ಅಭಿಪ್ರಾಯ / ಸಲಹೆಗಳು

Crime Reported in : CEN Crime PS Mangaluru City

ಫಿರ್ಯಾದಿದಾರರಾದ ಅಬ್ದುಲ್ಲಾ ಉದ್ಯಾವರ ಬೆಳ್ಳಿಕುಂಞ ಎಂಬವರು ಮೂಲತ ಕೇರಳ ರಾಜ್ಯದ ಕಾಸರಗೋಡಿನ ವಾಸಿಯಾಗಿದ್ದು NR I ಆಗಿರುತ್ತಾರೆ. 1980ನೇ ಇಸವಿಯಿಂದ 2017ರ ತನಕ ದುಬೈಯಲ್ಲಿ ವಿವಿದ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ದುಬೈನಲ್ಲಿಯೇ ವಾಸಗಿರುತ್ತಾರೆ. 1ನೇ ಆರೋಪಿ MOHAMMED ABDUL MAJEED P ಫಿರ್ಯಾದಿಯ ಸಂಬಂದಿಯಾಗಿದ್ದು, ಊರಿನಲ್ಲಿ ಫಿರ್ಯಾದಿ ಪರವಾಗಿ ಕೆಲಸ ಮಾಡಿಕೊಂಡಿದ್ದರಿಂದ ಫಿರ್ಯಾದಿಯ ಬಾಬ್ತು ಮಂಗಳೂರಿನ ಪಳ್ನೀರ್ ನಲ್ಲಿರುವ “Retreat” ಪ್ಲಾಟ್ ಪ್ಲಾಟಿನಲ್ಲಿ 1ನೇ ಆರೋಪಿ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸಮಾಡಲು ಅವಕಾಶಕೊಟ್ಟಿದ್ದಂತೆ 1ನೇ ಆರೋಪಿ ಪ್ಲಾಟಿನಲ್ಲಿ 2012 ರಿಂದ 2014ರ ವರೆಗೆ ವಾಸವಾಗಿದ್ದನು. ಫಿರ್ಯಾದಿ 2014ನೇ ಇಸವಿಯಲ್ಲಿ ದುಬೈಯಲ್ಲಿರುವ ಸಮಯ 1ನೇ ಆರೋಪಿ ಮೊಹಮ್ಮದ್ ಅಬ್ದುಲ್ ಮಜೀದ್.ಪಿ ಎಂಬಾತನು  ಕಾಸರಗೋಡು ಮತ್ತು ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಎಜೆಂಟ್ ನಾಗಿ ಕೆಲಸ ಮಾಡಿಕೊಂಡಿದ್ದವನಿಗೆ ಫಿರ್ಯಾದಿ ಜಾಗ ಹುಡುಕುತ್ತಿರುವ ವಿಷಯ ತಿಳಿದು ಕೇರಳ ರಾಜ್ಯದ ಸರ್ವೇ ನಂಬ್ರ- ರಲ್ಲಿ 1.01 ಎಕ್ರೆ ಜಾಗವಿರುವುದಾಗಿ ಜಾಗದ ಮಾಲಿಕರು ದುಬೈನಲ್ಲಿರುವುದಾಗಿ ಫಿರ್ಯಾದಿಯಲ್ಲಿ ತಿಳಿಸಿ ದುಬೈನಲ್ಲಿಯೇ 2ನೇ ಆರೋಪಿ ಸಿ.