ಅಭಿಪ್ರಾಯ / ಸಲಹೆಗಳು

Crime Reported in : Traffic South Police Station       

ದಿನಾಂಕ:23-11-2022 ರಂದು ಪಿರ್ಯಾದಿದಾರರಾದ ಪ್ರಕಾಶ್ ಆಚಾರ್ಯ ರವರು ಮೋಟಾರ್ ಸೈಕಲ್ ನಂಬರ್. KA-19-W-0992 ನೇದರಲ್ಲಿ ಸವಾರಿ ಮಾಡಿಕೊಂಡು ಪಿಗ್ಮಿ ಸಂಗ್ರಹ ಮಾಡುತ್ತ ಲ್ಯಾಂಡ್ ಲಿಂಕ್ಸ್ ನಿಂದ ಯಯ್ಯಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ ಸಮಯ ಸುಮಾರು 4-45 ಗಂಟೆಗೆ ಏರ್ ಪೋರ್ಟ್ ರೋಡಿನ ಕಟ್ಟೆಯಂಗಡಿ ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಪದವಿನಂಗಡಿ ಕಡೆಯಿಂದ ಬಂದ KA-05-HX-8426 ನೇದರ ಬೈಕ್ ಸವಾರನು ತೀರ ದುಡುಕುತನ ಹಾಗು ನಿರ್ಲಕ್ಷತನದಿಂದ ಬೈಕ್ ಚಲಾಯಿಸಿ ಪಿರ್ಯಾದಿದಾರರ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರು ನರ್ಸಿಂಗ್ ಹೋಮ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತ ಸಮಯ ಅಪಘಾತ ಪಡಿಸಿದ ಬೈಕ್ ಸವಾರ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Moodabidre PS

ಪಿರ್ಯಾದು Ashalatha ದಾರರು ಕೆಲವು ತಿಂಗಳಿನಿಂದ ಒಂಟಿಕಟ್ಟೆಯಲ್ಲಿರುವ ಅವರ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದು, ಈ ನಡುವೆ ದಿನಾಂಕ 14-11-2022 ರಂದು ಮನೆಗೆ ಹೋಗಿ ವಾಪಸ್ ಅವರ ದೊಡ್ಡಮ್ಮನ ಮನೆಗೆ ಬಂದಿರುತ್ತಾರೆ. ದಿನಾಂಕ 23-11-2022 ರಂದು ತನ್ನ ನೆರೆಮನೆಯ ನಿವಾಸಿಯೋರ್ವರು ನಮ್ಮ ಮನೆಯ ಬೀಗ ಮುರಿದ ವಿಚಾರವನ್ನು ಫೋನ್ ಮೂಲಕ ತಿಳಿಸಿರುತ್ತಾರೆ. ಆ ಪ್ರಕಾರ ಪಿರ್ಯಾದುದಾರರು ಮನೆಗೆ ಹೋಗಿ ನೋಡಿದಾಗ ಮನೆಗೆ ಹಾಕಿದ ಬೀಗ ಮುರಿದು ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ ಕಪಾಟಿನ ಬೀಗವನ್ನು ಮುರಿದು ಅದರಲ್ಲಿದ್ದ ಬಟ್ಟೆಯನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿಸಿ ಅದೇ ರೀತಿ ಮನೆಯ ಅಟ್ಟದ ಬಾಗಿಲು ಮುರಿದು ಅಟ್ಟದಲ್ಲಿದ್ದ ಬೆಲೆಬಾಳುವ ತಾಮ್ರದ, ಕಂಚಿನ ಪಾತ್ರೆಗಳನ್ನು ಮತ್ತು ಗ್ಯಾರೇಜಿನ ಕಬ್ಬಿಣದ ಸಾಮಗ್ರಿಗಳನ್ನು ಹಾಗೂ ಮನೆಯ ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸಿಲಿಂಡರ್, ಛಾವಡಿಯಲ್ಲಿದ್ದ ಟಿವಿ, ವಿ.ಸಿ.ಆರ್ ಧ್ವನಿವರ್ಧಕಗಳನ್ನು ಮತ್ತು ಕಬ್ಬಣದ ಗೇಟನ್ನು ಹೀಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 24-11-2022 08:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080