ಅಭಿಪ್ರಾಯ / ಸಲಹೆಗಳು

Crime Reported in : Bajpe PS

ಪಿರ್ಯಾದಿ Mohammed Althaf ದಾರರ ತಂದೆಯವರು ದಿನಾಂಕ 17.10.2022 ರಂದು ಬೆಳಗ್ಗೆ ಸುಮಾರು 09.45 ಗಂಟೆಗೆ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಗುರುಪುರ ಕೈಕಂಬದ ಕಾಂಜಿಲ ಕೋಡಿ ಎಂಬಲ್ಲಿ ಪಿರ್ಯಾದಿದಾರರ ತಂದೆಯವರು  ನೆಡೆದುಕೊಂಡು ಹೋಗುತ್ತಿರುವಾಗ KA70 J 0767 ನೇ ಸ್ಕೂಟರ್ ನ ಸವಾರನಾದ ಮಹಮ್ಮದ್ ಶರೀಪ್ ಎಂಬಾತನು ಅತೀವೇಗ ಮತ್ತು ಅಜಾಗರುಕತೆಯಿಂದ ಸ್ಕೂಟರ್ ಚಲಾಯಿಸಿ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆಗೆ ತಲೆಗೆ ,ಮುಖಕ್ಕೆ ಮತ್ತು ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಪಿರ್ಯಾದಿದಾರರ ತಂದೆಯನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Traffic South Police Station

ಪಿರ್ಯಾದಿ KESHAVATHI ದಾರರು ದಿನಾಂಕ:19-10-2022 ರಂದು ನಾಟೆಕಲ್ ಕಡೆಯಿಂದ ಕುತ್ತಾರ್ ಕಡೆಗೆ ಹೋಗುವ ರಸ್ತೆಯನ್ನು  ಬೆಳ್ಳಿಗೆ ಸಮಯ ಸುಮಾರು 8-30 ಗಂಟೆಗೆ ದೇರಳಕಟ್ಟೆ ಜಂಕ್ಷನ್ ಬಳಿ ದಾಟುತ್ತಿರುವಾಗ ನಾಟೆಕಲ್ ಕಡೆಯಿಂದ ಕುತ್ತಾರ್ ಕಡೆಗೆ ಬರುತ್ತಿದ್ದ ಓಮ್ನಿ ಕಾರು ನಂಬ್ರ:KA-19-MJ-4907 ನೇದನ್ನು ಅದರ ಚಾಲಕ ನಕ್ಸಿಸ್ ಮೊಂತೇರೊ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಓಮ್ನಿ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಬಲಗಾಲಿಗೆ ಮೂಳೆ ಮುರಿತದ ಗಾಯ ಬೆನ್ನಿಗೆ ಮತ್ತು ಹಣೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Mulki PS

ದಿನಾಂಕ 19-10-2022 ರಂದು ಈ ಪ್ರಕರಣದ ಪಿರ್ಯಾದಿದಾರಾದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ವಿನಾಯಕ ತೋರಗಲ್ ರವರು  ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ 9-30 ಗಂಟೆಗೆ ಪಿರ್ಯಾದಿದಾರರಿಗೆ ಪಂಜ ಗ್ರಾಮದ ಮೊಗಪ್ಪಾಡಿ ಎಂಬಲ್ಲಿನ ನಂದಿನಿ ನದಿ ದಡದಲ್ಲಿ ಒರ್ವ ವ್ಯಕ್ತಿಯು  ಗಾಂಜವನ್ನು ಹೊಗೆಬತ್ತಿಯೊಂದಿಗೆ ಸೇದುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಪಿರ್ಯಾದಿದಾರರು ಸಿಬ್ಬಂದಿಯೊಂದಿಗೆ  9-45 ಗಂಟೆಗೆ ಮಾಹಿತಿಯಲ್ಲಿ ತಿಳಿಸಿದ ಸ್ಥಳಕ್ಕೆ ಬಂದಾಗ ನಂದಿನಿ ನದಿ ದಡದಲ್ಲಿ ಕುಳಿತ ಒರ್ವ ವ್ಯಕ್ತಿಯು ಹೊಗೆಬತ್ತಿ ಸೇದುತ್ತಿರುವುದು ಕಂಡು ಬಂದಿದ್ದು ವಿಚಾರಿಸಲಾಗಿ ಆತನು ತನ್ನ ಹೆಸರು ಜಯಚಂದ್ರ @ ಚಂದ್ರ ಎಂದು ತಿಳಿಸಿ, ತಾನು ಗಾಂಜಾವನ್ನು ಹೊಗೆಬತ್ತಿಯೊಂದಿಗೆ ಸೇದಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಆರೋಪಿಯನ್ನು ವಶಕ್ಕೆ ಆತನ ವೈದ್ಯಕೀಯ ತಪಾಸಣೆ ಬಗ್ಗೆ  ಮಂಗಳೂರು ಎ.ಜೆ ಆಸ್ಪತ್ರೆಗೆ ಕಳುಹಿಸಿ ಪರೀಕ್ಷಿಸಿದ ವೈದ್ಯರು ಆರೋಪಿ ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ನೀಡಿದ್ದು ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನಂತೆ ಆರೋಪಿಯ ವಿರುದ್ದ  ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿದೆ.

