Crime Reported in : Mangalore West Traffic PS
ಪಿರ್ಯಾದಿ ಜಿ.ಗೋಕುಲ್ ದಾಸ್ ಕಾಮತ್ ಪ್ರಾಯ 64 ವರ್ಷ ತಂದೆ:ದಿವಂಗತ ಜನಾರ್ಧನ ಕಾಮತ್ ವಾಸ:ಮನೆ ನಂಬ್ರ:302 ಪೂಜಾನ ಪ್ಯಾಲೇಸ್ ಕೊಟ್ಟಾರ ಕ್ರಾಸ್ ನಿಲ್ದಾಣದ ಎದುರು ಬಿಜೈ ಮಂಗಳೂರು ರವರು ದಿನಾಂಕ:09-05-2022 ರಂದು ತನ್ನ ಅಂಗಡಿಯಿಂದ ತನ್ನ ಮನೆಗೆ ದ್ವಿ ಚಕ್ರ ವಾಹನ ಸಂಖ್ಯೆ:KA-19-EM-4977ನೇದರಲ್ಲಿ ಹೋಗುತ್ತಾ ಸಮಯ ಸುಮಾರು 20-20 ಗಂಟೆಯ ವೇಳೆಗೆ ಕಾಫಿಕಾಡ್ ಶಾಲೆಯ ಬಳಿ ತಲುಪಿದಾಗ KA-41-P-8504ನೇ ಕಾರನ್ನು ಅದರ ಚಾಲಕ ಅತೀ ವೇಗದಿಂದ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನದ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ದ್ವಿ ಚಕ್ರ ವಾಹನ ಸವಾರ ಶ್ರೀ ಗೋಕುಲ್ ದಾಸ್ ಕಾಮತ್ ರವರು ಗಾಯಗೊಂಡಿದ್ದು , ಗಾಯಗೊಂಡವರನ್ನು ಸಾಕ್ಷಿ 1 ಮತ್ತು ಸಾಕ್ಷಿ 2ನೇಯವರು ಮಂಗಳೂರಿನ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಅವರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿದ್ದರು ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡ ಇವರನ್ನು ದಿನಾಂಕ:21-05-2022 ರಂದು ಮರು ಆಸ್ಪತ್ರೆಗೆ ದಾಖಲಿಸಿದ್ದು ಈಗ ದೂರುದಾರರು ಸಂಪೂರ್ಣ ಬೆಡ್ ರೆಸ್ಟ್ ನಲ್ಲಿದ್ದಾರೆ ಎಂಬಿತ್ಯಾದಿ
Crime Reported in : Mangalore North PS
ಪಿರ್ಯಾದಿ VACHANARAM S RAYK ಮಂಗಳೂರು ಬಂದರು ಎಂಪಿಟಿ ಕ್ರಾಸ್ ರಸ್ತೆ, ಕಾಳಿಕಾಂಬ ಟೆಂಪಲ್ ಹತ್ತಿರ ರಾಯ್ಕ ಎಂಟರ್ ಪ್ರೈಸೆಸ್ ಎಂಬ ಹೆಸರಿನ ಅಂಗಡಿಯನ್ನು ಸುಮಾರು 7 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಸದ್ರಿ ಅಂಗಡಿಯಲ್ಲಿ ಹಾರ್ಡ್ ವೇರ್ ಮತ್ತು ವುಡನ್ ಮೋಲ್ಡಿಂಗ್ ವ್ಯವಹಾರವನ್ನು ಮಾಡಿಕೊಂಡಿರುತ್ತಾರೆ ಮತ್ತು ಅವರ ವ್ಯವಹಾರಗಳ ಸರಕು ಸಾಗಾಟಕ್ಕೆ ಕೆ.