ಅಭಿಪ್ರಾಯ / ಸಲಹೆಗಳು

Crime Reported in : Kankanady Town PS

ಪಿರ್ಯಾದಿ ಐಶ್ವರ್ಯ ಆರ್ ರವರು  ಕಾರ್ಮಿಕ ಕಾಲೋನಿ ಶಕ್ತಿನಗರದಲ್ಲಿ ಗಂಡ ಕಾರ್ತಿಕ್ ನ ಜೊತೆಯಲ್ಲಿ ವಾಸವಾಗಿದ್ದು,ಮದುವೆಯಾದ ಪ್ರಾರಂಭದಲ್ಲಿ ಸುಮಾರು 3 ವರ್ಷ ಜೊತೆಯಾಗಿ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು.ಅಲ್ಲಿ ಗಂಡ ಕಾರ್ತಿಕ ನು ವಿಪರೀತ ಅಮಲು ಪದಾರ್ಥ ಸೇವಿಸಿ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದರು.ಪಿರ್ಯಾದಿದಾರರು ಈ ವಿಷಯವನ್ನು ಆಕೆಯ ಮನೆಯವರಿಗೆ ತಿಳಿಸಿ ಅವರು ಊರಾದ ಮಂಗಳೂರಿಗೆ ಕರೆದುಕೊಂಡು ಬಂದು, ನಂತರ ಹಿರಿಯರು ಮಾತುಕತೆ ನಡೆಸಿದ ಬಳಿಕ ಪಿರ್ಯಾದಿದಾರರು ಗಂಡನ ಜೊತೆ ಕಾರ್ಮಿಕ ಕಾಲೋನಿಯಲ್ಲಿ ವಾಸವಾಗಿದ್ದರು,ಪಿರ್ಯಾದಿದಾರರ ಜೊತೆ ಗಂಡನ ಮನೆಯಲ್ಲಿ ವಿನಾಕಾರಣ ಗಲಾಟೆ ಮಾಡಿ  ಪಿರ್ಯಾದಿದಾರರಿಗೆ ಗಂಡ ಕಾರ್ತಿಕ್ ಅತ್ತೆ ಪುಷ್ಪ ನಾದಿನಿ ಮಮತಾ ರವರು ದಿನಾಂಕ:18-01-2023 ರಂದು ರಾತ್ರಿ 9:30 ಗಂಟೆಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿ ಗಂಡ ಕಾರ್ತಿಕ್  ಕೈಯಿಂದಲೂ,ಅತ್ತೆ ಮತ್ತು ನಾದಿನಿ ಮನೆಯಲ್ಲಿರುವ ಪಾತ್ರೆಗಳಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಹಲ್ಲೆ ಮಾಡಿರುತ್ತಾರೆ ಅಲ್ಲದೆ ಮೊಣಕಾಲಿಗೆ ಕೂಡಾ ಗಾಯವಾಗಿರುತ್ತದೆ. ಆದ್ದರಿಂದ ಗಂಡ ಕಾರ್ತಿಕ್ ,ಅತ್ತೆ ಪುಷ್ಪ ನಾದಿನಿ ಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂಬಿತ್ಯಾದಿ

                                   

