ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS         

ಪ್ರಕರಣದ ಪಿರ್ಯಾದಿದಾರರಾದ ಸಂಜಯ.ಪಿ. ರವರು ಪಾಂಡೆಶ್ವರದ ಫಿಜ್ಜಾ ಮಾಲ್ ನಲ್ಲಿರುವ ಗ್ರೀನ್ ಓನಿಯನ್ ರೆಸ್ಟೋರೆಂಟನಲ್ಲಿ ಕೆಲಸ ಮುಗಿಸಿಕೊಂಡು  ಎಂದಿನಂತೆ ತನ್ನ ಸಹೋದ್ಯೋಗಿ ಸಿಬ್ಬಂದಿಗಳಾದ ನಿಶಾನ, ಮೋಹನ್, ನಿರ್ಮಲ್, ನಿಕೆನ್ ರವರೋಂದಿಗೆ ಅತ್ತಾವರದ ಮೆನಡೆಜ್ ಗ್ಯಾಲಕ್ಸಿ, ಸ್ಟರಕ್ ರೋಡ್ ಕಡೆಗೆ ವಿಶ್ರಾಂತಿ ಪಡೆಯಲು ಪಾಂಡೆಶ್ವರದ ಫಿಜ್ಜಾ ಮಾಲ್ ಬಳಿಯಿರುವ ಆಟೋ ಸ್ಟ್ಯಾಂಡ್ ನಲ್ಲಿರುವ KA-19-AD-8195 ನೇ ನಂಬ್ರದ ಆಟೋ ರಿಕ್ಷಾದಲ್ಲಿ ಕುಳಿತುಕೊಂಡು ಎ ಬಿ ಶೆಟ್ಟಿ ವೃತ್ತ, ಟೌನ್ ಹಾಲ್ ಮೂಲಕ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬರುತ್ತಾ ದಿನಾಂಕ 24-10-2022 ರಂದು ರಾತ್ರಿ ಸಮಯ ಸುಮಾರು 22:00 ಗಂಟೆಗೆ ಪಿರ್ಯಾದಿದಾರರು ಹೊಗುತ್ತಿದ್ದ ಆಟೋ ರಿಕ್ಷಾ ಚಾಲಕನಾದ ಅನ್ವರ ಹುಸೈನ್ (28) ಎಂಬಾತನು ತನ್ನ ಆಟೋ ರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವಂತೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ರೈಲ್ವೆ ಪೊಲೀಸ್ ಸ್ಟೇಷನ್ ನ ಸ್ವಲ್ಪ ಎದುರುಗಡೆ ಇಳಿಜಾರು ತಿರುವು ರಸ್ತೆಯಲ್ಲಿ ಆಟೋ ರಿಕ್ಷಾದ  ಹತೋಟಿ ತಪ್ಪಿ ರಸ್ತೆಯ ಬದಿಯಲ್ಲಿರುವ ತಗ್ಗು ಪ್ರದೇಶದ ಪಾರ್ಕಿಂಗ್ ಸ್ಲೋಟ್ ಕಡೆಗೆ ಚಲಿಸಿ ಆಟೋರಿಕ್ಷಾ ಪಲ್ಟಿಯಾಗಿ ಬಿದ್ದ ಪರಿಣಾಮ ಆಟೋರಿಕ್ಷಾ ದಲ್ಲಿ ಪ್ರಯಾಣ ಮಾಡುತಿದ್ದ ಪಿರ್ಯಾದುದಾರರಿಗೆ ಎಡ ಹಣೆಯ ಮೇಲೆ ರಕ್ತ ಗಾಯ, ಬೆನ್ನು ಮೂಳೆಗೆ ಗುದ್ದಿದ ಗಾಯ, ಎಡ ಮೂಗಿನ ರಂದ್ರದ, ಎಡ ಕಣ್ಣಿನ  ಬಳಿ ತರಚಿದ ಗಾಯ, ಗಾಯಾಳು ನಿಶಾನ್ ಗೆ ಹಣೆಯ ಭಾಗದಲ್ಲಿ ರಕ್ತ ಗಾಯವಾಗಿದ್ದು, ಗಾಯಾಳು ಮೋಹನ್ ಗೆ ಬಲ ಕಿವಿಯ ತಟ್ಟು ಹರಿದು ಕಿವಿಯ ಸಮೀಪ ತುತಾದ ರೀತಿಯ ಗಂಭೀರ ಸ್ವರೂಪದ ಆಳ ಗಾಯ, ಗಾಯಾಳು ನಿರ್ಮಲ್ ಗೆ ಹಣೆಯ ಮಧ್ಯ ಭಾಗದಲ್ಲಿ, ಬಲ ಕಣ್ಣಿನ ಬಳಿ, ಹಣೆಯ ಬಲ ಬದಿಗೆ  ರಕ್ತ ಗಾಯ ಮತ್ತು ಎಡ ಕಾಲಿನ ಮೋಣ ಗಂಟಿಗೆ ತರಚಿದ ಗಾಯವಾಗಿದ್ದು, ಅಲ್ಲದೆ ಆಟೋ ರಿಕ್ಷಾ ಚಾಲಕನಿಗೆ ಹಣೆಗೆ, ಎರಡು ಹುಬ್ಬಿನ ಮಧ್ಯ ಭಾಗಕ್ಕೆ ರಕ್ತ ಗಾಯ,  ಬಲ ಕಣ್ಣಿನ ಕೆಳಗೆ ತರಚಿದ ಗಾಯ ಹಾಗೂ ಮೂಗಿಗೆ ಗುದ್ದಿದ  ತರಹದ ಗಾಯವಾಗಿದ್ದು, ಅಪಘಾತವಾದ ಸ್ಥಳದಲ್ಲಿ ಸೆರಿದ್ದ ಸಾರ್ವಜನಿಕರು ಉಪಚರಿಸಿ, ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಕರೆ ತಂದಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಪರಿಕ್ಷಿಸಿ ಚಿಕಿತ್ಸೆಯಲ್ಲಿರುವುದಾಗಿದೆ , ಆದುದರಿಂದ ಈ ಅಪಘಾತಕ್ಕೆ ಕಾರಣನಾದ KA-19-AD-8195 ನೇ ಆಟೋ ರಿಕ್ಷಾ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