ಎ.19 ಎಡಿ 2767 ಟಾಟಾ ಇಂಟ್ರಾ ವಿ-10 ವಾಹನವನ್ನು ಹೊಂದಿರುತ್ತಾರೆ. ದಿನಾಂಕ. 23-01-2023 ರಂದು ಬೆಳಿಗ್ಗಿನ ಜಾವ ಸಮಯ ಸುಮಾರು 3-30 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಗೆ ಗಣೇಶ್ ಶೆಟ್ಟಿರವರು ಕರೆ ಮಾಡಿ ತಮ್ಮ ಅಂಗಡಿ ಮುಂದೆ ನಿಲ್ಲಿಸಿದ ಟಾಟಾ ಏಸ್ ವಾಹನಕ್ಕೆ ಬೆಂಕಿ ತಾಗಿದೆ ಕೂಡಲೇ ಬನ್ನಿ ಎಂದು ಹೇಳಿದಂತೆ ಪಿರ್ಯಾದಿದಾರರು ಕೂಡಲೇ ತಮ್ಮ ಮಗ ನರ್ಪತ್ ಮತ್ತು ಕೆಲಸದವರಾದ ಆಸಾರಾಮ್ ರವರೊಂದಿಗೆ ಬಂದು ನೋಡಲಾಗಿ ಪಿರ್ಯಾದಿದಾರರ ಟಾಟಾ ಏಸ್ ಟೆಂಪೋ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದು, ಅಂಗಡಿ ಕಡೆ ನೋಡಿದಾಗ ಅಂಗಡಿ ಶಟರ್ ಒಳಗಿನಿಂದ ಕೂಡಾ ಬೆಂಕಿಯ ಜ್ವಾಲೆ ಮತ್ತು ಹೊಗೆ ಬರುತ್ತಿರುವುದು ಕಂಡು ಬಂದಿರುತ್ತದೆ. ನಂತರ ಪಿರ್ಯಾದಿದಾರರು ತಮ್ಮ ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೇರಾದ ಫೂಟೇಜ್ ನೋಡಲಾಗಿ ವಾಹನಕ್ಕೆ ಮತ್ತು ಅಂಗಡಿಗೆ ಬಿರಾಸ್ ಎಂಬವರು ಬೆಂಕಿ ಕೊಡುತ್ತಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ಅಂಗಡಿ ಕಟ್ಟಡದ 3ನೇ ಮಳಿಗೆಯಲ್ಲಿ ವಾಸವಾಗಿದ್ದ ಬಿರಾಸ್ ರವರಲ್ಲಿ ಪಿರ್ಯಾದಿದಾರರು ಬಾಡಿಗೆ ಕೊಡಬೇಕೆಂದು ಹೇಳಿದ್ದರಿಂದ ದ್ವೇಷಗೊಂಡು ಉದ್ದೇಶಪೂರ್ವಕವಾಗಿ ದಿನಾಂಕ. 22-01-2023 ರಂದು ರಾತ್ರಿ ಪಿರ್ಯಾದಿದಾರರ ಅಂಗಡಿಗೆ ಮತ್ತು ಕೆ.ಎ.19 ಎಡಿ 2767 ಟಾಟಾ ಇಂಟ್ರಾ ವಿ-10 ವಾಹನಕ್ಕೆ ಬೆಂಕಿ ಕೊಟ್ಟು ಅಂಗಡಿಯಲ್ಲಿದ್ದ ಸುಮಾರು 10 ರಿಂದ 15 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ಸುಮಾರು 7 ಲಕ್ಷ ಮೌಲ್ಯದ ವಾಹನಕ್ಕೆ ನಷ್ಟವುಂಟು ಮಾಡಿರುತ್ತಾರೆ. ಆದುದರಿಂದ ಬಿರಾಸ್ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂಬಿತ್ಯಾದಿ ದೂರಿನ ಸಾರಾಂಶ.
