ಅಭಿಪ್ರಾಯ / ಸಲಹೆಗಳು

Crime Reported in : Panambur PS

 ದಿನಾಂಕ 17-9-2022 ರಂದು ಕುಮಾರೇಶನ್ ರವರು ಸಮಯ 17-30  ಗಂಟೆಗೆ ಜೋಕಟ್ಟೆ  ಕ್ರಾಸ್ ಬಳಿಯ ಎನ್.ಎಮ್.ಪಿ.ಟಿ  ಜಾಗದ  ಸಮೀಪ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ  ಇಜಾಜ್ ಅಹಮ್ಮದ್ ಪ್ರಾಯ 21 ವರ್ಷ, ವಾಸ: 2ನೇ ಬ್ಲಾಕ್ ಕಾಟಿಪಳ್ಳ ,ಸರಕಾರಿ ಶಾಲೆಯ ಹತ್ತಿರ,ಸುರತ್ಕಲ್  ಎಂಬವನನ್ನು   ವಶಕ್ಕೆ ಪಡೆದುಕೊಂಡು. ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದ ವೈದ್ಯಾಧಿಕಾರಿಗಳು ಪರೀಕ್ಷಿಸಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುವ ಬಗ್ಗೆ ಎಂಬಿತ್ಯಾದಿ.

 

Crime Reported in : Traffic North Police PS      

1) ಪಿರ್ಯಾದಿ SMT.MARITA ದಿನಾಂಕ:07/09/2022 ರಂದು ತಮ್ಮ ಮಗನನ್ನು ಕಿನ್ನಿಗೊಳಿ ಶಾಲೆಯಿಂದ ಕರೆದುಕೊಂಡು ಮನೆ ಕಡೆ ಬರುತ್ತಾ ಪಿರ್ಯಾದಿದಾರರ ಮಾವ ಅರ್ಥರ್ ಬಟ್ರಮ್ ಡಿಸೋಜಾ ರವರು ತಮ್ಮ  ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬರುತ್ತಿದ್ದು ದಾರಿಯಲ್ಲಿ ಮಾವನವರ ಮೋಟಾರ್ ಸೈಕಲಿನಲ್ಲಿ ಕುಳ್ಳಿರಿಸಿಕೊಂಡು ಮನೆಯ ಕಡೆಗೆ ಹೊರಡುತ್ತಾ ಬೆಳಿಗ್ಗೆ ಸಮಯ 10.30 ಗಂಟೆಗೆ ಪುನರೂರು ಸರಕಾರಿ ಶಾಲೆಯ ಬಳಿ ತಲುಪಿದಾಗ ಸವಾರಿ ಮಾಡುತ್ತಿದ್ದ ಮೋಟಾರ್ ಬೈಕಿಗೆ ಅಡ್ಡಲಾಗಿ ನಾಯಿಯೊಂದು ಬಂದು ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ  ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಿದಾರರ ಮಾವನಿಗೆ ಮೂಗಿನ ಮೇಲೆ, ಬಲಕಣ್ಣಿನ ಮೇಲೆ ಹಾಗೂ ಬಲ ಮತ್ತು ಎಡಕೈ ತಟ್ಟೆಗೆ ರಕ್ತಗಾಯ ಹಾಗೂ ತಲೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಎಸ್. ಸಿ. ಎಸ್  ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದಾರೆ. ದಿನಾಂಕ 10/09/2022 ರವರೆಗೆ  ಚಿಕಿತ್ಸೆ ನೀಡಿರುತ್ತಾರೆ, ನಂತರ ಪಿರ್ಯಾದಿದಾರರ ಮಾವನಿಗೆ ಆದ ಗಾಯ ಉಲ್ಬಣಗೊಂಡ ಕಾರಣ 17-09-2022 ರಂದು ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿಲಾಗಿರುತ್ತದೆ.

