ಅಭಿಪ್ರಾಯ / ಸಲಹೆಗಳು

Crime Reported in : Urva PS    

ದಿನಾಂಕ 20-3-2023 ರಂದು ಪಿರ್ಯಾದಿ ತನ್ನ ಕಂಪನಿ ಬಾಬ್ತು ಒಮ್ನಿ ಕಾರನ್ನು ಕಲ್ಲಾಪುವಿನಿಂದ ಚಲಾಯಿಸಿಕೊಂಡು ಉರ್ವಾ ಸ್ಟೋರ್ ಜಂಕ್ಷನ್ ಗೆ ಬಂದು ಅಶೋಕ ನಗರ ಅಡ್ಡ ರಸ್ತೆಗೆ ತಿರುಗಿಸುವಾಗ ಸಮಯ 9-15 ರ ವೇಳೆಗೆ ರಸ್ತೆಯಲ್ಲಿ ಅಡ್ಡವಾಗಿ ಕೆಎ-19-ಎನ್-9868 ನೇ ನಂಬ್ರದ  ಬಿಳಿ ಬಣ್ಣದ ಅಲ್ಟೋ ಕಾರನ್ನು ನಿಲ್ಲಿಸಿದ್ದನ್ನು ಕಂಡ ಪಿರ್ಯಾದಿದಾರರು ಆ ಕಾರಿನ ಚಾಲಕನಲ್ಲಿ “ಏಕೆ ರಸ್ತೆಗೆ ಅಡ್ಡವಾಗಿ ಕಾರು ನಿಲ್ಲಿಸಿದ್ದಿರೀ” ಎಂದು ಕೇಳಿದಾಗ ಆ ಕಾರಿನ ಚಾಲಕನು  ಪಿರ್ಯಾದಿದಾರರನ್ನು ಉದ್ದೇಶಿಸಿ  “ ಯಾನ್ ರೋಡ್ ದ ನಡುಟ್ ಉಂತವೇ ನಿಕ್ ಪೋಯರೆ ಬರಿಟ್ ಜಾಗ್ ಇಜ್ಜಾ, ರೋಡ್ ನಿನ್ನ ಅಮ್ಮೇರ್.ನನ, ರಂಡೇ ಮಗ” ಎಂದು ತುಳು ಭಾಷೆಯಲ್ಲಿ ಬೈದಾಗ ಪಿರ್ಯಾದಿದಾರರು ಕೂಡ ಆತನಿಗೆ  ಬೈಯುತ್ತಾ ಇಕ್ಕಟಿನ ರಸ್ತೆಯಲ್ಲಿ ಕಾರನ್ನು ಚಲಾಯಿಸುತ್ತಾ ಅಶೋಕ ನಗರದಲ್ಲಿರುವ ರೂಂ ನ ಕಡೆಗೆ ಬರುವಾಗ, ಆಲ್ಟೋ ಕಾರಿನವರು ಪಿರ್ಯಾದಿದಾರರ ಕಾರನ್ನು ಹಿಂಬಾಲಿಸುತ್ತಾ ಅಶೋಕ ನಗರ ರೂಂ ನಲ್ಲಿಗೆ ಬಂದು ಸಮಯ ಸುಮಾರು 9-30ರ ವೇಳೆಗೆ , ಕಾರಿನಿಂದ ಇಳಿದು ಹೋಗುತ್ತಿದ್ದ ಪಿರ್ಯಾದಿದಾರರನ್ನು  ಕಾರಿನ ಚಾಲಕನು ಪಿರ್ಯಾದಿದಾರರಲ್ಲಿ  “ ಓಡೆ ಪೋಪ ಬ್ಯಾವರ್ಸಿ ಉಂತು “ ಎಂದು ಬೈದು ಪಿರ್ಯಾದಿದಾರರ ಅಂಗಿಯ ಕಾಲರನ್ನು ಹಿಡಿದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಆತನ ಬಲ ಕೈಯ ಬೆರಳಿಗೆ  ಧರಿಸಿದ್ದ  ಕಾರಿನ ಕೀ ಚೈನ್ ನ ರಿಂಗ್ ನಿಂದ  ಪಿರ್ಯಾದಿದಾರರ ತುಟಿಗೆ ಬಲವಾಗಿ ಗುದ್ದಿದನು. ಕಾರಿನಲ್ಲಿದ್ದ ಇನ್ನೋಬಾತನು  “ಆಯನ್ ಬುಡೊಚಿ “ಎಂದು ಹೇಳುತ್ತಾ ಪಿರ್ಯಾದಿದಾರರ ಬೆನ್ನಿಗೆ ಕೈಯಿಂದ ಹೊಡೆದನು. ಇಬ್ಬರು ಸೇರಿ ಪಿರ್ಯಾದಿದಾರರಿಗೆ  ಕೈಯಿಂದ ಯದ್ವಾ ತದ್ವಾ ಹೊಡೆದಿರುತ್ತಾರೆ, ಈ ಸಮಯ ಪಿರ್ಯಾದಿದಾರರ ಬೊಬ್ಬೆ ಕೇಳಿ ರೂಂನಲ್ಲಿದ್ದ  ಸಂದೀಪ್ ಮತ್ತು ಸುಧೀರ್ ರವರು ಹಾಗೂ ಹತ್ತಿರದ ಮನೆಯವರು ಬರುವುದನ್ನು ಕಂಡು ಕಾರಿನ ಚಾಲಕನು ಪಿರ್ಯಾದಿದಾರರನ್ನು ಉದ್ದೇಶಿಸಿ “ ಉರ್ವಾಡ್ ಈ ಓಡೆ ಪೊಂಡಲ ತೂಪೆ ನಿನನ್ ಬದುಕರೆ ಬುಡುಪಿಜಿ “ ಎಂದು ತುಳು ಭಾಷೆಯಲ್ಲಿ ಜೀವ ಬೆದರಿಕೆ ಹಾಕಿ, ಅದೇ ಕಾರಿನಲ್ಲಿ ಸ್ಥಳದಿಂದ ಹೋಗಿದ್ದು, ಇವರುಗಳು ಹೊಡೆದಿರುವುದರಿಂದ ಪಿರ್ಯಾದಿದಾರರ ತುಟಿಗೆ ರಕ್ತ ಗಾಯವಾಗಿದ್ದು, ಈ ಬಗ್ಗೆ ಪಿರ್ಯಾದಿದಾರರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ   ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

