Crime Reported in : Mulki PS
ಪಿರ್ಯಾದಿ Smt Salma Banu ಗಂಡನಾದ ಯಾಕೂಬ್ ಖಾನ್ ರವರು ಗಾರೆ ಕೆಲಸದವರೊಂದಿಗೆ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ:19.03.2023 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಈತನಕ ಮನೆಗೆ ಬಾರದೆ ಇದ್ದು ಈ ಬಗ್ಗೆ ತನ್ನ ಗಂಡ ಕೆಲಸ ಮಾಡುವ ಜಾಗದಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಎಂಬಿತ್ಯಾದಿ
ಕಾಣೆಯಾದವರ ಚಹರೆ:-
1 ) ಹೆಸರು: ಯಾಕೂಬ್ ಖಾನ್ ಪ್ರಾಯ 40 ವರ್ಷ
ಎತ್ತರ: 6 ಅಡಿ, ಮೈಬಣ್ಣ: ಎಣ್ಣೆ ಕಪ್ಪು ಮೈ ಬಣ್ಣ, ಮೈಕಟ್ಟು: ಸಪೂರ ಶರೀರ
ಧರಿಸಿರುವ ಬಟ್ಟೆ: ಕೆಂಪು ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಗೊತ್ತಿರುವ ಭಾಷೆಗಳು: ಕನ್ನಡ ,ಮಳಯಾಲಂ,ಉರ್ದು.
Crime Reported in : Mangalore East Traffic PS
ಪಿರ್ಯಾದಿ ಮನೋಜ್ ಶೆಟ್ಟಿ ರವರು ದಿನಾಂಕ 20-03-2023 ರಂದು 00.45 ಗಂಟೆಗೆ ಮನೆಯಲ್ಲಿರುವ ಸಮಯ ಸಾರ್ವಜನಿಕರೊಬ್ಬರು ಕರೆ ಮಾಡಿ ಪಿರ್ಯಾದಿದಾರರ ಅಣ್ಣನಾದ ರಾಜೇಶ್ ಶೆಟ್ಟಿ ರವರಿಗೆ ಅಪಘಾತವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಆಸ್ಪತ್ರೆಗೆ ಬಂದು ಅವರ ಅಣ್ಣ ರಾಜೇಶ್ ಶೆಟ್ಟಿ ರವರನ್ನು ವಿಚಾರಿಸಿದಾಗ ದಿನಾಂಕ 19-03-2023 ರಂದು ರಾತ್ರಿ ಕದ್ರಿಯಲ್ಲಿ ಯಕ್ಷಗಾನ ನೋಡಲು ಹೋಗಿದ್ದವರು ದಿನಾಂಕ 20-03-2023 ರಂದು ಬೆಳಗಿನ ಜಾವ 00.20 ಗಂಟೆಗೆ ಅವರ ಬಾಬ್ತು KA-19-HF-3926 ನೊಂದಣಿ ನಂಬ್ರದ ಸ್ಕೂಟರಿನಲ್ಲಿ ಸವಾರನಾಗಿ ಬಲ್ಮಠ ಕಡೆಯಿಂದ ಬೆಂದೂರ್ ವೆಲ್ ಜಂಕ್ಷನ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ಬೆಂದೂರ್ ವೆಲ್ ರಾಧಾ ಮೆಡಿಕಲ್ ನ ಎದುರುಗಡೆ ತಲುಪಿದಾಗ ಬಿಳಿ ಬಣ್ಣದ ಕಾರೊಂದನ್ನು ಅದರ ಚಾಲಕ ಕೊಲಾಸೋ ಆಸ್ಪತ್ರೆಯ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಎಡಗಡೆಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರ ಅಣ್ಣ ರಾಜೇಶ್ ಶೆಟ್ಟಿ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆಯ ಹಿಂಬದಿಗೆ ಗುದ್ದಿದ ನಮೂನೆಯ ಒಳ ನೋವಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು ಅಪಘಾತದಲ್ಲಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಗಾಯಾಳು ರಾಜೇಶ್ ಶೆಟ್ಟಿ ರವರನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿಯೇ ಇದ್ದುದರಿಂದ ಹಾಗೂ ಕೇಸ್ ದಾಖಲಿಸುವ ಬಗ್ಗೆ ಪರಿಚಯಸ್ಥರಲ್ಲಿ ಮತ್ತು ಮನೆಯವರಲ್ಲಿ ಚರ್ಚಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಅಪಘಾತಪಡಿಸಿದ ಕಾರು ಚಾಲಕನು ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ, ಅಪಘಾತವಾಗಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೇ ಹಾಗೂ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಕಾರು ನಂಬ್ರ ತಿಳಿದು ಬಂದಿರುವುದಿಲ್ಲ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
Mulki PS
ದಿನಾಂಕ 01-03-2023 ರಂದು ಪಿರ್ಯಾದಿ Adiveppa Shivappa Bevinakatte ಕೂಲಿ ಕೆಲಸದ ನಿಮಿತ್ತ ಕಿನ್ನಿಗೋಳಿಗೆ ಹೋಗಿ ಸಂಜೆ ಕೆಲಸ ಮುಗಿಸಿ ಮನೆಗೆ ಬರುವಾಗ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಉಮಾದೇವಿ ಹಾಗೂ ಮಗಳಾದ ಪ್ರಾಯ 2 ವರ್ಷ ರವರು ಮನೆಯಲ್ಲಿ ಇರಲಿಲ್ಲ, ಪಿರ್ಯಾದಿದಾರರು ವಾಸ ಮಾಡುತ್ತಿದ್ದ ಅಪಾರ್ಟಮೆಂಟ್ ನ ಮಾಲಕ ಆಶ್ರಪ್ ರವರಿಗೆ ವಿಚಾರಿಸಿದಾಗ ನಿಮ್ಮ ಹೆಂಡತಿ ಉಮಾದೇವಿಯು ಆಕೆಯ ತವರು ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿರುತ್ತಾರೆ ಎಂಬುದಾಗಿ ಆಶ್ರಪ್ ರವರು ಪಿರ್ಯಾದಿದಾರರಿಗೆ ತಿಳಿಸಿದರು. ನಂತರ ಪಿರ್ಯಾದಿದಾರರು ತನ್ನಲ್ಲಿ ಮೊಬೈಲ್ ಇಲ್ಲದ ಕಾರಣ ತನ್ನ ಗೆಳಯನ ಮೊಬೈಲ್ ನಿಂದ ಆಕೆಯ ಮೊಬೈಲ್ ಕರೆಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಪ್ ಅಗಿರುತ್ತದೆ. ತವರು ಮನೆಗೆ ಹೋಗಿರಬಹುದೆಂದು ಭಾವಿಸಿದ್ದು ಆಕೆಯ ತವರು ಮನೆಗೆ ಸಂಪರ್ಕಿಸಲು ಸಾಧ್ಯವಾಗಿರುವುದಿಲ್ಲ. ಪಿರ್ಯಾದಿದಾರರು ಹೆಂಡತಿ ಹಾಗೂ ಮಗುವಿನ ಪತ್ತೆ ಬಗ್ಗೆ ಮುಲ್ಕಿ ಸರಹದ್ದಿನಲ್ಲಿ, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಹುಡುಕಾಡಿದ್ದು ನಂತರ ಹೆಂಡತಿಯ ಭಾವಚಿತ್ರ ಸಂಗ್ರಹ ಮಾಡುವರೇ ಬೆಳಗಾವಿಯಲ್ಲಿರುವ ತನ್ನ ಅಣ್ಣ ನಾಗಪ್ಪ ರವರ ಮನೆಗೆ ಹೋಗಿ ಬಂದಿದ್ದು ದೂರು ನೀಡಲು ತಡವಾಗಿರುತ್ತದೆ. ಮಗುವಿನ ಭಾವಚಿತ್ರವನ್ನು ಹುಡುಕಾಡಿದಲ್ಲಿ ಎಲ್ಲಿಯೂ ಸಿಕ್ಕಿರುವುದಿಲ್ಲ ಪಿರ್ಯಾದಿದಾರರ ಹೆಂಡತಿಯು 2 ವರ್ಷ ಪ್ರಾಯದ ಮಗಳನ್ನು ಕರೆದುಕೊಂಡು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇತರ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿವುದಾಗಿದೆ.
ಕಾಣೆಯಾದವರ ಚಹರೆ:-
1 ) ಹೆಸರು: ಉಮಾದೇವಿ ಪ್ರಾಯ 28 ವರ್ಷ
ಎತ್ತರ: 5 ಅಡಿ, ಮೈಬಣ್ಣ: ಗೋಧಿ ಮೈ ಬಣ್ಣ, ಮೈಕಟ್ಟು: ಸಾಧರಣ ಶರೀರ, ಧರಿಸಿರುವ ಬಟ್ಟೆ: ಕೆಂಪು ಬಣ್ಣದ ನೈಟಿ ಧರಿಸಿರುತ್ತಾರೆ.
