ಅಭಿಪ್ರಾಯ / ಸಲಹೆಗಳು

Crime Reported in :Traffic North Police Station                                                 

ಪಿರ್ಯಾದಿ ತೇಜಸ್ (20) ಎಂಬವರು ನಿನ್ನೆ ದಿನ ದಿನಾಂಕ 20-01-2023 ರಂದು ಸಂಜೆ ಚಂಡೆ ಕಾರ್ಯಕ್ರಮಕ್ಕೆ NITK ತೆರಳಿದ್ದು ಕಾರ್ಯಕ್ರಮ ಮುಗಿಸಿ ಅವರ ಸ್ನೇಹಿತನಾದ ರಕ್ಷಿತ್ ನ ಬಾಬ್ತು  KA-19-HB-1056 ನಂಬ್ರದ ಸ್ಕೂಟರಿನಲ್ಲಿ ಸಹಸವಾರರಾಗಿ ಕುಳಿತುಕೊಂಡು ರಕ್ಷಿತನು ಸ್ಕೂಟರನ್ನು ಸವಾರಿ ಮಾಡಿಕೊಂಡು NITK ಯಿಂದ ಮನೆ ಕಡೆಗೆ ಬರುತ್ತಿರುವಾಗ ರಾತ್ರಿ ಸುಮಾರು 9:30 ಗಂಟೆಗೆ ಮಂಗಳೂರು ತಾಲೂಕು, ತಡಂಬೈಲು ಮಾರಿಗುಡಿ ಹತ್ತಿರ ರಸ್ತೆ ವಿಭಾಜಕದಲ್ಲಿ ಮಂಗಳೂರು ಉಡುಪಿ ರಸ್ತೆಯನ್ನು ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಕಾರು ನಂಬ್ರ KA-03ME-8420 ನೇಯದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ ಮತ್ತು ರಕ್ಷಿತ್ ರವರು ಸ್ಕೂಟರ್ ಸಮೇತ ರಸ್ತೆ ಬಿದ್ದು ಫಿರ್ಯಾದಿದಾರರ ಹೊಟ್ಟೆಗೆ ಎಡಬದಿಯ ರಿಬ್ಸ್ ಗೆ ಗುದ್ದಿದ ಗಾಯ, ಎರಡೂ ಕಾಲಿನ ಮೊಣಗಂಟಿನ ಬಳಿ ಹಾಗೂ ಎಡಕಾಲಿನ ಕೋಲು ಕಾಲಿಗೆ ತರಚಿದ ಗಾಯವಾಗಿದ್ದು ಗಾಯಾಳು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಪದ್ಮಾವತಿ ಆಸ್ಪತ್ರೆಗ ಕರೆದುಕೊಂಡು ಹೋಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಫಘಾತದಿಂದ ಸ್ಕೂಟರ್ ಸವಾರ ರಕ್ಷಿತ್ ನಿಗೆ ಯಾವುದೇ ಗಾಯ ಆಗಿರುವುದಿಲ್ಲ ಎಂಬಿತ್ಯಾದಿ.

 