Crime Reported in : Traffic North Police Station
ದಿನಾಂಕ 22/23-01-2023 ರಂದು ಪಿರ್ಯಾದಿ Arun Kumar D ಸುರತ್ಕಲ್ ಠಾಣಾ ಪಿಸಿಆರ್ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು 01-30 ಗಂಟೆ ಸಮಯಕ್ಕೆ ಸುರತ್ಕಲ್ ಪಿ.ಹೆಚ್.ಸಿ ಬಳಿ ಲಲಿತ್ ಇಂಟರ್ ನ್ಯಾಷನಲ್ ಹೋಟೆಲ್ ಎದುರು ರಸ್ತೆಯಲ್ಲಿ KA-19-H-3557 ನಂಬ್ರದ ಮೋಟಾರ್ ಸೈಕಲಲ್ಲಿ ಮೂರು ಜನರು ಕುಳಿತುಕೊಂಡು ದುಡುಕುತನ ಹಾಗೂ ನಿರ್ಲಕ್ಚಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬೊಬ್ಬೆ ಹೊಡೆಯುತ್ತಾ ಬರುತ್ತಿದ್ದವರನ್ನು ಕಂಡು ಇಲಾಖಾ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರು ನಿಲ್ಲಿಸಲು ಸೂಚನೆ ನೀಡಿದರು ಮೋಟಾರ್ ಸೈಕಲಿನಲ್ಲಿದ್ದ ಸಹ ಸವಾರರ ಪ್ರಚೋದನೆಯಂತೆ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾರೆ ಎಂಬಿತ್ಯಾದಿ
Crime Reported in : Mangalore West Traffic PS
ಪಿರ್ಯಾದಿ SRIMATI AMITHA ಮಗ ದೀಕ್ಷಿತ್ ರಾಜ್ ಪ್ರಾಯ: 31 ವರ್ಷ ಎಂಬವರಿಗೆ ದಿನಾಂಕ:22-01-2022ರ 00:05 ಗಂಟೆಯ ವೇಳೆಗೆ ಎಂ ಜಿ ರಸ್ತೆಯಲ್ಲಿನ ಬಿ ಜಿ ಸ್ಕೂಲ್ ಬಳಿ ರಸ್ತೆ ಅಪಘಾತವಾಗಿ ತಲೆಯ ಎಡಭಾಗ, ಹಣೆಯ ಬಲಭಾಗ, ಎಡಕೆನ್ನೆಗೆ ರಕ್ತ ಗಾಯ ಹಾಗೂ ಗುದ್ದಿದ ನಮೂನೆಯ ಗಾಯ ಮತ್ತು ಎಡಕೈ ಮಣಿಗಂಟಿನಲ್ಲಿ ಮೂಳೆ ಮುರಿತದ ಗಾಯವಾಗಿದ್ದು, ಈ ಅಪಘಾತಕ್ಕೆ ಕೆಎ:20:ಎಂಬಿ:0522ನೇ ಕಾರಿನ ಚಾಲಕ ಉತ್ಸವ್ ಎಂಬವರು ಜೈಲ್ ರೋಡ್ ನಲ್ಲಿ ಜೈಲ್ ಕಡೆಯಿಂದ ಎಂ ಜಿ ರೋಡ್ ಗೆ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ಹಾಗೂ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸದೇ ತಾನು ಚಲಾಯಿಸುತ್ತಿದ್ದ ಕಾರನ್ನು ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಎಂಜಿ ರೋಡ್ ಗೆ ಚಲಾಯಿಸಿಕೊಂಡು ಬಂದು ಕೊಡಿಯಾಲಗುತ್ತು ಕಡೆಯಿಂದ ಸಾರ್ವಜನಿಕ ರಸ್ತೆಯಲ್ಲಿ ದೀಕ್ಷಿತ್ ರಾಜ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ:19:ಈಬಿ:7811ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿರುವುದೇ ಕಾರಣವಾಗಿರುತ್ತದೆ ಎಂಬಿತ್ಯಾದಿ.
