ಅಭಿಪ್ರಾಯ / ಸಲಹೆಗಳು

Crime Reported in  Mangalore West Traffic PS                                                          

ಪಿರ್ಯಾದಿದಾರರು Dr SUNDARI SURESH KUMAR ದಿನಾಂಕ:23-12-2022 ರಂದು ಸಮಯ ಸುಮಾರು ಮಧ್ಯಾಹ್ನ 01.20 ಗಂಟೆಗೆ ತನ್ನ ಬಾಬ್ತು KA-19-MM-2314 ನೇ ಕಾರನ್ನು ಹಂಪನಕಟ್ಟೆ ಕಡೆಯಿಂದ ಅಂಬೇಡ್ಕರ್ (ಜ್ಯೋತಿ) ವೃತ್ತದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಎಲ್.ಹೆಚ್.ಹೆಚ್ ರಸ್ತೆಯ ಲೇಡಿಸ್ ಕ್ಲಬ್ ಬಳಿ ತಲುಪುತ್ತಿದ್ದಂತೆ ಹಂಪನಕಟ್ಟೆ ಕಡೆಯಿಂದ ಎಲ್.ಹೆಚ್.ಹೆಚ್ ರಸ್ತೆಯ ಕಡೆಗೆ KA-70-1437 ನೇ ಬಸ್ಸನ್ನು ಅದರ ಚಾಲಕ ಗಣೇಶ್ ಕುಮಾರ್ ರವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಡಬದಿಯ ಬಾಡಿ, ಕಾರಿನ ಮುಂಭಾಗದ ಎಡಗಡೆ  ಬಂಪರ್, ಹಾಗೂ ಎಡಬದಿಯ ಸೈಡ್ ಮಿರರ್ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ

 

Crime Reported in   Mangalore Rural PS                                                          

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Ashok ರವರು ನಿರಾಶ್ರಿತರ ಪರಿಹಾರ ಕೇಂದ್ರ ಪಚ್ಚನಾಡಿ ಇಲ್ಲಿಯ ಅಧೀಕ್ಷಕರಾಗಿದ್ದು ಸದ್ರಿ ನಿರಾಶ್ರಿತರ ಕೇಂದ್ರದಲ್ಲಿ ದಿನಾಂಕ 23/12/2022 ರಂದು ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಸುಮಾರು 60 ವರ್ಷ ಪ್ರಾಯದ ಬಾಯಿ ಬಾರದ (ಮೂಗ) ಅಪರಿಚಿತ ವ್ಯಕ್ತಿಯು ನವ ಮಂಗಳೂರು ಬಂದರ್ ನಲ್ಲಿ M.V Panoria Cargo ಶಿಪ್ ಒಳಗೆ ಅನಧಿಕೃತವಾಗಿ ಪ್ರವೇಶಿಸಿ ಭಿಕ್ಷುಕನಂತೆ ಊಟ ತಿಂಡಿಗೆ ಸಹಾಯ ಕೇಳಿಕೊಂಡು ಬಂದಿದ್ದವನನ್ನು ತಂದು ಒಪ್ಪಿಸಿದಂತೆ ನಿರಾಶ್ರಿತರ ಪರಿಹಾರ ಕೇಂದ್ರ ಪಚ್ಚನಾಡಿಯಲ್ಲಿ ಸದ್ರಿ ಅಪರಿಚಿತ ಬಾಯಿ ಬಾರದ ವ್ಯಕ್ತಿಗೆ ವಾಸ್ತವ್ಯ ಕಲ್ಪಿಸಲಾಗಿತ್ತು ಆದರೆ ಈ ದಿನ ದಿನಾಂಕ 24/12/2022 ರಂದು ಸದ್ರಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ವಾಮಂಜೂರಿನ ಸೈಂಟ್ ರೇಮೆಂಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮತ್ತು ಶಿಕ್ಷಕರ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ಸುಮಾರು ಮದ್ಯಾಹ್ನ 12.30 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೇಂದ್ರದ ಪ್ರವೇಶ ದ್ವಾರದಿಂದ ಹೊರ ಹೋಗುವ ಸಮಯ ಭದ್ರತಾ ಸಿಬ್ಬಂದಿಯವರ ಕಣ್ಣು ತಪ್ಪಿಸಿ ಸದ್ರಿ ಬಾಯಿ ಬಾರದ ಅಪರಿಚಿತ ವ್ಯಕ್ತಿಯು ಹೊರ ಹೋಗಿದ್ದು ಈತನ ಪತ್ತೆಗೆ ಹಲವಾರು ಕಡೆ ಹುಡುಕಾಡಿದಲ್ಲಿ ಇದುವರೆಗೆ ಪತ್ತೆಯಾಗಿರುವುದಿಲ್ಲ ಕಾಣೆಯಾದ ಬಾಯಿ ಬಾರದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡುವರೇ ವಿನಂತಿ ಎಂಬಿತ್ಯಾದಿ.