ಗೊತ್ತಿರುವ ಭಾಷೆಗಳು: ಕನ್ನಡ ,ಹಿಂದಿ
Urva PS
ಪಿರ್ಯಾದಿ GODWIN VINCENT VAS ಸುಮಾರು 20 ವರ್ಷಗಳಿಂದ ಬಿಜೈ ಕಾಪಿಕಾಡ್ ನಲ್ಲಿರುವ ಸೌಜನ್ಯ ಕಾಂಪ್ಲೆಕ್ಸ್ ನಲ್ಲಿ ವಾಸ್ ಆಟೋ ಕನ್ಸಲ್ಟಿಂಗ್ ಹೆಸರಿನ ಅಂಗಡಿಯನ್ನಿಟ್ಟು ವ್ಯವಹಾರ ನಡೆಸುತ್ತಿದ್ದು ಅವರ ಜೊತೆಯಲ್ಲಿ ಸುಮಾರು 3 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಸನತ್ ಹೆಸರಿನ ಆರೋಪಿಯು ವ್ಯವಹಾರ ಮಾಡುತ್ತಿದ್ದ ವಾಹನಗಳ ಮಾರಾಟ /ಖರೀದಿ ವ್ಯವಹಾರದಲ್ಲಿ ಪಿರ್ಯಾದಿದಾರರಿಗೆ ಸಹಕರಿಸಿಕೊಂಡು ಅವರ ವಿಶ್ವಾಸವನ್ನು ಗಳಿಸಿರುತ್ತಾನೆ. ಹೀಗಿರುವಾಗ 2022 ಡಿಸೆಂಬರ್ ತಿಂಗಳಿನಿಂದ ಪಿರ್ಯಾದಿದಾರರಿಗೆ ಅರೋಗ್ಯದ ಸಮಸ್ಯೆ ಇದ್ದ ಕಾರಣ ಅವರ ವ್ಯವಹಾರದ ಮೆಲುಸ್ತುವಾರಿಯನ್ನು ಸನತ್ ನೋಡಿಕೊಂಡಿದ್ದು ಪಿರ್ಯಾದಿದಾರರು ಈ ಹಿಂದೆ ಅವರ ಸ್ಥಿರ ಆಸ್ತಿಯನ್ನು ಮಂಗಳೂರಿನ ಹಂಪನ್ಕಟ್ಟ ಶಾಖೆಯಲ್ಲಿರುವ ಬ್ಯಾಂಕ್ ಆಪ್ ಬರೋಡ ಬ್ಯಾಂಕಿನಲ್ಲಿ ಅಡಮಾನ ಇಟ್ಟು ಪಡೆದ 45,00,000/- ರೂಪಾಯಿ ಸಾಲದ ಹಣವನ್ನು ಹಾಗೂ ಚಿಲಿಂಬಿ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಒಡವೆಗಳನ್ನು ಗಿರವಿ ಇಟ್ಟು ಸಾಲ ಪಡೆದ 14,92,700/- ರೂಪಾಯಿ ಹಣವನ್ನು ವ್ಯವಹಾರಕ್ಕೆ ಬಳಸಿಕೊಂಡಿದ್ದು ಸದ್ರಿ ಮೊತ್ತದಲ್ಲಿ ಪಿರ್ಯಾದಿದಾರರು ಹಳೇಯ ವಾಹನಗಳನ್ನು ಖರೀದಿಸಲು ಮಾರಾಟಗಾರರಿಗೆ ಸನತ್ ಮುಖಾಂತರ ಹಣವನ್ನು ಪಾವತಿಸಿರುತ್ತಾರೆ. ಆರೋಪಿ ಸನತ್ ಎಂಬಾತನು ಪಿರ್ಯಾದಿದಾರರು ಹಣ ಪಾವತಿಸಿ ಖರೀದಿಸಿದ ವಾಹನಗಳನ್ನು ಅವರ ಗಮನಕ್ಕೆ ಬಾರದೇ ಮಾರಾಟ ಮಾಡಿ ಸಿಕ್ಕಿದ ಹಣವನ್ನು ಪಿರ್ಯಾದಿದಾರರಿಗೆ ವಾಪಸ್ ನೀಡದೆ ಪಿರ್ಯಾದಿದಾರರು ಅಂಗಡಿಯಲ್ಲಿ ಇರಿಸಿದ ಬ್ಯಾಂಕ್ ಆಪ್ ಬರೋಡಾ ಹಂಪನ್ಕಟ್ಟ ಶಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬಿಜೈ ಕಾಪಿಕಾಡ್ ಶಾಖೆಯ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಯ ಚಕ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಅವನು ಉಪಯೋಗಿಸುತ್ತಿದ್ದ 7847277 ಮತ್ತು 72087297 ದಿನಾಂಕ 16-03-2023 ರಿಂದ ಸ್ವಿಚ್ ಆಪ್ ಮಾಡಿ ಅವನು ವಾಸಿಸುತ್ತಿದ್ದ ಬಾಡಿಗೆ ರೂಮಿಗೆ ಬೀಗ ಹಾಕಿ ತಲೆಮರಿಸಿಕೊಂಡು ಪಿರ್ಯಾದಿದಾರರ ವ್ಯವಹಾರದ ಹಣವನ್ನು ವಾಪಸ್ ನೀಡದೆ ನಂಬಿಕೆ ದ್ರೋಹವೆಸಗಿ ವಂಚಿಸಿ ಮೋಸ ಮಾಡಿರುವುದಾಗಿ ಸಾರಾಂಶ ಆಗಿರುತ್ತದೆ.
