ಅಭಿಪ್ರಾಯ / ಸಲಹೆಗಳು

Crime Reported in : Konaje PS    

ಪಿರ್ಯಾದಿದಾರರು ದಿನಾಂಕ 18.11.2022 ರಂದು ಸ್ವಂತ ಕೆಲಸದ ಬಗ್ಗೆ ತನ್ನ ಬಾಬ್ತು KA19 EQ4301 ನೇ ನಂಬ್ರದ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಮುಡಿಪಿಗೆ ತೆರಳಿದ್ದು, ಕೆಲಸ ಮುಗಿಸಿಕೊಂಡ ಮರಳಿ ಮನೆಗೆ ಹೋಗುವಾಗ ಸಮಯ ಸುಮಾರು 22.30 ಗಂಟೆಗೆ ತಿಪ್ಲೆಪದವು ಆಗಿ ನಾಟೆಕಲ್ ಜಂಕ್ಷನ್ ಮದ್ಯದಲ್ಲಿ ತಲುಪುತ್ತಿದ್ದಂತೆ ಒಬ್ಬ ವ್ಯಕ್ತಿ ಏಕಾಏಕಿ ಸ್ಕೂಟರ್ ಗೆ ಅಡ್ಡ ಬಂದಿದ್ದು, ಪಿರ್ಯಾದಿದಾರರು ಒಮ್ಮೆಲೆ ಬ್ರೇಕ್ ಹಾಕಿ ಸ್ಕೂಟರ್ ನಿಲ್ಲಿದಾಗ ಇನ್ನಿಬ್ಬರು ವ್ಯಕ್ತಿಗಳು ಪಿರ್ಯಾದಿದಾರರ ಬಳಿ ಬಂದಿದ್ದು,  ಅದರಲ್ಲಿ ಒಬ್ಬ ವ್ಯಕ್ತಿ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ಎಡಭುಜಕ್ಕೆ ಹೊಡೆದಿದ್ದು, ಉಳಿದಿಬ್ಬರು ಕೈಯಿಂದ ಪಿರ್ಯಾದಿದಾರರಿಗೆ ಹೊಡೆದು, ರಸ್ತೆಯ ಬದಿಗೆ ದೂಡಿ ಹಾಕಿ ಪಿರ್ಯಾದಿದಾರರ ಸ್ಕೂಟರ್ ನ್ನು ತೆಗೆದುಕೊಂಡು ಮೂರು ಜನರು ಪರಾರಿಯಾಗಿರುತ್ತಾರೆ. ನಂತರ ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಯೆನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಠಾಣೆಗೆ ಬಂದು, ಹಲ್ಲೆ ಮಾಡಿ ಸ್ಕೂಟರ್ ನ್ನು ಕಿತ್ತುಕೊಂಡು ಹೋದ ಮೂವರು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯ ಒದಗಿಸುವಂತೆ ದೂರು ನೀಡಿರುತ್ತಾರೆ ಕಿತ್ತುಕೊಂಡು ಹೋದ ಸ್ಕೂಟರಿನ ಅಂದಾಜು ಮೌಲ್ಯ 50,000 ರೂಪಾಯಿ ಆಗಬಹುದು ಎಂಬಿತ್ಯಾದಿ

Mangalore North PS                    

 ಪಿರ್ಯಾದಿ SPOORTHI ದಾರರು ಈ ಮೇಲಿನ ವಿಳಾಸದಲ್ಲಿ ತಂದೆ, ತಾಯಿ ಜಯಂತಿ, ತಮ್ಮ ತರುಣ್ ರವರೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರ ತಂದೆಯವರಾದ ಸತೀಶ್.ಕೆ. ರವರು ಸ್ಪೂರ್ತಿ ಸ್ಟೋರ್ಸ್ ಎಂಬ ಜನರಲ್ ಸ್ಟೋರ್ ಅಂಗಡಿಯನ್ನು ನ್ಯೂಚಿತ್ರಾ ಮಸೀದಿ ಕಟ್ಟಡದಲ್ಲಿ ನಡೆಸಿಕೊಂಡಿದ್ದು, ಕಳೆದ ಸಂಕ್ರಾಂತಿ ದಿನದಿಂದ ಅಂದರೆ ದಿನಾಂಕ 16-11-2022 ರಂದು ಅಯ್ಯಪ್ಪ ಮಾಲೆ ಹಾಕಿರುತ್ತಾರೆ. ಪ್ರತಿ ದಿನ ಮುಂಜಾನೆ 03-30 ಗಂಟೆಗೆ ಅಂಗಡಿ ತೆರೆದು ರಾತ್ರಿ 9-30 ಗಂಟೆಗೆ ಅಂಗಡಿ ಮುಚ್ಚುತ್ತಿದ್ದರು. ನಿನ್ನೆ ದಿನ ದಿನಾಂಕ 18-11-2022 ರಂದು ಎಂದಿನಂತೆ ಬೆಳಿಗ್ಗೆ ಅಂಗಡಿಗೆ ಹೋಗಿ ಅಲ್ಲಿ ಸ್ವಲ್ಪ ಕೆಲಸ ಮಾಡಿ ನಂತರ ಬೆಳಿಗ್ಗೆ 05-25 ಗಂಟೆಗೆ ಅಂಗಡಿಯಿಂದ ಬಸವನಗುಡಿ ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳು ಇರುವ ಬಿರಿ ಗೆ ಹೋದವರು ಅಲ್ಲಿ ಪೂಜೆ ಮುಗಿಸಿ ವಾಪಾಸ್ಸು ಅಂಗಡಿಗೆ ಹೋಗದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ಪಿರ್ಯಾದಿದಾರರ ತಂದೆ ಸತೀಶ್ ಕೆ ರವರನ್ನು ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ ದೂರಿನ ಸಾರಾಂಶ.

