Crime Reported in : Mangalore Rural PS
ಪಿರ್ಯಾದಿ MOLLY D SILVA ತನ್ನ ಗಂಡ, ಮಗಳು ಮತ್ತು ತನ್ನ ಗಂಡನ ಅಣ್ಣನಾದ ಓಸ್ವಾಲ್ಡ್ ಡಿಸಿಲ್ವರವರೊಂದಿಗೆ ವಾಸವಾಗಿದ್ದು ಮನೆವಾರ್ತೆ ನೋಡಿಕೊಳ್ಳುತ್ತಿದ್ದು,ಆಕೆಯ ಗಂಡನ ಅಣ್ಣನಾದ ಓಸ್ವಾಲ್ಡ್ ಡಿಸಿಲ್ವರವರಿಗೆ 77 ವರ್ಷ ಪ್ರಾಯವಾಗಿದ್ದು, ಅವಿವಾಹಿತರಾಗಿದ್ದು, ಈ ಹಿಂದೆ ಪಂಪ್ ವೆಲ್ ನಲ್ಲಿ ಬೇಕರಿಯೊಂದನ್ನು ನಡೆಸುತ್ತಿದ್ದು, ಈಗ ಮನೆಯಲ್ಲಿಯೇ ಇರುವುದಾಗಿದೆ. ಪಿರ್ಯಾದಿದಾರರು ಅವರನ್ನು ತಿಂಗಳಿಗೊಮ್ಮೆ ಶೇವಿಂಗ್ ಮಾಡಿಸುವರೇ ಪದವಿನಂಗಡಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ಸುಮಾರು ಒಂದು ಗಂಟೆಯ ನಂತರ ಕರೆದುಕೊಂಡು ಮನೆಗೆ ಬರುತ್ತಿದ್ದರು. ಅದರಂತೆಯೇ ದಿನಾಂಕ 21-01-2023 ರಂದು ಸಂಜೆ 03-15 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಓಸ್ವಾಲ್ಡ್ ಡಿಸಿಲ್ವರವರನ್ನು ಕರೆದುಕೊಂಡು ಶೇವಿಂಗ್ ಮಾಡಿಸಲು ಪದವಿನಂಗಡಿಗೆ ಹೋಗಿ ಸುಮಾರು 03-30 ಗಂಟೆಗೆ ಪದವಿನಂಗಡಿಯಲ್ಲಿ ಅವರನ್ನು ಬಿಟ್ಟು ಪಿರ್ಯಾದಿದಾರರು ಮನೆಗೆ ಹೋದವರು ಸಂಜೆ 04-30 ಗಂಟೆಗೆ ವಾಪಾಸು ಪದವಿನಂಗಡಿಗೆ ಬಂದಾಗ ಓಸ್ವಾಲ್ಡ್ ಡಿಸಿಲ್ವರವರು ಅಲ್ಲಿ ಇಲ್ಲದೇ ಇದ್ದು, ಸೆಲೂನ್ ಗೆ ಹೋಗಿ ಕೇಳಿದಾಗ ಅಲ್ಲಿಗೆ ಬಂದೇ ಇಲ್ಲ ಎಂಬುದಾಗಿ ತಿಳಿಸಿದ್ದು,ಪಿರ್ಯಾದಿದಾರರು & ಅವರ ಮನೆಯವರು ಪರಿಚಯದವರ ಎಲ್ಲಾ ಮನೆಗಳಲ್ಲಿ ಹುಡುಕಾಡಿ ಓಸ್ವಾಲ್ಡ್ ಡಿಸಿಲ್ವ ರವರು ಪತ್ತೆಯಾಗದೇ ಇರುವುದರಿಂದ ಈ ದಿನ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾದ ಪಿರ್ಯಾದಿದಾರರ ಗಂಡನ ಅಣ್ಣನಾದ ಓಸ್ವಾಲ್ಡ್ ಡಿಸಿಲ್ವ ರವರನ್ನು ಪತ್ತೆ ಮಾಡಿಕೊಡ ಬೇಕಾಗಿ ಎಂಬಿತ್ಯಾದಿ
Crime Reported in : Traffic South Police Station
ದಿನಾಂಕ 22-01-2023 ರಂದು ಪಿರ್ಯಾದಿ ABDUL HAMEED ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-ET-1076 ನೇದರಲ್ಲಿ ಉಚ್ಚಿಲ ಮಸೀದಿಯಿಂದ ಉರೂಸ್ ಕಾರ್ಯಕ್ರಮ ಮುಗಿಸಿ ಅವರ ಮನೆಯಾದ ಮಂಗಳೂರು ಕಡೆಗೆ ರಾ. ಹೆ 66 ರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 11:45 ಗಂಟೆಗೆ ಕಲ್ಲಾಪು ಆಡಂ ಕುದ್ರು ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಕಂಟೈನರ್ ಲಾರಿ ನಂಬ್ರ KA-20-AB-5921 ನೇದನ್ನು ಅದರ ಚಾಲಕ ಮೊಹಮ್ಮದ್ ಹಫೀಝ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಎದೆಗೆ ಹಾಗೂ ಹೊಟ್ಟೆಯ ಎಡಬದಿ ಮತ್ತು ಬಲಬದಿಗೆ ಗುದ್ದಿದ ಗಂಬೀರ ಸ್ವರೂಪದ ಗಾಯ ಮತ್ತು ಎರಡು ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ರಕ್ತ ಗಾಯಗಳಾಗಿರುತ್ತದೆ. ನಂತರ ಅವರನ್ನು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಜನರು ಕಾರೊಂದರಲ್ಲಿ ಕರೆದುಕೊಂಡು ಹೋಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.
Crime Reported in : Barke PS
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ ವಿಚಾರಣಾ ಬಂಧಿ ಮೊಹಮ್ಮದ್ ಅಸ್ರು @ ಮೊಹಮ್ಮದ್ ಅಲಿ ತಂದೆ ಇಬ್ರಾಹಿಂ ಈತನನ್ನು ಇತರ ಬಂಧಿಗಳೊಂದಿಗೆ ದಿನಾಂಕ: 23-01-2023 ರಂದು ಮಾನ್ಯ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಬಂಟ್ವಾಳ ನ್ಯಾಯಾಲಯಕ್ಕೆ ಡಿ.ಎ.ಆರ್ ಬೆಂಗಾವಲಿನ ಮೂಲಕ ಕಳುಹಿಸಿಕೊಡಲಾಗಿದ್ದು, ಮರಳಿ ಕಾರಾಗೃಹಕ್ಕೆ ಬಂದ ಸಮಯ ಸುಮಾರು 15-20 ಗಂಟೆಗೆ ಮುಖ್ಯದ್ವಾರದಲ್ಲಿ ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಗಳು ಪರಿಶೀಲಿಸುವ ಸಂಧರ್ಭದಲ್ಲಿ ಅನುಮಾನ ಬಂದು ತೀವ್ರ ತಪಾಸಣೆಯಲ್ಲಿ ವಿಚಾರಣಾ ಬಂಧಿ ಗುದದ್ವಾರದಲ್ಲಿ ಅನುಮಾನಾಸ್ಪದ ವಸ್ತು ಇರುವುದನ್ನು ಗುರುತಿಸಲಾಗಿ ಬಂಧಿಯು ಗುದದ್ವಾರದಿಂದ ಖಾಕಿ ಬಣ್ಣದ ಅಂಟು ಪಟ್ಟಿಯನ್ನು ಸುತ್ತಿರುವ ಪ್ಯಾಕ್ ಮಾಡಿರುವ ರೀತಿಯಲ್ಲಿರುವ ವಸ್ತುವನ್ನು ಹೊರತೆಗೆದು ಅದನ್ನು ಗಾಂಜಾ ಎಂದು ಅನುಮಾನ ವ್ಯಕ್ತಪಡಿಸಿ ಪಿರ್ಯಾದಿ B T Obaleshappa ದಾರರಿಗೆ ಕೆ.ಎಸ್.ಐ.ಎಸ್.ಎಫ್ ನ ಪೊಲೀಸ್ ನಿರೀಕ್ಷಕರು ನೀಡಿದ ಪತ್ರದ ಪ್ರತಿಯನ್ನು ಲಗತ್ತಿಸಿ ಪಿರ್ಯಾದಿದಾರರು ಬರ್ಕೆ ಪೊಲೀಸ್ ಠಾಣೆಗೆ ಅನುಮಾಸ್ಪದ ವಸ್ತುವನ್ನು ವಾಮಮಾರ್ಗದಿಂದ ಜಿಲ್ಲಾ ಕಾರಾಗೃಹಕ್ಕೆ ತಂದ ವಿಚಾರಣಾ ಬಂಧಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿ ಸಾರಾಂಶ.
