ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS  

ಪಿರ್ಯಾಧಿದಾರರು ವಾಮಾಂಜೂರು ತಿರುವೈಲು ಗ್ರಾಮದಲ್ಲಿರುವ ಲೂವಿ ಪಿಂಟೋ ರವರ ಮಾಲಕತ್ವದ ವೈಲ್ಡ್ ಸ್ಪೀರಿಟ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮ್ಯಾನೇಜರ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 21/11/2022 ರಂದು ಎಂದಿನಂತೆ ರಾತ್ರಿ 11-20 ಗಂಟೆಗೆ ಬಾರ್ ಕೌಂಟನ್ನು ಬಂದ್ ಮಾಡಿ ಶಟರನ್ನು ಎಳೆದು ಒಳಗೆ ಕುಳಿತು ಲೆಕ್ಕಚಾರವನ್ನು ನೋಡಿಕೊಳ್ಳುತ್ತಿದ್ದು ನಂತರ ಸುಮಾರು 11-30 ಕ್ಕೆ ಸದ್ರಿ ಬಾರಿನ ಮಾಮೂಲಿ ಗಿರಾಕಿಯಾದ ಲಾಯ್ಡ್ ಎಂಬಾತನು ಬಿಳಿಯ ಬಣ್ಣದ KA 19 HH 6064 ನೇ ಸ್ಕೂಟರ್ ನಲ್ಲಿ ಬಂದು ಸದ್ರಿ ಬಾರಿನ ಶಟರ್ ನ್ನು ತೆಗೆದು ಬಾರಿನ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರನ್ನು ಮಾಲು(ಮದ್ಯ) ಕೊಡಿ ಎಂದು ಕೇಳಿದಾಗ ಪಿರ್ಯಾಧಿದಾರರು ಬಾರ್ ಕೌಂಟರ್ ಈಗಾಗಲೇ ಬಂದ್ ಆಗಿರುತ್ತದೆ. ಮಾಲ್ ಕೊಡಲಾಗುವುದಿಲ್ಲ ಎಂದು ಹೇಳಿದಾಗ ಲಾಯ್ಡ್ ನು “ಬ್ಯಾವರ್ಸಿ, ರಂಡೇ ಮಗ " ನಿನಗೆ ಮಾಲ್ ಕೊಡಲು ಆಗುವುದಿಲ್ಲವಾ ಎಂದು ಕೈಯಲ್ಲಿ ಚೂರಿಯನ್ನು ಹಿಡಿದು ಪಿರ್ಯಾಧಿದಾರರಿಗೆ ತೋರಿಸಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಎಂಬಿತ್ಯಾದಿ.

                               

 Mulki PS

ದಿನಾಂಕ 21-11-2022 ರಂದು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು, ನಾಗಬನದ ಬಳಿ, ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ಉಲಾಯಿ- ಪಿದಾಯಿ ಎಂಬ ನಸೀಬಿನ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನ ಮೇರೆಗೆ ಮುಲ್ಕಿ ಪೊಲೀಸ್  ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಾರುತಿ ಪಿ ರವರು ಸದ್ರಿ ಸ್ಥಳಕ್ಕೆ 10.30 ಗಂಟೆಗೆ ದಾಳಿ ಮಾಡಿ Mahanthesh, Sangayya Hirematta, Manjunatha, Maruthi Yane Hanumantha ಎಂಬ 4  ಮಂದಿ ಆರೋಪಿಗಳು ಹಾಗೂ  ಆರೋಪಿಗಳ ವಶದಲ್ಲಿದ್ದ ಒಟ್ಟು 3830=00 ರೂ. ಹಣ  ಮತ್ತು ಜೂಜಾಟಕ್ಕೆ ಉಪಯೋಗಿಸಿದ ಕಪ್ಪು ಬಣ್ಣದ ಹಳೆಯ ಶೀಟ್- 01,  ಜೂಜಾಟಕ್ಕೆ ಬಳಸಿದ ಇಸ್ಫೀಟ್ ಎಲೆ-52, ಗಳನ್ನು ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು"ಎಂಬಿತ್ಯಾದಿ

 