Panambur PS

ಪಿರ್ಯಾದಿ ಹೇಮಚಂದ್ರ ನ್ಯಾಕ್  ರವರು KA 19 AA 4951  ಆಟೋ ರಿಕ್ಷಾದ ಚಾಲಕರಾಗಿದ್ದು,  ದಿನಾಂಕ: 19-03-2023 ರಂದು ಸಂಜೆ 05-30 ಗಂಟೆಗೆ ಇಪ್ಪೋಸಿಸ್ ನಿಂದ ಪಣಂಬೂರು ಬೀಚ್ ಗೆ ಬಾಡಿಗೆಗೆ ಬಂದವರು ಪ್ರಯಾಣಿಕರನ್ನು ಇಳಿಸಿ,  ಬೀಚ್ ನ ಹತ್ತಿರದ ರಿಕ್ಷಾ ಪಾರ್ಕ್ ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಪಾರ್ಕ್ ಮಾಡಿದ ಸಮಯ ಅಲ್ಲೆ ಇದ್ದ ಆಟೋ ರಿಕ್ಷಾ ಚಾಲಕನಾದ  ಪುನೀತ್ ಎಂಬಾತನು  ಸಂಜೆ 06-15 ಗಂಟೆ ಸುಮಾರಿಗೆ  ಪಿರ್ಯಾಧಿಯ ರಿಕ್ಷಾವನ್ನು ಪಾರ್ಕ್ ನಲ್ಲಿ ಕಂಡು, ಅಲ್ಲಿ ಪಿರ್ಯಾದಿಯ  ರಿಕ್ಷಾವನ್ನು  ಪಾರ್ಕ್ ಮಾಡದಂತೆ ತಡೆದು, ಪಿರ್ಯಾಇಒದಯನ್ನು ಉದ್ದೇಶಿಸಿ ಬ್ಯಾವರ್ಸಿ ರಂಡೆ ಮಗನೆ, ಇಲ್ಲಿ ಪಾರ್ಕ್ ಮಾಡುತ್ತಿಯ ಎಂದು ಅವಾಚ್ಯ ಶಬ್ದಗಳಿಂದ ಬೈದು, ಒಂದು  ಮರದ ರೀಪಿನಿಂದ ಪಿರ್ಯಾಧಿಯ ಹೊಟ್ಟೆಗೆ, ಬೆನ್ನಿಗೆ, ಸೊಂಟದ ಕೆಳಗೆ, ಮುಖಕ್ಕೆ, ಕಣ್ಣಿಗೆ, ಹಾಗೂ ಬಲ ಕೈಗೆ  ಹೊಡೆದಿದ್ದು, ಪಿರ್ಯಾಧಿ ಬೊಬ್ಬೆ ಹೊಡೆಯುದನ್ನು ಕಂಡು ಅಲ್ಲಿ ಇದ್ದ ರಿಕ್ಷಾ ಚಾಲಕರು ಹತ್ತಿರ ಬರುವುದನ್ನು ಕಂಡು ಪುನಿತನು ಇನ್ನು ಮುಂದಕ್ಕೆ ಪಣಂಬೂರು ಬೀಚ್ ಬಂದರೆ ಕೊಲ್ಲುವುದೇ ಬಿಡುವುದಿಲ್ಲವೆಂದು ಪಿರ್ಯಾಧಿಗೆ ಜೀವ ಬೆದರಿಕೆ ಹಾಕಿರುತ್ತಾನೆ. ಅವಾಚ್ಯ  ಶಬ್ದಗಳಿಂದ ಬೈದು ಹಲ್ಲೆ ಮಾಡಿದ  ಆಟೋ ಚಾಲಕ ಪುನೀತ್ ಎಂಬಾತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Panambur PS

