ಅಭಿಪ್ರಾಯ / ಸಲಹೆಗಳು

Crime Reported in : Mangalore North PS                                                   

ಪಿರ್ಯಾದಿ ಮೂಲತಃ ತಮಿಳುನಾಡು ಜಿಲ್ಲೆಯ ನೀಳಗಿರಿ ಜಿಲ್ಲೆಯವರಾಗಿದ್ದು ಮಂಗಳೂರಿನ ಎನ್‌.ಎಂ.ಪಿ.ಟಿ. ಯಲ್ಲಿ ಕೆಲಸದಲ್ಲಿದ್ದು ಫೆಬ್ರವರಿ 2021 ರಲ್ಲಿ ನಿವೃತ್ತಿಯನ್ನು ಹೊಂದಿರುತ್ತಾರೆ.  ನಿವೃತ್ತಿ ಹೊಂದಿದ ಬಳಿಕ ಪಣಂಬೂರಿನ ಅಯ್ಯಪ್ಪನ್ ಕೊವಿಲ್ ಸ್ಟ್ರೀಟ್ ನಲ್ಲಿ ಮುತ್ತು ಸ್ಟೋರ್ ಎಂಬ ಅಂಗಡಿಯನ್ನು ಇಟ್ಟುಕೊಂಡು ಸದರಿ ಅಂಗಡಿಗೆ ಕೆಲಸಕ್ಕಾಗಿ ಹುಡುಕಾಡುತ್ತಿದ್ದಾಗ ನನ್ನ ಜೊತೆಯಲ್ಲಿ ನಿವೃತ್ತಿ ಹೊಂದಿರುವ ತಮಿಳುನಾಡಿನ ವಾಸಿ ಚಲ್ಲದೊರೆ ಎಂಬವರ ಮುಖಾಂತರ ಪರಿಚಯವಾದ ತಮಿಳುನಾಡಿನ ಏಸುದಾಸ್ ಎಂಬವರ ಮುಖಾಂತರ ತಮಿಳುನಾಡಿನ ಕೂಡನ್ ಕುಲಂ ತಿರುವನ್ವೇಲಿ ವಾಸಿ ಶಾಂತಿ ಎಂಬಾಕೆಯು ಕೆಲಸಗಾರರನ್ನು ಕಳುಹಿಸಿಕೊಡುವುದಾಗಿ ತಿಳಿಸಿ ನಂತರ ರೂ. 4,000/- ಪೀಸನ್ನು ಗೂಗಲ್ ಪೇ ಮೂಲಕ ಪಡೆದಿದ್ದು ಆ ಬಳಿಕ  ಆಕೆ ಕೆಲಸಕ್ಕೆ ಜನ ಕಳುಹಿಸದೇ ಇದ್ದು ನಂತರ ಆಕೆಯು ತಾನೇ ಕೆಲಸಕ್ಕೆ ಬರುವುದಾಗಿ ಒಪ್ಪಿ ತನ್ನ ಗಂಡ ತೀರಿ ಹೋದ ಸಮಯದಲ್ಲಿ ಆಸ್ಪತ್ರೆಯ ಖರ್ಚಿಗಾಗಿ ರೂ. 2,28,000/- ಸಾಲವನ್ನು ಮಾಡಿರುವುದಾಗಿ ಅದನ್ನು ತೀರಿಸಿದರೆ ತಾನು ಕೆಲಸ್ಕಕೆ ಬರುವುದಾಗಿ ನಂಬಿಸಿದ್ದು  ಈ ಬಗ್ಗೆ ಏಸುರಾಜ್ ಕೂಡಾ 1 ನೇ ಆರೋಪಿಯಾದ ಶಾಂತಿ ಮಾತನಾಡಿದಂತೆ ನಂಬಿಕೆ ಹುಟ್ಟಿಸಿರುತ್ತಾನೆ.  ಈ ಮಾತನ್ನು ನಂಬಿ ಪಿರ್ಯಾದಿದಾರರು ಅವರ ಮಂಗಳೂರಿನ ಹಂಪನ್ ಕಟ್ಟ ಬ್ರಾಂಚ್ ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಿಂದ  ಅವರ ಖಾತೆ ಸಂಖ್ಯೆ   ನೇದರಿಂದ 1ನೇ ಆರೋಪಿತೆ ಶಾಂತಿ ಎಂಬಾಕೆಯ ಕುಂಡಕೋಲಂ ಕೆನರಾ ಬ್ಯಾಂಕ್ ಶಾಖೆಯ ಅಕೌಂಟ್ ನಂಬ್ರ: 332510101047 ನೇದಕ್ಕೆ ರೂ. 