ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS                                              

ಪಿರ್ಯಾದಿ VIDYA ABALOORU ದಿನಾಂಕ 05-03-2023 ರಂದು ತನ್ನ ಗಂಡನ ಬಾಬ್ತು  KA34-X-4561 ನೇ ಸ್ಕೂಟರ್ ನ್ನು ಮಂಗಳೂರು ನಗರದ ಕೊಟ್ಟಾರ ಕ್ರಾಸ್ ಕಡೆಯಿಂದ ಕೆಎಸ್ಆರ್ ಟಿಸಿ ಕಡೆಗೆ ತನ್ನ ಮಗಳು ರೋಹಿಣಿಯನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಬಾರೆಬೈಲ್ ಕ್ರಾಸ್ ಬಳಿ ತಲುಪುತ್ತಿರುವಾಗ  ಸಮಯ ಸುಮಾರು 4.15 ಗಂಟೆಗೆ ಬಾರೆ ಬೈಲ್ ಕ್ರಾಸ್ ಒಳರಸ್ತೆಯಿಂದ  KA03-AG-9605 ನೇ ಕಾರನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮುಖ್ಯ ರಸ್ತೆಗೆ ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರೆ  ರಸ್ತೆಗೆ ಬಿದ್ದು  ಪಿರ್ಯಾದಿದಾರರಿಗೆ ಎಡಗೈ ಚರ್ಮ ಕಿತ್ತು ಹೋಗಿ ರಸ್ತೆಯಲ್ಲಿದ್ದ ಕಲ್ಲು ಕೈ ಒಳಗೆ ಹೊಕ್ಕಿ ರಕ್ತ ಸ್ರಾವ ಗಾಯವಾಗಿದ್ದು ಬಲಗೈ ಗೆ ಗುದ್ದಿದ ನಮೂನೆಯ ಗಾಯವಾಗಿರುತ್ತದೆ ಹಾಗು ಸಹಸವಾರೆಗೆ ಯಾವುದೇ ಗಾಯವಾಗಿರುವುದಿಲ್ಲ. ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರನ್ನು ಉಪಚರಿಸಿ ಅದೇ ರಸ್ತೆಯಾಗಿ ಬರುತ್ತಿದ್ದ ಆಟೋ ರಿಕ್ಷಾದಲ್ಲಿ  ಎ ಜೆ ಆಸ್ಪತ್ರೆಗೆ  ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತ ವೆಸಗಿದ ಕಾರು ಚಾಲಕನು ಅಪಘಾತದ ಬಳಿಕ ಅಪಘಾತದ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುತ್ತಾರೆ.