Crime Reported in :Moodabidre PS

ದಿನಾಂಕ 19-01-2023 ರಂದು ಲೋಕೇಶ್ ನು ಯಾವುದೋ ಗಲಾಟೆಯ ವಿಚಾರದಲ್ಲಿ ತೀರ್ಮಾನ ಮಾಡಲು ಪಿರ್ಯಾದಿ Prem Kumar ಒಂಟಿಕಟ್ಟೆಗೆ ಬರಲು ತಿಳಿಸಿದಂತೆ ಸಂಜೆ ಸುಮಾರು 8.00 ಗಂಟೆಗೆ ಪಿರ್ಯಾದುದಾರರು ಸುಧೀರ್ ಶೆಟ್ಟಿ ಮತ್ತು ಜಗದೀಶ್‌ರೊಂದಿಗೆ ಒಂಟಿಕಟ್ಟೆಯ ಸೃಷ್ಟಿ ಗಾರ್ಡನ್ ಬಳಿ ಬಂದಿದ್ದು, ಅಲ್ಲಿ ಪ್ರಕಾಶ್ ಕೋಟ್ಯಾನ್, ಲೋಕೇಶ್ ಮತ್ತು ಅಶ್ವಿತ್ ಹಾಗೂ ಇತರರು ಇದ್ದು, ನಮ್ಮೊಳಗೆ ಮಾತುಕತೆ ಆಗುತ್ತಿರುವ ಸಂದಂರ್ಭ ಅಶ್ವಿತನು ಪಿರ್ಯಾದುದಾರರ ಹಿಂದಿನಿಂದ ಬಂದು ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಬಳಿಕ ಪ್ರಕಾಶ್ ಮತ್ತು ಲೋಕೇಶ್ ರವರು ಪಿರ್ಯಾದುದಾರರಿಗೆ ಹಾಗೂ ಸುದೀರ್ ಮತ್ತು ಜಗದೀಶ್‌ನಿಗೆ ಕೈಯಿಂದ ಹಲ್ಲೆಯನ್ನು ಮಾಡಿರುತ್ತಾರೆ. ಈ ಹಲ್ಲೆಯಿಂದ ಪಿರ್ಯಾದುದಾರರ ಬಲಭುಜಕ್ಕೆ ಒಳನೋವು, ಸುದೀರ್‌ನ ಎಡಕೈ ಮತ್ತು ಬಲಕಾಲಿಗೆ ಗುದ್ದಿದ ನೋವು, ಜಗದೀಶನ ಬಲಮೊಣಕೈಗೆ ಮತ್ತು ಭುಜಕ್ಕೆ ಗುದ್ದಿದ ಒಳನೋವಾಗಿದ್ದು, ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

                   