 

2) ದಿನಾಂಕ: 18-09-2022 ರಂದು ಮಧ್ಯಾಹ್ನ ಪಿರ್ಯಾದಿದಾರರು Ritesh ಮತ್ತು ಅವರ ಮಗಳು (3 ವರ್ಷ ) ರವರು ತನ್ನ ಮೋಟಾರ್ ಸೈಕಲಿನಲ್ಲಿ ಉಳ್ಳುಂಜೆಯಿಂದ ಕಿನ್ನಿಗೊಳಿ ಕಡೆಗೆ ಹೋಗುತ್ತಾ ಕಾಪಿಕಾಡು ತಲುಪುತ್ತಿದ್ದಂತೆ ಕಿನ್ನಿಗೊಳಿ ಕಡೆಯಿಂದ ಬರುತ್ತಿದ್ದ ಅಪೇ ಆಟೋರಿಕ್ಷಾವೊಂದು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮತ್ತು ಬಲಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಹಾಗೂ ಪಿರ್ಯಾದಿದಾರರ ಮಗಳಿಗೆ ಬಲಕಾಲಿನ ಮೊಣಗಂಟಿಗೆ ಚರ್ಮ ಹರಿತದ ರಕ್ತಗಾಯವಾಗಿದ್ದು, ಇವರು ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಅಪಘಾತ ಪಡಿಸಿದ ಅಪೇ ಆಟೋರಿಕ್ಷಾ ಚಾಲಕನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

 

3) ದಿನಾಂಕ: 18-09-2022 ರಂದು ಪಿರ್ಯಾದಿದಾರರಾದ ಭೀಮಪ್ಪ (40) ರವರು ಕೆಲಸ ಮುಗಿಸಿಕೊಂಡು ವಾಪಾಸು ತನ್ನ ಮನೆ ಕಡೆ ಹೋಗಲು ನಡೆದುಕೊಂಡು ಹೋಗುವಾಗ  ಬೈಕಂಪಾಡಿ ರತ್ನಸ್ ವೈನ್ ಗೇಟ್ ಎದುರು ರಸ್ತೆಯನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ದಾಟುತ್ತಿರುವಾಗ ಮದ್ಯಾಹ್ನ ಮಂಗಳೂರಿನಿಂದ ಉಡುಪಿ ಕಡೆಗೆ  ಬರುತ್ತಿದ್ದ ಕಾರು ಅದರ ಚಾಲಕ ಬಿ ಎಸ್ ನಾಸೀರ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರ ಭೀಮಪ್ಪ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕಾಲಿನ ಬೆರಳಿಗೆ ತರಚಿದ ಗಾಯ ಮತ್ತು ಸೊಂಟಕ್ಕೆ, ಹೊಟ್ಟೆಗೆ ಹಾಗೂ ತಲೆಯ ಎಡಭಾಗಕ್ಕೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ತೆರಳಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬಿತ್ಯಾದಿ.

  

Crime Reported in : Traffic South PS       

ಪಿರ್ಯಾದಿದಾರರಾದ DILIP NAYAK ದಿನಾಂಕ: 19-09-2022 ರಂದು  ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಪ್ರತಾಪ್ ಶೆಟ್ಟಿ [28 ವರ್ಷ] ಹಾಗೂ ಅಭಿಜೀತ್ ಶೆಟ್ಟಿ [21 ವರ್ಷ] ರವರು ಕೆಲಸ ಮುಗಿಸಿಕೊಂಡು ಫರಂಗಿಪೇಟೆ ಕಡೆಗೆ ಹೋಗಲು ಮೋಟಾರ್ ಸೈಕಲ್ನಲ್ಲಿ  ಹೋಗುತ್ತಿರುವಾಗ ಸಮಯ ಸುಮಾರು ಬೆಳಗಿನ ಜಾವ 02-30 ಮಹಾಕಾಳಿ ಪಡಪು ಜಂಕ್ಷನ್ ಬಳಿ ತಲುಪಿದಾಗ ಸವಾರ ಪ್ರತಾಪ್ ಶೆಟ್ಟಿರವರು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆ ಬದಿಯಲ್ಲಿ ಇಟ್ಟಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಪಡಿಸಿ ರಸ್ತೆಗೆ ಬಿದ್ದು ಸವಾರ ಪ್ರತಾಫ್ ಶೆಟ್ಟಿರವರಿಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು, ಸಹಸವಾರ ಅಭಿಜೀತ್ ಶೆಟ್ಟಿರವರಿಗೆ ಗುದ್ದಿದ ರೀತಿಯ ಗಾಯ ಹಾಗೂ ಎರಡೂ ಕೈಗಳಿಗೆ ಅಲ್ಲಿಲ್ಲಿ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಗಾಗಿ  ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈದ್ಯರು ಪರಿಕ್ಷೀಸಿ ಗಾಯಾಳು ಪ್ರತಾಪ್ ಶೆಟ್ಟಿರವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿರುವುದಾಗಿ ತಿಳಿಸಿ, ಅಭಿಜೀತ್ ಶೆಟ್ಟಿರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