Mangalore Rural PS

ಪಿರ್ಯಾದಿಯ Florine Pereira ವಿಧವೆಯಾಗಿದ್ದು, ತನ್ನ ಮಗಳ ಜೊತೆಗೆ ಮೂಡಬಿದ್ರೆಯಲ್ಲಿ ವಾಸ್ತವ್ಯವಿದ್ದವರು ಮಂಗಳೂರಿನಲ್ಲಿ ಪ್ಲಾಟ್ ಖರೀದಿಸಲು ನಿರ್ಧರಿಸಿರುವುದನ್ನು ಮನಗಂಡ 01 ನೇ ಆರೋಪಿತೆಯು Joycee Reena Rasquinha ಪಿರ್ಯಾದಿದಾರರನ್ನು ಭೇಟಿಯಾಗಿ ತನ್ನ ಬಾಬ್ತು ನಿರ್ಮಾಣವಾಗುತ್ತಿರುವ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ರೆಡ್ ರಾಕ್ ಹೈಟ್ಸ್ ಎಂಬ ಅಪಾರ್ಟ್ಮೆಂಟಿನಲ್ಲಿ ಒಂದು ಪ್ಲಾಟ್ನ್ನು ಮಾರಾಟ ಮಾಡುವುದಾಗಿ ತಿಳಿಸಿದಾಗ ಅದಕ್ಕೆ ಒಪ್ಪಿಕೊಂಡ ಪಿರ್ಯಾದಿದಾರರು ರೆಡ್ ರಾಕ್ ಹೈಟ್ಸ್ ಅಪಾರ್ಟ್ಮೆಂಟಿನ ಪ್ಲಾಟ್ ನಂ: 102 ನ್ನು ಖರೀದಿ ಮಾಡುವ ಬಗ್ಗೆ 01 ನೇ ಆರೋಪಿತೆಯೊಂದಿಗೆ ದಿನಾಂಕ: 02-12-2014 ರಂದು 710 ಚದರ ಅಡಿಯ ಪ್ಲಾಟ್ ನಂ: 102 ನ್ನು ರೂ: 21,75,184-00 ಕ್ಕೆ ಖರೀದಿ ಮಾಡುವ ಬಗ್ಗೆ ಮಾರಾಟ ಕರಾರು ಮಾಡಿಸಿಕೊಂಡು ಆ ಕರಾರಿನ ಷರತ್ತಿನನ್ವಯ ಪಿರ್ಯಾದಿದಾರರು 01 ನೇ ಆರೋಪಿತೆಗೆ ಹಂತವಾಗಿ ಎಲ್ಲಾ ಹಣವನ್ನು ಸಂದಾಯ ಮಾಡಿದ ಬಳಿಕ ಪಿರ್ಯಾದಿದಾರರು ಪ್ಲಾಟ್ ನಂ: 102 ರಲ್ಲಿ ವಾಸ್ತವ್ಯ ಹೂಡಿ ವಾಹನ ನಿಲುಗಡೆ ಸಂಖ್ಯೆ: 21 ನ್ನು ಕರಾರಿನ ಷರತ್ತಿನಂತೆ ಉಪಯೋಗಿಸುತ್ತಾ ದಿನಾಂಕ: 22-07-2021 ರಂದು ದಸ್ತಾವೇಜು ಸಂಖ್ಯೆ: 27/21-22 ರಂತೆ  Book No: 1 CD No: MGTD: 11 ರನ್ವಯ ಸದ್ರಿ ಪ್ಲಾಟನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡು ಪ್ಲಾಟ್ನಲ್ಲಿ ವಾಸ್ತವ್ಯವಿರುವ ಸಮಯ 02 ನೇ ಆರೋಪಿಯು ಪಿರ್ಯಾದಿದಾರರ ಪ್ಲಾಟ್ಗೆ ಬಂದು ತಾನು 01 ನೇ ಆರೋಪಿತೆಯಿಂದ ಪ್ಲಾಟ್ ನಂ: 102 ನ್ನು ಮಾರಾಟ ಕರಾರು ಮೂಲಕ ಖರೀದಿಸಿದ್ದೇನೆ ಎಂಬುದಾಗಿ ಪಿರ್ಯಾದಿದಾರರಲ್ಲಿ ತಕರಾರು ಮಾಡಿದಾಗ ಪಿರ್ಯಾದಿದಾರರು 01 ನೇ ಆರೋಪಿತೆಯನ್ನು ಸಂಪರ್ಕಿಸಲು ಯತ್ನಿಸಿದಾಗ 01 ನೇ ಆರೋಪಿತೆಯು ಪಿರ್ಯಾದಿದಾರರನ್ನು ಸಂಪರ್ಕಿಸಲು ತಪ್ಪಿಸುತ್ತಿದ್ದು, ಆ ಬಳಿಕ 02 ನೇ ಆರೋಪಿತನು Muralidhar Pai ಗೂಂಡಾಗಳೊಂದಿಗೆ ಪಿರ್ಯಾದಿದಾರರು ವಾಸ್ತವ್ಯವಿದ್ದ ಪ್ಲಾಟ್ಗೆ ಬಂದು ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದು, 01 ನೇ ಆರೋಪಿತೆಯು ಪಿರ್ಯಾದಿದಾರರಿಗೆ ಮಾರಾಟ ಮಾಡಿದ ಪ್ಲಾಟನ್ನು ಆ ಮೊದಲೇ 02 ನೇ ಆರೋಪಿತನಿಗೆ ಮಾರಾಟ ಮಾಡಿ ನಂಬಿಕೆ ದ್ರೋಹವೆಸಗಿ ಮೋಸ ಮಾಡಿದ್ದು, ಆ ಬಳಿಕ 02 ನೇ ಆರೋಪಿತನು ಪಿರ್ಯಾದಿದಾರರ ಪ್ಲಾಟ್ಗೆ ಬಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುವುದು ಎಂಬಿತ್ಯಾದಿ.

