ಅಭಿಪ್ರಾಯ / ಸಲಹೆಗಳು

Crime Reported in : : Mangalore Rural PS        

ಪಿರ್ಯಾದಿ Kanakaraj ದಾರರು ಮಂಗಳೂರು ತಾಲೂಕು ಕುಡುಪು ಗ್ರಾಮದ ಪಿಲಿಕುಮೇರು ಎಂಬಲ್ಲಿಯ ನಿವಾಸಿಯಾಗಿದ್ದು 3 ಜನ ಮಕ್ಕಳೊಂದಿಗೆ ಮನೆಯಲ್ಲಿರುವುದಾಗಿದೆ. ಪಿರ್ಯಾದಿದಾರರ ಮಗ ರಾಕೇಶ್ ಶೆಟ್ಟಿ ಎಂಬವರು ಶೇರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದವರು ದಿನಾಂಕ 07/11/2022 ರಂದು ಬೆಳಿಗ್ಗೆ 08.30 ಗಂಟೆಗೆ ಕೆಲಸಕ್ಕೆಂದು ಬ್ಯಾಗ್ ತೆಗೆದುಕೊಂಡು ಮನೆ ಯಿಂದ ಹೋದವನು ಆತನ ಮೊಬೈಲ್ ನಂಬ್ರ  ದಿಂದ ಪಿರ್ಯಾದಿದಾರರಿಗೆ ಫೋನ್ ಮಾಡಿ ಹೊಸಪೇಟೆಗೆ ಕೆಲಸಕ್ಕೆ ಹೋಗುತ್ತಿರುವುದಾಗಿ ಎರಡು ದಿವಸ ಬಿಟ್ಟು ಬರುವುದಾಗಿ ತಿಳಿಸಿರುತ್ತಾನೆ ಆದರೆ ಆತನು ಮರಳಿ ಮನೆಗೆ ಬರದೆ ಫೋನ್ ಮಾಡದೆ ದಿನಾಂಕ 14/11/2022 ರಂದು ಈ ಮೇಲ್ ಮೂಲಕ ಮೆಸೇಜ್ ಮಾಡಿ ಶುಕ್ರವಾರ ಬರುವುದಾಗಿ ತಿಳಿಸಿರುತ್ತಾನೆ. ರಾಕೇಶ್ ಶೆಟ್ಟಿಯು ಸಾಲ ತೆಗೆದುಕೊಂಡು ಹೋಗಿರುವುದಾಗಿ ಕೆಲವರು ಮನೆಯ ಹತ್ತಿರ ಬಂದು ತಿಳಿಸಿದಾಗ ಪಿರ್ಯಾದಿದಾರರು ದಿನಾಂಕ 21/11/2022 ರಂದು ಈ-ಮೇಲ್ ಮೆಸೆಜ್ ಮಾಡಿದಾಗ 15 ದಿನ ಬಿಟ್ಟು ಬರುವುದಾಗಿ ತಿಳಿಸಿದ್ದು ದಿನಾಂಕ 30/11/2022 ರಂದು ಪಿರ್ಯಾದಿದಾರರ ಮೊಬೈಲ್ ಗೆ ಈ-ಮೇಲ್ ಮೆಸೆಜ್ ಮಾಡಿ ತುರ್ತು ಕೆಲಸವಿರುವುದರಿಂದ 5 ದಿನ ಬಿಟ್ಟು ಬರುವುದಾಗಿ ತಿಳಿಸಿ ದಿನಾಂಕ 05/12/2022 ರಂದು ಪುನಃ ಈ-ಮೇಲ್ ಮೆಸೆಜ್ ಮಾಡಿ 15 ದಿನಗಳ ನಂತರ ಬರುವುದಾಗಿ ತಿಳಿಸಿ ನಂತರ ದಿನಾಂಕ 14/12/2022 ರಂದು ಈ-ಮೇಲ್ ಮೆಸೆಜ್ ಮಾಡಿ ಮುಂಬೈಯಿಂದ ದೆಹಲಿಗೆ ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ ನಂತರ ಇದುವರೆಗೆ ಆತನ ಮೆಸೆಜ್ ಬಂದಿರುವುದಿಲ್ಲ ಕಾಣೆಯಾದ ರಾಕೇಶ್ ಶೆಟ್ಟಿಯು ಶೇರ್ ಮಾರ್ಕೆಟ್ ಗೆ ಬೇಕಾಗಿ ಸಾಲ ಮಾಡಿದ್ದು ಸಾಲವನ್ನು ತೀರಿಸುವ ಸಲುವಾಗಿ ಬೇರೆ ಕಡೆಗೆ ಕೆಲಸಕ್ಕೆ ಹೋಗಿರಬಹುದು ಅಥವಾ ಸಾಲಗಾರರಿಗೆ ಹಣ ಕೊಡಲು ಸಾಧ್ಯವಾಗದೇ ಇದ್ದುದರಿಂದ ಮನೆ ಬಿಟ್ಟು ಹೋಗಿರುವುದಾಗಿದೆ ಕಾಣೆಯಾದ ಪಿರ್ಯಾದಿದಾರರ ಮಗನಾದ ರಾಕೇಶ್ ಶೆಟ್ಟಿಯನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ

 

Moodabidre PS

ದಿನಾಂಕ 19-12-2022 ರಂದು ಪಿರ್ಯಾದು Smt Supritha ದಾರರ ಅಣ್ಣನಾದ ಸುದರ್ಶನ್ ರವರು ಅವರ ಬಾಬ್ತು ಪಿಕಪ್ ವಾಹನ ನಂಬ್ರ ಕೆಎ-19-ಎಎ-4725 ನೇದರಲ್ಲಿ ರಮೇಶ್ ಎಂಬಾತನನ್ನು ಕುಳ್ಳಿರಿಸಿಕೊಂಡು ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಮದ್ಯಾಹ್ನ 2.30 ಗಂಟೆಗೆ ತೋಡಾರಿನ ವಿಜಯಾ ಬ್ಯಾಂಕ್ ಹತ್ತಿರ ತಲುಪುತ್ತಿದ್ದಂತೆ ಮೂದಬಿದ್ರೆ ಕಡೆಯಿಂದ ಕೆಎ-20-ಡಿ-7996 ನೇ ನಂಬ್ರದ ಟಿಪ್ಪರ್ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಕಪ್ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸುದರ್ಶನ್ ರವರಿಗೆ ಕುತ್ತಿಗೆಯ ಎಡಭಾಗಕ್ಕೆ, ಮುಖಕ್ಕೆ, ಎದೆಗೆ ಗಾಯಗಳಾಗಿದ್ದು, ರಮೇಶ್ ರವರಿಗೆ ಎಡಕಾಲಿಗೆ, ಮುಖಕ್ಕೆ ಗಾಯಗಳಾಗಿರುತ್ತದೆ. ಇವರಿಬ್ಬರನ್ನೂ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Traffic North Police Station               

ಪಿರ್ಯಾದಿ SHAROON ದಾರರ ತಂದೆ ಬಾವುಂಞ್ಣ (57)ರವರು ದಿನಾಂಕ: 17/12/2022 ರಂದು ಸಂಜೆ ಮನೆಯಿಂದ ಹೊರಟು ಅಲ್ಲೆ ಸಮೀಪದ ಮಸೀದಿಗೆ ನಡೆದುಕೊಂಡು ಹೋಗುವರೇ ಸಂಜೆ ಸುಮಾರು 6.00 ಗಂಟೆಗೆ 6ನೇ ಬ್ಲಾಕ್ ಕೃಷ್ಣಾಪುರ, ಫಿಜಾ ಕಂಪೌಂಡ್ ಕಡೆಯಿಂದ ಕೃಷ್ಣಾ ಮಂದಿರದ ಕಡೆಗೆ ರಸ್ತೆ ದಾಟುವ ಸಮಯ ಚೊಕ್ಕಬೆಟ್ಟು ಕಡೆಯಿಂದ ಕಾಟಿಪಳ್ಳ ಕಡೆಗೆ ದ್ವಿಚಕ್ರ ವಾಹನವೊಂದರಲ್ಲಿ ಅದರ ಸವಾರನು ದುಡುಕುತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಮದ್ಯದಲ್ಲಿದ್ದ ಬಹುನಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕಾಂಕ್ರೀಟ್ ರಸ್ತೆಗೆ ಬಿದ್ದು ಅವರ ಬಲ ಕಣ್ಣಿನ ಬಳಿ ತೀವ್ರ ತರಹದ ಗಾಯವಾಗಿದ್ದು, ಅಪಘಾತ ಪಡಿಸಿದ ದ್ವಿಚಕ್ರ ವಾಹನ ಸವಾರನು ಅಪಘಾತ ಪಡಿಸಿದ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಹೋಗಿರುತ್ತಾನೆ, ಹಾಗೂ ಈ ದ್ವಿಚಕ್ರ ವಾಹನದ ಬಗ್ಗೆ ಯಾವುದೇ ಮಾಹಿತಿ ಕಂಡು ಬಂದಿರುವುದಿಲ್ಲ ಹಾಗೂ ಗಾಯಾಳು ಬಾವುಂಞ್ಣಯವರು ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 20-12-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080