Crime Reported in : Traffic North Police Station
ಪಿರ್ಯಾದಿ Vijay Kumar ಹೆಂಡತಿಯ ಸಹೋದರ ಪ್ರವೀಣ್ (34 ವರ್ಷ) ಎಂಬವರು ದಿನಾಂಕ 21/01/2023 ರಂದು ರಾತ್ರಿ ವೇಳೆಗೆ ಆಕಾಶಭವನದ ಗೆಳೆಯನ ಮನೆಗೆ ಹೋಗುವರೇ ಸ್ಕೂಟರ್ ನಂಬ್ರ KA-19HF-1002 ನೇಯದರಲ್ಲಿ ಕೊಟ್ಟಾರದಿಂದ ಜಲ್ಲಿಗುಡ್ಡೆ ರಸ್ತೆಯಾಗಿ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸುಮಾರು 22:00 ಗಂಟೆಗೆ ಮಂಗಳೂರು ತಾಲೂಕು, ಜಲ್ಲಿಗುಡ್ಡೆ ರಸ್ತೆಯ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಮಾಲಾಡಿಗೆ ಹೋಗುವ ಕ್ರಾಸ್ ರಸ್ತೆಯ ಇಳಿಜಾರಿನ ತಿರುವು ಬಳಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುತ್ತಾ ತಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಹತೋಟಿ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪ್ರವೀಣ್ ರವರ ತಲೆಗೆ ಗಂಭೀರ ಸ್ವರೂಪದ ಗಾಯ, ಬಲಕಣ್ಣಿನ ಬಳಿ, ದವಡೆಯ ಬಳಿ ಮತ್ತು ಬಲಕೈಯ ಬೆರಳುಗಳಿಗೆ ಗುದ್ದಿದ ರಕ್ತ ಗಾಯವಾಗಿದ್ದು, ಗಾಯಾಳು ಪ್ರವೀಣ್ ರವರನ್ನು ಅಲ್ಲಿದ್ದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಫಿರ್ಯಾದಿದಾರರು ಗಾಯಾಳು ಪ್ರವೀಣ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ, ಎಂಬಿತ್ಯಾದಿ.
Crime Reported in : Traffic North Police Station
ಪಿರ್ಯಾದಿ CHITHESH ದಿನಾಂಕ 22-01-2023 ರಂದು ತನ್ನ ಬಾಬ್ತು KA-19-HH-4087 ನಂಬ್ರದ ಸ್ಕೂಟರಿನಲ್ಲಿ ತನ್ನ ಗೆಳೆಯ ಪೌಲ್ ಸೆರಾವೋ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ತೊಕ್ಕೊಟ್ಟಿನಿಂದ ಕೆಲಸ ಮುಗಿಸಿಕೊಂಡು ತನ್ನ ಮನೆಯಾದ ಕೆರೆಕಾಡಿಗೆ NH66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 15.30 ಗಂಟೆಗೆ ಪಣಂಬೂರು ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ ದೀಪಕ್ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ, ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕೂಳೂರು ಕಡೆಯಿಂದ ಸುರತ್ಕಲ್ ಕಡೆಗೆ ಬಂದಂತಹ KA-19-ML-5570 ನಂಬ್ರದ ಕಾರನ್ನು ಅದರ ಚಾಲಕ ಪ್ರಸ್ಟನ್ ಡೇವಿಡ್ ಪಿಂಟೋ ಎಂಬವರು ಅತೀ ವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿನ ಹ್ಯಾಂಡಲಿಗೆ ತಾಗಿಸಿದ್ದು ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಪೌಲ್ ಸೆರಾವೋ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕೈ ಮೊಣಗಂಟಿನ ಬಳಿ ಚರ್ಮ ಹರಿದ ರೀತಿಯ ರಕ್ತಗಾಯ, ಎಡಕಾಲಿನ ಹೆಬ್ಬೆರಳಿಗೆ ಮುಳೆ ಮುರಿತದಂತಹ ಗುದ್ದಿದ ಗಾಯ, ಎಡಕೈ ಮತ್ತು ಎಡ ಕಾಲಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಮುಖಕ್ಕೆ ಗುದ್ದಿದ ಗಾಯವಾಗಿದ್ದು, ಸಹಸವಾರ ಪೌಲ್ ಸೆರಾವೋ ರವರ ತಲೆಗೆ ಗಂಭೀರ ಸ್ವರೂಪದ ಒಳಗಾಯವಾಗಿ ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ಪ್ರಜ್ಞೆ ಇರದೇ ಇದ್ದು, ಗಾಯಾಳುಗಳನ್ನು ಅಲ್ಲಿದ್ದ ಸಾರ್ವಜನಿಕರು ಮತ್ತು ಅಪಘಾತ ಪಡಿಸಿದ ಕಾರಿನ ಕಡೆಯವರು ಚಿಕಿತ್ಸೆಯ ಬಗ್ಗೆ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.