2,00,000/- ಹಣವನ್ನು ಆರ್‌‌‌ಟಿಜಿಎಸ್ ಮುಖಾಂತರ ದಿನಾಂಕ: 16-10-2021 ರಂದು ಕಳುಹಿಸಿಕೊಟ್ಟಿದ್ದು, ಆ ನಂತರದ ಅವಧಿಯಲ್ಲಿ ಕೂಡಾ ಶಾಂತಿ ಕೆಲಸಕ್ಕೆ ಬಾರದೇ ಇರುವುದರಿಂದ ಪಿರ್ಯಾದಿದಾರರು 1ನೇ ಆರೋಪಿತೆ ಶಾಂತಿಯ ತಮಿಳುನಾಡಿನಲ್ಲಿರುವ  ಮನೆಗೆ ದಿನಾಂಕ: 17-10-2021 ರಂದು ಹೋದಾಗ ಅಲ್ಲಿ ಆಕೆಯ ಅಕ್ಕ ತಮಿಳ್ ಶಕ್ತಿ ಮತ್ತು ಶಾಂತಿ ಇದ್ದು, ಪೊಲೀಸ್ ಸ್ಟೇಷನ್ ಗೆ ಕಂಪ್ಲೈಂಟ್ ನೀಡುವ ಬಗ್ಗೆ ತಿಳಿಸಿದ್ದರಿಂದ ಶಾಂತಿಯು ಕೆಲಸಕ್ಕೆ ಬರುವ ಬಗ್ಗೆ ತಿಳಿಸಿ ಪಿರ್ಯಾದಿದಾರರ ಜೊತೆ ದಿನಾಂಕ: 19-10-2021 ರಂದು ಮಂಗಳೂರಿಗೆ ಕೆಲಸಕ್ಕೆ ಬಂದವಳು ನಂತರ ಏಸುರಾಜ್ ತಿಳಿಸಿದಂತೆ ಹಾಗೂ ಜಾಗದ ರಿಜಿಸ್ಟ್ರೇಷನ್  ಇದೆ ಎಂದು ತಮಿಳ್ ಶಕ್ತಿಯು ತಿಳಿಸಿದ್ದಕ್ಕೆ ಪಿರ್ಯಾದಿದಾರರು ಶಾಂತಿಯನ್ನು ವಾಪಾಸು ದಿನಾಂಕ: 25-10-2021 ರಂದು ಮಂಗಳೂರಿನಿಂದ ಕರೆದುಕೊಂಢು ಹೋಗಿ ದಿನಾಂಕ: 27-10-2021 ರಂದು ಅವರ ಮನೆಗೆ ಬಿಟ್ಟಿದ್ದು  ನಂತರ ತಮಿಳ್ ಶಕ್ತಿಯು ನನ್ನಲ್ಲಿ ಒಂದು ಕರಾರು ಪತ್ರವನ್ನು ಮಾಡಿಸಿ ನನ್ನಿಂದ ಪಡೆದ ಮೊತ್ತವನ್ನು ವಾಪಾಸು ನೀಡುವ ಬಗ್ಗೆ ಕರಾರು ಪತ್ರವನ್ನು ಮಾಡಿ ದಿನಾಂಕ: 31-12-2021 ರ ಒಳಗಾಗಿ ನೀಡುವುದಾಗಿ ನಮೂದಿಸಿ ನೀಡಿರುತ್ತಾರೆ.   ಅದರಂತೆ ಪಿರ್ಯಾದಿದಾರರು ಹಲವಾರು ಬಾರಿ 1 ಮತ್ತು 2ನೇ ಆರೋಪಿಗಳಲ್ಲಿ ಹಣವನ್ನು ಕರಾರು ಪತ್ರದಂತೆ  ವಾಪಾಸು ನೀಡುವಂತೆ ಹಲವಾರು ಬಾರಿ ತಿಳಿಸಿದರೂ ಕೂಡಾ ನೀಡದೇ ಇದ್ದು ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಮಾಡಿ ದುರ್ಲಾಭ ಪಡೆಯುವ ಉದ್ದೇಶವನ್ನು ಹೊಂದಿ ಕೆಲಸದ ಬಗ್ಗೆ ಹಣವನ್ನು ಪಡೆದು ನಂಬಿಸಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ ಖಾಸಗಿ ಪಿರ್ಯಾದುವಿನ ಸಾರಾಂಶವಾಗಿರುತ್ತದೆ.

