ಅಭಿಪ್ರಾಯ / ಸಲಹೆಗಳು

Crime Reported in : : Mangalore North PS                

ಪಿರ್ಯಾದಿ SANATH KUMAR ದಾರರು ಸೆಂಟ್ರಿಂಗ್ ಕೆಲಸವನ್ನು ಮಾಡಿಕೊಂಡಿದ್ದು,  ಪಿರ್ಯಾದಿದಾರರು ಕೆಲಸಕ್ಕೆ ಹೋಗಿ ಬರಲು  ಹೀರೋ ಡೆಸ್ಟಿನಿ 125VX  ಸ್ಕೂಟರ್  ನಂಬ್ರ K-A-19-HH-6079  ನೇದ್ದನ್ನು ಉಪಯೋಗಿಸಿಕೊಂಡಿದ್ದು, ಎಂದಿನಂತೆ ದಿನಾಂಕ: 01-12-2022 ರಂದು  ಪಿರ್ಯಾದಿದಾರರು ಕೆಲಸದ  ನಿಮಿತ್ತ ಮಂಗಳೂರಿಗೆ ಬಂದವರು  ತಮ್ಮ ಬಾಬ್ತು ಸ್ಕೂಟರನ್ನು  ಬಲ್ಮಠ ರಸ್ತೆಯ ಯೂನಿಯನ್ ಬ್ಯಾಂಕಿನ ಎ.ಟಿ.ಎಂ ಎದುರುಗಡೆ ಬೆಳಿಗ್ಗೆ 11.30 ಗಂಟೆಗೆ ಪಾರ್ಕ್ ಮಾಡಿ  ಬ್ಯಾಂಕಿನ ಕೆಲಸ ಮುಗಿಸಿ  ಮದ್ಯಾಹ್ನ 1.45 ಗಂಟೆಗೆ  ಸ್ಕೂಟರ್ ಪಾರ್ಕ್ ಮಾಡಿದ  ಸ್ಥಳಕ್ಕೆ ಬಂದಾಗ ಸದ್ರಿ ಸ್ಥಳದಲ್ಲಿ ಸ್ಕೂಟರ್  ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು  ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಹಾಗೂ ತಮ್ಮ ಸ್ನೇಹಿತರಿಗೆ ತಿಳಿಸಿ ಪಿರ್ಯಾದಿದಾರರು ಇಷ್ಟರವರೆಗೆ ಹುಡುಕಾಡಿದರೂ ತಮ್ಮ ಬಾಬ್ತು ಸ್ಕೂಟರ್ ಸಿಗದೇ ಇದ್ದುದರಿಂದ  KA-19-HH-6079 ನೇ ನೊಂದಣಿ ನಂಬ್ರದ ಹೀರೋ ಹೀರೋ ಡೆಸ್ಟಿನಿ 125VX  ಸ್ಕೂಟರ್  ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶ.

KA-19-HH-6079 ನೇ ನೊಂದಣಿ ನಂಬ್ರದ ಹೀರೋ ಡೆಸ್ಟಿನಿ 125VX ಸ್ಕೂಟರ್ ಮಾಡೆಲ್ 2021 ಬಿಳಿ ಬಣ್ಣದ್ದಾಗಿರುತ್ತದೆ.    ಇದ್ದು,ಅಂದಾಜು ಮೌಲ್ಯ ರೂ. 70,,000/-