Mangalore Rural PS

ಪಿರ್ಯಾದಿ Alwyn John Dsouza  ಮಂಗಳೂರಿನಲ್ಲಿ ಪ್ಲಾಟ್ ಖರೀದಿಸಲು ಹುಡುಕಾಟ ನಡೆಸುತ್ತಿರುವುದನ್ನು ಮನಗಂಡ 01 ನೇ ಆರೋಪಿತೆಯು Joycee Reena Rasquinha ಪಿರ್ಯಾದಿದಾರರನ್ನು ಭೇಟಿಯಾಗಿ ತನ್ನ ಬಾಬ್ತು ನಿರ್ಮಾಣವಾಗುತ್ತಿರುವ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ರೆಡ್ ರಾಕ್ ಹೈಟ್ಸ್ ಎಂಬ ಅಪಾರ್ಟ್ಮೆಂಟಿನಲ್ಲಿ ಎರಡು ಪ್ಲಾಟ್ಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದಾಗ ಅದಕ್ಕೆ ಒಪ್ಪಿಕೊಂಡ ಪಿರ್ಯಾದಿದಾರರು ರೆಡ್ ರಾಕ್ ಹೈಟ್ಸ್ ಅಪಾರ್ಟ್ಮೆಂಟಿನ ಪ್ಲಾಟ್ ನಂ: 103 ಮತ್ತು 104 ಗಳನ್ನು ಖರೀದಿ ಮಾಡುವ ಬಗ್ಗೆ 01 ನೇ ಆರೋಪಿತೆಯೊಂದಿಗೆ ಪ್ಲಾಟ್ ನಂ: 103 ರಲ್ಲಿ 480 ಚದರ ಅಡಿಗಳನ್ನು ರೂ: 9,65,511-00 ಕ್ಕೂ ಹಾಗೂ ಪ್ಲಾಟ್ ನಂ: 104 ರಲ್ಲಿ ೭೧೦ ಚದರ ಅಡಿಗಳನ್ನು ರೂ: 15,77,734-00 ಕ್ಕೆ ಖರೀದಿ ಮಾಡುವ ಬಗ್ಗೆ ಮಾರಾಟ ಕರಾರು ಮಾಡಿಸಿಕೊಂಡು ಆ ಕರಾರಿನ ಷರತ್ತಿನನ್ವಯ ಪಿರ್ಯಾದಿದಾರರು 01 ನೇ ಆರೋಪಿತೆಗೆ ಹಂತವಾಗಿ ಎಲ್ಲಾ ಹಣವನ್ನು ಸಂದಾಯ ಮಾಡಿದ ಬಳಿಕ ಪಿರ್ಯಾದಿದಾರರು ಪ್ಲಾಟ್ ನಂ: 103 ಮತ್ತು 104 ರಲ್ಲಿ ವಾಸ್ತವ್ಯ ಹೂಡಿ ವಾಹನ ನಿಲುಗಡೆಯ ಸೌಲಭ್ಯದೊಂದಿಗೆ ಕರಾರಿನ ಷರತ್ತಿನಂತೆ ಉಪಯೋಗಿಸುತ್ತಾ ಪ್ಲಾಟ್ ನಂ: 103 ನ್ನು ದಿನಾಂಕ: 26-07-2021 ರಂದು ದಸ್ತಾವೇಜು ಸಂಖ್ಯೆ: 28/21-22 ರಂತೆ Book No: 1 CD No: MGTD: 13 ರಂತೆಯೂ ಪ್ಲಾಟ್ ನಂ: 104 ನ್ನು ದಿನಾಂಕ: 26-07-2021 ರಂದು ದಸ್ತಾವೇಜು ಸಂಖ್ಯೆ: 2871/21-22 ರಂತೆ Book No: 1 CD No: MGTD: 13 ರಂತೆ ಸದ್ರಿ ಪ್ಲಾಟ್ಗಳನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡು ಪ್ಲಾಟ್ನಲ್ಲಿ ವಾಸ್ತವ್ಯವಿರುವ ಸಮಯ 02 ನೇ ಆರೋಪಿಯು ಪಿರ್ಯಾದಿದಾರರ ಪ್ಲಾಟ್ಗೆ ಬಂದು ತಾನು 01 ನೇ ಆರೋಪಿತೆಯಿಂದ ಪ್ಲಾಟ್ ನಂ: 103 ಮತ್ತು 104 ನ್ನು ಮಾರಾಟ ಕರಾರು ಮೂಲಕ ಖರೀದಿಸಿದ್ದೇನೆ ಎಂಬುದಾಗಿ ಪಿರ್ಯಾದಿದಾರರಲ್ಲಿ ತಕರಾರು ಮಾಡಿದಾಗ ಪಿರ್ಯಾದಿದಾರರು 01 ನೇ ಆರೋಪಿತೆಯನ್ನು ಸಂಪರ್ಕಿಸಲು ಯತ್ನಿಸಿದಾಗ 01 ನೇ ಆರೋಪಿತೆಯು ಪಿರ್ಯಾದಿದಾರರನ್ನು ಸಂಪರ್ಕಿಸಲು ತಪ್ಪಿಸುತ್ತಿದ್ದು, ಆ ಬಳಿಕ 02 ನೇ ಆರೋಪಿತನು Murlidhar Pai ಗೂಂಡಾಗಳೊಂದಿಗೆ ಪಿರ್ಯಾದಿದಾರರು ವಾಸ್ತವ್ಯವಿದ್ದ ಪ್ಲಾಟ್ಗೆ ಬಂದು ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದು, 01 ನೇ ಆರೋಪಿತೆಯು ಪಿರ್ಯಾದಿದಾರರಿಗೆ ಮಾರಾಟ ಮಾಡಿದ ಪ್ಲಾಟನ್ನು ಆ ಮೊದಲೇ 02 ನೇ ಆರೋಪಿತನಿಗೆ ಮಾರಾಟ ಮಾಡಿ ನಂಬಿಕೆ ದ್ರೋಹವೆಸಗಿ ಮೋಸ ಮಾಡಿದ್ದು, ಆ ಬಳಿಕ 02 ನೇ ಆರೋಪಿತನು ಪಿರ್ಯಾದಿದಾರರ ಪ್ಲಾಟ್ಗೆ ಬಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುವುದು ಎಂಬಿತ್ಯಾದಿ.