                       

Crime Reported in : Mangalore East Traffic PS                 

ಪಿರ್ಯಾದಿ ಸುಧಾಕರ ಎಂಬವರು ದಿನಾಂಕ: 24/01/2023 ರಂದು ಬೆಳಿಗ್ಗೆ ಮನೆಯಿಂದ ಹೊರಟು ತನ್ನ ಬಾಬ್ತು KA-19-HH-1730 ನೇ ನೊಂದಣಿ ನಂಬ್ರದ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಎಸ್ ಸಿ ಎಸ್ ಆಸ್ಪತ್ರೆಗೆ ಕೆಲಸಕ್ಕೆಂದು ತೊಕ್ಕೊಟ್ಟು ಕಡೆಯಿಂದ ಪಂಪ್ ವೆಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೊಗುತ್ತಾ ಬೆಳಿಗ್ಗೆ ಸಮಯ ಸುಮಾರು 07:30 ಗಂಟೆಗೆ ಪಂಪ್ ವೆಲ್ ಜಂಕ್ಷನ್ ಬಳಿ ತಲುಪುತ್ತಿದಂತೆ KA-19-MG-6073 ನೇ ನೊಂದಣಿ ನಂಬ್ರದ ಕಾರನ್ನುಅದರ ಚಾಲಕ ಮೊಹಮ್ಮದ್ ಫಯಾಜ್ ಎಂಬವರು ಪಡೀಲು ಕಡೆಯಿಂದ ಕಂಕನಾಡಿ ಹಳೇಯ ರಸ್ತೆ ಕಡೆಗೆ ಹೋಗಲು ಪಂಪ್ ವೆಲ್ ಪ್ಲೈ ಓವರ್ ಕೆಳಭಾಗದಿಂದ ಒಮ್ಮೇಲೆ ನಿರ್ಲಕ್ಷತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಮುನ್ನುಗ್ಗಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್ ನ ಬಲಬದಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಬಲಬದಿಗೆ ರಸ್ತೆಗೆ ಮುಗುಚಿ ಬಿದ್ದು ಪಿರ್ಯಾದಿದಾರರ ಬಲಗಾಲು ಸ್ಕೂಟರ್ ನ ಕೆಳಭಾಗಕ್ಕೆ ಸಿಲುಕಿಕೊಂಡು, ಗಾಯವಾಗಿ ಚಿಕಿತ್ಸೆಯ ಬಗ್ಗೆ ಎಸ್ ಸಿ ಎಸ್ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಂಡಾಗ ವೈದ್ಯರು ಬಲಗಾಲಿನ ಪಾದಕ್ಕೆ ಮೂಳೆ ಬಿರುಕು ಬಿಟ್ಟಂತಹ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತಕ್ಕೆ ಕಾರಣನಾದ KA-19-MG-6073 ನೇ ನಂಬ್ರದ ಕಾರಿನ ಚಾಲಕ  ಮೊಹಮ್ಮದ್ ಫಯಾಜ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