2)ಪಿರ್ಯಾದಿದಾರರು ಜಿಯೋ ಡಿಜಿಟಲ್ ಫೈಬರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಎಕ್ಸೂಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಗಣೇಶನ್ ರಮೇಶ ತಂದೆ: ರಮೇಶ,ವಾಸ: ಹೌಸ್ ನಂಬ್ರ 10/51 ಜಿ ಹೆಚ್ ಎಸ್ ರೋಡ್ ಹಂಪನಕಟ್ಟೆ ಮಂಗಳೂರು ಇವರನ್ನು ಜಿಯೋ ಕಂಪನಿಯ ಫ್ರೀ ಪ್ರೈಡ್ ಸಿಮ್ ಕಾರ್ಡ್ ನ್ನು ಗ್ರಾಹಕರಿಗೆ ಮಾರಾಟ ಮಾಡುವ ಬಗ್ಗೆ ಜಿಯೋ ಕೇಂದ್ರದಿಂದ ಆನ್ ಲೈನ್ ಮೂಲಕ ನಿಯೋಜಿಸಿದ್ದು, ಸದ್ರಿಯವರು ಒಂದೇ ಭಾವಚಿತ್ರವಿರುವ ವಿವಿಧ ಹೆಸರಿನ ವ್ಯಕ್ತಿಗಳಿಗೆ ಜಿಯೋ ಫ್ರೀ ಪ್ರೈಡ್ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡಿ ಕಂಪನಿಗೆ ಮೋಸ ಮಾಡಿರುತ್ತಾರೆ ಎಂಬುದಾಗಿ ಪಿರ್ಯಾದಿ ಸಾರಾಂಶ. 

Ullal PS

ಫಿರ್ಯಾದಿದಾರರಾದ ಶಬನಾ ರವರ ಮನೆಗೆ ಇವರ ಅಕ್ಕ 2ನೇ ಆರೋಪಿ ಫರ್ಜಾನ ಮತ್ತು ಬಾವ 1ನೇ ಆರೋಪಿ ಮಹಮ್ಮದ್ ಹುಸೈನ್ ಉಗ್ರಾಣಿ ಯವರು ಕೆಲವು ದಿನಗಳಿಗಾಗಿ ಬಂದು 1ನೇ ಆರೋಪಿಗೆ ಸಾಲದ ಮರುಪಾವತಿ ಮಾಡಬೇಕಾದ ತುರ್ತು ಪರಿಸ್ಥಿತಿ ಒದಗಿ ಬಂದಿರುವುದರಿಂದ  ಫಿರ್ಯಾದಿದಾರರಿಂದ ಸಾಲ ರೂಪದಲ್ಲಿ ರೂ.5,50,000/- ಹಣದ ಸಹಾಯವನ್ನು ಕೇಳಿ 3 ತಿಂಗಳಲ್ಲಿ ವಾಪಾಸು ಕೊಡುವುದಾಗಿ ವಿಶ್ವಾಸದಿಂದ ನಂಬಿಸಿ ಫಿರ್ಯಾದಿದಾರರಿಂದ ಒಂದು ದೊಡ್ಡ ನೆಕ್ಲೇಸ್, ಒಂದು ದೊಡ್ಡ ಪೆಂಡೆಂಟ್ ಚೈನ್, ಒಂದು ಕಿವಿಯ ಓಲೆಗಳ ಸೆಟ್ಟು, ಎರಡು ಬಳೆಗಳು ಇತ್ಯಾದಿ ಚಿನ್ನದ ಆಭರಣಗಳನ್ನು ಪಡೆದುಕೊಂಡ ಆರೋಪಿಗಳು ದಿನಾಂಕ. 4-10-2021 ಮತ್ತು 18-10-2021 ರಂದು ತೊಕ್ಕೊಟು ಚೀರುಂಭ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬಲ್ಲಿ ಅಡವಿಟ್ಟು ಒಟ್ಟು ರೂ.4,49,000/- ಹಣವನ್ನು ಆರೋಪಿಗಳು ಪಡೆದುಕೊಂಡಿದ್ದು, ಆದರೆ ಆರೋಪಿಗಳು ಒಪ್ಪಿಕೊಂಡಂತೆ 3 ತಿಂಗಳಲ್ಲಿ ಚಿನ್ನವನ್ನು ಬಿಡಿಸಿಕೊಡದೇ ಹಾರಿಕೆಯ ಮಾತುಗಳನ್ನು ಆಡಿಕೊಂಡು ಆರೋಪಿಗಳು ಫಿರ್ಯಾದಿದಾರರಿಗೆ ವಿಶ್ವಾಸದ್ರೋಹ ಹಾಗೂ ಮೋಸ ಮಾಡಿರುವುದರಿಂದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೀಡಿದ ಫಿರ್ಯಾದಿ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 21-12-2022 04:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080