Crime Reported in : Mangalore Rural PS
ಪಿರ್ಯಾದಿದಾರರು KARTHIK SHETTYತನ್ನ ತಂದೆಯವರೊಂದಿಗೆ ಮಂಜೇಶ್ವರದಲ್ಲಿ ಸಿವಿಲ್ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು, ಸುಮಾರು ಎರಡು ತಿಂಗಳ ಹಿಂದೆ ಹಣದ ವಿಚಾರವಾಗಿ ನೆರೆಮನೆಯ ನಿವಾಸಿಯಾದ ದೇವರಾಜ್ ಎಂಬವನೊಂದಿಗೆ ಮಾತಿನ ಚಕಮಕಿ ನಡೆದಿದ್ದು, ದಿನಾಂಕ 22-01-2023 ರಂದು ರಾತ್ರಿ 10-00 ಗಂಟೆಗೆ ಪಿರ್ಯಾದಿದಾರರು ತಾರಿಗುಡ್ಡೆ ಎಂಬಲ್ಲಿರುವ ಕೋರ್ದಬ್ಬು ದೈವಸ್ಥಾನಕ್ಕೆ ಹರಕೆಯ ಕೋಳಿಯನ್ನು ಕೊಟ್ಟು ತನ್ನ ಬಾಬ್ತು KA-19-HF-5190 ಬೈಕಿನಲ್ಲಿ ತನ್ನ ಮನೆಗೆ ಹಿಂತಿರುಗುತ್ತಿರುವ ಸಮಯ ರಾತ್ರಿ ಸುಮಾರು 11-00 ಗಂಟೆಗೆ ಕಟ್ಟಿಂಜ ರಸ್ತೆಯಲ್ಲಿ ಹೋಗುತ್ತಿರುವಾಗ ಜೋರಾಗಿ ಬೊಬ್ಬೆ ಹೊಡೆದ ಶಬ್ದ ಕೇಳಿ ಪಿರ್ಯಾದಿದಾರರು ನೋಡಲಾಗಿ ಕಟ್ಟಿಂಜ ಸೈಟಿನ ನಿವಾಸಿ ದೇವರಾಜ್ ಆಗಿದ್ದು, ಹೆದರಿದ ಪಿರ್ಯಾದಿದಾರರು ಬೈಕಿನಲ್ಲಿ ಕಟ್ಟಿಂಜ ಸೈಟಿನಲ್ಲಿರುವ ರಕ್ತೇಶ್ವರಿ ಮೈಸಂದಾಯ ದೈವಸ್ಥಾನದ ಹಿಂಬದಿ ರಸ್ತೆಯಲ್ಲಿ ಹೋದಾಗ ದೇವರಾಜನು ಆತನ ಬೈಕಿನಲ್ಲಿ ಬೆನ್ನಟ್ಟಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಆತನ ಬೈಕನ್ನು ಅಡ್ಡ ನಿಲ್ಲಿಸಿ,ಪೊಲೀಸು ಠಾಣೆಗೆ ಆತನ ಬಗ್ಗೆ ದೂರು ನೀಡುತ್ತೀಯಾ ಎಂದು ಹೇಳಿ ಕೈಯಿಂದ ಪಿರ್ಯಾದಿದಾರರ ಎಡ ಕೆನ್ನೆಗೆ ಹೊಡೆಯುವುದನ್ನು ನೋಡಿದ ನೆರೆಮನೆ ನಿವಾಸಿ ಮನೀಶ್ ಎಂಬವನು ಬಂದು ಯಾಕೆ ಹೊಡೆಯುತ್ತೀಯಾ ಎಂದು ಕೇಳಿದಾಗ ದೇವರಾಜನು ಆತನಿಗೆ ಕೂಡಾ ಕೈಯಿಂದ ಕೆನ್ನೆಗೆ ಹೊಡೆದು ದೂಡಿದ್ದು, ಆ ಸಮಯ ಮನೀಶ್ ಕೆಳಗೆ ರಸ್ತೆಗೆ ಬಿದ್ದು ಹಣೆಗೆ ರಕ್ತಗಾಯವಾಗಿರುತ್ತದೆ.ಕೂಡಲೇ ದೇವರಾಜನು ಸಿಟ್ಟಿನಿಂದ ಆತನ ಕಿಸೆಯಲ್ಲಿದ್ದ ಚೂರಿಯನ್ನು ತೆಗೆದು ಪಿರ್ಯಾದಿದಾರರ ಮೇಲೆ ಬೀಸಿದಾಗ ಪೆಟ್ಟನ್ನು ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಪಿರ್ಯಾದಿದಾರರ ಎಡ ಸೊಂಟಕ್ಕೆ ಚೂರಿ ತಾಗಿ ರಕ್ತ ಗಾಯವಾಗಿರುತ್ತದೆ.