ಅಭಿಪ್ರಾಯ / ಸಲಹೆಗಳು

Crime Reported in : : CEN Crime PS

ಮಂಗಳೂರು ನಗರದ ಶಾಂತಿನಗರದ, ಜಪ್ಪು ಎಂಬಲ್ಲಿರುವ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತ, ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಕರಣದ ಫಿರ್ಯಾದಿ ಶ್ರೀಮತಿ ಚಂದ್ರಿಕಾ.ಡಿ.ರಾವ್ ರವರ ಸೊಸೈಟಿಯಲ್ಲಿ ಸೊಸೈಟಿಯ ಸದಸ್ಯ ಹಾಗೂ ಖಾತೆದಾರರಾದ 1ನೇ ಆರೋಪಿತೆ ಶ್ರೀಮತಿ ಶಿಲ್ಪ ಗಜಾನನ ಪೂಂಜಾರವರು ರೂ.50 ಲಕ್ಷ ಸಾಲಕ್ಕೆ ಅರ್ಜಿಯೊಂದಿಗೆ 1ನೇ ಆರೋಪಿತೆಯ ಹೆಸರಿನಲ್ಲಿರುವ IDBI ಬ್ಯಾಂಕಿನ ಡೆಪಾಸಿಟ್ ಬಾಂಡ್ ಹಾಗೂ LIC ಬಾಂಡ್ ಮತ್ತು 2ನೇ ಆರೋಪಿ ಡಾ.ನಿಶ್ಚಿಕೇತ್ ಪೂಂಜಾ ರೂ.40 ಲಕ್ಷ ಸಾಲಕ್ಕೆ ಅರ್ಜಿಯೊಂದಿಗೆ 2ನೇ ಆರೋಪಿತನ  ಹೆಸರಿನಲ್ಲಿರುವ IDBI ಬ್ಯಾಂಕಿನ ಡೆಪಾಸಿಟ್ ಬಾಂಡ್ ಹಾಗೂ LIC ಬಾಂಡ್ ನೊಂದಿಗೆ ಸೊಸೈಟಿಗೆ ಸಲ್ಲಿಸಿದಂತೆ ದಿನಾಂಕ:09/10/2017 ರಂದು 1ನೇ ಆರೋಪಿತೆ ಶ್ರೀಮತಿ ಶಿಲ್ಪ ಗಜಾನನ ನೇಯವರಿಗೆ ರೂ.50 ಲಕ್ಷ ಮತ್ತು ಮತ್ತು 2ನೇ ಆರೋಪಿ ಡಾ.ನಿಶ್ಚಿಕೇತ್ ಪೂಂಜಾ ಎಂಬವರಿಗೆ ರೂ.40 ಲಕ್ಷ ಸಾಲವನ್ನು ಮಂಜೂರು ಮಾಡಿರುತ್ತಾರೆ. ಬಳಿಕ ಆರೋಪಿತರು ಸಾಲ ಮರು ಪಾವತಿಸೆ ಇದ್ದಾಗ ಆರೋಪಿರು ಸಾಲ ಮಂಜೂರಾಗುವ ಪೂರ್ವದಲ್ಲಿ ಸಲ್ಲಿಸಿದ ದಾಖಲೆಯ ಬಗ್ಗೆ ಪರಿಶೀಲಿಸಿದಲ್ಲಿ ಆರೋಪಿತರಿಬ್ಬರು IDBI ಬ್ಯಾಂಕಿನ ನಕಲಿ ಸೃಷ್ಟಿಸಿದ ಬಾಂಡ್ ಗಳನ್ನು ನೀಡಿದ್ದಲ್ಲದೆ LIC  ಬಾಂಡ್ ಗಳನ್ನು LIC ಕಛೇರಿಗೆ ಜಮೆ ಮಾಡಿ ಹಣ ತೆಗೆದಿರುವುದಾಗಿ ಆರೋಪಿತರ ಸಾಲಕ್ಕೆ 1ನೇ ಆರೋಪಿತೆಯ ಮಗಳಾದ 3ನೇ ಆರೋಪಿತೆ ಡಾ.ನಿಖಿತಾ ಪೂಂಜಾ  1 ಮತ್ತು 2ನೇ ಆರೋಪಿತರ ಕೃತ್ಯದ ಬಗ್ಗೆ ತಿಳಿದಿದ್ದರೂ ಸಾಲಕ್ಕೆ ಜಾಮೀನುದಾರರಾಗಿ ಸಾಲ ಮಂಜೂರಾಗಲು ಸಹಕರಿಸಿರುತ್ತಾರೆ. ಪ್ರಕರಣದ ಆರೋಪಿತರು ಸೊಸೈಟಿಯನ್ನು ನಂಬಿಸಿ, ನಕಲಿ ಸೃಷ್ಟಿಸಿದ ದಾಖಲಾತಿಯನ್ನು ಸಲ್ಲಿಸಿ ವಂಚಿಸಿ ಸಾಲ ಪಡೆದು ಮರು ಪಾವತಿಸದೆ ನಷ್ಟವನ್ನುಂಟು ಮಾಡಿರುವುದಾಗಿದೆ. ಎಂಬಿತ್ಯಾದಿ