Crime Reported in : Surathkal PS

1) ಪಿರ್ಯಾದಿದಾರ Vivek  ದಿನಾಂಕ  17-09-2022 ರಂದು ಬೆಳಿಗ್ಗೆ ಬೊಳ್ಳಾಜೆ ಎಂಬಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಚಿಕನ್ ಸ್ಟಾಲ್ ಬಳಿ ನಿಂತಿದ್ದ ಅಭಿಷೇಕ್ ಮತ್ತು ಅತನ ಸ್ನೇಹಿತನು  ನಾವು ಚಿನ್ನವಿನ ಸ್ನೇಹಿತರು ಆತನಿಗೆ ನಿನ್ನೆ ಹೊಡೆದಿದ್ದಾರೆ ಎಂದು ಹೇಳಿ ಪಿರ್ಯಾದಿದಾರರ ಮುಖಕ್ಕೆ ಹೊಡೆದಿದ್ದು ಅದನ್ನು ಪಿರ್ಯಾದಿದಾರರು ವಾಪಸ್ಸು ವಿಚಾರಿಸಿದಕ್ಕೆ ಆರೋಪಿ ಅಭಿಷೇಕನ ಸ್ನೇಹಿತನು ನೀರಿನ ಪೈಪನ್ನು ಪಿರ್ಯಾದಿದಾರರ ಮುಖಕ್ಕೆ ಎಸೆದು ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ ಆರೋಪಿಗಳ ವಿರುದ್ದ ಕಾನುನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿ.

  

2) ಪಿರ್ಯಾದಿದಾರ Keerthesh ದಿನಾಂಕ 17-09-2022 ರಂದು ಮಧ್ಯಾಹ್ನ  ಮಧ್ಯ ಜಂಕ್ಷನ್ ಬಳಿ ಲೊಹೀತ್ ಎಂಬವರ ಗ್ಯಾರೇಜ್ ಬಳಿ ಪಿರ್ಯಾದಿದಾರರಿಗೆ ಈ ಹಿಂದೆ ನೋಡಿ ಪರಿಚಯ ಇರುವ ಅಭಿಷೇಕ್ ನು ಸ್ಕೂಟರಿನಲ್ಲಿ ಸಹ ಸವಾರ ಚೇತನನ್ನು ಕುಳ್ಳಿರಿಸಿಕೊಂಡು ಪಿರ್ಯಾದಿದಾರರ ಬಳಿ ಬಂದ ಚೇತನ್ ಪಿರ್ಯಾದಿದಾರರಿಗೆ ಹೊಡೆಯಲು ಕೈಯನ್ನು ಬೀಸಿದ್ದು ಅಭಿಷೇಕ್ ಪಿರ್ಯಾದಿದಾರರ ಕೈಯಿಂದ ಮೊಬೈಲ್ ಅನ್ನು ಬಲವಂತವಾಗಿ ಕಿತ್ತುಕೊಂಡು Starting ಇದ್ದ ಸ್ಕೂಟರಿನಲ್ಲಿ ಕುಳಿತು ಹೋಗಿರುವುದಾಗಿದೆ.

