, ವಾಹನದ ಅಂದಾಜು ಮೌಲ್ಯ ರೂ.1,05,000/- ಆಗಬಹುದು. ನಂತರ ಗಾಯಾಳು ಫಿರ್ಯಾದಿದಾರರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ ಎಂಬಿತ್ಯಾದಿ

 

2) ದಿನಾಂಕ 17/11/2022 ರಂದು ಫಿರ್ಯಾದಿದಾರರಾದ ಪ್ರಫುಲ್ ರಾಜ್ ರವರು ರಾತ್ರಿ ಸಮಯ ತನ್ನ ಮನೆಯಿಂದ ತನ್ನ ಅಜ್ಜಿ ಮನೆಯಾದ ಕುತ್ತಾರು ಪಂಡಿತ್ ಹೌಸ್ ಗೆ ಹೋಗಲು ಕೆಎ-19-ಹೆಚ್ ಸಿ -9012 ನೇ ಟಿವಿಎಸ್ ಎನ್ ಟಾರ್ಕ್ ದ್ವಿಚಕ್ರ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು  ಹೋಗುತ್ತಾ ರಾತ್ರಿ ಸುಮಾರು 11:30 ಗಂಟೆಯ ಸಮಯಕ್ಕೆ ಸೋಮೇಶ್ವರ ಗ್ರಾಮದ ಅಂಬಿಕಾರೋಡ್ ಗಟ್ಟಿ ಸಮಾಜ ಹಾಲ್ ನ ಎದುರುಗಡೆ ತಲುಪುವಾಗ್ಗೆ 3 ಜನ ಅಪರಿಚಿತ ಆರೋಪಿಗಳು ಕೈಸನ್ನೆ ಮಾಡಿ ಫಿರ್ಯಾದಿದಾರರ ವಾಹನವನ್ನು ನಿಲ್ಲಿಸಿ ಫಿರ್ಯಾದಿದಾರರನ್ನು ಉದ್ದೇಶಿಸಿ “” ಅರೆ ಸಾಲೆ, ರುಕ್ ರುಕ್ “ಎಂದು ಹಿಂದಿ ಭಾಷೆಯಲ್ಲಿ ಬೇಡದ ಶಬ್ದಗಳಿಂದ ಬೈದು ಬಳಿಕ ಆ ಮೂರು ಜನ ವ್ಯಕ್ತಿಗಳು ಫಿರ್ಯಾದಿದಾರರನ್ನು ವಾಹನದಿಂದ ಎಳೆದು ಕೆಳಗೆ ಬೀಳಿಸಿ ಕಾಲಿನಿಂದ ತುಳಿದು ಕೈಗಳಿಂದ ಮೈಕೈಗೆ ಗುದ್ದಿ ನೋವುಂಟು ಮಾಡಿದಾಗ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಕೋಪಗೊಂಡ ಆರೋಪಿಗಳ ಪೈಕಿ ಒಬ್ಬಾತನು ಕಬ್ಬಿಣದ ಸರಳಿನಿಂದ ಫಿರ್ಯಾದಿದಾರರ ಎಡಭುಜಕ್ಕೆ ಹೊಡೆದು, ಫಿರ್ಯಾದಿದಾರರನ್ನು ಉದ್ದೇಶಿಸಿ ಕ್ಯಾರೆ ರೋರ್ ತಾರೆ ಮಾದರ್ ಚೋತ್ ಎಂಬುದಾಗಿ ಹಿಂದಿ ಭಾಷೆಯಲ್ಲಿ ಬೈದು ನಂತರ ಆರೋಪಿಗಳು ಫಿರ್ಯಾದಿದಾರರ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಹೋಗಿದ್ದು, ವಾಹನದ ಅಂದಾಜು ಮೌಲ್ಯ ರೂ.72,000/- ಆಗಬಹುದು. ನಂತರ ಗಾಯಾಳು ಫಿರ್ಯಾದಿದಾರರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ ಎಂಬಿತ್ಯಾದಿ

Moodabidre PS

ಪಿರ್ಯಾದಿ Madhava Naik ದಾರರ ಅಣ್ಣನಾದ ವಾಸುದೇವ ನಾಯಕ್ ರವರು ದಿನಾಂಕ: 16/11/2022 ರಂದು ತಮ್ಮ ಬಾಬ್ತು ಕೆಎ -19-ಹೆಚ್.ಇ-6212 ನಂಬ್ರದ ಸ್ಕೂಟರ್ ನಲ್ಲಿ ಎಡಪದವಿನಿಂದ ಮೂಡಬಿದ್ರೆ ಕಡೆಗೆ ಹೋಗುತ್ತಾ ಮಧ್ಯಾಹ್ನ ಸುಮಾರು 12.25 ಗಂಟೆಗೆ ತೋಡಾರು ದೇವಿನಗರ ಕ್ರಾಸ್ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಕೆ.ಎ-20-ಎಎ-4061 ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ವಾಸುದೇವರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ರೀತಿಯ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಬಳಿಕ ವೈಧ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ಗಾಯಾಳುವಿನ ಆರೈಕೆಯಲ್ಲಿದ್ದುದರಿಂದ ಈ ದಿನ ತಡವಾಗಿ ದೂರನ್ನು ನೀಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 18-11-2022 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080