Mangalore East PS

ದಿನಾಂಕ: 18-12-2022 ರಂದು ಮುಂಜಾನೆ ಸಮಯ  ಸುಮಾರು 04-15 ವೇಳೆಗೆ ನಗರದ ಪಂಪವೆಲ್ ನಿಂದ ಕಂಕನಾಡಿ ಬರುವ ರಸ್ತೆಯಲ್ಲಿ ಬಳಿಯಲ್ಲಿ ಅಹಮ್ಮದ್ ನಿಜಾದ್ ಪ್ರಾಯ 19 ವರ್ಷ ವಾಸ: ಪತ್ತಿಮಟ್ಟಂ, ಮನೆ ಮನರಿ ಪೋಸ್ಟ್, ಪಯಿಪುರಂ, ಎರ್ನಕುಲಂ ಜಿಲ್ಲೆ, ಕೇರಳ, ಸಾರ್ವಜನಿಕವಾಗಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ವಿಚಾರಿಸಲಾಗಿ ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಇತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ, ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ಪಾಸಿಟಿವ್ ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore North PS                    

ಪಿರ್ಯಾದಿದಾರರಾದ ಎ ರಾಮಸ್ವಾಮಿ ಎಂಬುವವರು ಕೆಲಸಕ್ಕೆ ಹೋಗಿ ಬರಲು ಹೀರೋ ಹೋಂಡಾ ಕಂಪನಿಯ ಸೂಪರ್ ಸ್ಲೆಂಡರ್ ಮೋಟಾರ್ ಸೈಕಲ್ ನಂಬ್ರ KA-21-S-9932   ನೇದ್ದನ್ನು ಉಪಯೋಗಿಸಿಕೊಂಡು ಬರುತ್ತಿದ್ದು,ಎಂದಿನಂತೆ ದಿನಾಂಕ:13-11-2022 ರಂದು ಸಂಜೆ-5.30 ಗಂಟೆಗೆ   ಪಿರ್ಯಾದಿದಾರರು ನಗರದ ಬಲ್ಮಠದಲ್ಲಿರುವ  ಸಿಝಲರ್ ಲಾಂಚ್ ನ ಎದುರುಗಡೆ KA-21-S-9932 ನೇ ನಂಬ್ರದ  ಮೋಟಾರ್ ಸೈಕಲನ್ನು ಪಾರ್ಕ್ ಮಾಡಿ ಹೋಟೆಲಿನಲ್ಲಿ ಕೆಲಸಕ್ಕೆ ಹೋಗಿದ್ದು, ರಾತ್ರಿ ಹೋಟೆಲ್  ಕೆಲಸ ಮುಗಿಸಿ ರಾತ್ರಿ ಸುಮಾರು 11.00ಗಂಟೆಗೆ ಪಾರ್ಕ್ ಮಾಡಿದ ಮೋಟಾರ್ ಸೈಕಲಿನ ಬಳಿಗೆ ಬಂದಾಗ ಸದ್ರಿ ಸ್ಥಳದಲ್ಲಿ ಮೋಟಾರ್ ಸೈಕಲ್  ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು  ಎಲ್ಲಾ ಕಡೆ ಹುಡುಕಾಡಿದರೂ ಕೂಡಾ ಈ ತನಕ ಸಿಗದೇ ಇದ್ದು ಹೋಟೆಲ್ ನವರಿಗೆ   ತಿಳಿಸಿ ಪಿರ್ಯಾದಿದಾರರು ಇಷ್ಟರವರೆಗೆ ಹುಡುಕಾಡಿದರೂ ಕೂಡಾ ನನಗೆ ನನ್ನ ಮೋಟಾರ್  ಸೈಕಲ್  ಸಿಗದೇ ಇದ್ದುದರಿಂದ  ಪಿರ್ಯಾದುದಾರರು  ಬಾಬ್ತು K-A-21-S-9932 ನೊಂದಣಿ ನಂಬ್ರದ ಹೀರೋ ಹೋಂಡಾ ಕಂಪನಿಯ ಸೂಪರ್ ಸ್ಲೆಂಡರ್  ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದು  ಎಂಬಿತ್ಯಾದಿ.

