ಅಭಿಪ್ರಾಯ / ಸಲಹೆಗಳು

Crime Reported in :  Mangalore Rural PS

ಪಿರ್ಯಾದಿ MALLIKARJUNA ANGADI ದಿನಾಂಕ: 19-01-2023 ರಂದು ಠಾಣಾ ಸಿ.ಪಿ.ಸಿ: ಪ್ರದೀಪ್ ನಾಗನ ಗೌಡರವರೊಂದಿಗೆ ಠಾಣಾ ವ್ಯಾಪ್ತಿಯ 04 ನೇ ರಾತ್ರಿ ಗಸ್ತು ಕರ್ತವ್ಯದಲ್ಲಿ ಹೊರಟು ಅರ್ಕುಳ ಜಂಕ್ಷನ್ ಗೆ ಹೋಗಿ ಅಲ್ಲಿಂದ ತುಪ್ಪೆಕಲ್ಲು ಕಡೆಗೆ ಹೋಗುವ ರಸ್ತೆಯಲ್ಲಿ ಸಂಚರಿಸಿಕೊಂಡು ಹೋಗುತ್ತಾ, ಮಂಗಳೂರು ತಾಲೂಕು ಅರ್ಕುಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಹಾದು ಹೋಗುವ ರೈಲ್ವೇ ಹಳಿಯ ಪಕ್ಕದಲ್ಲಿ ಹಾದು ಹೋದ ಕಾಂಕ್ರೀಟ್ ರಸ್ತೆಯ ಬಳಿಗೆ ತಲುಪುವಾಗ ದಿನಾಂಕ: 20-01-2023 ರಂದು ಮುಂಜಾನೆ ಸುಮಾರು 02-00 ಗಂಟೆಗೆ ಅಲ್ಲಿನ ಕಾಂಕ್ರೀಟ್ ರಸ್ತೆಯ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಕೆಎ-19-ಎಂಎ-3427 ನಂಬ್ರದ ಮಾರುತಿ ಸುಝುಕಿ ಬಿಳಿ ಬಣ್ಣದ ಆಲ್ಟೋ ಕಾರೊಂದರ ಬಳಿ ಇಬ್ಬರು ವ್ಯಕ್ತಿಗಳು ನಿಂತಿದ್ದು, ಕಾರಿನೊಳಗಡೆ 03 ಜನರು ಇದ್ದವರನ್ನು ಕಂಡ ಗಸ್ತು ಕರ್ತವ್ಯದಲ್ಲಿದ್ದ ಪಿರ್ಯಾದಿದಾರರು ಅವರನ್ನುದ್ಧೇಶಿಸಿ ನೀವು ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಅವರ ಕಡೆಗೆ ಟಾರ್ಚ್ ಬೆಳಕನ್ನು ಹಾಯಿಸಿ ಕೇಳಿದಾಗ ಕಾರಿನ ಹೊರಗಡೆ ನಿಂತಿದ್ದ ಇಬ್ಬರು ವ್ಯಕ್ತಿಗಳು ಪಿರ್ಯಾದಿದಾರರು ಮತ್ತು ಸಿ.ಪಿ.ಸಿ: ಪ್ರದೀಪ್ ನಾಗನ ಗೌಡರವರನ್ನು ಕಂಡು ಅವರು ಅಪರಾತ್ರಿಯಲ್ಲಿ ಅಲ್ಲಿರುವುದಕ್ಕೆ ಯಾವುದೇ ಸಕಾರಣವನ್ನು ಕೊಡದೇ ಏಕಾಏಕಿ ಅಲ್ಲಿಯೇ ನೆಲದಲ್ಲಿದ್ದ ಕಲ್ಲುಗಳನ್ನು ಎತ್ತಿ ಪಿರ್ಯಾದಿದಾರರ ಕಡೆಗೆ ಎಸೆದಾಗ ಆ ಕಲ್ಲುಗಳು ಪಿರ್ಯಾದಿದಾರರು ಹಾಗೂ ಪ್ರದೀಪ್ ನಾಗನ ಗೌಡರವರ ಕೈಗೆ ತಾಗಿ ತರಚಿದ ನಮೂನೆಯ ಗಾಯಗಳಾಯಿತು ಆಗ ಕಾರಿನ ಹೊರಗಡೆ ಇದ್ದ ಇಬ್ಬರು ವ್ಯಕ್ತಿಗಳು ಕೂಡಲೇ ಕಾರಿಗೆ ಹತ್ತಿದಾಗ ಅದರ ಚಾಲಕರು ಕಾರನ್ನು ಸ್ಟಾರ್ಟ್ ಮಾಡಿ ಒಮ್ಮೆಲೇ ಪಿರ್ಯಾದಿದಾರರು ಮತ್ತು ಪ್ರದೀಪ್ ನಾಗನ ಗೌಡರವರನ್ನು ಕೊಲೆ ಮಾಡುವ ಏಕೈಕ ಉದ್ಧೇಶದಿಂದ ಅತೀ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಅವರ ಮೇಲೆ ಹಾಯಿಸಲು ಬಂದಾಗ ಇಬ್ಬರೂ ರಸ್ತೆಯ ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಪಿರ್ಯಾದಿದಾರರು ಮತ್ತು ಪ್ರದೀಪ್ ನಾಗನ ಗೌಡರವರು ರಾತ್ರಿ ಗಸ್ತು ಕರ್ತವ್ಯಕ್ಕೆ ತೆರಳಿದ್ದವರು ಮೇಲಾಧಿಕಾರಿಗಳ ಆದೇಶದಂತೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯ ಆರೋಪಿಗಳು ಅಪರಾತ್ರಿಯಲ್ಲಿ ಯಾವುದೇ ಅಗತ್ಯ ಕೆಲಸವಿಲ್ಲದೇ ರಸ್ತೆ ಬದಿಯಲ್ಲಿ ನಿಂತಿದ್ದವರನ್ನು ವಿಚಾರಿಸಿರುವ ಏಕೈಕ ಕಾರಣಕ್ಕೆ ಆರೋಪಿಗಳು ಪಿರ್ಯಾದಿದಾರರು ಮತ್ತು ಪ್ರದೀಪ್ ನಾಗನ ಗೌಡರವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರಿಗೆ ಕಲ್ಲುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿರುವುದು ಎಂಬಿತ್ಯಾದಿ.