ಮೊಯ್ದೀನ್ ಫರ್ಹಾದ್ ಚುಂಗೆ ಎಂಬಾತನನ್ನು ಫಿರ್ಯಾದಿಯ ಬಳಿ ಕಳುಹಿಸಿ ಜಾಗದ ಜೆರಾಕ್ಸ್ ದಾಖಲಾತಿಯನ್ನು ಫಿರ್ಯಾದಿಗೆ ತೋರಿಸಿ ನಂಬಿಸಿದಂತೆ ರೂ.2,84,82,000/- ಮಾತುಕತೆಯಾಗಿ 1ನೇ ಆರೋಪಿತನು ಫಿರ್ಯಾದಿಯನ್ನು ನಂಬಿಸಿದಂತೆ ಫಿರ್ಯಾದಿ ಅಡ್ವಾನ್ಸ್ ಆಗಿ ರೂ.25,00,000/- ಹಣವನ್ನು AED 1,50,000/- ದಿರಾಮ್ಸ್  ನಲ್ಲಿ 2ನೇ ಆರೋಪಿತನಿಗೆ ಚೆಕ್ ಮುಖಾಂತರ ನೀಡಿ, ಬಳಿಕ ಫಿರ್ಯಾದಿ ವಿದೇಶದಲ್ಲಿರುವುದರಿಂದ ಜಾಗದ ಅಗ್ರಿಮೆಂಟ್ ಸಂಬಂದ ಊರಿಗೆ ಬರಲು ಆಸಾಧ್ಯವಾದದರಿಂದ 1ನೇ ಆರೋಪಿ ತಿಳಿಸಿದಂತೆ ನಂಬಿಕೆಯ ಮೇರೆಗೆ ಫಿರ್ಯಾದಿಯ ಪರವಾಗಿ 1ನೇ ಮತ್ತು 2ನೇ ಆರೋಪಿತನಿಂದ ಜಾಗ ಖರೀದಿಸುವ  ಬಗ್ಗೆ ರೂ.2,84,82,000/- ಕೋಟಿಗೆ ಅಗ್ರಿಮೆಂಟ್ ಮಾಡಿಕೊಂಡು, ನಂತರ ನಂತರ ಹಂತ ಹಂತವಾಗಿ AED 3,29,980 ದಿರಾಮ್ಸ್ ನಲ್ಲಿ ರೂ.56,96.470/- ಲಕ್ಷ 2ನೇ ಆರೋಪಿತನಿಗೆ ಕೊಟ್ಟಿದ್ದು, ಬಳಿಕ ಫಿರ್ಯಾದಿ ದುಬೈಯಿಂದ ತನ್ನ ಮನೆಯಾದ ಪಳ್ನೀರ್ ಗೆ ಬಂದು ಮನೆಯಲ್ಲಿಯೇ 2ನೇ ಆರೋಪಿತನಿಗೆ ಜಾಗದ ಬಗ್ಗೆ ಬಾಕಿಯಿದ್ದ ರೂ.25,00,000/- ಲಕ್ಷ ನಗದಾಗಿ ನಂತರ ಹಾಗೂ 1ನೇ ಆರೋಪಿಯ ಮುಖಾಂತರ ರೂ.1,10,00,000/- ಒಟ್ಟು ರೂ.2,16,96,470/- ಕೋಟಿ 2ನೇ ಆರೋಪಿಗೆ ಪಾವತಿಸಿದ್ದರು, 1 ಮತ್ತು 2ನೇ ಆರೋಪಿತರು ಫಿರ್ಯಾದಿಯನ್ನು ವಂಚಿಸಿ ದುರ್ಲಾಭವನ್ನು ಅಕ್ರಮವಾಗಿ ಪಡೆಯುವ ಸಮಾನ ಉದ್ದೇಶದಿಂದ ಮಾರಾಟ ಮಾಡಲು ಇಚ್ಚಿಸಿದ ಜಾಗವನ್ನು ಫಿರ್ಯಾದಿ ವಿನಂತಿಸಿದರು ನೋಂದಣಿ ಮಾಡಿ ಕೊಡದೆ ನೀಡದೆ ಹಣ ಕೇಳಿದ ಫಿರ್ಯಾದಿಗೆ ಬೆಧರಿಸಿ ಹಣವನ್ನು ವಾಪಸು ನೀಡದೆ ಫಿರ್ಯಾದಿಗೆ ಮಾರಾಟ ಮಾಡುವುದಾಗಿ ತಿಳಿಸಿದ ಜಾಗವನ್ನು 3ನೇ ಆರೋಪಿ ಮೊಹಮ್ಮದ್ ಶರೀಫ್ ಮತ್ತು 4ನೇ ಆರೋಪಿ ಫಾರೂಕ್ ಹುಸೇನ್ ಎಂಬವರಿಗೆ ಮಾರಾಟ ಮಾಡಿ ಫಿರ್ಯಾದಿಗೆ ರೂ.2,40,00,000/- ಕೋಟಿ ಹಣ ನಷ್ಟವನ್ನುಂಟು ಮಾಡಿರುವುದು ಎಂಬಿತ್ಯಾದಿ