K-A-21-S-9932 ನೊಂದಣಿ ನಂಬ್ರದ ಹೀರೋ ಹೋಂಡಾ ಸೂಪರ್ ಸ್ಲೆಂಡರ್ ಮೋಟಾರ್ ಸೈಕಲ್ ಮಾಡೆಲ್ 2015 ಕಪ್ಪು ಬಣ್ಣ ಮತ್ತು ಕೆಂಪು ಬಣ್ಣ ಇದ್ದು,ಅಂದಾಜು ಮೌಲ್ಯ ರೂ. 8,000/-

Surathkal PS

ದಿನಾಂಕ 18-12-2022 ರಂದು ಸಂಜೆ 7:30  ಗಂಟೆ ಸುಮಾರಿಗೆ ಇಡ್ಯಾ ಗ್ರಾಮದ ಜನತಾ ಕಾಲೋನಿಯ ಹಿಂದೂ ರುದ್ರ ಭೂಮಿ ಬಳಿ ಮೊಹಮ್ಮದ್ ಶಿಫಾಜ್  ಪ್ರಾಯ 22 ವರ್ಷ ವಾಸ: ಖಾಲಿದ್ ಇಂಜಿನಿಯರ್ ರವರ ಮನೆಯ ಬಳಿ, 7ನೇ ವಿಭಾಗ, ಕೃಷ್ಣಾಪುರ, ಕಾಟಿಪಳ್ಳ,  ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ  ಎಂಬಾತನು  ಗಾಂಜಾದಂತ ಅಮಲು ಪದಾರ್ಥ ಸೇವಿಸಿದಂತೆ ಆತನ ನಡವಳಿಕೆಯಲ್ಲಿ ಕಂಡು ಬಂದ ಮೇರೆಗೆ ವಶಕ್ಕೆ ಪಡೆದು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವರೇ ಮಂಗಳೂರು ಕುಂಟಿಕಾನ ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಿದಲ್ಲಿ ಅಲ್ಲಿನ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ “Tetrahydracannabinoid (Mrijuana): POSITIVE, ಎಂಬುವುದಾಗಿ ವರದಿ ನೀಡಿದಾಗಿರುತ್ತದೆ ಆರೋಪಿಯು ನಿಷೇದಿತ ಗಾಂಜಾ ಸೇವನೆ ಮಾಡಿದ್ದರಿಂದ ಕಾನೂನು  ಕ್ರಮ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-12-2022 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080