Urva PS
ಪಿರ್ಯಾದಿದಾರರಾದ ಚನ್ನವೀರೇಶರವರು ವೀರಭದ್ರೇಶ್ವರ ನಿಲಯ, ಉರ್ವಾ ಮಾರ್ಕೆಟ್ ಹತ್ತಿರ, ಮಂಗಳೂರು ವಾಸಿಯಾಗಿದ್ದು ದಿನಾಂಕ 19-03-2023 ರಂದು ಮದ್ಯಾಹ್ನ ಸಮು ಸುಮಾರು 08:00 ಗಂಟೆಗೆ ಪಿರ್ಯಾದಿದಾರರ ಅಕ್ಕನ ಮಗ ರಾಜೇಶನು ಮನೆಯಲ್ಲಿ ಮನಸ್ತಾಪ ಮಾಡಿಕೊಂಡು ತನ್ನ ಬ್ಯಾಗ್ ಹಾಗೂ ಬಟ್ಟೆಗಳನ್ನು ತೆಗೆದುಕೊಂಡು ಮನೆಯಿಂದ ಹೋಗಿರುವುದಾಗಿದೆ.ಪಿರ್ಯಾದಿದಾರರು ಆತನ ಮೊಬೈಲ್ ನಂಬರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಪಿರ್ಯಾದಿದಾರರ ಅಕ್ಕನ ಮಗ ರಾಜೇಶ ಸಿಗದೇ ಇದ್ದು ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.
(ಕಾಣೆಯಾದವರ ವಿವರ: ಹೆಸರು ರಾಜೇಶ್, ಪ್ರಾಯ 22 ವರ್ಷ, 5.1/2 ಅಡಿ ಎತ್ತರ, ಗೋಧಿ ಮೈ ಬಣ್ಣ, ಚಿಗುರು ಮೀಸೆ, ನೀಲಿ ಬಣ್ಣದ ಟೀ ಶರ್ಟ್, ಜೀನ್ಸ ಪ್ಯಾಂಟ್, ಕನ್ನಡ ಭಾಷೆ ಮಾತನಾಡುತ್ತಾರೆ.)
Traffic South Police Station
ದಿನಾಂಕ:20-03-2023 ರಂದು ಪಿರ್ಯಾದಿದಾರರಾದ ಉಳ್ಳಾಲ ಪೂಜಾರ ಬೈಲ್ ಅಬ್ಬಾಸ್ ರವರು ಮದನಿ ನಗರದಲ್ಲಿ ತಮ್ಮ ಮನೆಯ ಮುಂಭಾಗದಲ್ಲಿರುವ ಉಮೇಶ್ ಎಂಬುವರ ಅಂಗಡಿಗೆ ಹೋಗಿ ವಾಪಾಸ್ಸು ಮನೆಗೆ ಹೋಗಲು ದೇರಳಕಟ್ಟೆ ಕಡೆಯಿಂದ ತೊಕ್ಕೂಟು ಕಡೆಗೆ ಹೋಗವ ರಸ್ತೆಯನ್ನು ದಾಟುತ್ತಿರುವ ಸಮಯ ಸುಮಾರು ಬೆಳಗ್ಗೆ 10.00 ಗಂಟೆಗೆ ದೇರಳಕಟ್ಟೆ ಕಡೆಯಿಂದ ತೊಕ್ಕೂಟು ಕಡೆಗೆ ಬರುತ್ತಿದ್ದ ಮೋಟಾರ ಸೈಕಲ್ ನಂಬ್ರ KA-19-EZ-9793 ನೇದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಗೈ ಮೂಳೆ ಮೂರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ತೊಕ್ಕೂಟು ಸಹಾರ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ನಗರದ ಹೈಲ್ಯಾಂಡ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.