 

Crime Reported in :Bajpe PS                

ಪಿರ್ಯಾದಿ Sundar C Poojary ಮಗಳಾದ ಅಂಚಲ್ ಎಂಬುವರು ಅವರ ಸಹೋದ್ಯೊಗಿ ಜೈಸನ್ ಲ್ಯಾಸ್ಸಿ ಕ್ರಾಸ್ತ ಎಂಬುವರ ಜೊತೆ KA19HM0236 ನೇ ಸ್ಕೂಟರ್ ನಲ್ಲಿ ಸಹ ಸವಾರಳಾಗಿ ಕಾರ್ಕಳಕ್ಕೆ ಹೋಗಿದ್ದು ಉಡುಪಿಯ ಕಾರ್ಕಳದ ಚರ್ಚ್ ಜಾತ್ರೆಯನ್ನು ಮುಗಿಸಿಕೊಂಡು ಈ ದಿನ ದಿನಾಂಕ 24.01.2023 ರಂದು ರಾತ್ರಿ ಸಮಯ ಸುಮಾರು 2.30 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಬಂಗ್ಲೆ ಗುಡ್ಡೆ ಎಂಬಲ್ಲಿ ತಲುಪಿದಾಗ ಸ್ಕೂಟರ್ ಸವಾರನಾದ ಜೈಸನ್ ಲ್ಯಾಸ್ಸಿ ಕ್ರಾಸ್ತ ಎಂಬುವರು ತನ್ನ ಸ್ಕೂಟರ್ ನ್ನು ಅತೀ ವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿ ಒಮ್ಮಲೆ ರಸ್ತೆಯ ಉಬ್ಬಿನಲ್ಲಿ ಬ್ರೇಕ್ ಹಾಕಿದ ಪರಿಣಾಮ ಅಂಚಲ್ ರವರು ಅಯಾತಪ್ಪಿ ಡಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಮುಖಕ್ಕೆ ತರಚಿದ ರಕ್ತಗಾಯ ಉಂಟಾಗಿದ್ದು ಅವರನ್ನು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

Crime Reported in : Moodabidre PS    

 ಪೊಲೀಸ್ ಉಪ ನಿರಕ್ಷಕರಾದ ಸಿದ್ದಪ್ಪ ನರನೂರು ದಿನಾಂಕ:  24.01.2023 ರಂದು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ 16.15  ಗಂಟೆಗೆ ಮೂಡಬಿದರೆಯ ಶಿರ್ತಾಡಿ ಎಂಬಲ್ಲಿರುವ ಬ್ರಹ್ಮ ರೆಸಿಡೆನ್ಸಿಯ ಬಳಿಯಲ್ಲಿ ಮಟ್ಕಾ ಜೂಜಾಟ ಆಡಲು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿಯಂತೆ ಶಿರ್ತಾಡಿಗೆ 17.05  ಗಂಟೆಗೆ ತಲುಪಿ ಶಿರ್ತಾಡಿಯ ಬ್ರಹ್ಮ ರೆಸಿಡೆನ್ಸಿ ಪಕ್ಕದಲ್ಲಿರುವ ಪಾನ್ ಶಾಪ್  ಬಳಿ ಬರುತ್ತಿರುವಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಇನ್ನೊಬ್ಬನ ಸಹಾಯದಿಂದ ಚೀಟಿಯಲ್ಲಿ ಬರೆಯುತ್ತಾ ಇದು ಬಾಂಬೆ ಕಲ್ಯಾಣಿ ಮಟ್ಕಾ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಜೀಪನ್ನು ಅವರ ಹತ್ತಿರ ಹೋಗಿ ನಿಲ್ಲಿಸಿದಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು,  ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದ ಸದಾಶಿವ @ ಸುನೀಲ್ ಮತ್ತು ಆತನ ಜೊತೆಗಿದ್ದ ರೂಪೇಶ್ ಯಾದವ್ ಎಂಬುವರನ್ನು 17.15 ಗಂಟೆಗೆ ಹಿಡಿದು ವಿಚಾರಿಸಿದಾಗ, ಸಂಗ್ರಹಿಸಿದ ಹಣವನ್ನು ಉಡುಪಿಯಲ್ಲಿರುವ ಲಿಯೋ ಎಂಬಾತನಿಗೆ ಪ್ರಮೋದ್ ಎಂಬವರ ಮೂಲಕ ಕೊಡುವುದಾಗಿ ತಿಳಿಸಿರುತ್ತಾರೆ. ಅವರ ವಶದಲ್ಲಿದ್ದ ನಗದು ಹಣ ರೂ 6220/- ಮತ್ತು ಇನ್ಪಿನಿಕ್ಸ್ ಕಂಪನಿಯ ಅಂಡ್ರಾಯ್ಡ ಮೋಬೈಲ್ ಫೋನ್ (ಮೌಲ್ಯ ಸುಮಾರು ರೂ 6000) ಹಾಗೂ ಮಟ್ಕಾ ಚೀಟಿ ಬರೆದ 10 ಚೀಟಿಗಳು ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ ಒಂದು ಪೆನ್ನನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಎಂಬಿತ್ಯಾದಿ

