ಅಭಿಪ್ರಾಯ / ಸಲಹೆಗಳು

Crime Reported in :  Traffic South PS               

ದಿನಾಂಕ 21-09-2022 ರಂದು ಪಿರ್ಯಾದಿದಾರರಾದ ನಿರುಪಮರವರು ಸ್ಕೂಟರ್ ನಂಬ್ರ  KA-19-ET-8319 ನೇದರಲ್ಲಿ ಸಹಸವಾರಳಾಗಿ, ಅವರ ಗಂಡ ಪುರುಷೋತ್ತಮ್ ರವರು ಸವಾರರಾಗಿ ಕುಳಿತುಕೊಂಡು ಮನೆಯಾದ  ಬಲ್ಲೂರು ಹೌಸ್ ನಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 6.00 ಗಂಟೆಗೆ ಕಣ್ಣೂರು ಚಕ್ ಪೊಸ್ಟ್ ಬಳಿ  ಯು ಟರ್ನ್ ಮಾಡಿ ಬಿ ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ  ರಾಹೆ 73 ರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ನೊಂದಣಿ ಸಂಖ್ಯೆ  KA-19-EK-0609 ನೇದರ ಸವಾರ ನಿಖಿಲ್ ರವರು ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಗಂಡ ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಗಾಲಿಗೆ ತರಚಿದ ಗಾಯ ಹಾಗೂ  ಪಿರ್ಯಾದಿದಾರರ ಗಂಡ ಪುರುಷೋತ್ತಮ್ ರವರ ಬಲಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಅವರನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆಯ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಅತ್ತಾವರ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪಿರ್ಯಾದಿದಾರರು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ, ಪಿರ್ಯಾದಿದಾರರ ಗಂಡ ಪುರುಷೋತ್ತಮ್ ರವರು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ

 Crime Reported in :Surathkal PS                     

ದಿನಾಂಕ 22-09-2022 ರಂದು ರಾಷ್ಟ್ರೀಯ ತನಿಖಾ ತಂಡವು ಸುರತ್ಕಲ್ ಸಹಿತ ಮಂಗಳೂರು ನಗರದ ಬೇರೆ ಬೇರೆ ಕಡೆಗಳಲ್ಲಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ನಾಯಕರುಗಳ ಮನೆಗೆ ಮತ್ತು ಕಛೇರಿಗಳಿಗೆ ದಾಳಿ ಮಾಡಿ ದಾಖಲಾತಿ ಸಂಗ್ರಹಿಸಿ ಕೆಲವರನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಅಸಮದಾನಗೊಂಡಿರುವ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ನ ಕಾರ್ಯಕರ್ತರು, ಯಾವುದೇ ಮಾಹಿತಿಯನ್ನು ನೀಡದೇ ಸುಮಾರು 50-60 ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಕಾರ್ಯಕರ್ತರು ಗೋವಿಂದಾಸ್ ಜಂಕ್ಷನ್ ಬಳಿ ಜಮಾಯಿಸಿ ಗೋ ಬ್ಯಾಕ್ ಎನ್.ಐ.ಎ ಗೋಬ್ಯಾಕ್ ಎನ್.ಐ.ಎ ದಿಕ್ಕಾರ ದಿಕ್ಕಾರ ಎನ್.ಐ.ಎ ಗೆ ದಿಕ್ಕಾರ ಬಿಟ್ಟು ಬಿಡಿ ಅಮಾಯಕರ ಬಿಟ್ಟುಬಿಡಿ, ಜಿಂದಾಬಾ ಜಿಂದಾಬಾ ಎಸ್.ಡಿ.ಪಿ.ಐ ಜಿಂದಾಬಾ, ಪಿ.ಎಫ್.ಐ ಜಿಂದಾಬಾ  ಅರ್.ಎಸ್.ಎಸ್ ಅಜ್ಞೆಯಂತೆ ವರ್ತಿಸುತ್ತಿರುವ ಸರಕಾರ ಎಂಬಿತ್ಯಾದಿ  ಘೋಷಣೆಗಳನ್ನು ಕೂಗುತ್ತಾ ಮಂಗಳೂರು- ಮುಂಬಾಯಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಬಂದು ರಸ್ತೆಯಲ್ಲಿ ಅಡ್ಡವಾಗಿ ಕುಳಿತು ಸುಮಾರು 12-30 ಗಂಟೆಯಿಂದ 12-40 ಗಂಟೆಯ ತನಕ ಸುಮಾರು 10 ನಿಮಿಷಗಳ ಕಾಲ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳಿಗೆ, ಅಡ್ಡಿ  ಅಡಚನೆಯನ್ನು ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುವುದು ಎಂಬಿತ್ಯಾದಿಯಾಗಿದೆ.

   

ಇತ್ತೀಚಿನ ನವೀಕರಣ​ : 23-09-2022 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080