ಇವರಿಬ್ಬರ ಬೊಬ್ಬೆಯನ್ನು ಕೇಳಿ ಮನೀಶ್ ತಂದೆ ರಾಘವೇಂದ್ರ ಆಚಾರಿ ಅಲ್ಲಿಗೆ ಓಡಿಕೊಂಡು ಬಂದದ್ದನ್ನು ನೋಡಿದ ದೇವರಾಜನು ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲವೆಂದು ಹೇಳಿ ಅಲ್ಲಿಂದ ಆತನ ಬೈಕಿನಲ್ಲಿ ಪರಾರಿಯಾಗಿರುತ್ತಾನೆ.ಗಾಯಗೊಂಡ ಪಿರ್ಯಾದಿದಾರರು & ಮನೀಶ್ ಎಂಬವರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.
Crime Reported in :Mangalore East Traffic PS
ಪಿರ್ಯಾದಿ ಜಿನಿತ್ ಕುಮಾರ್.ಬಿ ಎಂಬವರು ದಿನಾಂಕ 23/01/2023 ರಂದು ರಾತ್ರಿ ಸುಮಾರು 8-20 ಗಂಟೆಗೆ ತನ್ನ ಸ್ನೇಹಿತೆ ಶ್ರೇಯಾಂಕ ಎಂಬವರನ್ನು ಸರ್ಕ್ಯೂಟ್ ಹೌಸ್ ಬಳಿ ಇರುವ ಆಕೆಯ ರೂಮಿಗೆ ಬಿಡಲು ಶ್ರೇಯಾಂಕರವರ ಬಾಬ್ತು KA-19-HL-6246 ನಂಬ್ರದ ಸ್ಕೂಟರಿನಲ್ಲಿ ಆಕೆಯನ್ನು ಹಿಂಬದಿ ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಸ್ಕೂಟರನ್ನು ಪಿರ್ಯಾದಿದಾರರು ಸವಾರಿ ಮಾಡುತ್ತಾ ಮಂಗಳೂರು ನಗರದ ಕದ್ರಿ ಪಾರ್ಕ್ ಕಡೆಯಿಂದ ಸರ್ಕ್ಯೂಟ್ ಹೌಸ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಬರುತ್ತಾ ಸರ್ಕ್ಯೂಟ್ ಹೌಸ್ ಮುಂಭಾಗದ ರಸ್ತೆಗೆ ಬಂದು ತಲುಪುವಲ್ಲಿ ರಸ್ತೆಗೆ ಅಳವಡಿಸಿರುವ ಕೌ ಗೇಟ್ ಬಳಿ ಬಂದು ತಲುಪುತ್ತಿದ್ದಂತೆ KA-01-HV-3036 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಕೆ.ಪಿ.ಟಿ ಕಡೆಯಿಂದ ಸರ್ಕ್ಯೂಟ್ ಹೌಸ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಅತೀ ವೇಗವಾಗಿ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯಾವುದೋ ಕಾರಣಕ್ಕೆ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಕಾರಣ ಮೋಟಾರು ಸೈಕಲ್ ಸ್ಕಿಡ್ ಆಗಿ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ವೇಗದ ರಭಸಕ್ಕೆ ಮೋಟಾರು ಸೈಕಲ್ ಮುಂದಕ್ಕೆ ಜಾರಿಕೊಂಡು ಬಂದು ಸರ್ಕ್ಯೂಟ್ ಹೌಸ್ ಮುಂಭಾಗ ಸರ್ಕಲ್ ಕಡೆಗೆ ಹೋಗಲು ನಿಲ್ಲಿಸಿದ್ದ ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟರಿನ ಬಲಬದಿಗೆ ಢಿಕ್ಕಿಯಾಗಿ ನಿಂತಿದ್ದು, ಢಿಕ್ಕಿಯ ರಭಸಕ್ಕೆ ಸ್ಕೂಟರಿನಲ್ಲಿದ್ದ ಪಿರ್ಯಾದಿದಾರರು ಮತ್ತು ಸಹಸವಾರೆ ಶ್ರೇಯಾಂಕ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲ ತೋಳಿಗೆ ತರಚಿದ ಗಾಯ ಮತ್ತು ಎಡ ತೊಡೆಗೆ ಗುದ್ದಿದ ಗಾಯ, ಹಾಗೂ ಸಹಸವಾರೆ ಶ್ರೇಯಾಂಕ ರವರಿಗೆ ಸೊಂಟಕ್ಕೆ ಗುದ್ದಿದ ಗಾಯ, ಬಲಕೈ ಮತ್ತು ಬಲಕಾಲಿಗೆ ತರಚಿದ ಗಾಯಗಳಾಗಿದ್ದು, ಸ್ಕೂಟರ್ ಜಖಂಗೊಂಡಿರುವುದಾಗಿದೆ. ಅಪಘಾತದಲ್ಲಿ ಮೋಟಾರು ಸೈಕಲ್ ಸವಾರಿನಿಗೂ ಗಾಯಗಳಾಗಿದ್ದು, ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಈಬಗ್ಗೆ KA-01-HV-3036 ನಂಬ್ರದ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ .
Crime Reported in :Mangalore North PS
ಪಿರ್ಯಾದಿ G MURALIDHARA PAI ದಿನಾಂಕ 22.01.2023 ರಂದು ಸಂಜೆ 6:30 ಗಂಟೆಗೆ ಮೊಬೈಲ್ ನಂಬ್ರ 8867840365 ನೇದರಿಂದ ಪೋನ್ ಕರೆ ಬಂದು 5 ಲಕ್ಷದ ಪಟಾಕಿ ಬೇಕಿದೆ ವುಡ್ ಲ್ಯಾಂಡ್ ಹೋಟೆಲ್ ಗೆ ಬರಬೇಕೆಂದು ಹೇಳಿದಾಗ ಪಿರ್ಯಾದಿಯು ಅಲ್ಲಿಗೆ ಬರಲು ಆಗುವುದಿಲ್ಲ ಅಂಗಡಿಗೆ ಬರುವಂತೆ ಹೇಳಿದಾಗ ಎಷ್ಟು ಗಂಟೆಗೆ ನೀವು ಇರುತ್ತೀರಿ ಎಂದು ಕೇಳಿ ದಿನಾಂಕ 23.01.2023 ರಂದು ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರು ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ಪರಿಚಯದ ದಿನೇಶ್ ಶೆಟ್ಟಿ ಹಾಗೂ ಇತರೆ 4 ಮಂದಿ ಏಕಾಏಕಿಅಂಗಡಿ ಒಳಗಡೆ ನುಗ್ಗಿ 5 ಲಕ್ಷ ರೂಪಾಯಿ ಹಫ್ತ ಹಣ ಕೊಡಬೇಕೆಂದು ಇಲ್ಲವಾದರೆ ನಿನ್ನನ್ನು ಶೂಟ್ ಮಾಡಿ ಕೊಲ್ಲುವುದಾಗಿ ಹೇಳಿ ಪಿರ್ಯಾದಿಯ ಕೆನ್ನೆಗೆ ಕೈಯಿಂದ ಬಲವಾಗಿ ಹೊಡೆದು ಕಾಲಿನಿಂದ ತುಳಿದು ಎದೆಗೆ ಗುದ್ದಿ ಹಲ್ಲೆ ನಡೆಸಿ ಜೊತೆಯಲ್ಲಿದ್ದವರಲ್ಲಿ ಗನ್ ತಾ ಎಂದು ಹೇಳಿ ಪಿರ್ಯಾದಿದಾರರಿಗೆ ಜೀವ ಬೆದರಿಕೆ ನೀಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.
