ಅಭಿಪ್ರಾಯ / ಸಲಹೆಗಳು

Crime Reported in : Kavoor PS

ಪಿರ್ಯಾದಿ ANNAMALAI ದಾರರ ಮಗಳಾದ ರಾಧಿಕಾ ( 26 ವರ್ಷ) ರವರಿಗೆ 10 ವರ್ಷಗಲ ಹಿಂದೆ ತಮಿಳುನಾಡಿನ ತಿರುವಂಪುರದ ಮಣಿ ಎಂಬಾತನೊಂದಿಗೆ ಮದುವೆಯಾಗಿ ಎರಡು ಮಕ್ಕಳಿರುತ್ತಾರೆ. ಮಣಿ ರವರು ನಾಲ್ಕು ವರ್ಷಗಳ ಹಿಂದೆ ಹೆಂಡತಿ ರಾಧಿಕಾ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಹೋಗಿರುತ್ತಾನೆ. ಪಿರ್ಯಾದಿದಾರರ ಮಗಳು ರಾಧಿಕಾ ರವರು ಕಳೆದ 6 ತಿಂಗಳಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಎಕ್ಸರೇ ಕ್ಲಿನಿಕ್ ನಲ್ಲಿ ಕೆಲಸಮಾಡಿಕೊಂಡಿದ್ದು. ದಿನಾಂಕ 13/11/2022 ರಂದು ಮಗಳು ರಾಧಿಕಾ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದವಳು ಮಧ್ಯಾಹ್ನ ಸುಮಾರು 12.00 ಗಂಟೆಗೆ ಪಿರ್ಯಾದಿದಾರರು ಕೆಲಸ ಮಾಡುವ ಜಾಗಕ್ಕೆ ಮಗಳು ರಾಧಿಕಾ ತನ್ನ ಇಬ್ಬರು ಮಕ್ಕಳಾದ xxx ಮತ್ತು ಮಗಳು xxx ರವರೊಂದಿಗೆ ಬಂದು ತಾವು ಚರ್ಚಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬರದೇ ಇದ್ದು  ರಾತ್ರಿ ಸುಮಾರು 9.00 ಗಂಟೆ ಸಮಯಕ್ಕೆ ಪೋನ್ ಮಾಡಿದಾಗ ತಾನು ಮತ್ತು ಮಕ್ಕಳು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದು ದಿನಾಂಕ 15/11/2022 ರಂದು ಬರುವುದಾಗಿ ತಿಳಿಸಿರುತ್ತಾರೆ ನಂತರ ದಿನಾಂಕ 15/11/2022 ರಂದು ಕೂಡಾ ಮನೆಗೆ ಬಾರದೇ ಮೊಬೈಲ್ ಪೋನ್ ಸ್ವೀಚ್ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಸಂಬಂದಿಕರಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ, ಮಂಗಳೂರು ನಗರದ ಚರ್ಚಿನಲ್ಲಿ ಹುಡುಕಾಡಿದರೂ ಇವರು ಪತ್ತೆಯಾಗಿರುವುದಿಲ್ಲ ಆದ್ದರಿಂದ ಕಾಣೆಯಾದ ಮಗಳು ರಾಧಿಕಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಪತ್ತೆಮಾಡಬೇಕಾಗಿ ಎಂಬಿತ್ಯಾದಿ.

Traffic South Police Station

ದಿನಾಂಕ  22-11-2022 ರಂದು  ಪಿರ್ಯಾದಿ UMESH KUMAR B ದಾರರ  ಹೆಂಡತಿಯಾದ   ಯಶಸ್ವಿನಿ  ಎಂಬವರು ಅವರು ಕೆಲಸ ಮಾಡುತ್ತಿರುವ ಅಂಗಡಿಗೆ  ಹೋಗುವ  ಸಲುವಾಗಿ  ಅಂಬಿಕಾರೋಡ್  ಬಳಿ  ತಲಪಾಡಿಕಡೆಯಿಂದ   ಮಂಗಳೂರು   ಕಡೆಗೆ  ಹಾದು   ಹೋಗಿರುವ  ರಾಷ್ಟ್ರೀಯ ಹೆದ್ದಾರಿ  66 ರ ರಸ್ತೆಯನ್ನು   ದಾಟುತ್ತಿರುವ  ಸಮಯ  ಸುಮಾರು  ಬೆಳಿಗ್ಗೆ  08:45 ಗಂಟೆಗೆ ಅದೇ ರಸ್ತೆಯಲ್ಲಿ ಮೋಟಾರ್  ಸೈಕಲ್   ನಂಬ್ರ   KA-19-HG-0433  ನೇದನ್ನು   ಅದರ   ಸವಾರ   ವರ್ಶನ್  ವೇಗಸ್   ಎಂಬಾತನು  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು   ಬಂದು  ಪಿರ್ಯಾದಿದಾರರ ಹೆಂಡತಿ ಯಶಸ್ವಿನಿಯವರಿಗೆ  ಡಿಕ್ಕಿ  ಪಡಿಸಿದ  ಪರಿಣಾಮ  ಅವರು  ಡಾಮಾರು  ರಸ್ತೆಗೆ ಬಿದ್ದು  ಅವರ ತಲೆಯ ಹಿಂಬದಿಗೆ ಗುದ್ದಿದ  ರಕ್ತಗಾಯ ಹಾಗೂ ಕೈಕಾಲುಗಳಿಗೆ  ಸಣ್ಣಪುಟ್ಟ ತರಚಿದ ಗಾಯವಾಗಿದ್ದು  ಅವರನ್ನು  ಅಲ್ಲಿ  ಸೇರಿದ  ಸಾರ್ವಜನಿಕರು  ಚಿಕಿತ್ಸೆ  ಬಗ್ಗೆ  ಆಟೋರಿಕ್ಷವೊಂದರಲ್ಲಿ  ದೇರಳಕಟ್ಟೆ  ಕೆ ಎಸ್ ಹೆಗ್ಡೆ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ದಾಖಲಿಸಿರುತ್ತಾರೆ ಎಂಬಿತ್ಯಾದಿ .

 

ಇತ್ತೀಚಿನ ನವೀಕರಣ​ : 23-11-2022 05:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080