ಅಭಿಪ್ರಾಯ / ಸಲಹೆಗಳು

Crime Reported in : Moodabidre PS

 ಪಿರ್ಯಾದು Smt. Asha ದಾರರ ಗಂಡ ರಾಜೇಶ್ (28) ರವರು ದಿನಾಂಕ 20-11-2022 ರಂದು ಬೆಳಿಗ್ಗೆ 07-30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂಬ್ರ: KA-19-HK-3519 ನೇದರಲ್ಲಿ ಮೃತಪಟ್ಟ ಅವರ ಅಜ್ಜಿಯ ಅಂತ್ಯಸಂಸ್ಕಾರವನ್ನು ಬಾಳೆ ಹೊನ್ನೂರಿನಲ್ಲಿ ಮುಗಿಸಿ ವಾಪಾಸು ಬರುತ್ತಾ ರಾತ್ರಿ ಸುಮಾರು 7-45 ಗಂಟೆಗೆ ಮೂಡಬಿದ್ರೆ ತಾಲೂಕಿನ ಬೆಳುವಾಯಿ ಗ್ರಾಮದ ಮರಿಯಾ ನಿಕೇತನ್ ಶಾಲೆಯ ಮುಂಭಾಗದಲ್ಲಿ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಕಾಮಗಾರಿಗಾಗಿ ರಸ್ತೆಯ ಬದಿಯಲ್ಲಿ ಕಡಿದು ಹಾಕಿದ ಮರದ ದಿಮ್ಮಿಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದವರಿಗೆ ತಲೆಯ ಹಿಂಭಾಗ, ಹಣೆಗೆ ಮತ್ತು ಕಿವಿಗೆ, ಎರಡು ಹುಬ್ಬುಗಳ ಮೇಲೆ, ಹಾಗೂ ಮುಖಕ್ಕೆ ರಕ್ತ ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಎಂಬಿತ್ಯಾದಿ.

Surathkal PS

ದಿನಾಂಕ 21-11-2022 ರಂದು ಚೊಕ್ಕಬೆಟ್ಟು ಕ್ರಾಸ್ ರೈಲ್ವೇ ಬ್ರಿಡ್ಜ್ ಬಳಿ ಸಮಯ ಸುಮಾರು 10-00 ಗಂಟೆಗೆ ಗಾಂಜಾ ಸೇವನೆ ಮಾಡುತ್ತಿದ್ದ ಶಾಹಿದ್ ಪ್ರಾಯ 32 ವರ್ಷ,  ವಾಸ: ರೃಲ್ವೇ ಟ್ರ್ಯಾಕ್ ಬಳಿ, ಚೊಕ್ಕಬೆಟ್ಟು, 8ನೇ ಬ್ಲಾಕ್, ಕಾಟಿಪಳ್ಳ,ಮಂಗಳೂರು ಎಂಬಾತನ್ನು ವಿಚಾರಿಸಲಾಗಿ   ದಿನಾಂಕ 20-11-2022  ರಂದು ಮಂಗಳೂರು ಬಂದರಿನ ಬಳಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಯಿಂದ ಸ್ವಲ್ಪ ಗಾಂಜಾವನ್ನು ಖರೀದಿಸಿ ತನ್ನ ಹತ್ತಿರ ಇಟ್ಟುಕೊಂಡು ಸಿಗರೇಟಿನ ಮುಖೇನ ಸೇವಿಸಿರುವುದಾಗಿ ನುಡಿದಿದ್ದು ಸದ್ರಿಯವರನ್ನು   ಕುಂಟಿಕಾನ ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಿದಲ್ಲಿ ಅಲ್ಲಿನ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ “Tetrahydracannabinoid (Mrijuana): POSITIVE, ಎಂಬುವುದಾಗಿ ವರದಿ ನೀಡಿದಾಗಿರುತ್ತದೆ ಆರೋಪಿಯು ನಿಷೇದಿತ ಗಾಂಜಾ ಸೇವನೆ ಮಾಡಿದ್ದರಿಂದ ಕಾನೂನು ಕ್ರಮಕೈಗೊಂಡಿರುವುದು  ಎಂಬಿತ್ಯಾದಿಯಾಗಿರುತ್ತದೆ