 

Crime Reported in : : Bajpe PS

1) ಪಿರ್ಯಾದಿದಾರ Janardhana Naik ತೆಂಕ ಎಡಪದವು ಗ್ರಾಮದಲ್ಲಿ ತನ್ನ ಹೆಂಡತಿ ಮತ್ತು 4 ಜನ  ಮಕ್ಕಳೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರ  ಮಗಳಾದ ಕುಮಾರಿ ಪ್ರೀತಿ (19 ವರ್ಷ) ಇವರು ಹಾಸ್ಟಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತಿದ್ದು ದಿನಾಂಕ 16.09.2022 ರಂದು ಮಧ್ಯಾಹ್ನ ಮೆನಯಿಂದ ಕೆಲಸಕ್ಕೆಂದು ಹೊರೆಟು ಹೋದವರು ಪುನಃ ಮನೆಗೆ ಬಂದಿರುವುದಿಲ್ಲ ಎಂಬಿತ್ಯಾದಿ

 

2) ಪಿರ್ಯಾದಿದಾರ Raveesh ನೆರೆಕರೆಯ ಆರೋಪಿತನಾದ ಪ್ರಕಾಶ್ ಪಿರ್ಯಾದಿದಾರರ ಮೇಲಿನ  ದ್ವೇಷದಿಂದ ದಿನಾಂಕ 18.09.2022 ರಂದು ಸಂಜೆ ಆರೋಪಿಯ ಮನೆಯ ಬಳಿ  ಶಿವಾನಂದ ಮತ್ತು ಶಿವಣ್ಣ ರವರೊಂದಿಗೆ ಸೈಟಿನ ವಿಚಾರವನ್ನು ಮಾತನಾಡಿ ಪಿರ್ಯಾದಿದಾರರು ಅಲ್ಲಿಂದ ಹೊರೆಟು ಹೋಗಿದ್ದು ಸಮಯ 19.45 ಗಂಟೆಗೆ ಪಿರ್ಯಾದಿದಾರರ ಪೋನಿಗೆ ಮಿಸ್ ಕಾಲ್ ಬಂದಿದ್ದು ಆ ನಂಬರಿಗೆ ಪಿರ್ಯಾದಿದಾರರು ಫೋನ್ ಮಾಡಿದಾಗ ಆರೋಪಿಯಾದ ಪ್ರಕಾಶ್ ನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈಯುತಿದ್ದು ಪಿರ್ಯಾದಿದಾರರು ಪೋನ್ ನಲ್ಲಿ ಮಾತನಾಡಿಕೊಂಡು ಎಕ್ಕಾರು ಗ್ರಾಮದ ಸೈಟ್ ಕಾಲೂನಿ ನೀರುಡೆ ಎಂಬಲ್ಲಿ ಬಂದಾಗ ಆರೋಪಿ ಪ್ರಕಾಶ್ ಹಿಂಬದಿಯಿಂದ ಬಂದು ಕೊಲ್ಲುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ರಕ್ತ ಬರುತಿದ್ದು ಪುನಃ ಕಬ್ಬಿಣ ರಾಡಿನಿಂದ ಎಡ ಭುಜಕ್ಕೆ ಹೊಡೆದು ಎದೆಗೆ ಕಾಲಿನಿಂದ ತುಳಿದಿದ್ದು ನಂತರ ಬಿಡಿಸಲು ಬಂದ ಪಿರ್ಯಾದಿದಾರರ ಹೆಂಡತಿಯನ್ನು ದೂಡಿ ಓಡಿ ಹೋಗಿದ್ದು ಗಾಯಗೊಂಡಿದ್ದ ಪಿರ್ಯಾದಿದಾರರನ್ನು ನೆರೆಕೆರೆಯವರು ಸಂಜೀವಿನಿ ಆಸ್ಪತ್ರೆ ಕಟೀಲ್ ಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 19-09-2022 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080