ಅಭಿಪ್ರಾಯ / ಸಲಹೆಗಳು

Crime Reported in : Kavoor PS

ಪಿರ್ಯಾದಿ RAKESH SHETTY ದಾರರು ದೇರೆಬೈಲ್ - ಮಾಲೆಮಾರ್ ರಸ್ತೆಯಲ್ಲಿ ಕೊಜಪಾಡಿ ಟವರ್ ನಲ್ಲಿ ಹೌಸ್ ಆಫ್ ಚೆಸ್ ಎಂಬ ಹೋಟೆಲ್ ನಡೆಸಿಕೊಂಡಿದ್ದು , ಸದ್ರಿ ಹೋಟೆಲ್ ನ್ನು ಕಳೆದ 20 ದಿನಗಳಿಂದ ಬಂದು ಮಾಡಿದ್ದು. ಪಿರ್ಯಾದಿದಾರರು ದಿನಾಂಕ 19/10/2022 ರಂದು ಸಂಜೆ 6.30 ಗಂಟೆಗೆ ಹೋಟೆಲ್ ನ್ನು ತೆರೆದು ಸ್ವತ್ತುಗಳನ್ನು ಪರಿಶೀಲಿಸಿ ಬಾಗಿಲು ಹಾಕಿ ಹೋಗಿರುತ್ತಾರೆ. ದಿನಾಂಕ 21/10/2022 ರಂದು ಬೆಳಿಗ್ಗೆ 11.00 ಗಂಟೆಗೆ ಬಂದು ನೋಡಿದಾಗ ಹೋಟೆಲ್ ಗೆ ಅಳವಡಿಸಿದ ಬೀಗವನ್ನು ಜಖಮಗೊಳಿಸಿ ಬಾಗಿಲು ತೆರದಂತೆ ಕಂಡು ಬಂದಿದ್ದು ಪಿರ್ಯಾದಿದಾರರು ಹೋಟೆಲ್ ನ ಬಾಗಿಲು ತೆರೆದು ನೋಡಿದಾಗ ಹೋಟೆಲ್ ನ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಪರಿಶೀಲಿಸಿದಾಗ ಗ್ರೌಂಡ್ ಪ್ಲೋರ್ ನಲ್ಲಿದ್ದ 2 ಸ್ಪಿಟ್ ಎಸಿ ಮತ್ತು ಔಟರ್, 3 ಡಕ್ಕಿಂಗ ಮೋಟಾರ್ ಮತ್ತು 5 ಟಕ್ಕಿಂಗ್ ವುಡ್ ಪೀಸ್ ಗಳನ್ನು ಯಾರೋ ಕಳವು ಮಾಡಿರುವುದಾಗಿದೆ. ಕಳುವಾದ ಸ್ವತ್ತುಗಳ ಅಂದಾಜು ಮೌಲ್ಯ  ರೂ. 1,35,000/- ಆಗಿರುತ್ತದೆ ಆದ್ದರಿಂದ ಸೂಕ್ತ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿ.