ಪಿರ್ಯಾದಿ  ಪುನೀತ್ ಸಾಲ್ಯಾನ್    ರವರು KA 19 AD 9193 ಆಟೋ ರಿಕ್ಷಾದ ಚಾಲಕರಾಗಿದ್ದು,  ದಿನಾಂಕ: 19-03-2023 ರಂದು ಸಂಜೆ 18-00 ಗಂಟೆಗೆ  ಪಿರ್ಯಾದಿಯು  ಪಣಂಬೂರು ಬೀಚ್  ಹತ್ತಿರ ರಿಕ್ಷಾ ಪಾರ್ಕ್ ನಲ್ಲಿ  ನಿಲ್ಲಿಸಿ ಬಾಡಿಗೆಗಾಗಿ ಕಾಯುತ್ತಿರುವಾಗ,  ಮಂಗಳೂರಿನ ಬೇರೆ ಬೇರೆ ಕಡೆಯಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದ ಆಟೋ ಚಾಲಕರನ್ನು ತಮ್ಮ ಆಟೋವನ್ನು  ಆಟೋ ರಿಕ್ಷಾ ಪಾರ್ಕ್ ನಲ್ಲಿ ಕಾಯುತ್ತಿದ್ದವರಿಗೆ ಪಿರ್ಯಾದಿ ಅವರಲ್ಲಿ ನೀವು  ಅಲ್ಲಿಂದ ಬಾಡಿಗೆ ಪಡೆದುಕೊಂಡು ಬಂದು ಮರಳಿ ಹೋಗದೇ ಹೀಗೆ ನಿಲ್ಲಿಸಿಕೊಂಡರೇ  ಪ್ರತಿನಿತ್ಯ ಇಲ್ಲಿ ಆಟೋವನ್ನು ನಿಲ್ಲಿಸಿ ದುಡಿಯುವ ನಮಗೆ ತೊಂದರೆಯಾಗುತ್ತದೆ ಎಂದು ಹೇಳಿದಾಗ ಅಲ್ಲಿದ್ದ  3 ಆಟೋ ಗಳ ಪೈಕಿ ಇಬ್ಬರು ಚಾಲಕರು ತಮ್ಮ ಆಟೋವನ್ನು ತೆಗೆದುಕೊಂಡು ಹೋಗಿದ್ದು, ಇನ್ನೊಬ್ಬ ರಿಕ್ಷಾ ಚಾಲಕನು ನನಗೆ ಇದನೆಲ್ಲಾ ಹೇಳುವುದಕ್ಕೆ ನೀನು ಯಾರು? ಈ ಜಾಗ ನಿಂದಾ? ಎಂದು ಪಿರ್ಯಾಧಿಗೆ ಗದರಿಸಿ ಬ್ಯಾವರ್ಸಿ ನಿನ್ನ ಅಮ್ಮನಾ ಜಾಗವಾ ಎಂದು ತುಳು ಬಾಷೆಯಲ್ಲಿ ಅವಾಚ್ಯ ಶಬ್ದದಿಂದ ಬೈದು  ಆತನ ಆಟೋರಿಕ್ಷಾದ ಹಿಂಭಾಗದ ಸಿಟಿನ ಕೆಳಗಡೆಯಲ್ಲಿದ್ದ ಒಂದು ಮರದ ಪಪೀಸ್ ನಿಂದ  ಪಿರ್ಯಾದಿಯ ಬಲ ಕೈಯ ಕೋಲು ಕೈಗೆ ಹೊಡೆದು, ಪಿರ್ಯಾದಿಯನ್ನು ದೂಡಿ ನೆಲಕ್ಕೆ ಬಿಳಿಸಿ ಕೈಯಿಂದ  ಭುಜಗಳಿಗೆ, ಬೆನ್ನು ಮತ್ತು ಹೊಟ್ಟೆಭಾಗಕ್ಕೆ  ಗುದ್ದಿ ಹಲ್ಲೆ ಮಾಡಿರುತ್ತಾನೆ.  ಆ ಸಮಯದಲ್ಲಿ ಅಲ್ಲಿ ಇದ್ದ  ಮಿಥುನ್ @ ಭರತ್, ಜೀವನ್, ಅಜಯ್ , ದಿಕ್ಷೀತ್ ಎಂಬುವರುಗಳು ಪಿರ್ಯಾದಿಯನ್ನು  ಆತನಿಂದ ರಕ್ಷಿಸಿರುತ್ತಾರೆ.  ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ  ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