 

Crime Reported in   Mangalore East Traffic PS                                                   

ದಿನಾಂಕ:22-12-2022 ರಂದು ಪಿರ್ಯಾದಿದಾರರಾದ ಶ್ರೀಮತಿ ಶೋಭಾ ರವರು  ತನ್ನ ಬಾಬ್ತು KA-19-HE-0945 ನೊಂದಣಿ ನಂಬ್ರದ ಸ್ಕೂಟರಿನಲ್ಲಿ ಸವಾರಳಾಗಿ ಜ್ಯೋತಿ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಜಂಕ್ಷನಿಗೆ ಬಂದು ಅಲ್ಲಿಂದ ಪಿ.ವಿ.ಎಸ್ ಕಡೆಗೆ ಹಾದು ಹೋಗಿರುವ ರಸ್ತೆಯ ಎಡಬದಿಯಲ್ಲಿ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಾ ಕರಂಗಲ್ಪಾಡಿ ಬಳಿಗೆ ತಲುಪುತ್ತಿದ್ದಂತೆ KA-04-ML-3027 ನಂಬ್ರದ ಕಾರನ್ನು ಅದರ ಚಾಲಕ ದೇವಿಪ್ರಸಾದ್ ಎಂಬಾತನು ಪಿರ್ಯಾದಿದಾರರ ಸ್ಕೂಟರಿನ ಬಲಬದಿಯಿಂದ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಬಲಬದಿಯ ಬಾಡಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಬಲಬದಿಗೆ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ ಗಾಯವಾಗಿದ್ದು, ಸ್ಕೂಟರಿನ ಬಲಬದಿಗೆ ಜಖಂ ಉಂಟಾಗಿರುತ್ತದೆ.

 

Crime Reported in   Mangalore East Traffic PS  

 

ಪಿರ್ಯಾದಿದಾರರಾದ ಕುಮಾರ ಎಂಬುವರು ದಿನಾಂಕ: 24-12-2022 ರಂದು ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ; KA-70-E-9119 ನೇಯದರಲ್ಲಿ ತಮ್ಮ ಮಗಳಾದ ಗಾನವಿ (4 ವರ್ಷ) ಎಂಬುವರನ್ನು ಮುಂಭಾಗದಲ್ಲಿ ಕುಳ್ಳರಿಸಿಕೊಂಡು ಬೆಂದೂರ್ ವೆಲ್, ಹಾರ್ಟಿಕಲ್ಚರ್ ಜಂಕ್ಷನ್, ಆಗ್ನೇಸ್ ರಸ್ತೆ ಮೂಲಕ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿರುವಾಗ ಸಮಯ ಬೆಳಿಗ್ಗೆ ಸುಮಾರು 11-15 ಗಂಟೆಗೆ ಹಾರ್ಟಿಕಲ್ಚರ್ ಜಂಕ್ಷನ್ ತಲುಪುತ್ತಿದ್ದಂತೆ ಆಗ್ನೇಸ್/ಶಿವಭಾಗ್ ಕಡೆಯಿಂದ ಕಾರು ನೊಂದಣಿ ಸಂಖ್ಯೆ: KA-19-MB-2726 ನೇಯದನ್ನು ಅದರ ಚಾಲಕರು ದುಡುಕುತನ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗಳು ಸ್ಕೂಟರ್ ಸಮೇತ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿದ್ದು ಕೂಡಲೇ ಸ್ಥಳೀಯರು ಉಪಚರಿಸಿ ನೋಡಲಾಗಿ ಪಿರ್ಯಾದಿದಾರರ ಎಡ ಭುಜದಲ್ಲಿ ತರಚಿದ ಹಾಗೂ ಗುದ್ದಿದ ರೀತಿಯ ಗಾಯ ಹಾಗೂ ಅವರ ಮಗಳಿಗೆ ಎಡ ಕೈಯಲ್ಲಿ ತರಚಿದ ಹಾಗೂ ಗುದ್ದಿದ ರೀತಿಯ ಗಾಯಗಳಾಗಿದ್ದು ಕೂಡಲೇ ಚಿಕಿತ್ಸೆಗಾಗಿ ಹತ್ತಿರದ ಎಸ್.ಸಿ.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಎಡ ಭುಜದಲ್ಲಿ ಹಾಗೂ ಅವರ ಮಗಳ ಎಡ ತೋಳು ಕೈಯಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ,

ಇತ್ತೀಚಿನ ನವೀಕರಣ​ : 26-12-2022 08:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080