Traffic North Police Station                                                     

 ಪಿರ್ಯಾದಿ Gopala Krishna ದಿನಾಂಕ 20.03.2023 ರಂದು ತನ್ನ ಪತ್ನಿ ಶ್ರೀಮತಿ ಶಾಂತ (51 ವರ್ಷ) ರವರ ಜೊತೆಯಲ್ಲಿ ಕಿನ್ನಿಗೋಳಿಗೆ ಹೋಗುವರೆ  ಕೆರೆಕಾಡು ಪೇಟೆಗೆ ಹೋದವರು ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆರೆಕಾಡು ಬಸ್ಸು ನಿಲ್ದಾಣದ ಬಳಿ ತನ್ನ ಪತ್ನಿಯ ಜೊತೆ ರಸ್ತೆ ದಾಟುತ್ತಿದ್ದ ಸಮಯ ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ ಮೋಟಾರ್ ಸೈಕಲ್ ನಂಬ್ರ KA-19HM-4730 ನೇಯದನ್ನು ಅದರ ಸವಾರ ಹರೀಶ್ ಪೂಜಾರಿ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಮತಿ ಶಾಂತರವರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಂತರವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯ, ಮತ್ತು ತಲೆಯ ಹಿಂಭಾಗಕ್ಕೆ, ಬಲಕೈ ಮೊಣಗಂಟಿಗೆ ರಕ್ತ ಗಾಯವಾಗಿದ್ದು ಗಾಯಾಳು ಶಾಂತರವರನ್ನು ಚಿಕಿತ್ಸೆಯ ಬಗ್ಗೆ ಮುಲ್ಕಿ PHC ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ತನ್ನ ಮನೆಯವರೊಂದಿಗೆ ಚರ್ಚಿಸಿ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

Traffic South Police Station         

ದಿನಾಂಕ:21-03-2023 ರಂದು ಪಿರ್ಯಾದಿದಾರರಾದ ಹರ್ಷಿತ್ ಎಮ್ ರಾವಲ್ ರವರು ಕಲ್ಲಾಪು ಬಳಿ ಇರುವ ಬ್ಲ್ಯಾಕ್ ಶುಗರ್ ರೆಸ್ಟೊರೆಂಟಿನಲ್ಲಿ ರಾತ್ರಿ ಪಾಳಿಯ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು ರೆಸ್ಟೊರೆಂಟಿನ ಹೊರಗಡೆ ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು ರಾತ್ರಿ 09.00 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ.66 ರಲ್ಲಿ ಬರುತ್ತಿದ್ದ ಕೆಮಿಕಲ್ ತುಂಬಿದ ಟ್ಯಾಂಕರ್ ಲಾರಿ ನಂಬ್ರ MH-46-BF-4020 ನೇದನ್ನು ಅದರ ಚಾಲಕ ರಮೇಶ್ ಮೌರ್ಯ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಲ್ಲಾಪುವಿನ ಬ್ಲಾಕ್ ಶುಗರ್ ರೆಸ್ಟೂರೆಂಟಿನ ಹತ್ತಿರ ತಲುಪುತ್ತಿದ್ದಂತೆ ಟ್ಯಾಂಕರ್ ಲಾರಿಯನ್ನು ರಸ್ತೆ ಮಧ್ಯೆದ ಡಿವೈಡರಿಗೆ ಡಿಕ್ಕಿ ಪಡಿಸಿ ಮುಂದಕ್ಕೆ ಹೋಗಿ ಲಾರಿಯನ್ನು ರಸ್ತೆ ಮಧ್ಯೆದ ಡಿವೈಡರ್ ಮೇಲೆ ಮಗುಚಿ ಹಾಕಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಹಾಗೂ ಟ್ಯಾಂಕರ್ ಲಾರಿ ಚಾಲಕನಿಗೆ ತಲೆಯ ಹಿಂಬದಿಗೆ ಹಾಗೂ ಗಲ್ಲಕ್ಕೆ ರಕ್ತಗಾಯವಾಗಿ ಆತನನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Ullal PS