 

Moodabidre PS

 

ಪಿರ್ಯಾದು LAWRENCE PINTO ದಾರರ ತಂಗಿ ಐರಿನ್ ಪಿಂಟೋ ರವರು ಮುಂಬೈ ನ ಥಾಣೆಯಲ್ಲಿ ವಾಸವಾಗಿದ್ದು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಸ್ವಂತ ಮನೆಯಾದ ಮೂಡುಬಿದ್ರೆಯ ಕಡಲಕೆರೆಗೆ ಬಂದು ಹೋಗುವುದಾಗಿದೆ. ಅದರಂತೆ ದಿನಾಂಕ 30-09-2022 ರಂದು ಬಂದು ಹೋಗಿರುತ್ತಾರೆ. ನಿನ್ನೆ ದಿನ ದಿನಾಂಕ 19-10-2022 ರಂದು ಪಿರ್ಯಾದುದಾರರ ತಂಗಿ ಪಿರ್ಯಾದುದಾರರಿಗೆ ಕರೆ ಮಾಡಿ ದಿನಾಂಕ 21-10-2022 ರಂದು ಮನೆಗೆ ಬರುವುದಾಗಿ ತಿಳಿಸಿದಂತೆ ಪಿರ್ಯಾದುದಾರರು ಈ ದಿನ ದಿನಾಂಕ 20-10-2022 ರಂದು ಬೆಳಿಗ್ಗೆ 10.00 ಗಂಟೆಗೆ ಕೆಲಸದ ಆಳುಗಳನ್ನು ಕರೆದುಕೊಂಡು ತನ್ನ ತಂಗಿಯ ಮನೆಯ ಹತ್ತಿರ ಸ್ವಚ್ಚತೆ ಮಾಡಿಸಲೆಂದು ಬಂದಾಗ ಅಂಗಳವನ್ನು ಸ್ವಚ್ಚಗೊಳಿಸಿ ನಂತರ ಹಿತ್ತಿಲು ಬಾಗಿಲು ಕಡೆಗೆ ಬಂದಾಗ ಮನೆಯ ಹಿಂಬಾಗಿಲು ತೆರೆದಿದ್ದು ಪಿರ್ಯಾದುದಾರರು ಒಳಗೆ ಬಂದು ನೋಡಿದಾಗ ಯಾರೋ ಕಳ್ಳರು ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಗಾಡ್ರೇಜ್‌ಗಳನ್ನು ತೆರೆದು ಅದರಲ್ಲಿದ್ದ ಬೆಲೆಬಾಳುವ ವಸ್ತುಗಳಾದ ಕರಿಮಣಿ ಚೈನ್ - 1, ಬಂಗಾರದ ಚೈನ್ - 1, ವಜ್ರದ ಪೆಂಡೆಂಟ್ - 1 ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ನಿಖರವಾದ ಬೆಲೆ ತಮಗೆ ಗೊತ್ತಿಲ್ಲದೇ ಇರುವುದರಿಂದ ಮುಂದೆ ತಿಳಿಸಲಾಗುವುದು ಎಂದು ಸೂಕ್ತ ಕ್ರಮಕ್ಕಾಗಿ ನೀಡಿರುವ ದೂರು.

Surathkal PS

ದಿನಾಂಕ 19-10-2022 ರಂದು ಸರಿ ಸುಮಾರು ಸಂಜೆ 4:00 ಗಂಟೆಗೆ ಸುರತ್ಕಲ್ ಉಪವಿಭಾಗದ ಕಾಟಿಪಳ್ಳ ಮೆಸ್ಕಾಂ ಶಾಖೆಯ ಖಡ್ಗೇಶ್ವರಿ ದ್ವಾರದ ಪಡುಪದವು ಗುರುನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರಾದ ಜೀವನ್ ಬಂಗೇರ ಇಂಜಿನಿಯರು (ವಿ) ಕರ್ತವ್ಯ ನಿರ್ವಹಿಸಿಕೊಂಡಿರುವ ಮೆಸ್ಕಾಂ ಸಂಬಂಧಿಸಿ ರಸ್ತೆ ಬದಿಯಲ್ಲಿ ಅಳವಡಿಸಿದ ಮೆಸ್ಕಾಂ ವಿದ್ಯುತ್ ಕಂಬಕ್ಕೆ ಟಿಪ್ಪರ್ ಲಾರಿ ನಂ KA-19-AD-3451 ನೇಯದರ ಚಾಲಕನು ಲಾರಿಯನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಲಾರಿಯ ಹಿಂಭಾಗದ ಟ್ರೋಲಿಯನ್ನು ಕೆಳಗಿಳಿಸದೆ ಮೆಸ್ಕಾಂ ಕಂಬದ ವಿದ್ಯುತ್ ತಂತಿಗೆ ತಾಗಿ ಎಳೆದುಕೊಂಡು ಹೋದುದರಿಂದ 9 ವಿದ್ಯುತ್ ಕಂಬಗಳು ಮುರಿದು ಬಿದ್ದು ಇಲಾಖೆಗೆ ಸುಮಾರು 1,33,859 /- ರೂಪಾಯಿ ನಷ್ಟ ಉಂಟಾಗಿರುತ್ತದೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-10-2022 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080