Mangalore South PS                      

ಪಿರ್ಯಾದಿದಾರರಾದ ರಾಜೇಂದ್ರ ಬಿ. ರವರಿಗೆ ದಿನಾಂಕ 21-10-2022 ರಂದು 11-30 ಗಂಟೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಿಲ್ದಾಣದ ಬಳಿಯ ಭಾರತ್ ಪೆಟ್ರೋಲ್ ಪಂಪ್ ಪರಿಸರದಲ್ಲಿ  ಅಜಯ್ ಮತ್ತು ರಾಜೇಶ್ ಎಂಬವರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ 14-00  ಗಂಟೆಗೆ ತಲುಪಿ  ಅಲ್ಲಿ ಚೀಟಿಯನ್ನು ಹಿಡಿದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ  ರಾಜೇಶ್ , ಪ್ರಾಯ 36 ವರ್ಷ,  ವಾಸ: “ಚಕ್ರ ತೀರ್ಥ “ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಕುಂಜತ್ತೂರು ಕಾಸರಗೋಡು ಜಿಲ್ಲೆ,ಕೇರಳ ರಾಜ್ಯ ಹಾಗೂ ಇನ್ನೊಬ್ಬ ಅಜಯ್ ಪ್ರಾಯ 28 ವರ್ಷ,   ವಾಸ: ಕೊಪ್ಪಳ ಮನೆ, ಪಾವೂರು ಅಂಚೆ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಇವರನ್ನು ವಿಚಾರಿಸಲಾಗಿ ಇವರು ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದೃಷ್ಠದ ಆಟವಾದ ಮಟ್ಕ ದಂಧೆಯನ್ನು ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಅವರಿಂದ ಮಟ್ಕಾ ದಂಧೆಗೆ ಉಪಯೋಗಿಸಿಕೊಂಡಿದ್ದ ಮಟ್ಕ ನಂಬರ್ ಬರೆದ ಚೀಟುಗಳು -4, ಬಾಲ್ ಪೆನ್ -1, ರಾಜೇಶ್ ರವರ ವಶದಿಂದ ರೂ. 5740/-, ಅಜಯ್ ರವರ ವಶದಿಂದ ರೂ. 3760/- ಒಟ್ಟು ನಗದು ಹಣ ರೂ. 9500/-  ನ್ನು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿತರಾದ  ರಾಜೇಶ್ ಹಾಗೂ ಅಜಯ್  ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿರುತ್ತದೆ.

Ullal PS

ಪಿರ್ಯಾದಿ ಶಿವಾನಂದರ ಪತ್ನಿ ಪದ್ಮಿನಿಯವರ ಅಕ್ಕ ಶ್ರೀಮತಿ ಜಯಶ್ರಿ  (37) ರವರು ಮಂಗಳೂರು ಕಂಕನಾಡಿ ಜುವೆಲರ್ಸ್ ಎಂಬಲ್ಲಿ ಕೆಲಸ ಮಾಡುತಿದ್ದು ದಿನಾಂಕ 20-10-2022 ರಂದು ಬೆಳಿಗ್ಗೆ 9.00 ಗಂಟೆಗೆ ಮನೆಯಾದ ಕೋಟೆಕಾರ್ ಅಡ್ಕದಿಂದ  ಮಗಳು ಭೂಮಿಕಾಳ  ಜೊತೆ ಸ್ಕೂಟರ್ ನಂಬ್ರ KL 14 N 2665 ರಲ್ಲಿ ಹೊರಟು ಮಂಗಳೂರು ಪಳ್ನಿರ್ ನಲ್ಲಿ ಇಳಿದು ಕೆಲಸಕ್ಕೆ ಹೋಗದೆ ಸಂಜೆ ಸುಂಆರು 5.00 ಗಂಟೆಗೆ ಸೋಮೇಶ್ವರದಲ್ಲಿರುವ ಜಯಶ್ರೀಯ ಚಿಕ್ಕಪ್ಪ ಈಶ್ವರ ರವರ ಮನೆಗೆ ಹೋದವರು ಮನೆಯಲ್ಲಿ ಸಿಗದ ಕಾರಣ ಅಲ್ಲಿಂದ ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದು ಕಾಣೆಯಾದವರನ್ನು ನೆರೆಕರೆ ಮತ್ತು ಸಂಬಂಧಿಕರಲ್ಲಿ ಹುಡುಕಾಡಿದಲ್ಲಿ ಪತ್ತೆ ಯಾಗದೆ ಇದ್ದ ಕಾರಣ  ಜಯಶ್ರೀಯವರನ್ನು ಪತ್ತೆ ಹಚ್ಚಿಕೊಡುವಂತೆ ದಿನಾಂಕ 21-10-2022 ರಂದು ನೀಡಿದ ದೂರಿನ ಮೇರೆಗೆ ಧಾಖಲಾದ ಪ್ರಕರಣದ ಸಾರಾಂಶ

ಇತ್ತೀಚಿನ ನವೀಕರಣ​ : 22-10-2022 08:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080