ದಿನಾಂಕ 21.03.2023 ರಂದು ಪೊಲೀಸ್ ಉಪ ನಿರೀಕ್ಷಕರಾದ ಮಂಜುಳಾ ಎಲ್ ಹಾಗೂ ಸಿಬ್ಬಂದಿಯವರಾದ ಹೆಚ್ ಸಿ 386 ರಂಜಿತ್ ಕುಮಾರ್, ಪಿ ಸಿ 941 ಅಶೋಕ್  ಕುಮಾರ್ ನೇಯವರೊಂದಿಗೆ ಮಂಗಳೂರು 7 ನೇ ಜೆ ಎಮ್ ಎಫ್ ಸಿ ನ್ಯಾಯಾಲಯದ ಉಳ್ಳಾಲ ಪೊಲೀಸ್ ಠಾಣಾ ಅ ಕ್ರ 42/2019 ಕಲಂ 143, 147, 148, 504, 323, 324, 307,354 ಜೊತೆಗೆ 149 ಐಪಿಸಿ ಮತ್ತು ಕಲಂ 2(ಬಿ) ಕೆಪಿಡಿಎಲ್ ಪಿ ಆಕ್ಟ್ 1981) ಮತ್ತು ಸಿಸಿ ನಂಬ್ರ 271/2020  2) ಉಳ್ಳಾಲ ಪೊಲೀಸ್ ಠಾಣಾ ಅ ಕ್ರ 43/2019 ಕಲಂ 143, 147, 148,341,  323, 354,427 ಜೊತೆಗೆ 149 ಐಪಿಸಿ ನೇದರಲ್ಲಿಯ ಆರೋಪಿತನಾದ ನೌಫಲ್ @ ಕಿಡ್ನಿ ನೌಫಲ್, ಪ್ರಾಯ: 30 ವರ್ಷ, ತಂದೆ: ಅಬ್ದುಲ್ ಲತೀಫ್, ವಾಸ: ಶಾಂತಿ ಭಾಗ್ ಮನೆ, ಯನಪೋಯಾ ಆಸ್ಪತ್ರೆ ಬಳಿ, ಕೋಟೆಕಾರು ಗ್ರಾಮ, ಉಳ್ಳಾಲ ತಾಲೂಕು  ಮಂಗಳೂರು ನಗರ ಈತನು ನ್ಯಾಯಲಯಕ್ಕೆ ಹಾಜರಾಗದೇ ದೀರ್ಘ ಸಮಯದಿಂದ ತಲೆಮರಿಸಿಕೊಂಡಿದ್ದು ಈ ದಿವಸ ಬೆಳಗ್ಗೆ 10:00 ಗಂಟೆಗೆ ವಾರೆಂಟ್  ಆಸಾಮಿಯ ಪತ್ತೆಯ ಬಗ್ಗೆ ಆತನ ಮನೆಯಲ್ಲಿ ವಿಚಾರಿಸಿದಾಗ ವಾರೆಂಟ್ ಆಸಾಮಿಯು  ಮನೆಯಲ್ಲಿ ಗೈರು ಹಾಜರಿದ್ದು, ನಂತರ ಮಾಹಿತಿ ತಿಳಿದುಕೊಂಡು  ಬೆಳ್ಮ ಗ್ರಾಮದ ದೇರಳಕಟ್ಟೆ ಜಂಕ್ಷನ್ ನಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ತಂದು ಬೆಳಗ್ಗೆ 11:00 ಗಂಟೆಗೆ ವಾರೆಂಟ್ ನೊಂದಿಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಆರೋಪಿಯು ದೀರ್ಘ ಸಮಯದವರೆಗೆ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುವುದರಿಂದ ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಸಾರಾಂಶ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 12:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080