Crime Reported in : Bajpe PS  

ಪಿರ್ಯಾದಿ Prashanth ತಂದೆಯವರು ದಿನಾಂಕ 19.01.2023 ರಂದು ಎಡಪದವು ಕಡೆಗೆ ಹೋಗಿದ್ದು ಸಮಯ 10.00 ಗಂಟೆಗೆ ಮಂಗಳೂರು ತಾಲೂಕು ತೆಂಕಎಡಪದವು  ಗ್ರಾಮದ ಕುಂದೋಡಿ ಎಂಬಲ್ಲಿ ಪಿರ್ಯಾದಿದಾರರ ತಂದೆಯವರು ರಸ್ತೆಯನ್ನು ದಾಟುತಿದ್ದಾಗ ಕುಪ್ಪೆಪದವು ಕಡೆಯಿಂದ ಎಡಪದವು ಕಡೆಗೆ ಬಂದ ಸ್ಕೂಟರ್ ನಂ KA19EN7154 ನೇ ಸವಾರನಾದ ಶಿವರಾಮ್ ಕಾರಂತ ಎಂಬಾತನು ಅತೀವೇಗ ಮತ್ತು ಅಜಾಗಾರುಕತೆಯಿಂದ ತನ್ನ ಸ್ಕೂಟರ್ ಚಲಾಯಿಸಿ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆಯವರಿಗೆ ತಲೆಗೆ ಗುದ್ದಿದ ಗಾಯವಾಗಿದ್ದು ಕಿವಿಯಿಂದ ರಕ್ತಬಂದಿದ್ದು ಸದ್ರಿ ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