Crime Reported in :Konaje PS
ದಿನಾಂಕ 23.01.2023 ರಂದು 17-30 ಗಂಟೆಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ತಿಬ್ಲೆಪದವು ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ನವೀಜ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಾಗ Positive for Tetrahydrocannabinol (ಗಾಂಜಾ) ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.
Crime Reported in :Traffic North Police Station
ಪಿರ್ಯಾದಿ Pavaneeth ತಾಯಿ ಶ್ರೀಮತಿ ಆಶಾ (51) ವರ್ಷ ಎಂಬವರು ದಿನಾಂಕ 23/01/2023 ರಂದು ಬೆಳಿಗ್ಗೆ ರೇಷನ್ ತರುವ ಸಲುವಾಗಿ ಬಳ್ಕುಂಜೆಗೆ ಹೋದವರು ವಾಪಾಸ್ಸು ಮನೆಗೆ ಆಟೋ ರಿಕ್ಷಾ ನಂಬ್ರ KA-19AD-9591 ರಲ್ಲಿ ಪ್ರಯಾಣಿಸುತ್ತಿದ್ದ ಸಮಯ ಬೆಳಿಗ್ಗೆ ಸುಮಾರು 10:00 ಗಂಟೆಗೆ ಮಂಗಳೂರು ತಾಲೂಕು, ಬಳ್ಕುಂಜೆ ಪಶು ಆಸ್ಪತ್ರೆಯ ಬಳಿ ತಲುಪುತ್ತಿದ್ದಂತೆಯೇ KA-19AD-0759 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಶಶಿಕುಮಾರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಆಶಾರವರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ಢಿಕ್ಕಿ ಪಡಿಸಿದ ಪರಿಣಾಮ ಆಶಾರವರ ಬಲಕೈ ತೋಳಿನ ಬಳಿ, ಬಲಕೈ ತಟ್ಟಿಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಗಾಯಾಳು ಶ್ರೀಮತಿ ಆಶಾರವರು ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.
Crime Reported in : Moodabidre PS
ದಿನಾಂಕ: 23-01-2023 ರಂದು ಕಾರ್ಕಳ ಕಡೆಯಿಂದ ಮೂಡಬಿದರೆ ಕಡೆಗೆ ಪಿರ್ಯಾದಿ ಸುಧೀರ್ ಅಮೀನ್ ರವರ ಸ್ನೇಹಿತ ನಿತೇಶ್ ರವರು KA-20-EX-4380 ರಲ್ಲಿ ಹಿಂಬದಿ ಸವಾರರನ್ನಾಗಿ ಸಹೋದ್ಯೋಗಿಯಾದ ಆದರ್ಶ ರವರನ್ನು ಕುಳ್ಳಿರಿಸಿಕೊಂಡು ತಮ್ಮ ಮುಂದಿನಿಂದ ಹೊರಟಿದ್ದು ಮದ್ಯಾಹ್ನ ಸಮಯ ಸುಮಾರು 2.00 ಗಂಟೆಗೆ ಮೂಡಬಿದರೆಯ ಬೆಳುವಾಯಿಯ ಗ್ರಾಮ ಪಂಚಾಯಿತಿ ಹತ್ತಿರ ಎದರುಗಡೆಯಿಂದ ಬಂದ ಅಂದರೆ ಮೂಡಬಿದರೆಯಿಂದ ಕಾರ್ಕಳದ ಕಡೆಗೆ ಹೊರಟಿದ್ದ KA-19-MD-9035 ನೇ ಕಾರಿನ ಚಾಲಕರಾದ ಅಶ್ರಪ್ ರವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿಪಡಿಸಿದ್ದರಿಂದ ಬೈಕ್ ನಲ್ಲಿದ್ದ ಸವಾರರು ಮತ್ತು ಸಹಸವಾರರು ರಸ್ತೆಗೆ ಬಿದ್ದು ಇಬ್ಬರಿಗೂ ಕೈಕಾಲುಗಳು, ಮುಖಕ್ಕೆ, ತಲೆಗೆ ಮತ್ತು ಇತರೆ ಕಡೆಗಳಲ್ಲಿ ರಕ್ತಗಾಯ ಮತ್ತು ಗಾಯದ ನೋವುಗಳು ಆಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಅಲ್ಲಿ ಸೇರಿದ ಸಾರ್ವಜನಿಕರು ವಾಹನಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂಬಿತ್ಯಾದಿ.