Crime Reported in : Mangalore Rural PS

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಪಿರ್ಯಾದಿ Mohammed Sharook ಅಣ್ಣ ಶಫೀಕ್ ಎಂಬವರು ಅಲ್ಲಿಂದ ಯಾರಿಗೋ ತಲುಪಿಸಲು ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಆರೋಪಿ ತಲ್ಹತ್ ಎಂಬಾತನಿಗೆ ಯಾರೋ ಸುಳ್ಳು ಮಾಹಿತಿಯನ್ನು ನೀಡಿದ್ದನ್ನು ನಿಜವೆಂದು ತಿಳಿದುಕೊಂಡ ತಲ್ಹತ್ ಎಂಬಾತನು  ಆತನ  ಸಹಚರರಾದ ಸಿದ್ದೀಕ್ ಕರ್ವೇಲ್ @ ಜೆ.ಸಿ.ಬಿ ಸಿದ್ದಿಕ್, ಪಝಲ್ ಮಲ್ಲೂರು, ಶಾಫಿ ಗಡಿಯಾರ, ಇರ್ಫಾನ್ ದೇರಳಕಟ್ಟೆ, ಮೊಹಮ್ಮದ್ ಇರ್ಷಾದ್ ಮತ್ತು ಇತರರು ಪಿರ್ಯಾದಿದಾರರ ಅಣ್ಣ ಶಫೀಕ್ರವರು ಚಿನ್ನಾಭರಣವನ್ನು ಎಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆಂದು ತಿಳಿದು ದಿನಾಂಕ: 19-01-2023 ರಂದು ಪುತ್ತೂರಿನಲ್ಲಿದ್ದ ಪಿರ್ಯಾದಿದಾರರನ್ನು ಪೆರ್ನೆ ಎಂಬಲ್ಲಿಗೆ ಬರಲು ಹೇಳಿದಾಗ ಅಲ್ಲಿಗೆ ಹೋದ ಪಿರ್ಯಾದಿದಾರರನ್ನು ಆ ಮೊದಲೇ ಕಾರಿನಲ್ಲಿದ್ದ ಪಿರ್ಯಾದಿದಾರರ ಅಣ್ಣ ನಿಜಾಮ್ ರವರನ್ನು ಯಾವುದೋ ಅಪರಾಧ ಮಾಡುವ ಉದ್ಧೇಶದಿಂದ ಅಕ್ರಮಕೂಟ ಸೇರಿಕೊಂಡು ಸಾಯಂಕಾಲ 5-00 ಗಂಟೆಯಿಂದ ರಾತ್ರಿ ಸುಮಾರು 8-00 ಗಂಟೆಯವರೆಗೆ ಮಲ್ಲೂರಿನ ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ, ಪಿರ್ಯಾದಿದಾರರನ್ನುದ್ಧೇಶಿಸಿ ಬ್ಯಾರಿ ಭಾಷೆಯಲ್ಲಿ ಬೇವರ್ಸಿ, ರಂಡೇ ಮಗನೇ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಮರದ ಸೋಂಟೆಯಿಂದ ಹಲ್ಲೆ ನಡೆಸಿ, ಪಿರ್ಯಾದಿದಾರರಲ್ಲಿದ್ದ ನಗದು ಹಣ ರೂ:  22,500/- ಮತ್ತು ಒಪ್ಪೊ ಮೊಬೈಲ್ ಫೋನನ್ನು ಹಾಗೂ ಪಿರ್ಯಾದಿದಾರರ ಅಣ್ಣ ನಿಜಾಮ್ರವರ ಪ್ಯಾಂಟ್ ಜೇಬಿನಲ್ಲಿದ್ದ ವಿವೋ ಮೊಬೈಲ್ ಫೋನನ್ನು ಬಲಾತ್ಕಾರವಾಗಿ ಕಸಿದುಕೊಂಡು ದರೋಡೆ ಮಾಡಿದ್ದಲ್ಲದೇ ಪಿರ್ಯಾದಿದಾರರನ್ನು ಮತ್ತು ಅವರ ಅಣ್ಣನನ್ನು ಬಿಡುಗಡೆ ಮಾಡಬೇಕಾದರೆ 04 ಲಕ್ಷ ರೂಪಾಯಿಯನ್ನು ತರುವಂತೆ ಬೇಡಿಕೆಯಿಟ್ಟು ಪಿರ್ಯಾದಿದಾರರ ಅಣ್ಣ ನಿಜಾಮ್ ರವರನ್ನು ಕಳುಹಿಸಿದ ಬಳಿಕ ಅದೇ ದಿನ ರಾತ್ರಿ ಆರೋಪಿಗಳು ಯಾವುದೋ ಉದ್ಧೇಶದಿಂದ ತಮ್ಮ ಬಾಬ್ತು ಆಲ್ಟೋ ಕಾರು ನಂಬ್ರ: ಕೆಎ-19-ಎಂಎ-3457 ರಲ್ಲಿ ಪಿರ್ಯಾದಿದಾರರನ್ನು ಕುಳ್ಳಿರಿಸಿಕೊಂಡು ಅರ್ಕುಳಕ್ಕೆ ಬಂದು ಅಲ್ಲಿ ಮೂತ್ರ ಮಾಡಲು ಕಾರನ್ನು ನಿಲ್ಲಿಸಿದ ಸಮಯ ಅಲ್ಲಿಗೆ ಬಂದ ಪೊಲೀಸರು ಕಾರಿನ ಬಳಿಗೆ ಬರುವುದನ್ನು ಕಂಡು ಪಿರ್ಯಾದಿದಾರರು ಸಹಾಯಕ್ಕಾಗಿ ಬೊಬ್ಬೆ ಹಾಕಲು ಪ್ರಯತ್ನಿಸಿದರೂ ಪಿರ್ಯಾದಿದಾರರ ಪಕ್ಕದಲ್ಲಿ ಕುಳಿತಿದ್ದವನು ಬೊಬ್ಬೆ ಹಾಕದಂತೆ ಬಾಯಿಯನ್ನು ಕೈಯಿಂದ ಒತ್ತಿ ಹಿಡಿದಾಗ ಅಲ್ಲಿಗೆ ಬೈಕಿನಲ್ಲಿ ಬಂದ ಪೊಲೀಸರು ಕಾರಿನ ಬಳಿಗೆ ಬಂದು ಕಾರಿನ ಹೊರಗಡೆ ನಿಂತಿದ್ದ ಫಝಲ್ ನನ್ನು ವಿಚಾರಿಸುತ್ತಿರುವಾಗ ಸಿದ್ದೀಕನು ಕಲ್ಲುಗಳನ್ನು ಹೆಕ್ಕಿ ಪೊಲೀಸರ ಮೇಲೆ ಬಿಸಾಡಿದಾಗ ಪೊಲೀಸರು ಸ್ವಲ್ಪ ಹಿಂದೆ ಸರಿದಾಗ ಫಝಲ್ ಮತ್ತು ಸಿದ್ದಿಕ್ ರವರು ಕೂಡಲೇ ಕಾರಿನೊಳಗೆ ಕುಳಿತ ತಕ್ಷಣ ಚಾಲಕ ಶಾಫಿ ಗಡಿಯಾರ ಎಂಬಾತನಿಗೆ ಕಾರಿನಲ್ಲಿದ್ದ ಇತರರು ಪೊಲೀಸರ ಮೇಲೆಯೇ ಕಾರನ್ನು ಚಲಾಯಿಸಿಕೊಂಡು ಹೋಗಬೇಕು ಕಾರನ್ನು ನಿಲ್ಲಿಸಬಾರದು ಎಂದು ಹೇಳಿದಾಗ ಶಾಫಿಯು ಕಾರನ್ನು ವೇಗವಾಗಿ ಚಲಾಯಿಸಿ ಪೊಲೀಸರ ಮೇಲೆ ಹಾಯಿಸಲು ಹೋದಾಗ ಪೊಲೀಸರು  ಪಕ್ಕಕ್ಕೆ  ಹಾರಿ ಪ್ರಾಣಾಪಾಯದಿಂದ ಪಾರಾದ ಬಳಿಕ ಆರೋಪಿಗಳು ಕಾರನ್ನು ಚಲಾಯಿಸಿಕೊಂಡು ವಾಪಾಸು ಮಲ್ಲೂರಿಗೆ ಬಂದು ಪಿರ್ಯಾದಿದಾರರನ್ನು ಕೋಣೆಯಲ್ಲಿ ಕೂಡಿ ಹಾಕಿದ್ದು, ದಿನಾಂಕ: 20-01-2023 ರಂದು ಪೊಲೀಸರು ಬಂದಾಗ ಮನೆಯಲ್ಲಿದ್ದ ಆರೋಪಿಗಳ ಪೈಕಿ ಕೆಲವರು ಓಡಿ ಹೋಗಿದ್ದು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಗಳಾದ ಕರ್ವೇಲ್ ಸಿದ್ದಿಕ್,  ಶಾಫಿ ಗಡಿಯಾರ, ಇರ್ಫಾನ್ ದೇರಳಕಟ್ಟೆ ಮತ್ತು ಮಹಮ್ಮದ್ ಇರ್ಷಾದ್ ನನ್ನು  ವಶಕ್ಕೆ ಪಡೆದುಕೊಂಡಿದ್ದು ಕೋಣೆಯೊಳಗಡೆ ಕುಳಿತಿದ್ದ ಪಿರ್ಯಾದಿದಾರರನ್ನು ಪೊಲೀಸರು ಕರೆದುಕೊಂಡು ಬಂದಿರುವುದು ಎಂಬಿತ್ಯಾದಿ.