Panambur PS

ಪಿರ್ಯಾದಿ HARISH   HALI ಕೆಎ 27 ಸಿ 5190 ನೇ ಲಾರಿಯಲ್ಲಿ ಯಲ್ಲಿ  ಚಾಲಕನಾಗಿ ಕೆಲಸ  ಮಾಡಿಕೊಂಡಿದ್ದು  ದಿನಾಂಕ:05-3-2023 ರಂದು  ತನ್ನ ಬಾಬ್ತು  ಲಾರಿಯಲ್ಲಿ ಮೆಣಸಿನಕಾಯಿ  ಲೋಡ್ ಮಾಡಿಕೊಂಡು  ಕೇರಳಕ್ಕೆ  ಹೋಗಿ  ವಾಪಸ್ಸು ದಿನಾಂಕ:10-3-2023 ರಂದು  ಕೇರಳದಿಂದ ಮಂಗಳೂರಿಗೆ  ಬಿಸ್ಲರಿ ನೀರನ್ನು  ಲೋಡ್ ಮಾಡಿಕೊಂಡು  ಬಂದಿದ್ದು  ದಿನಾಂಕ:11-03-2023 ರಂದು  ಮಂಗಳೂರಿನಲ್ಲಿ ಲಾರಿಯಲ್ಲಿದ್ದ ಸರಕನ್ನು  ಅನ್ ಲೋಡ್  ಮಾಡಿ ನಂತರ   ಪಣಂಬೂರಿನಲ್ಲಿರುವ  ಮಾಮಾ  ಟ್ರಾನ್ಸ್ ಪೋರ್ಟ್  ಕಂಪನಿಗೆ ಸಂಜೆ  ಸುಮಾರು 8.30 ಗಂಟೆಗೆ  ಬಂದಿದ್ದು  ತನಗೆ  ಸುಮಾರು ದಿನಗಳಿಂದ ಸರಿಯಾಗಿ ನಿದ್ರೆಯಿಲ್ಲದ  ಕಾರಣ ತನ್ನ ಬಾಬ್ತು  ಲಾರಿಯನ್ನು ಟ್ರಾನ್ಸ್ ಪೋರ್ಟ್  ಕಂಪನಿ  ಬಳಿ ನಿಲ್ಲಿಸಿ   ತನ್ನ ಓಪೋ ಮೊಬೈಲ್ ಫೋನ್ , ಎಟಿಎಮ್ ಕಾರ್ಡ್, ಹಾಗೂ ಡ್ರೈವಿಂಗ್ ಲೈಸೆನ್ಸ್ ಅನ್ನು ತನ್ನ  ಜೇಬಿನಲ್ಲಿಟ್ಟು  ಅಲ್ಲೇ ಪಕ್ಕದಲ್ಲಿದ್ದ  ಕಟ್ಟೆಯ ಮೇಲೆ  ಮಲಗಿ  ಗಾಢ ನಿದ್ರೆಗೆ  ಜಾರಿದ್ದು ಮರುದಿನ ದಿನಾಂಕ:12-3-2023 ರಂದು ಬೆಳಿಗ್ಗೆ  ಸಮಯ 5.00 ಗಂಟೆಗೆ ಎಚ್ಚರವಾಗಿ  ನೋಡಿದಾಗ ತನ್ನ ಜೇಬಿನಲ್ಲಿದ್ದ ಓಪೋ ಮೊಬೈಲ್ ಫೋನ್  , ಎಟಿಎಮ್ ಕಾರ್ಡ್, ಹಾಗೂ ಡ್ರೈವಿಂಗ್ ಲೈಸೆನ್ಸ್ ನ್ನು ಯಾರೋ ಕಳ್ಳರು ಪಿರ್ಯಾದಿದಾರರಿಗೆ ಗೊತ್ತಾಗದಂತೆ ಕದ್ದುಕೊಂಡು ಹೋಗಿರುತ್ತಾರೆ. ಎಂಬಿತ್ಯಾದಿ.

Traffic South Police Station

ದಿನಾಂಕ:18-03-2023 ರಂದು ಪಿರ್ಯಾದಿ ಪ್ರದೀಶ್ (50 ವರ್ಷ) ರವರು ಬಿಸಿ ರೋಡ್ ಕಡೆಗೆ ಹೋಗಲು ಮೂಡ್ಡುಶೆಡ್ಡೆಯಿಂದ ಮಂಗಳೂರು ಕಡೆಗೆ ಹೋಗುವ ರೂಟ್ ನಂಬ್ರ: 3C ನಂದನ ಟ್ರಾವೆಲ್ಸ್ ಬಸ್ಸ್ ನಂಬ್ರ: KA-19-C-7858 ನೇದರಲ್ಲಿ ಹಿಂಬದಿಯ ಕೋನೆಯ ಸೀಟಿನ ಬಲಬದಿಯಲ್ಲಿ ಕುಳಿತು ಪ್ರಯಾಣಿಕರಾಗಿ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 9-15 ಗಂಟೆಗೆ ವಾಮಂಜೂರಿನ R.T.O ಸ್ಟಾಪ್ ಹತ್ತಿರ ತಲುಪಿದಾಗ ಬಸ್ಸಿನ ಚಾಲಕ ಅನಿಲ್ ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಅಲ್ಲಿ ರಸ್ತೆಗೆ ಅಳವಡಿಸಿದ ಹಂಪ್ಸ್ ವೊಂದನ್ನು ಹಾರಿಸಿಕೊಂಡು ಹೋದ ಪರಿಣಾಮ ಪಿರ್ಯಾದಿದಾರರು ಬಸ್ಸಿನೊಳಗೆ ಬಿದ್ದು ಬಸ್ಸಿನ ಕಬ್ಬಿಣದ ರಾಡ್ ಪಿರ್ಯಾದಿದಾರರ ಎಡಭಾಗದ ಪಕ್ಕೆಲುಬಿಗೆ ಹಾಗೂ ತೊಡೆಗೆ ತಾಗಿ ಅವರ ಎಡಭಾಗದ ಕಿಡ್ನಿಯಲ್ಲಿ ರಕ್ತಸ್ರಾವ ಹಾಗೂ ಎಡಬದಿ ಪಕ್ಕೆಲುಬು ಮತ್ತು ಎಡಬದಿ ತೊಡೆಗೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿದ್ದು ನಂತರ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿದ್ದು ಆ ನಂತರ ಬಸ್ಸಿನ ನಿರ್ವಾಹಕ ಹಾಗೂ ಚಾಲಕ ಪಿರ್ಯಾದಿದಾರರನ್ನು ಎಬ್ಬಿಸಿ ಉಪಚರಿಸಿ ಅವರನ್ನು ಚಿಕಿತ್ಸೆ ಬಗ್ಗೆ ವಾಮಂಜೂರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರ ಮಾವ ಪದ್ಮನಾಭ ಆಚಾರ್ಯ ರವರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Konaje PS     