Crime Reported in : Traffic South Police Station       

ಪಿರ್ಯಾದಿ ಅಬ್ದುಲ್ ರಿಯಾಬ್ 21 ರವರು ದಿನಾಂಕ: 18-01-2023 ರಂದು  ಅವರ ಅಣ್ಣನಾದ ರಿಝವಾನ್ ರವರ  ಬಾಬ್ತು ಮೋಟಾರ್ ಸೈಕಲ್ ನಂಬ್ರ: KA-19-HA-6642 ನೇದರಲ್ಲಿ ಅಬ್ದುಲ್ ರಿಯಾಬ್ ರವರು ಸವಾರರಾಗಿ ಅವರ ತಾಯಿಯಾದ ಮೈಮುನರನ್ನು ಸಹ ಸವಾರಳನ್ನಾಗಿ ಕೆಲಸ ನಿಮಿತ್ತ  ಅವರ ಮನೆಯಿಂದ ಮಂಗಳೂರು ಕಡೆಗೆ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ವಾಮಂಜೂರುನಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ  ಸಮಯ ಸುಮಾರು ರಾತ್ರಿ 7-00 ಗಂಟೆಗೆ ಕುಡುಪು ಗ್ರಾಮದ ಬೈತುರ್ಲಿ ಎಂಬಲ್ಲಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಬಸ್ಸ್ ನಂಬ್ರ: KA-18-B-9825 ನೇದನ್ನು ಅದರ ಚಾಲಕ ಮದನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ಬಸ್ಸನ್ನು ಓಮ್ಮೇಲೆ ಎಡಕ್ಕೆ ಚಲಾಯಿಸುವಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಹ್ಯಾಂಡಲ್ ಗೆ ಬಸ್ಸ್ ತಾಗಿ ಪಿರ್ಯಾದಿದಾರರು ಮತ್ತು ಅವರ ತಾಯಿ ಮೈಮುನಾ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಹಾಗೂ ಮೈಮುನಾರವರಿಗೆ ಸೊಂಟದ ಹಿಂದಿನ ಭಾಗಕ್ಕೆ ಗುದ್ದಿದ ಗಾಯ ಹಾಗೂ ಬಲಕೈಯ ಮೊಣಗಂಟಿಗೆ ,ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಮತ್ತು ಬಸ್ಸಿನ ಚಾಲಕ ಬೇರೊಂದು ವಾಹನದಲ್ಲಿ ಕುಳ್ಳಿರಿಸಿ ಚಿಕಿತ್ಸೆ ಬಗ್ಗೆ ನಗರದ ಎಸ್ ಸಿ ಎಸ್ ಆಸ್ಪತ್ರೆಗೆ ದಾಖಲಿಸಿದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮೈಮುನಾ ರವರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Crime Reported in : Ullal PS

ಪಿರ್ಯಾದಿ Mohammed Shareef ಕೆಎ 22 ಎ 2801 ನೇ ನಂಬ್ರದ ಮಹೇಂದ್ರ ಪಿಕ್ ಅಪ್ ವಾಹನದ ನೊಂದಣಿ ಮಾಲಕ ಮತ್ತು ಚಾಲಕರಾಗಿದ್ದು, ದಿನಾಂಕ:03-01-2023 ರಂದು ರಾತ್ರಿ 8-30 ಗಂಟೆಗೆ ನನ್ನ ಕೆಲಸ ಮುಗಿಸಿಕೊಂಡು ಕೋಟೆಕಾರು ಸೌತ್ ಇಂಡಿಯಾ ಡಿಪೋದ ಕಂಪೌಂಡ್ ನ ಬಳಿಯಲ್ಲಿ ಕೆಎ 22 ಎ 2801 ನೇ ನಂಬ್ರದ ಮಹೇಂದ್ರ ಪಿಕ್ ಅಪ್ ವಾಹನವನ್ನು ಪಾರ್ಕಿಂಗ್ ಮಾಡಿದ್ದು, ದಿನಾಂಕ:04-01-2023 ರಂದು ಎಂದಿನಂತೆ ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿದಾರರು ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಬಂದಾಗ, ಕೆಎ 22 ಎ 2801 ನೇ ನಂಬ್ರದ ಮಹೇಂದ್ರ ಪಿಕ್ ಅಪ್ ವಾಹನ ಕಾಣಿಸದೇ ಇದ್ದು, ಸ್ಥಳದಲ್ಲಿ ಪಿರ್ಯಾದಿದಾರರು ಹುಡುಕಾಟ ನಡೆಸಿದರೂ, ಪಿಕ್ ಅಪ್ ವಾಹನವು ಪತ್ತೆಯಾಗದೇ ಇರುತ್ತದೆ.  ಕೆಎ 22 ಎ 2801 ನೇ ನಂಬ್ರದ ಮಹೇಂದ್ರ ಪಿಕ್ ಅಪ್ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಪಿಕ್ ಅಪ್ ವಾಹನವನ್ನು ಅಂದಿನಿಂದ ಇಂದಿನವರೆಗೆ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸಿದ್ದು, ಆದರೂ ವಾಹನವು ಪತ್ತೆಯಾಗದೇ ಇದ್ದು, ಕೆಎ 22 ಎ 2801 ನೇ ನಂಬ್ರದ ಮಹೇಂದ್ರ ಪಿಕ್ ಅಪ್ ವಾಹನವನ್ನು ಕಳವು ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ, ಕಳವಾದ ಕೆಎ 22 ಎ 2801 ನೇ ನಂಬ್ರದ ಮಹೇಂದ್ರ ಪಿಕ್ ಅಪ್ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ.

