ಅಭಿಪ್ರಾಯ / ಸಲಹೆಗಳು

Crime Reported in : Barke PS  

ಗೋವಾ ರಾಜ್ಯದ ಪಣಜಿ ಪೊಲೀಸ್ ಠಾಣೆಯಿಂದ ಮಾನ್ಯ ಮಂಗಳೂರು ಪೊಲೀಸ್ ಆಯುಕ್ತರ ಕಛೇರಿಯ ಮೂಲಕ ಬರ್ಕೆ ಪೊಲೀಸ್ ಠಾಣೆಗೆ ಬಂದ ಪಣಜಿ ಪೊಲೀಸ್ ಠಾಣಾ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರು ಮಂಗಳೂರು ಮಠದ ಕಣಿ ರಸ್ತೆಯ  Apartment  ನಲ್ಲಿ ಮಗನೊಂದಿಗೆ ವಾಸವಾಗಿದ್ದಾಗಿಯೂ ದಿನಾಂಕ:24.01.2022 ರಂದು ಮಂಗಳೂರಿನ ಮನೆಯಲ್ಲಿರುವ ಸಮಯ ಮಧ್ಯಾಹ್ನ 12:00 ಗಂಟೆಯಿಂದ 12:30 ಗಂಟೆಯ ಮಧ್ಯೆದ ಅವಧಿಯಲ್ಲಿ ಪಿರ್ಯಾದಿದಾರರ ಮೊಬೈಲ್ ನಂ: ನೇದಕ್ಕೆ ಮೊಬೈಲ್ ನಂ:9305169546 ಮತ್ತು 9903953483 ನೇದರಿಂದ ಕರೆ ಮಾಡಿ ಸುನೀಲ್ ಶರ್ಮ ಎಂದು ಪರಿಚಯಿಸಿ ನನ್ನ ಸಹೋದರ ನಿಮ್ಮ ಮೊಬೈಲ್ ನಂಬ್ರವನ್ನು ನನಗೆ ನೀಡಿದ್ದು ನೀವು ಬನಾರಸ್ ಹಿಂದೂ ಯುನಿವರ್ ಸಿಟಿಯಲ್ಲಿ ಇಂಜಿನೆಯರಿಂಗ್ ವಿದ್ಯಾಭ್ಯಾಸ ಮಾಡುವ ಸಮಯ ನನ್ನ ತಮ್ಮ ನಿಮ್ಮೊಂದಿಗೆ ವಿದ್ಯಾಭ್ಯಾಸವನ್ನು ಮಾಡಿರುವುದಾಗಿ ನನ್ನ ಸಹೋದರನಿಗೆ ಆಪರೇಷನ್ ಮಾಡಲು ಸುಮಾರು 5,00,000/- ರೂಪಾಯಿಗಳ ಅಗತ್ಯವಿದೆ ಎಂದು ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರ ಪಣಜಿ ಐಸಿಐಸಿಐ ಬ್ಯಾಂಕ್ ಖಾತೆ ನೇದರಿಂದ ಓಟಿಪಿ ನಂಬ್ರವನ್ನು ನೀಡಿ ಡೆಬಿಟ್ ಕಾರ್ಡ್ ನಂನೇದರ  ಮುಖಾಂತರ ರೂ 4,50,000/- ವನ್ನು ವರ್ಗಾಯಿಸಿಕೊಂಡಿದ್ದು ಸ್ವಲ್ಪ ಸಮಯದ ನಂತರ ಆರೋಪಿತನು ಪುನಃ ರೂ. 20,000/- ವರ್ಗಾಯಿಸಿಕೊಂಡಿರುತ್ತಾನೆ ಬ್ಯಾಂಕ್ ಖಾತೆಯಲ್ಲಿ ರೂ.65,000/- ಫ್ರೀಜ್ ಆಗಿದ್ದು ಪಿರ್ಯಾದಿದಾರರಿಗೆ ಒಟ್ಟು 5,35,000/-ರೂಪಾಯಿ ನಷ್ಟುಉಂಟಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.

Crime Reported in CEN Crime PS

ದಿನಾಂಕ 22-09-2022 ರಂದು  ಬೆಳಿಗ್ಗೆ 09-30 ಗಂಟೆಗೆ ಕುದ್ರೋಳಿಯ ನಡು ಪಳ್ಳಿ ರಸ್ತೆಯ ಬಳಿ ಸಾರ್ವಜನಿಕರಿಗೆ ತೊಂದರೆ ಯಾಗುವ ರೀತಿಯಲ್ಲಿ ವರ್ತಿಸುತ್ತಿರುವ ಅಬ್ದುಲ್ ಜಲೀಲ್  ವರ್ಷ 30 CPC ಕಾಂಪೌಂಡ್ ಕರ್ಬಲ ರಸ್ತೆ ಕುದ್ರೋಳಿ  ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ  ಮಾದಕ ವಸ್ತು ಗಾಂಜಾವನ್ನು  ಸೇದಿರುವುದನ್ನು ಒಪ್ಪಿರುತ್ತಾನೆ  ಸದ್ರಿಯವನನ್ನು  ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದಾಗಿ ನೀಡಿದ ದೃಢಪತ್ರದಂತೆ ಆರೋಪಿ ಅಬ್ದುಲ್ ಜಲೀಲ್  ಎಂಬವನ ವಿರುದ್ಧ ತಯಾರಿಸಿದ ಪ್ರ.ವ.ವರದಿ.