ಪಿರ್ಯಾದಿ Ranjita ಚಿಕ್ಕಪ್ಪನ ಮಗಳು ನಿಖಿತಾಳ ಗಂಡನಾದ ಆರೋಪಿ ಹರೀಶ್ ನು ದಿನಾಂಕ 19-03-2023 ರಂದು ಬೆಳಿಗ್ಗೆ 10-30 ಗಂಟೆಗೆ  ಪಿರ್ಯಾದಿದಾರರ ಮನೆಗೆ ನಿಖಿತಾಳೊಂದಿಗೆ ಅವರ ಸ್ಕೂಟರ್ ನಲ್ಲಿ ಬಂದು ಸ್ಕೂಟರ್ ನಿಂದ ಇಳಿದವರೇ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟ್ಲಿಯಲ್ಲಿದ್ದ ಪೆಟ್ರೋಲ್ ನ್ನು ತನ್ನ  ಮೈ ಕೈಗೆ ಹಾಕಿ ನಂತರ ಅಲ್ಲಿಯೇ ಇದ್ದ ನಿಖಿತಾಳ ಮೈ ಗೆ ಹಾಕಿರುತ್ತಾನೆ. ಈ ಸಮಯ ಆತನ ದೊಡ್ಡಮ್ಮ  ರಾಧರವರು ಅವನ  ಕೈಯಲ್ಲಿದ್ದ ಬೆಂಕಿಪೊಟ್ಟಣವನ್ನು ಕಂಡು “ನೀನು ಏನು ಮಾಡುತ್ತೀದ್ದಿಯಾ” ಎಂದು ಹೇಳಿ ಅವರ ಬಳಿ ಹೋಗುತ್ತಿದ್ದಂತೆ ಏಕಾಏಕಿ ತನ್ನ ಕೈಯಿಂದ ಬೆಂಕಿಪೊಟ್ಟಣದಿಂದ  ಸಹಾಯದಿಂದ ಬೆಂಕಿಯನ್ನು ಕೊಟ್ಟು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ತಡೆಯಲು ಹೋಗಿದ್ದ  ರಾಧರವರನ್ನು ಅವರನ್ನು ಕೈಯಿಂದ ಅಪ್ಪಿ  ಹಿಡಿದಿರುತ್ತಾನೆ. ಮನೆಯವರ ಬೊಬ್ಬೆ ಕೇಳಿ ನೆರೆಕರೆಯವರಾದ ಕುಶಪ್ಪ ಶೆಟ್ಟಿಗಾರ್, ಉಮೇಶ್  ಮತ್ತಿತ್ತರರು  ಮನೆಗೆ ಬಂದು  ಹರೀಶ್ ರವರನ್ನು ಚಿಕಿತ್ಸೆಯ ಬಗ್ಗೆ  ಪಿರ್ಯಾದಿದಾರರ ಗಂಡ ರಮೇಶ್ ಮತ್ತು ಮೈದುನ ನವೀನ್  ರವರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹರೀಶ್ ನು ದಿನಾಂಕ 19-03-2023 ರಂದು ಸಂಜೆ 18-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.

ಮೃತ ಹರೀಶ್ ನು  ತನ್ನ ಹೆಂಡತಿ ನಿಖಿತಾಳ  ಬ್ಯಾಗ್ ನಲ್ಲಿ ಭಸ್ಮ ಮತ್ತು ಮಾತ್ರೆಯ ಕಟ್ಟು ಇರುವುದಾಗಿ ಅನುಮಾನಗೊಂಡು ಆಕೆಯ ಮೇಲೆ ಸಂಶಯದಿಂದ ಆಕೆಯನ್ನು  ಕೊಲೆ ಮಾಡುವ ಉದ್ದೇಶದಿಂದ ಆಕೆಗೆ  ಪೆಟ್ರೋಲ್ ಸುರಿದು ನಿಖಿತಾಳನ್ನು  ಕೊಲೆ ಮಾಡಲು ಪ್ರಯತ್ನಿಸಿರುವುದಲ್ಲದೇ  ಆತನು ಬೆಂಕಿ ಹಚ್ಚುವುದನ್ನು ಕಂಡು ಆತನನ್ನು ತಡೆಯಲು ಪ್ರಯತ್ನಿಸಿದ  ಪಿರ್ಯಾದಿದಾರರ ಅತ್ತೆ  ರಾಧರವರನ್ನು ಕೂಡ ಬೆಂಕಿ ಹಚ್ಚಿಕೊಂಡ ಬಳಿಕ ಅವರನ್ನು  ಅಪ್ಪಿಕೊಂಡು ಅವರಿಗೆ ಗಾಯವುಂಟು ಮಾಡಿರುತ್ತಾನೆ ಎಂಬಿತ್ಯಾದಿ

 

Bajpe PS

ಪಿರ್ಯಾದಿದಾರರು Gurappa Kanti ದಿನಾಂಕ:18-03-2023 ರಂದು ಪಿಸಿ ಸಂಜೀವ ರವರೊಂದಿಗೆ ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ ಕರ್ತವ್ಯದಲ್ಲಿದ್ದ ಸಮಯ ಸುಮಾರು 11-40 ಗಂಟೆ ಸಮಯಕ್ಕೆ ಬಜಪೆ ಠಾಣಾ ವ್ಯಾಪ್ತಿಯ ಕೆಂಜಾರು ಕಾನ ಕಂಬಳ ಮೈದಾನದ ಕಡೆಯಿಂದ ಧ್ವನಿವರ್ಧಕ ಶಬ್ದ ಬರುತ್ತಿದ್ದುದನ್ನು ಕೇಳಿಸಿಕೊಂಡು ರಾತ್ರಿ 12-00 ಗಂಟೆ ಸಮಯಕ್ಕೆ ಸದ್ರಿ ಸ್ಥಳಕ್ಕೆ ಹೋದಾಗ ಸದ್ರಿ ಸ್ಥಳದಲ್ಲಿ ಸುಮಾರು 50 ರಿಂದ 80 ಜನ ಸೇರಿದ್ದು ಅಲ್ಲಿ ಕ್ರಿಕೇಟ್ ಪಂದ್ಯಾಟ ನಡೆಯುತ್ತಿದ್ದು ಸದ್ರಿ ಸ್ಥಳದಲ್ಲಿ ವಿದ್ಯುತ್ ವ್ಯವಸ್ಥೆಯೊಂದಿಗೆ ಧ್ವನಿವರ್ಧಕ ಕೂಡಾ ಬಳಸುತ್ತಿದ್ದರು.ಸ್ಥಳದಲ್ಲಿ ಸೇರಿದ ಜನರಲ್ಲಿ ಈ ಪಂದ್ಯಾಟದ ಆಯೋಜಕರ ಬಗ್ಗೆ ವಿಚಾರಿಸುವಾಗ ದಿವಾಕರ ಸಾಲಿಯಾನ  ವಾಸ:ಕಾನ ಮನೆ ಕೆಂಜಾರು ಗ್ರಾಮ ಮತ್ತು ಅಂಚೆ ಮಂಗಳೂರು ತಾಲೂಕು ಎಂಬವರು ಬಳಿ ಬಂದು,ಸಂಗಮ್ ಕ್ರಿಕೇಟರ್ಸ ವತಿಯಿಂದ  ಪಂದ್ಯಾಟ ನಡೆಸುತ್ತಿದ್ದು ಈ ಪಂದ್ಯಾಟ ನಡೆಸಲು ಯಾವುದೇ ಅನುಮತಿ ಪಡೆದುಕೊಂಡಿಲ್ಲವೆಂದು ತಿಳಿಸಿದರು.ಈ ಪಂದ್ಯಾಟದ ಊಸ್ತುವಾರಿ ಬಗ್ಗೆ ಕೇಳಲಾಗಿ ನಾನೇ ಇದರ ಸ್ತುವಾರಿ ವಹಿಸಿಕೊಂಡಿರವುದಾಗಿ ತಿಳಿಸಿದ್ದು ನಂತರ ಸದ್ರಿಯವರಿಗೆ ಸಂಭಂದಿತ ಪ್ರಾಧಿಕಾರದಿಂದ ಅನುಮತಿಪಡೆಯದೇ ರಾತ್ರಿ ಸಮಯ ಧ್ವನಿವರ್ಧಕ ಬಳಸಿ ಕ್ರಿಕೇಟ್ ಪಂದ್ಯಾಟ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವುದರ ಬಗ್ಗೆ ಸೂಚಿಸಿ ಧ್ವನಿವರ್ಧಕ ಸಮೇತ ಕ್ರಿಕೇಟ್ ಪಂದ್ಯಾಟವನ್ನು ಬಂದ್ ಮಾಡಿಸಿ ಈ ಕ್ರಿಕೇಟ್ ಪಂದ್ಯಾಟದ ಆಯೋಜಕರಾದ ದಿವಾಕರ ಸಾಲಿಯಾನ ರವರು ಸಂಭಂದಿತ ಪ್ರಾಧಿಕಾರದಿಂದ ಅನುಮತಿ ಪಡೆಯದೆ ರಾತ್ರಿ ಸಮಯ ಧ್ವನಿವರ್ಧಕ ಬಳಸಿ ಕ್ರಿಕೇಟ್ ಪಂದ್ಯಾಟ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದುದರಿಂದ  ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Traffic South Police Station                  