Kankanady Town PS                                 

 ದಿನಾಂಕ 19-11-2022 ರಂದು ಪ್ರಕರಣದ ಪಿರ್ಯಾದಿ K Purushottama ದಾರರು ತನ್ನ ನೋಂದಣಿ ಮಾಲಕತ್ವದ ಕೆ.ಎ-19-ಎಎ-8471 ಆಟೋರಿಕ್ಷಾದಲ್ಲಿ,  ಕಂಕನಾಡಿ ರೈಲ್ವೇ ಸ್ಟೇಷನ್ ನಿಂದ ಪಂಪ್ ವೆಲ್ ಕಡೆಗೆ ಬರುತ್ತಿರುವ ಸಮಯ, ರೈಲ್ವೇ ಸ್ಟೇಷನ್ ಕ್ರಾಸ್ ದಾಟಿ, ಸ್ವಲ್ಪ ಮುಂದೆ  ಪಂಪ್ ವೆಲ್ ಕಡೆಯ ರಸ್ತೆಯಲ್ಲಿ, ಅಪರಿಚಿತ ತನ್ನ ಹಿಂಭಾಗದಲ್ಲಿ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು, ಆಟೋ ನಿಲ್ಲಿಸುವಂತೆ ಕೈ ಮಾಡಿದಾಗ ಪಿರ್ಯಾದಿದಾರರು ಆಟೋ ನಿಲ್ಲಿಸಿ  ಎಲ್ಲಿಗೆ ಎಂದು ಕೇಳಿದಾಗ  ಪಂಪ್ ವೆಲ್ ಗೆಂದು ಹೇಳಿರುತ್ತಾನೆ.  ಅದರಂತೆ ಆತನನ್ನು ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಪಂಪ್ ವೆಲ್ ಕಡೆಗೆ  ಬರುತ್ತಿರುವಾಗ, ರೋಹನ್ ಸ್ಕ್ವ್ಯಾರ್ ಕಟ್ಟಡದ  ಎದುರುಗಡೆ  ಬಸ್ ಸ್ಟಾಪ್ ಬಳಿ ತಲುಪುತ್ತಿದ್ದಂತೆ, ಸಮಯ  16:40 ಗಂಟೆಗೆ ಹಿಂಬದಿಯ ಸೀಟಿನಿಂದ ಢಂ ಎಂಬ ಶಬ್ದ  ಬಂದು, ಕೂಡಲೆ ಬೆಂಕಿ ಹಾಗೂ ಹೊಗೆ ಬಂದು ಪಿರ್ಯಾದಿದಾರರಿಗೆ ತಾಗಿದಾಗ, ಪಿರ್ಯಾದಿದಾರರು ರಿಕ್ಷಾವನ್ನು ನಿಲ್ಲಿಸಿ, ರಿಕ್ಷಾದಿಂದ   ಇಳಿದಿರುತ್ತಾರೆ. ಅಪರಿಚಿತ ಗೂ ಬೆಂಕಿ ತಗುಲಿ  ಗಾಯವಾಗಿ, ಪಿರ್ಯಾದಿದಾರರು   ಬೊಬ್ಬೆ ಹಾಕಿದಾಗ, ಸಾರ್ವಜನಿಕರು ಬೆಂಕಿಯನ್ನು ನಂದಿಸಿ, ಗಾಯಾಳುಗಳಿಬ್ಬರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಇಬ್ಬರೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಈ ಪರಿಣಾಮ ಪಿರ್ಯಾದಿದಾರರ ಎರಡೂ ಕೈಗಳಿಗೆ, ಬೆನ್ನಿಗೆ,    ಮುಖಕ್ಕೆ, ಹಾಗೂ ಅಪರಿಚಿತ ಎರಡೂ ಕೈಗಳಿಗೆ, ಬೆರಳುಗಳಿಗೆ, ಎರಡೂ ಕಾಲುಗಳಿಗೆ, ಮುಖಕ್ಕೆ, ಬೆನ್ನಿಗೆ ಸುಟ್ಟ ಗಂಭೀರ ಗಾಯಗಳಾಗಿರುತ್ತದೆ.  ಹಾಗೂ ರಿಕ್ಷಾಕ್ಕೆ ಹಾನಿಯಾಗಿ ರೂ 50,000/- ನಷ್ಟ ಉಂಟಾಗಿರುತ್ತದೆ.  ಅಪರಿಚಿತ ಆರೋಪಿತನು ಯಾವುದೋ ದುರುದ್ದೇಶದಿಂದ, ಪಿರ್ಯಾದಿದಾರರನ್ನು ಹಾಗೂ ಇತರರನ್ನು ಕೊಲೆ ಮಾಡುವ  ಉದ್ದೇಶದಿಂದ ಅಪರಾಧಿಕ ಒಳಸಂಚು ಮಾಡಿ, ಸ್ಪೋಟಕ ವಸ್ತುವನ್ನು ಪಿರ್ಯಾದಿದಾರರ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುವ ಸಮಯ ಈ ಘಟನೆ ನಡೆದಿರುವುದಾಗಿದೆ.

Traffic North Police Station                       

ಪಿರ್ಯಾದಿ CHANDRASHEKHAR ದಾರರ ಮಗನಾದ ಕಾಂತೇಶ (26) ಎಂಬಾತನು ದಿನಾಂಕ 20/11/2022 ರಂದು ಅವನ ಬಾಬ್ತು KA-19-EM-1441 ನಂಬ್ರದ ಸ್ಕೂಟರಿನಲ್ಲಿ ಪದವಿನಂಗಡಿ ಕಡೆಯಿಂದ ತನ್ನ ಮನೆಯಾದ ಬಸವನಗರ ಕುಂಜತಬೈಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಾಯಂಕಾಲ ಸಮಯ ಸುಮಾರು 6.30 ಗಂಟೆಗೆ ಪದವಿನಂಗಡಿಯ ಕೊಸ್ಟಲ್ ವಿಲೇಜ್ ಹೋಟೆಲ್ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ತನ್ನ ಬಾಬ್ತು ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಮದ್ಯದಲ್ಲಿರುವ ಡಿವೈಡರ್ ಗೆ ಡಿಕ್ಕಿಪಡಿಸಿ ಸ್ಕೂಟರ್ ಸಮೇತ ಮುಂದಕ್ಕೆ ಎಳೆದುಕೊಂಡು ಹೋಗಿ ಡಿವೈಡರಿನ ಮದ್ಯದಲ್ಲಿದ್ದ ದಾರಿ ದೀಪದ ಕಂಬಕ್ಕೆ ಆತನ ತಲೆಯು ಬಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದವನನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯಲ್ಲಿದ್ದ ಕಾಂತೇಶನು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 8.45 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-11-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080