 

Crime Reported in : Ullal PS

ದಿನಾಂಕ  18.01.2023 ರಂದು ಸಂಜೆ 4:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಅಕ್ವಿಲ್ ( 28) ರವರು  ಅವರ ಬಾಬ್ತು ಪಿಕಫ್ ವಾಹನದಲ್ಲಿ ಉಳಿಯ ಎಂಬಲ್ಲಿಂದ ಉಳ್ಳಾಲದ ಫಿಶ್ ಮಿಲ್ಲ್ ಗೆ ಕಟ್ಟಿಗೆ ತೆಗೆದುಕೊಂಡು ಹೋಗುತ್ತಿರುವಾಗ  ಕೋಟೆಪುರ ಸರ್ಕಲ್ ನಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪರಿಚಯದ ಕೋಡಿ ವಾಸಿ ಜುಲ್ಫಾನ್ ಮಲ್ಲಿಕ್ ಎಂಬಾತನು ಅವನ ಬಾಬ್ತು ಮೋಟಾರ್ ಸೈಕಲ್ ನ್ನು ಪಿಕಪ್ ವಾಹನಕ್ಕೆ ಅಡ್ಡವಾಗಿಟ್ಟು ಬೇವರ್ಸಿ ರಂಡೆ ಮಗ ನೀನು ಬಾರಿ ದುರಿಗುಟ್ಟಿ ನೋಡುತ್ತೀಯಾ ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಆತನು ಕೈಬೆರಳಿಗೆ ಹಾಕಿಕೊಂಡಿದ್ದ ಕಬ್ಬಿಣದ ಪಂಚಿನಿಂದ ಪಿರ್ಯಾದಿದಾರರ ಹಣೆಯ ಎಡ ಬದಿಯ ಕಣ್ಣಿನ  ಮೇಲ್ಬದಿಗೆ ಗುದ್ದಿ ರಕ್ತ ಗಾಯ ನೋವುಂಟು ಮಾಡಿದ್ದು ಅಲ್ಲದೇ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ತಿಳಿಸಿದ್ದು ಹಲ್ಲೆ ನಡೆಸಿದ ಜುಲ್ಫಾನ್ ಮಲ್ಲಿಕ್ ನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.

Crime Reported in :Mangalore North PS

ಪಿರ್ಯಾದಿ H HANUMANTHA RAJU ಡೆಪ್ಯೂಟಿ ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್ ಮಂಗಳೂರು ಇಲ್ಲಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 28/29-09-2022 ರಂದು ಮಂಗಳೂರಿನ ಬೈಕಂಪಾಡಿಯ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ M/s BRIGHT PACKAGING PVT LTD  ಕಂಪನಿಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ ದತ್ತಾಂಶ ಮತ್ತು ದಾಖಲಾತಿಗಳನ್ನು ತನಿಖೆಯ ಸಂಬಂಧ ಮಹಜರು ಮೂಲಕ ವಶಪಡಿಸಿಕೊಂಡಿದ್ದು, ಸದ್ರಿ ದಾಖಲಾತಿಗಳನ್ನು ಬಂಟ್ಸ್ ಹಾಸ್ಟೇಲ್ ರಸ್ತೆಯಲ್ಲಿರುವ ಕಮಿಷನರ್ ಆಫ್ ಸೆಂಟ್ರಲ್ ಎಕ್ಸೈಸ್ ಮತ್ತು ಸೆಂಟ್ರಲ್ ಟ್ಯಾಕ್ಸ್ ಕಟ್ಟಡದ 6 ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಇರಿಸಿರುತ್ತಾರೆ. ಮಹಜರು ಸಮಯ ವಶಪಡಿಸಿಕೊಂಡ ದಾಖಲಾತಿಗಳನ್ನು ಪರಿಶೀಲಿಸಿದಾಗ ಕೆಲವೊಂದು ರಶೀದಿಗಳನ್ನು ಹಾಗೂ ನೋಟ್ ಬುಕ್ ನಲ್ಲಿರುವ ಹಾಳೆಗಳನ್ನು ಬದಲಾಯಿಸಿರುತ್ತಾರೆ ಹಾಗೂ ಕೆಲವೊಂದು ಹಾಳೆಗಳನ್ನು ಹರಿದು ಹಾಕಿರುತ್ತಾರೆ. ಸದ್ರಿ ಕಂಪನಿಯ ತೆರಿಗೆ ಸಲಹೆಗಾರರಾದ ಜಯರಾಮ್ ಪಿ ಮತ್ತು ಅಂಕಿತ್ ಬನ್ಸಾಲ್ ಎಂಬವರು ತೆರಿಗೆ ಪಾವತಿಸುವ ನೆಪದಲ್ಲಿ ಕಚೇರಿಗೆ ಬಂದು ಸದ್ರಿ ವಶಪಡಿಸಿಕೊಂಡ ದಾಖಲಾತಿಗಳನ್ನು ಬದಲಾಯಿಸಿ ಅದರಲ್ಲಿರುವ ಸಹಿಗಳನ್ನು ನಕಲು ಮಾಡಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

