ಅಭಿಪ್ರಾಯ / ಸಲಹೆಗಳು

Crime Reported in   Mangalore West Traffic

ಪಿರ್ಯಾದಿದಾರರು ದಿನಾಂಕ:20-12-2022 ರಂದು ಲಾಲ್ ಭಾಗ್ ನಲ್ಲಿ ಬಸ್ಸಿನಿಂದ ಇಳಿದು ಮಂಗಳೂರು ಮಹಾನಗರ ಪಾಲಿಕೆಯ ಎದುರು ರಸ್ತೆ ದಾಟುತ್ತಿದ್ದ ಸಮಯ ಸುಮಾರು ಸಂಜೆ 7-00 ಗಂಟೆಯ ಲಾಲ್ ಭಾಗ್ ಕಡೆಯಿಂದ KA-19-HK-1859 ನೇ ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ದೀಪ್ ಸಿಂಗ್ ರವರು ತೀರಾ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರು ರಸ್ತೆಗೆ ಬಿದ್ದಿದ್ದು ಕೂಡಲೇ ಮೋಟಾರು ಸೈಕಲ್ ಸವಾರ ಹಾಗೂ ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಪಿರ್ಯಾದಿದಾರರಿಗೆ ಮೂಳೆ ಮುರಿತದ ಗಾಯವಾಗಿರುವುದಾಗಿ ಮಂಗಳೂರಿನ ದೇರಳ ಕಟ್ಟೆಯಲ್ಲಿರುವ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ

Crime Reported Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾ ದುದಾರರ ಮಗ ವಿವನ್ ಪ್ರಾಯ 13 ವರ್ಷ ಎಂಬಾತನು ದಿನಾಂಕ:21-12-2022 ರಂದು ತನ್ನ ಮನೆಯಿಂದ ಮನೆ ಬಳಿ ಇರುವ ಅಂಗಡಿಗೆಂದು ಸೈಕಲಿನಲ್ಲಿ ಹೋಗುತ್ತಾ ಕಲ್ಲಬೆಟ್ಟು ಗ್ರಾಮದ ಮಾರಿಗುಡಿ ಬಳಿ ತಲಪುವಾಗ  ಸಂಜೆ ಸುಮಾರು 4-30 ಗಂಟೆಗೆ ಕಲ್ಲಬೆಟ್ಟು ಕಡೆಯಿಂದ ಮೂಡಬಿದ್ರೆ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆಎ 19 ಇ ಕೆ 3241  ನೇದನ್ನು ಅದರ ಸವಾರ ಸಂತೋಷ್ ಶೆಟ್ಟಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಮಗ ವಿವನ್ ಹೋಗುತ್ತಿದ್ದ ಸೈಕಲಿಗೆ ಡಿಕ್ಕಿಯಾದ ಅಪಘಾತದ ಪರಿಣಾಮ ವಿವನ್ ರಸ್ತೆಗೆ ಬಿದ್ದು ಆತನ ಎಡಕಾಲಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ,

Crime Reported  Surathkal PS

 ದಿನಾಂಕ 15-12-2022 ರಂದು ಪಿರ್ಯಾದಿದಾರರ ಬಾಬ್ತು ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ KA-19-HE-9363 ನೇಯದನ್ನು ಅವರ ವಾಸದ ಮನೆಯಾದ ಕುಳಾಯಿ ಗ್ರಾಮದ ಸುಬಾಶ್ಚಂದ್ರ ನಗರ ಎಂಬಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದನ್ನು ಮಧ್ಯಾಹ್ನ ಸಮಯ ಸುಮಾರು 2:00 ಗಂಟೆಯಿಂದ ಸಂಜೆ 4:30 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ, ಸದ್ರಿ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 61000/- ಆಗಿದ್ದು, ಸದ್ರಿ ವಾಹನವನ್ನು ಪತ್ತೆ ಮಾಡಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 23-12-2022 08:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080