Crime Reported in : Moodabidre PS

ದಿನಾಂಕ 19-01-2023 ರಂದು ರಾತ್ರಿ ಸುಮಾರು 8.30 ಗಂಟೆಯ ಸಮಯಕ್ಕೆ ಪಿರ್ಯಾದುದಾರರು Asheeth ತನ್ನ ಸ್ನೇಹಿತ ಪ್ರಕಾಶ್ ಕೋಟ್ಯಾನ್ ರವರೊಂದಿಗೆ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ಒಂಟಿಕಟ್ಟೆಯ ಸೃಷ್ಟಿ ಹಾಲ್ ಹತ್ತಿರವಿರುವ ಅಂಗಡಿ ಬಳಿ 4-5 ಜನ ಪರಿಚಯದ ಪ್ರೇಮ್, ಜಗದೀಶ್, ಸುದೀರ್ ಶೆಟ್ಟಿ ಮತ್ತು ಅವಿನಾಶ್ ಸಾಲ್ಯಾನ್ ಎಂಬುವರು ಒಂಟಿಕಟ್ಟೆಯ ಲೋಕೇಶ್ ಎಂಬುವರ ಜೊತೆ ಗಲಾಟೆ ಮಾಡುತ್ತಿರುವುದನ್ನು ನೋಡಿ ಪಿರ್ಯಾದುದಾರರು ಅವರುಗಳಲ್ಲಿ ಗಲಾಟೆ ಮಾಡದಂತೆ ಸಮಾದಾನಿಸುತ್ತಿರುವ ಸಮಯ ಪಿರ್ಯಾದುದಾರರಿಗೆ ’ಬೇವರ್ಸಿಗಳೇ ನಿಮಗೆ ಯಾಕೆ, ನಾವು ಏನಾದರೂ ಮಾಡುತ್ತೇವೆ’ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಪ್ರೇಮ್ ಎಂಬಾತನು ಏಕಾ ಏಕಿಯಾಗಿ ಅಲ್ಲೇ ಇದ್ದ ಸೋಡಾ ಬಾಟಲಿಯಿಂದ ಪಿರ್ಯಾದುದಾರರ ತಲೆಗೆ ಹೊಡೆದಿದ್ದರಿಂದ ಪಿರ್ಯಾದುದಾರರ ತಲೆಗೆ ರಕ್ತ ಗಾಯವಾಗಿದ್ದು ಹಾಗೂ ಪಿರ್ಯಾದುದಾರರ ಸ್ನೇಹಿತ ಪ್ರಕಾಶ್ ಕೋಟ್ಯಾನ್ ರವರಿಗೆ ಜಗದೀಶ್ ಮತ್ತು ಸುಧೀರ್ ಶೆಟ್ಟಿ ಸೇರಿ ಸೋಡಾ ಬಾಟಲಿಯನ್ನು ಎಸೆದಿದ್ದು, ಇದರಿಂದ ಪ್ರಕಾಶ್ ಕೋಟ್ಯಾನ್ ರವರ ತಲೆಗೆ ಗಾಯವಾಗಿರುತ್ತದೆ. ಅದೇ ಸಮಯಕ್ಕೆ ಪಿರ್ಯಾದುದಾರ ಪರಿಚಯದ ನಿತೇಶ್ ದೇವಾಡಿಗ ಬಂದಿದ್ದನ್ನು ನೋಡಿ ಅವಿನಾಶ್ ಸಾಲ್ಯಾನ್ ಎಂಬಾತನು ತಲವಾರ್‌ವೊಂದನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ನಿತೇಶ್ ದೇವಾಡಿಗನನ್ನು ಓಡಿಸಿ ಬೆದರಿಸಿದ್ದು, ಅದೇ ಸಮಯಕ್ಕೆ ಪಿರ್ಯಾದುದಾರರು ಬೊಬ್ಬೆ ಹಾಕಿದ್ದು ಅಲ್ಲಿಗೆ ಜನರು ಬರುವುದನ್ನು ನೋಡಿ ಆ ನಾಲ್ಕು ಮಂದಿ ಅವರುಗಳು ಬಂದಿದ್ದ ಕಾರಿನಲ್ಲಿ ಹೊರಟು ಹೋಗುವಾಗ ’ಬೇವರ್ಸಿಗಳೇ ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಒಡ್ಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-01-2023 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080