 

Crime Reported in :Traffic South Police Station        

ಪಿರ್ಯಾದಿ ಅನಿಲ್ ಗ್ಲಾಡ್ ವಿನ್ ಡಿಸೋಜಾ 50 ವರ್ಷ ರವರು ದಿನಾಂಕ:18-01-2023 ರಂದು ಅವರ ಬಾಬ್ತು ಬೈಕ್ ನಂಬ್ರ: KA-20-ES-6058 ನೇದರಲ್ಲಿ ಚಾಲಕರಾಗಿ ಹಾಗೂ ಅವರ ಹೆಂಡತಿ ಲೀನಾ ಡಿಸೋಜಾ ರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಬಂಟ್ವಾಳ ಕಡೆಗೆ  ಬೈಕ್ ನ್ನು ಚಲಾಯಿಸಿಕೊಂಡು ಹೋಗಿ ವಾಪಾಸ್ಸು ಬಂಟ್ವಾಳದಿಂದ ಅವರ ಮನೆಯಾದ ಉಡುಪಿ ಕಡೆಗೆ ಹೋಗಲು ಪಡೀಲ್ ಜಂಕ್ಷನ್ ಮಾರ್ಗವಾಗಿ ನಂತೂರು ಕಡೆಗೆ ರಾ ಹೆ 73 ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ-3-15 ಗಂಟೆಗೆ ಪಡೀಲ್ ನ ಏರು ತಿರುವು ರಸ್ತೆ ಬಳಿ ತಲುಪಿದಾಗ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಬಲಬದಿಯಲ್ಲಿ ಹೋಗುತ್ತಿದ್ದ ಟಿಪ್ಪರ್ ಲಾರಿ ನಂಬ್ರ:KA-19-C-3077 ನೇದನ್ನು ಅದರ ಚಾಲಕ ಉಮೇಶ್ ಎಂಬಾತನು  ತಿರುವಿನಲ್ಲಿ ಓಮ್ಮೇಲೆ ಯಾವುದೇ ಸೂಚನೆ ನೀಡದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಲಾರಿಯನ್ನು ಎಡಬದಿಗೆ ತಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಬೈಕ್ ಗೆ ಕಾರಿಯ ಹಂದಿನ ಎಡಭಾಗದ ಚಕ್ರವನ್ನು ಅವರ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕೈಗೆ ಗಂಭೀರ ಸ್ವರೂಪದ ಗಾಯ ಹಾಗೂ ಬಲಗಾಲಿನ ಮಣಿಗಂಟಿಗೆ ಹತ್ತಿರ ರಕ್ತ ಗಾಯವಾಗಿದ್ದು ಎಡಕೈಗೆ ಸಣ್ಣ ಪುಟ್ಟ ಗಾಯವಾಗಿದ್ದು ಹಾಗೂ ಹೆಂಡತಿ ಲೀನಾಳಿಗೆ ಬಲಗಾಲಿಗೆ ಹಾಗೂ ಸೊಂಟಕ್ಕೆ ಮೂಳೆ ಮುರಿತದ ಗಂಭೀರ ಗಾಯ,ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಕಾರೊಂದರಲ್ಲಿ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 19-01-2023 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080