ದಿನಾಂಕ 19-03-2023  ರಂದು ಪಿರ್ಯಾದಿ ಪದ್ಮನಾಭ ನಾಯ್ಕ್ ರವರು ಅವರ ಬಾಬ್ತು ಸ್ಕೂಟರ ನಂಬ್ರ KA-19-HG-8806  ನೇದರಲ್ಲಿ ಸವಾರರಾಗಿ ಹಾಗೂ ಅವರ ಹೆಂಡತಿಯಾದ ಶೋಭನಾಯ್ಕ್ ರವರನ್ನು ಸಹಸವಾರಳಾಗಿ ಕುಳ್ಳರಿಸಿಕೊಂಡು ಮಂಗಳೂರು ಕಡೆಯಿಂದ ದೇರಳಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಸಂಜೆ 4.30 ಗಂಟೆಗೆ  ಜಪ್ಪಿನಮೊಗೆರು ರಾ ಹೆ 66 ರಲ್ಲಿ ತಲಪುವಾಗ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲಬದಿಗೆ KL-14-X-1875  ನೇದರ ಚಾಲಕ ಎರಮ್ ಎಂಬುವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ ಸವಾರ ಹಾಗೂ ಸಹಸವಾರಳಾದ ಶೋಭನಾಯ್ಕ್ ರವರು ವಾಹನ ಸಮೇತ ರಸ್ತಗೆ ಬಿದ್ದು ಪಿರ್ಯಾದಿದಾರರಿಗೆ ಬಲಕಾಲು ಮೊಣಗಂಟಿಗೆ ಎಡಗೈಗೆ  ಹಾಗೂ ಬಲಗೈಗೆ ತರಚಿದ ಗಾಯ ಹಾಗೂ ಅವರ ಹೆಂಡತಿ ಶೋಭನಾಯ್ಕ್ ರವರಿಗೆ ಎಡಕಣ್ಣಿಗೆ ಹಣೆಗೆ ತರಚಿದ ಗಾಯ ಹಾಗೂ ಬಲಗೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಅಲ್ಲದೆ ಎಡಗೈ ಹಾಗೂ ಸೊಂಟ ಮತ್ತು ಬಲಗಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಯೆನಪೋಯ  ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Moodabidre PS

ದಿನಾಂಕ 19-03-2023 ರಂದು ಬೆಳಿಗ್ಗೆ 8.30 ಗಂಟೆಗೆ ಪಿರ್ಯಾದಿ Rathnakara Jain K ಮನೆಯವರು ಮತ್ತು ಪಿರ್ಯಾದಿದಾರರ ಬಾವ ಧೀರೇಂದ್ರ ಹಾಗೂ ಅವರ ಪತ್ನಿ ರವರೆಲ್ಲರು ಸೇರಿ ಮೂಡಬಿದ್ರೆಯ ಜೈನ ಪಾಠ ಶಾಲೆ ಎಂಬಲ್ಲಿ ಪಿರ್ಯಾದಿದಾರರ ಪತ್ನಿ ರವರ ತಿಥಿ ಕಾರ್ಯಕ್ರಮಕ್ಕೆ ಹೋಗಿದ್ದು, ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸು ಮನೆಗೆ ಸುಮಾರು 9.45 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಿಂದಿನ ಬಾಗಿಲನ್ನು ಯಾವುದೋ ಸಾದನವನ್ನು ಉಪಯೋಗಿಸಿ ಬಾಗಿಲನ್ನು ಮೀಟಿ ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರ ಬೆಡ್ ರೂಮಿನಲ್ಲಿರುವ ಕಪಾಟಿನಲ್ಲಿ 4 ಪವನ್ ತೂಕದ ಚಿನ್ನದ ನೆಕ್ಲೆಸ್-1, ಚಿನ್ನದ 3 ಉಂಗುರ(2 ಪವನ್), ಜುಮ್ಕಿ-1(1 ಪವನ್), ಕಿವಿ ಓಲೆ-3(2 ಪವನ್), ದೊಡ್ಡ ಕಿವಿ ಓಲೆ-1(1 ಪವನ್), ಕರಿಮಣಿ ಸರ-1(4 ಪವನ್), ಬಳೆ-2(4 ಪವನ್), ಚಿನ್ನದ ಕಡ-1(4 ಪವನ್), ಬ್ರಾಸ್ ಲೈಟ್-1(2 ಪವನ್) ಮತ್ತು ನಗದು 20,000/- ರೂ ನ್ನು ಕಳವು ಮಾಡಿಕೊಂಡು ಹೋಗಿದ್ದು ಹಾಗೂ ಪಿರ್ಯಾದಿದಾರರ ಮನೆಯ ಪಕ್ಕದಲ್ಲಿರುವ ಅವರ ಬಾವ ಧೀರೇಂದ್ರ ರವರ ಮನೆಯ ಮುಖ್ಯ ಬಾಗಿಲನ್ನು ಕಳ್ಳರು ಯಾವುದೋ ಸಾದನವನ್ನು ಉಪಯೋಗಿಸಿ ಬಾಗಿಲನ್ನು ಮೀಟಿ ತೆರೆದು ಮನೆಯ ಒಳಗೆ ಪ್ರವೇಶಿಸಿ ಧೀರೇಂದ್ರ ರವರ ಬೆಡ್ ರೂಮ್ ನಲ್ಲಿರುವ ಕಪಾಟಿನಲ್ಲಿದ್ದ ಚಿನ್ನದ ಮುತ್ತಿನ ಸರ-1(3 ಪವನ್), ಚಿನ್ನದ ಬಳೆ (2 ಪವನ್), ಚಿನ್ನದ ನಾಣ್ಯ (1 ಗ್ರಾಂ), ಬೆಳ್ಳಿಯ ಕಳಸ ಕನ್ನಡಿ-1, ಬೆಳ್ಳಿಯ ಲಕ್ಷ್ಮಿಯ ಮೂರ್ತಿ, ಬೆಳ್ಳಿಯ ಅರಿಶಿಣ ಕುಂಕುಮ ಬಟ್ಟಲು-1, ಬೆಳ್ಳಿಯ ಲೋಟ+ಬಟ್ಟಲು, ಬೆಳ್ಳಿಯ ನಾಣ್ಯ-1 ಮತ್ತು ನಗದು 60,000/- ರೂ ನ್ನು ಕೂಡ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನ ಆಗಿರುವ ಸೊತ್ತಿನ ಒಟ್ಟು ಮೌಲ್ಯ ಸುಮಾರು 9,50,000/- ರೂ ಆಗಿರುವುದಾಗಿ ಎಂಬಿತ್ಯಾದಿ.