Crime Reported in : Mangalore East PS  

ಕೇರಳ ರಾಜ್ಯದ ಕಣ್ಣೂರು ನಗರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ಬಂದ ಪ್ರಕರಣದ ಸಾರಾಂಶವೆನಂದರೆ ದಿನಾಂಕ:10.07.2022 ರಂದು ಕಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ನಂಬ್ರ ಕೆಎಲ್ 13 ಎಎಮ್ 2742 ಮತ್ತು ಪಿಕ್ ಅಫ್ ಕೆಎಲ್ 13 ಎಟಿ 2669 ನೇ ವಾಹನದ ಅಪಘಾದಲ್ಲಿ ಗಾಯಗೊಂಡಿದ್ದ ಸಬೀನ್ ಅವರನ್ನು ಪ್ರಥಮ ಚಿಕಿತ್ಸೆಯ ಬಗ್ಗೆ ಕಣ್ಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಚಂದ ಸ್ಪೆಷಲಿಟಿ ಹಾಸ್ಪೀಟಲ್ ಕಣ್ಣೂರಿಗೆ ದಾಖಲಿಸಿದ್ದು ನಂತರ ಅಲ್ಲಿ ಪರಿಶೀಲಿಸಿದ ವೈದ್ಯರು ಮಂಗಳೂರಿನ ತೇಜಸ್ವಿನಿ ಹಾಸ್ಪಿಟಲ್ ನಲ್ಲಿ ದಾಖಲಿಸುವಂತೆ ತಿಳಿಸಿದ ಮೇರೆಗೆ ಸದ್ರಿಯವರು ದಾಖಲಾಗಿರುತ್ತಾರೆ.ದಿನಾಂಕ:20.07.2022 ರಂದು ಸಮಯ 00:10 ಗಂಟೆಗೆ ಚಿಕಿತ್ಸೆ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು , ಪ್ರಕರಣ ತನಿಖೆ ವೇಳೆ ಶವ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಯವರು ಸಬೀನ ರವರು ಮರಣ ಹೊಂದಿರುವುದಕ್ಕೆ ದಿನಾಂಕ:19.072022 ರಂದು ಶಸ್ರ್ತಚಿಕಿತ್ಸೆ ನೀಡಿದ ವೈದ್ಯ ನಿರ್ಲಕ್ಷತನವೇ ಕಾರಣ ಎಂಬಿತ್ಯಾದಿಯಾಗಿದೆ.

 

Crime Reported in : Mangalore North PS

ತಾರೀಕು 19-01-2023 ರಂದು  ಮಧ್ಯಾಹ್ನ 03 -15 ಗಂಟೆಗೆ ನಾಗರಾಜ್  ಎಸ್ ಪೊಲೀಸ್ ಉಪ ನಿರೀಕ್ಷಕರು-2 ಮಂಗಳೂರು ಉತ್ತರ ಠಾಣೆ ಠಾಣೆಯಲ್ಲಿದ್ದಾಗ ಮಂಗಳೂರು ನಗರದ ಕುದ್ರೋಳಿ ಮೊಯಿದ್ದಿನ ನಗರದ  ವೆಂಕಟೇಶ ಸಾ ಮಿಲ್ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಇಕ್ಬಾಲ್ ಆಲಿ ಮತ್ತು ರಶಿದ್ @ ರಚ್ಚಿ ಎಂಬುವರು ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದೂ, ಸದ್ರಿ ವ್ಯಕ್ತಿಯ  ಚಹರೆ, ಗುರುತು ಬಗ್ಗೆ ಖಚಿತ ಮಾಹಿತಿಯನ್ನು ಬಾತ್ಮೀದಾರರು  ನೀಡಿದಂತೆ, ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಆರೋಪಿತನನ್ನು ದಸ್ತಗಿರಿ ಮಾಡಿ  ಅವರ ವಶದಲ್ಲಿರುವ  ಎಂ.ಡಿ.ಎಂ.ಎ  ಮಾದಕ ವಸ್ತುವನ್ನು  ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಮಧ್ಯಾಹ್ನ 03-30  ಗಂಟೆಗೆ ಕಲಂ. 8(c), 21(A) NDPS Act-1985 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Crime Reported in : Bajpe PS  