Crime Reported in : Kavoor PS

ಪಿರ್ಯಾದಿದಾರರ JAFAR SADEEQ ಮಗಳಾದ ಫಾತಿಮಾ ಜಲೀಲಾ (18 ವರ್ಷ) ಎಂಬವರು ಈ ಮೊದಲು 3 ತಿಂಗಳ ಹಿಂದೆ ಕಾಣೆಯಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಂತರ ಪತ್ತೆಯಾಗಿರುತ್ತಾಳೆ. ತದನಂತರ ಈಕೆಯು ಮನೆಯಲ್ಲಿ ಇದ್ದು, ದಿನಾಂಕ 23/01/2023 ರಂದು ಸಂಜೆ 7.10 ಗಂಟೆಗೆ ಪಿರ್ಯಾದಿದಾರರ ಮಗಳಾದ ಫಾತಿಮಾ ಜಲೀಲಾ ಮನೆಯಲ್ಲಿದ್ದ ಸಮಯ ಉಪ್ಪಿನಂಗಡಿಯ ಸಮೀರ ಎಂಬಾತ ಮನೆಯ ಬಳಿ ಬಂದು ಪಿರ್ಯಾದಿದಾರರ ಮಗಳಾದ ಫಾತಿಮಾ ಜಲೀಲಾ ರವರನ್ನು ಕರೆದುಕೊಂಡು ಹೋದ ಬಗ್ಗೆ ಹೆಂಡತಿಯಾದ ಆಯಿಷಾ ರವರು ತಿಳಿಸಿರುತ್ತಾರೆ. ನಂತರ ಹೋದವರು ಈ ವರೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

ಚಹರೆ:

 1. ಫಾತಿಮಾ ಜಝೀಲಾ (18ವರ್ಷ್) ತಂದೆ: ಜಾಫರ್ ಸಾದಿಕ್
 2. ಎತ್ತರ: 5 ಅಡಿ, ಗೋಧಿ ಮೈ ಬಣ್ಣ, ದುಂಡು ಮುಖ ಬಿಳಿ ಮೈಬಣ್ಣ, ಕಪ್ಪು ಬಣ್ಣದ ಉದ್ದವಾದ ತಲೆ ಕೂದಲು
 3. ಧರಿಸಿರುವ ಬಟ್ಟೆ: ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
 4. ಮಾತನಾಡುವ ಭಾಷೆ: ಕನ್ನಡ, ಇಂಗ್ಲೀಷ್ ಮತ್ತು ಬ್ಯಾರಿ

 

ಇತ್ತೀಚಿನ ನವೀಕರಣ​ : 25-01-2023 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080