ಕಾಣೆಯಾದವರ ವಿವರ :

ಹೆಸರು: ಸತೀಶ್.ಕೆ., ಪ್ರಾಯ: ಸುಮಾರು 48 ವರ್ಷ, ತಂದೆ: ದಿ. ವಸಂತ ಅಮೀನ್, ಎತ್ತರ: 5 ಅಡಿ 6 ಇಂಚು, ದಪ್ಪ ಶರೀರ, ಕಪ್ಪು ಮೈಬಣ್ಣ, ಬಲ ಕಣ್ಣು ಇರುವುದಿಲ್ಲ, ಕಪ್ಪು ಕನ್ನಡಕ ಧರಿಸಿರುತ್ತಾರೆ, ಕಂದು ಬಣ್ಣದ ಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಪಂಚೆ ಹಾಗೂ ಕುತ್ತಿಗೆಯ ಅಯ್ಯಪ್ಪ ಮಾಲೆ ಇರುತ್ತದೆ. ಕಪ್ಪು ಗಡ್ಡ ಮೀಸೆ, ಗುಂಗುರು ತಲೆ ಕೂದಲು ಇರುತ್ತದೆ.

 

Traffic North Police Station           

ದಿನಾಂಕ 18/11/2022 ರಂದು ಬೆಳಿಗ್ಗೆ ಪಿರ್ಯಾದಿ JAGADISH RAYANAGOWDRU ದಾರರು ತಮ್ಮ ಬಾಬ್ತು KA-19-EE-8002 ನೇ ಮೋಟಾರ್ ಸೈಕಲಿನಲ್ಲಿ ಪಾಂಡಪ್ಪ ಸರವಾರಿರೊಂದಿಗೆ ಸೂರಿಂಜೆ ಬಳಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋಗಿದ್ದು ಸಂಜೆ ಕೆಲಸ ಮುಗಿಸಿ ವಾಪಸ್ ಸದ್ರಿ ಮೋಟಾರ್ ಸೈಕಲಿನಲ್ಲಿ ಪಾಂಡಪ್ಪ ಸರವಾರಿ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸುರತ್ಕಲ್ ಕಡೆಗೆ ಸವಾರಿ ಮಾಡುತ್ತಾ ಬರುತ್ತಿರುವಾಗ ಸಂಜೆ ಸಮಯ ಸುಮಾರು 5.30 ಗಂಟೆಗೆ ಸೂರಿಂಜೆ ಕೋಟೆ ಜಂಕ್ಷನ್ ನ ಹತ್ತಿರ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕಾಟಿಪಳ್ಳ ಕಡೆಯಿಂದ ಪಿಕಪ್ ವಾಹನ ನಂಬ್ರ KA-21-A-0032 ನೇ ದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಹಾಗೂ ಸಹಸವಾರ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಮೇಲೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಎಡಕಾಲಿನ ಮೊಣಗಂಟಿಗೆ ತರಚಿದ ಗಾಯ ಮತ್ತು ಪಾಂಡಪ್ಪ ಸರವಾರಿ ರವರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಬಲತೊಡೆ ಮತ್ತು ಬಲಪಾದದ ಬಳಿ ರಕ್ತಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Traffic South Police Station

ದಿನಾಂಕ:13-11-2022 ರಂದು ಪಿರ್ಯಾದಿದಾರರಾದ ಕಿಶೋರ್ ಬೆಳ್ಚಡ (68 ವರ್ಷ) ರವರು ಅವರ ಬಾಬ್ತು ಸ್ಕೂಟರ್ ನಂಬ್ರ : KA-19-EK-6152 ನೇದರಲ್ಲಿ ಅವರ ಮಗ ರವೀಶ್ ಎಂಬುವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಪಂಪ್ ವೇಲ್ ಕಡೆಯಿಂದ ಉಳ್ಳಾಲ ಕಡೆಗೆ ರಾ.ಹೆ-66 ರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 12-00 ಗಂಟೆಗೆ ಕಲ್ಲಾಪು ಎಂಬಲ್ಲಿಗೆ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಪಿಕಪ್ ವಾಹನ ನಂಬ್ರ:KA-18-C-5513 ನೇದನ್ನು ಅದರ ಚಾಲಕ ಸಲೀಂ @ ಮೊಹಮ್ಮದ್ ಸಲೀಂ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗಾಲಿನ ತೊಡೆಗೆ ಮೂಳೆ ಮುರಿತದ ಗಾಯ ಮತ್ತು ಅಲ್ಲಲ್ಲಿ ತರಚಿದ ಗಾಯವಾಗಿದ್ದು ಅವರ ಮಗ ರವೀಶ್ ರವರಿಗೆ ಯಾವುದೇ ರೀತಿಯ ಗಾಯವಾಗಿರುವುದಿಲ್ಲ ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಬಳಿಕ ಅವರ ಪತ್ನಿ ಸುಜಾತ ರವರು ಪಿರ್ಯಾದಿದಾರರನ್ನು  ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲಿಸಿರುತ್ತಾರೆ.ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 19-11-2022 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080