ಪಿರ್ಯಾದಿ Mohammed Ali ದಿನಾಂಕ 18.01.2023 ರಂದು ತನ್ನ ಮಗಳಾದ ರಶೀದ ಎಂಬುವಳ ಜೊತೆ ಪೇಟೆಗೆ ಹೋಗಲು ಮಂಗಳೂರು ತಾಲೂಕು  ತೆಂಕೆಎಡಪದವು ಗ್ರಾಮದ ಕುಪ್ಪೆಪದವು ಕುಂದೋಡಿ ಎಂಬಲ್ಲಿ ಆಟೋರಿಕ್ಷಾಗೆ ಕಾಯುತ್ತಿರುವಾಗ ಸಮಯ ಸಂಜೆ 5.30 ಗಂಟೆಗೆ ಕುಪ್ಪೆಪದವು ಕಡೆಯಿಂದ KA19AA7482 ನೇ ನಂಬ್ರನ ಆಟೋರಿಕ್ಷಾವನ್ನು ಅದರ ಚಾಲಕನಾದ ಗಂಗಾಧರ ಪೊಜಾರಿ ಎಂಬುವನು ಅತೀವೇಗ ಮತ್ತು ಅಜಾಗಾರುಕತೆಯಿಂದ ತನ್ನ ಆಟೋರಿಕ್ಷಾವನ್ನು ಚಲಾಯಿಸಿ ಪಿರ್ಯಾದಿದಾರಿಗೆ ಮತ್ತು ಅವರ ಮಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಭುಜ ಮತ್ತು ಎದೆಯ ಭಾಗಕ್ಕೆ ಗುದ್ದಿದ ಗಾಯವಾಗಿದ್ದು  ಪಿರ್ಯಾದಿದಾರರ ಮಗಳಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ನಂತರ ಪಿರ್ಯಾದಿದಾರರನ್ನು ಆಟೋರಿಕ್ಷಾ ಚಾಲಕ ಮತ್ತು ಪಿರ್ಯಾದಿದಾರರ ಮಗಳು ಉಪಚರಿಸಿ ಮಂಗಳೂರಿನ ಎಸ್ ಇ ಎಸ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ

Crime Reported in : Traffic North Police Station               

ಪಿರ್ಯಾದಿ Murthy K ದಿನಾಂಕ 19-01-2023 ರಂದು ಅವರ ನೆರೆಕೆರೆ ಯವರಾದ ಪ್ರದೀಪ್ ರವರ ಬಾಬ್ತು KA-19-EV-3024 ನಂಬ್ರದ ಸ್ಕೂಟರಿನಲ್ಲಿ ಪ್ರದೀಪ್ ರವರು ಸವಾರರಾಗಿ ಹಾಗೂ ಪಿರ್ಯಾದಿದಾರರು ಸಹ ಸವಾರರಾಗಿ ಕುಳಿತುಕೊಂಡು ಕಿನ್ನಿಗೋಳಿಯಿಂದ ವಾಪಾಸು ಮಧ್ಯಾಹ್ನ ಸಮಯ ಸುಮಾರು 12:20 ಗಂಟೆಗೆ ಎಸ್. ಕೋಡಿ ಕಡೆಗೆ ಬರುತ್ತಾ ಪದ್ಮನೂರಿನಿಂದ ಮುಂದೆ ಮಾರ್ಗ ಮಧ್ಯೆ ಸಂಚಾರ ಪೊಲೀಸರು ನಿಂತಿರುವುದನ್ನು ಗಮನಿಸಿ ಪ್ರದೀಪ್ ರವರು ಹೆಲ್ಮೆಟ್ ಹಾಕದೇ ಇರುವುದರಿಂದ ನಮ್ಮ ಸ್ಕೂಟರನ್ನು ಒಮ್ಮೆಲೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ಬಲಬದಿಗೆ ತಿರುಗಿಸುತ್ತಿದ್ದಂತೆ ಇದೇ ವೇಳೆ ಹಿಂದಿನಿಂದ ಅಂದರೆ ಪದ್ಮನೂರು ಕಡೆಯಿಂದ KA-01-AD-1303 ನಂಬ್ರದ ಟೆಂಪೊ ಟ್ರಾವೆಲ್ಲರ್ ವಾಹನವನ್ನು ಅದರ ಚಾಲಕನಾದ ರವಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ  ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಕಾಲಿನ ಪಾದದ ಕಿರು ಬೆರಳಿನ ಪಕ್ಕದ ಬೆರಳಿಗೆ ಮೂಳೆ ಮುರಿತದ ರೀತಿಯ ಗಂಭೀರ ಸ್ವರೂಪದ ಗಾಯ, ಎಡಕೈ ಅಂಗೈ ನಲ್ಲಿ ತರಚಿದ ರೀತಿಯ ಗಾಯವಾಗಿದ್ದು ಪ್ರದೀಪ್ ರವರಿಗೆ ಬಲಕಾಲಿನ ಮೊಣಗಂಟಿನ ಬಳಿ ರಕ್ತ ಗಾಯ, ಬೆನ್ನಿನಲ್ಲಿ ಗುದ್ದಿದ ರೀತಿಯ ಒಳಗಾಯ, ಎಡಕಾಲಿನ ಹೆಬ್ಬೆರಳಿನಲ್ಲಿ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in :  Traffic North Police Station                                                      