Crime Reported in : Traffic North Police Station
ಪಿರ್ಯಾದಿ ABHIMANYU ಮತ್ತು ಅವರ ದೊಡ್ಡಮ್ಮನ ಮಗ ಅಖಿಲ್ ಸುರೇಂದ್ರನ್ ಎಂಬವರು ಕೇರಳದಿಂದ ಮಂಗಳೂರಿಗೆ ಬಂದವರು ದಿನಾಂಕ 20/01/2023 ರಂದು KL-13-Z-8861 ನಂಬ್ರದ ಸ್ಕೂಟರಿನಲ್ಲಿ ಪಿರ್ಯಾದಿದಾರರು ಸಹಸವಾರರಾಗಿ ಅಖಿಲ್ ಸುರೇಂದ್ರನ್ ರವರು ಸಹಸವಾರರಾಗಿ ಪಣಂಬೂರು ಬೀಚಿಗೆ ಬಂದವರು ವಾಪಸ್ ಅತ್ತಾವರದ ರೂಂ ಗೆ ಹೋಗಲು ಜೋಕಟ್ಟೆ ಮಾರ್ಗವಾಗಿ ಬರುತ್ತಿದ್ದ ಸಮಯ ಸಂಜೆ 06.45 ಗಂಟೆಗೆ ಪಣಂಬೂರು ಪೊಲೀಸ್ ಠಾಣೆಯ ಕ್ರಾಸ್ ಬಳಿ ತಲುಪಿದಾಗ ನಂಬರ್ ತಿಳಿಯದ ಬಿಳಿ ಬಣ್ಣದ ಸ್ಕೂಟರೊಂದನ್ನು ಅದರ ಸವಾರ ಪಣಂಬೂರು ಪೊಲೀಸ್ ಠಾಣೆ ಕಡೆಯಿಂದ ಮುಖ್ಯ ರಸ್ತೆಯ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತದ್ದ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು ಈ ಅಪಘಾತದಿಂದ ಪಿರ್ಯಾದಿದಾರರಿಗೆ ಬಲಕೈ ಮೊಣಗಂಟಿಗೆ ಗುದ್ದಿದ ಹಾಗೂ ಅಖಿಲ್ ಸುರೇಂದ್ರನ್ ರವರ ಬಲಕೈ ಮೊಣಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಅಖಿಲ್ ಸುರೇಂದ್ರನ್ ರವರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಪಿರ್ಯಾದಿದಾರರಿಗೆ ನೋವು ಹೆಚ್ಚಾಗಿದ್ದರಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಗಾಯಾಳು ಅಖಿಲ್ ಸುರೇಂದ್ರನ್ ರವರು ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದು, ಹಾಗೂ ಪಿರ್ಯಾದಿದಾರರ ಮನೆಯವರು ಊರಿನಿಂದ ಬಂದ ಮೇಲೆ ತಡವಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.