Ullal PS

ಪಿರ್ಯಾದಿ ABIN EB  ಹೆಸರಿನಲ್ಲಿ ಪಯ್ಯನ್ನೂರು ಎ.ಆರ್ ಟಿ.ಓ ಕಚೇರಿಯಲ್ಲಿ ನೊಂದಣಿಯಾದ ಕೆ ಎಲ್ 34 ಇ 8014 ನೇ ನಂಬ್ರದ ಪಲ್ಸರ್ ಎನ್ ಎಸ್ 160 ಮೋಟಾರು ಬೈಕ್ ಹೊಂದಿರುತ್ತಾರೆ. ದಿನಾಂಕ:07-03-2023 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿದಾರರು ವಾಸ ಮಾಡಿಕೊಂಡಿರುವ ದೇರಳಕಟ್ಟೆಯ, ಮಚ್ಚಿ ಹೋಟೆಲ್ ಹಿಂಭಾಗದಲ್ಲಿ ಬಾಡಿಗೆ ರೂಮ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದು, ದಿನಾಂಕ:08-03-2023 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿದಾರರು ಕಾಲೇಜಿನ ಕಡೆಗೆ ಹೋಗಲೆಂದು ಪಾರ್ಕಿಂಗ್ ಮಾಡಿದ್ದ ಕೆ ಎಲ್ 34 ಇ 8014 ನೇ ನಂಬ್ರದ ಪಲ್ಸರ್ ಎನ್ ಎಸ್ 160 ಮೋಟಾರು ಬೈಕ್ ನ್ನು ನೋಡಿದಾಗ ಕಾಣಿಸದೇ ಇದ್ದು, ಈ ವಿಚಾರವನ್ನು ಪಿರ್ಯಾದಿದಾರರ ಸ್ನೇಹಿತರಾದ ಅಭಿಷೇಕ್ ಮತ್ತು ಇಸ್ಮಾಯಿಲ್ ತಿಳಿಸಿ, ನಂತರ ಪಿರ್ಯಾದಿದಾರು ಮತ್ತು ಸ್ನೇಹಿತರು  ಮಚ್ಚಿ ಹೋಟೆಲ್ ಬಳಿ, ದೇರಳಕಟ್ಟೆಯ ಬಳಿ, ಕುತ್ತಾರು ಮುಂತಾದ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು ಮೋಟಾರು ಬೈಕ್ ಪತ್ತೆಯಾಗಿರುವುದಿಲ್ಲ. ಮೋಟಾರು ಬೈಕ್ ಕಾಣೆಯಾಗಿದ್ದರಿಂದ ಈವರೆಗೂ ಹುಡುಕಾಟ ನಡೆಸಿದ್ದು, ಈವರೆಗೂ ಮೋಟಾರು ಬೈಕ್ ಪತ್ತೆಯಾಗಿರುವುದಿಲ್ಲ. ಮೋಟಾರು ಬೈಕ್ ನ್ನು  ಯಾರೋ ಕಳ್ಳರು ಕಳವು ಮಾಡಿದ್ದು, ಕಳವಾದ ಮೋಟಾರು ಬೈಕ್ ನ್ನು  ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 12:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080