Crime Reported in Traffic North Police Station                 

ದಿನಾಂಕ: 21-09-2022 ರಂದು ಪಿರ್ಯಾದಿದಾರರಾದ ಅಹಮ್ಮದ್ ಇಮ್ರಾನ್ ರವರು ಅವರ ಅವರು ಕೆಲಸ ಮಾಡುತ್ತಿದ್ದ ಮೆಡಿಕಲ್ ಶಾಪ್ ಮಾಲೀಕರ ಬಾಬ್ತು KA-19-HB-0387 ನಂಬ್ರದ ಮೊಟಾರ್ ಸೈಕಲಿನಲ್ಲಿ ತನ್ನ ಪತ್ನಿ ಸೈನಾಜ್ (27) ಹಾಗೂ ಮಕ್ಕಳಾದ ಆಯಿಷಾ ಸಲ್ವಾ(2)  ಮತ್ತು ಅಹಮ್ಮದ್ ಶಬೀಲ್ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಾ NH 66ರಲ್ಲಿ ಉಳ್ಳಾಲದಿಂದ ಕಾಟಿಪಳ್ಳ ಕಡೆಗೆ ಬರುತ್ತಾ ಸಮಯ ಸುಮಾರು ರಾತ್ರಿ 9:00 ರಿಂದ 9:30 ರ ಮಧ್ಯೆ ಕುಳಾಯಿ-ಹೊನ್ನಕಟ್ಟೆ ಮಧ್ಯೆಯಿರುವ RANA GRANITE & TILES ಶಾಪಿನ ಎದುರು ತಲುಪುತ್ತಿದ್ದಂತೆ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬಂದಂತಹ ಯಾವುದೋ ಘನ ವಾಹನವನ್ನು ಅದರ ಚಾಲಕ ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಎಡಭಾಗಕ್ಕೆ ತಾಗಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ಬಲಗೈ, ಎಡಗೈ ಮತ್ತು ಬಲಕಾಲಲ್ಲಿ ಅಲ್ಲಲ್ಲಿ ತರಚಿದ ಗಾಯ, ಬಲಹಣೆಯ ಮತ್ತು ಬಲಕಣ್ಣಿನ ಕೆಳಗೆ ಗುದ್ದಿದ ರೀತಿಯ ರಕ್ತಗಾಯವಾಗಿರುತ್ತದೆ, ಪಿರ್ಯಾದಿದಾರರ ಪತ್ನಿ ಸೈನಾಜ್ ರವರಿಗೆ ಬಲಕೈ ರಟ್ಟೆಯ ಬಳಿ ಚರ್ಮ ಕಿತ್ತು ಹೋದ ರಕ್ತಗಾಯ, ಬಲಕೈ ಮೊಣಗಂಟಿನ ಬಳಿ ಮೂಳೆ ಮುರಿದಂತಹ ಚರ್ಮ ಕಿತ್ತು ಹೋದ ಗಂಭೀರ ಸ್ವರೂಪದ ಗಾಯ ಹಾಗೂ ಹಣೆಯ ಬಲಬದಿ ಗುದ್ದಿದಂತಹ ರಕ್ತಗಾಯವಾಗಿರುತ್ತದೆ, ಮಕ್ಕಳಾದ ಆಯಿಷಾ ಸಲ್ವಾಳ ಎಡಕೈಯ ಮೊಣಗಂಟಿನ ಬಳಿ ತರಚಿದ ಗಾಯ ಮತ್ತು ಅಹಮ್ಮದ್ ಶಬೀಲ್ ಗೆ ತಲೆಯ ಹಿಂಭಾಗ ತರಚಿದ ಗಾಯವಾಗಿದ್ದು, ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ತೆರಳಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಅಪಘಾತ ಪಡಿಸಿದ ವಾಹನ ಚಾಲಕ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Crime Reported in Traffic South Police Station