ಪಿರ್ಯಾದಿ Sujith G Devadiga ತಮ್ಮ ಹರ್ಷಿತ್ ರವರ ಸ್ನೇಹಿತನಾದ ಅಶ್ವಿನ್ ಎಂಬಾತನು  ದಿನಾಂಕ 18-01-20233 ರಂದು ರಾತ್ರಿ ಮನೆಗೆ ಬಂದಿದ್ದು ಬಳಿಕ ಮನೆಯಲ್ಲಿ ಊಟ ಮುಗಿಸಿ ಅಶ್ವಿನ್ ರವರ  ಬಾಬ್ತು KA-19-EW-8810 ನಂಬ್ರದ ಮೋಟಾರು ಸೈಕಲಿನಲ್ಲಿ ಹರ್ಷಿತ್ ನನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಹೋಗುತ್ತಾ ದಿನಾಂಕ 19-01-2023 ರಂದು ಬೆಳಗ್ಗಿನ ಜಾವ ಸಮಯ ಸುಮಾರು 02.30 ಗಂಟೆಗೆ ಕಾವೂರು-ಕುಂಟಿಕಾನ ರಸ್ತೆ ತಲುಪುತ್ತಿದ್ದಂತೆ ಮುಲ್ಲಕಾಡು ಎಂಬಲ್ಲಿ ಅಶ್ವಿನ್ ರವರು ತನ್ನ ಮೋಟಾರು ಸೈಕಲನ್ನು ದುಡುಕುತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿದ ಪರಿಣಾಮ ಮೋಟಾರು ಸೈಕಲಿನ ನಿಯಂತ್ರಣ ತಪ್ಪಿ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಮ್ಮನಾದ ಹರ್ಷಿತ್ ರವರಿಗೆ ತಲೆಗೆ ಗುದ್ದಿದ ರೀತಿಯ ಗಾಯ, ಕೆಳತುಟಿಯಲ್ಲಿ ರಕ್ತಗಾಯ  ಹಾಗೂ ಮೂಗಿಗೆ ಗುದ್ದಿದ ರೀತಿಯ ಒಳಗಾಯವಾಗಿದ್ದು, ಅಲ್ಲದೇ ಮೋಟಾರು ಸೈಕಲ್ ಸವಾರ ಅಶ್ವಿನ್ ನಿಗೆ ಹಣೆಯಲ್ಲಿ ಸ್ವಲ್ಪ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ AJ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

                                    

ಇತ್ತೀಚಿನ ನವೀಕರಣ​ : 20-01-2023 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080