 

Mangalore North PS             

 ಪಿರ್ಯಾದಿದಾರರಾದ ಶ್ರೀಮತಿ ರಿಂಕು.ಎಂ.ರಾಜ್ ಪುರೋಹಿತ್ ಎಂಬವರು ರಿದ್ಧಿ ಸಿದ್ಧಿ ಹಾರ್ಡ್ ವೇರ್ ಎಂಬ ಸಂಸ್ಥೆಯನ್ನಿಟ್ಟುಕೊಂಡು ವ್ಯಾಪಾರ ನಡೆಸಿಕೊಂಡಿದ್ದು 1ನೇ ಆರೋಪಿ ಜಿತೇಂದ್ರ ಭಾಯಿ ಕಾಂತಿಭಾಯಿ ಚೋವಾಟಿಯಾ ಎಂಬಾತನು ಕಾಪರ್ ಸ್ಟೋನ್ ಎಂಬ ಸಂಸ್ಥೆಯ ಮಾಲಕನಾಗಿದ್ದು ಬಾತ್ ಫಿಟ್ಟಿಂಗ್ಸ್ ನ ವ್ಯವಹಾರ ಮಾಡಿಕೊಂಡಿದ್ದು 2ನೇ ಆರೋಪಿ ಹಾರ್ದಿಕ್ ದೋದಿಯಾ ಎಂಬಾತನು ಬಾತ್ ಫಿಟ್ಟಿಂಗ್ಸ್ ಗಳ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿರುವುದಾಗಿದೆ. ಪಿರ್ಯಾದಿದಾರರು ಆರೋಪಿತರೊಂದಿಗೆ 2020 ನೇ ಸೆಪ್ಟೆಂಬರ್ ತಿಂಗಳಿನಿಂದ ವ್ಯವಹಾರ ನಡೆಸಿಕೊಂಡಿದ್ದು, 1 ಮತ್ತು 2ನೇ ಆರೋಪಿಯ ನಡುವಿನ ವ್ಯಾಪಾರ ವ್ಯವಹಾರವು ಚೆನ್ನಾಗಿ ನಡೆಯುತ್ತಿದ್ದು ಪಿರ್ಯಾದಿದಾರರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪಿರ್ಯಾದಿದಾರರ ಸಂಸ್ಥೆಯ ಲೆಡ್ಜರ್ ಪುಸ್ತಕದ ಪ್ರಕಾರ 1ನೇ ಆರೋಪಿಗೆ ರೂ. 31,333/- ವನ್ನು ಕೊಡಲು ಬಾಕಿ ಇದ್ದುದಲ್ಲದೆ, 1ನೇ ಆರೋಪಿಯು ದಿನಾಂಕ 04-07-2022 ರಂದು ಲೆಕ್ಕ ತಖ್ತೆಯನ್ನು ಕಳುಹಿಸಿಕೊಟ್ಟಲ್ಲಿ ಪಿರ್ಯಾದಿದಾರರು ಆರೋಪಿಗೆ ರೂ. 78,058/- ಬಾಕಿ ಇರುವುದಾಗಿ ಸಂದೇಶ ಕಳುಹಿಸಿಕೊಟ್ಟಿದ್ದಲ್ಲದೆ ನಂತರ ದಿನಾಂಕ 15-07-2022 ರಂದು ಪಿರ್ಯಾದಿದಾರರು ಬ್ಯಾಂಕ್ ಆಫ್ ಬರೋಡ ಅಳಕೆ ಶಾಖೆಯಿಂದ ಬಂದ ಮೆಸೇಜ್ ನ್ನು ಸ್ವೀಕರಿಸಿಕೊಂಡಲ್ಲಿ ಪಿರ್ಯಾದಿದಾರರಿಗೆ ಸೇರಿದ ಚೆಕ್ ಸಂಖ್ಯೆ 547403 ನೇಯದ್ದರಲ್ಲಿ ರೂ. 6,33,465/- ಮೊತ್ತವು ಅಮಾನ್ಯಗೊಂಡಿರುವುದಾಗಿ ತಿಳಿದುಬಂದಿದ್ದು, ಈ ಹಿಂದೆ ವ್ಯವಹಾರಕ್ಕಾಗಿ ಪಿರ್ಯಾದಿದಾರರಿಂದ ಆರೋಪಿಗಳು ಭದ್ರತೆಗಾಗಿ ಪಡೆದುಕೊಂಡಿದ್ದ ಬ್ಯಾಂಕ್ ಆಫ್ ಬರೋಡ, ಅಳಕೆ ಶಾಖೆಯ ಖಾಲಿ ಚೆಕ್  (BLANK CHEQUE) ಹಾಳೆ  ನೇಯದನ್ನು ದುರುಪಯೋಗಪಡಿಸಿಕೊಂಡು ಆರೋಪಿಗಳು ತಮಗೆ ಬೇಕಾದಂತೆ ಚೆಕ್ ನ್ನು ಭರ್ತಿ ಮಾಡಿ ಬ್ಯಾಂಕಿಗೆ ಹಾಜರುಪಡಿಸಿ ನಗದೀಕರಣಕ್ಕೆ ಸಲ್ಲಿಸಿ ಪಿರ್ಯಾದಿದಾರರಿಗೆ ಮೋಸ ಹಾಗೂ ವಂಚನೆ ಮಾಡಿ ಫೋರ್ಜರಿ ಕೃತ್ಯವನ್ನು ಎಸಗಿರುತ್ತಾರೆ ಎಂಬಿತ್ಯಾದಿಯಾಗಿ  ಸಾರಾಂಶವಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 19-10-2022 07:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080