2) ದಿನಾಂಕ 22-11-2022 ರಂದು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು, ಯಲ್ಲಮ್ಮ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರುಗಳು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ಒಳಗೆ ಹೊರಗೆ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಮುಲ್ಕಿ ಪೊಲೀಸ್  ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ವಿನಾಯಕ ತೊರಗಲ್ ರವರು ಸಿಬ್ಬಂದಿಗಳ ಜೊತೆ 10-50 ಗಂಟೆಗೆ ದಾಳಿ ನಡೆಸಿ ಇಸ್ಪೀಟು ಜೂಜಾಟ ಆಡುತ್ತಿದ್ದ Santhosh, Bashir, Pradeep, Mustafa, Adivappa somugunda, Vishwanatha ಎಂಬ  6 ಜನ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟು ಜೂಜಾಟಕ್ಕೆ ಪಣವಾಗಿಟ್ಟ ಒಟ್ಟು 3350=00 ರೂ. ಹಣ, ಜೂಜಾಟಕ್ಕೆ ಬಳಸಿದ್ದ ಇಸ್ಪೀಟು ಎಲೆಗಳು-52, ಮತ್ತು ಜೂಜಾಟ ಆಡಲು ಇಸ್ಪೀಟು ಎಲೆಗಳನ್ನು ಹಾಕಲು ಹಾಸಿದ್ದ ಹಳೆಯ  ನ್ಯೂಸ್ ಪೇಪರ್-1 ಇವುಗಳನ್ನು ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು"ಎಂಬಿತ್ಯಾದಿ.

 

Ullal PS

ಪಿರ್ಯಾದಿದಾರರಾದ ಶ್ರೀಮತಿ ಭವ್ಯ.ಎಸ್ (32) ರವರು ಸುಮತಿಯವರ ಬಾಡಿಗೆ ಮನೆ ವಾಸುಕಿ ನಗರ ತೊಕ್ಕೋಟ್ಟು ಓವರ್ ಬ್ರಿಡ್ಜ್ ಡೌನ್ ರೋಡ್ ಉಳ್ಳಾಲ ಗ್ರಾಮ. ಎಂಬಲ್ಲಿ ಕಳೆದ 2 ವರ್ಷಗಳಿಂದ  ಗಂಡ ಶ್ಯಾಮ, ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ದಿನಾಂಕ 09-11-2022 ರಂದು ಬೆಳಿಗ್ಗೆ 08-30 ಗಂಟೆಗೆ ಫಿರ್ಯಾದಿದಾರರ ಗಂಡ ಶ್ಯಾಮ (42) ರವರು ಎಂದಿನಂತೆ ಪೈಂಟಿಂಗ ಕೆಲಸಕ್ಕೆ ಮನೆಯಿಂದ ಹೋಗಿ ಬರುತ್ತೇನೆಂದು ಫಿರ್ಯಾದಿದಾರರಲ್ಲಿ ಹೇಳಿ ಹೋರಟು ಹೋಗಿರುತ್ತಾರೆ. ನಂತರ ಕೆಲಸ ಮುಗಿಸಿಕೊಂಡು ವಾಡಿಕೆಯಂತೆ ಸಂಜೆ 06-30 ಅಥವಾ 07-00 ಗಂಟೆಗೆ ವಾಪಾಸು ಬರಬೇಕಾದವರು ರಾತ್ರಿಯಾದರು ಬಂದಿರುವುದಿಲ್ಲ. ನಂತರ ಫಿರ್ಯಾದಿದಾರರು ಪಕ್ಕದ ಮನೆಯಲ್ಲಿ ವಾಸವಾಗಿರುವ ಗಂಡನ ತಂದೆ-ತಾಯಿಯವರಿಗೆ ಶ್ಯಾಮರವರು ಕೆಲಸಕ್ಕೆ ಹೊದವರು ರಾತ್ರಿ ಯಾದರು ಬಂದಿರುವುದಿಲ್ಲ ಎಂದು ತಿಳಿಸಿದಾಗ, ಸಂಭಂದಿಕರ ಮನೆ, ಕೆಲಸ ಮಾಡುತ್ತಿದ್ದ ಸ್ನೇಹಿತರಲ್ಲಿ, ಮತ್ತು ಆಸುಪಾಸಿನಲ್ಲಿ ಪತ್ತೆಗೆ ಪ್ರಯತ್ನಿಸಿದಾಗ ಪತ್ತೆಯಾಗಿರುವುದಿಲ್ಲ, ಆದರಿಂದ ಈ ದಿನ 21-11-2022 ರ ತನಕ ಪತ್ತೆಗೆ ಪ್ರಯತ್ನಿಸಿದರು ಫಿರ್ಯಾದಿದಾರರ ಗಂಡ ಪತ್ತೆಯಾಗಿರುವುದಿಲ್ಲ ಎಂದು ದೂರು ಅರ್ಜಿ.

 

 

 

ಇತ್ತೀಚಿನ ನವೀಕರಣ​ : 22-11-2022 07:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080