ದಿನಾಂಕ 22-09-2022 ರಂದು ಪಿರ್ಯಾದಿ SANTHOSH KUMAR ದಾರು ಕಾರು ನಂಬ್ರ  KA-19-MD-0716  ನೇದರಲ್ಲಿ  ಚಾಲಕರಾಗಿ  ಮತ್ತು   ಚಂದ್ರಹಾಸ ,  ಮತ್ತು ಅರ್ಚನರವರನ್ನು  ಸಹ ಪ್ರಯಾಣಿಕರನ್ನಾಗಿ  ಕುಳ್ಳಿರಿಸಿಕೊಂಡು ಕಾರನ್ನು   ಎಡಪದವಿನಿಮದ   ಮಂಗಳೂರು  ಕಡೆಗೆ   ರಾಷ್ಟ್ರೀಯ ಹೆದ್ದಾರಿ  169 ರ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವ  ಸಮಯ  ಸುಮಾರು   ಬೆಳಿಗ್ಗೆ  08:15  ಗಂಟೆಗೆ  ಕುಡುಪು  ಕಟ್ಟೆ  ಎಂಬಲ್ಲಿಗೆ   ತಲುಪುತ್ತಿದ್ದಂತೆ  ಅವರ  ಮುಂದೆ   ಹೋಗುತ್ತಿದ್ದ  KA-19-AB-4774   ಬಸ್  ಜನರನ್ನು   ಇಳಿಸಲು  ನಿಲ್ಲಿಸಿದಾಗ ಪಿರ್ಯಾದಿದಾರು  ಕಾರನ್ನು  ನಿಲ್ಲಿಸಿದಾಗ  ಅವರ   ಹಿಂದಿನಿಂದ  ವಿಶಾಲ್   ಎಂಬ   ಹೆಸರಿನ  ಬಸ್  ನೊಂದಣಿ  ಸಂಖ್ಯೆ   KA-20-D-7185  ನೇದನ್ನು  ಅದರ  ಚಾಲಕ  ಪ್ರಕಾಶ್  ಎಂಬಾತನು  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ   ಚಲಾಯಿಸಿಕೊಂಡು   ಬಂದು  ಕಾರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರ   ಕಾರು ಮುಂದಕ್ಕೆ  ಚಲಿಸಿ  ಮುಂದೆ ನಿಂತಿದ್ದ   KA-19-AB-4774   ಬಸ್ಸಿಗೆ  ಡಿಕ್ಕಿಯಾಗಿರುತ್ತದೆ. ಈ ಅಪಘಾತದಿಂದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ  ಗಾಯಗಳಾಗಿರುವುದಿಲ್ಲ. ಆದರೆ ಪಿರ್ಯಾದಿದಾರರ  ಕಾರಿನ  ಬೋನೆಟ್  , ಮುಂದಿನ  ಗ್ಲಾಸ್  , ಬಂಪರ್ , ರೇಡಿಯೇಟರ್ , ಹೆಡ್ ಲೈಟ್ ಹಿಂದಿನ  ಗ್ಲಾಸ್ ಮತ್ತು   ಡಿಕ್ಕಿ  ಬಂಪರ್   ಜಖಂಗೊಂಡಿರುತ್ತದೆ ಎಂಬಿತ್ಯಾದಿ

Crime Reported in Mangalore South PS                                   

ಪಿರ್ಯಾದಿದಾರರಾದ ಪ್ರಶಾಂತ್ ರಂಜನ್ ಸಿನ್ಹ ರವರು  ದಕ್ಷಿಣ ರೈಲ್ವೇಯ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಸ್ಟೇಷನ್ ಮ್ಯಾನೇಜರ್ ಆಗಿದ್ದು, ದಿನಾಂಕ 22-09-2022 ರಂದು ಸಮಯ 15:15 ಗಂಟೆಯಿಂದ 15:25 ಗಂಟೆ ಮಧ್ಯೆ ಸುಮಾರು 50 ಜನರ ಗುಂಪು ಯಾವುದೇ ಅನುಮತಿ ಪಡೆಯದೇ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಮುಂಭಾಗ ಅಕ್ರಮ ಕೂಟ ಸೇರಿಕೊಂಡು ಜೋರಾಗಿ ಕನ್ನಡ ಭಾಷೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಇದ್ದಾಗ ಕರ್ತವ್ಯದಲ್ಲಿದ್ದ RPF ಸಿಬ್ಬಂದಿ ರೈಲ್ವೇ ನಿಲ್ದಾಣದ ಮುಂಭಾಗ ಗುಂಪು ಸೇರದಂತೆ ಸೂಚಿಸಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿಯವರ ಮಾತನ್ನೂ ಕೇಳದೇ ಇದ್ದಾಗ RPF ಸಿಬ್ಬಂದಿಯವರು ಸ್ಥಳೀಯ ಪೊಲೀಸರನ್ನು ಕರೆಯಿಸಿದಾಗ ಅಕ್ರಮ ಕೂಟ ಸೇರಿದ್ದ ಜನರು ಸ್ಥಳದಿಂದ ಚದುರಿರುತ್ತಾರೆ.  ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಮುಂಭಾಗ ಅಕ್ರಮ ಕೂಟ ಸೇರಿಕೊಂಡು ಕರ್ತವ್ಯದಲ್ಲಿದ್ದ RPF ಸಿಬ್ಬಂದಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರತಿಭಟನಕಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 22-09-2022 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080