 

Panambur PS

ಪಿರ್ಯಾದುದಾರಾರದ ಮಹಮ್ಮದ್ ಅಜಾರುದ್ದಿನ್ ರವರ ಮಾವ ಸುಮಾರು 62 ವರ್ಷ ಪ್ರಾಯದ ಶಿವಾಜಿ ನಗರ ಬೆಂಗಳೂರು ನಿವಾಸಿ ಯಾಕೂಬು ಶರೀಫ್ ಎಂಬವರು ದಿನಾಂಕ 22-10-2022 ರಂದು ಬೆಂಗಳೂರಿನಿಂದ T T ಬಾಡಿಗೆ ವಾಹನದಲ್ಲಿ ತನ್ನ ಹೆಂಡತಿಯವರಾದ ಯಾಸ್ಮೀನ್ ತಾಜಿ ಹಾಗೂ ತನ್ನ ಮೂವರು ಹೆಣ್ಣು ಮಕ್ಕಳು ಹಾಗೂ ಅಳಿಯಂದಿರು ಮತ್ತು ತನ್ನ ಮೊಮ್ಮಕ್ಕಳೂಂದಿಗೆ ಉಳ್ಳಾಳ ದರ್ಗಾಕ್ಕೆ ಹೋಗಿ ಬಳಿಕ ಪಣಂಬೂರು ಬೀಚ್ ನೋಡಲು 12.30 ಗಂಟೆಗೆ ಬಂದವರು, T T ವಾಹನದಲ್ಲಿ ಚಾಲಕ ರಾಜೇಶ್ ಮತ್ತು ಯಾಕೂಬ್ ಶರೀಪ್  ರವರನ್ನು ಬಿಟ್ಟು ಉಳಿದವರು ಪಣಂಬೂರು ಬೀಚ್ ಸುತ್ತಾಡಿ ಅದೇ ದಿನಾಂಕ 22-10-2022 ರಂದು ಮದ್ಯಾಹ್ನ 1-30 ಗಂಟೆಗೆ T T ವಾಹನದ ಬಳಿ ಬಂದು ನೋಡಿದಾಗ ಯಾಕೂಬು ಶರೀಫ್ ರವರು ಒಬ್ಬರೆ ವಾಹನ ಬಿಟ್ಟು ಇಳಿದು ಹೋದವರು ವಾಪಸ್ ಬಂದಿರುವುದಿಲ್ಲ. ಸದ್ರಿಯವರನ್ನು ಬಳಿಕ ಸುತ್ತ ಮುತ್ತಲೂ ಹಾಗೂ ಪಣಂಬೂರು ಬೀಚ್ ಪ್ರದೇಶದಲ್ಲಿ ಹುಡುಕಾಡಿದರೂ ಈ ವರೆಗೂ ಪತ್ತೆಯಾಗದೆ ಇರುವುದರಿಂದ ಸದ್ರಿಯವರನ್ನು ಪತ್ತೆ ಮಾಡಬೇಕಾಗಿ ನೀಡಿದ ಪಿರ್ಯಾದಿಯಾಗಿರುತ್ತದೆ.

Bajpe PS

ಪಿರ್ಯಾದಿ Hemachandra  K ದಾರರ ತಂದೆಯವರು ಕೆಲಸಕ್ಕೆಂದು ದಿನಾಂಕ 24.10.2022 ರಂದು ಮನೆಯಿಂದ ಹೊರೆಟು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜೀಮಠ ಜಂಕ್ಷನ್ ನಲ್ಲಿ ಬಸ್ಸಿಗೆ ಕಾಯುತ್ತಿರುವಾಗ ಬೆಳಗ್ಗೆ 08.30 ಗಂಟೆಯ ಸಮಯಕ್ಕೆ ಎಡಪದವು ಕಡೆಯಿಂದ ಮಂಗಳೂರು ಕಡೆಗೆ  ಬರುತ್ತಿದ್ದ ಬೈಕ್ ನಂ KA19 EL 0924 ನೇದನ್ನು ಅದರ  ಸವಾರನಾದ ರಾಘವೇಂದ್ರ ಶೆಟ್ಟಿಗಾರ್ ನು  ಅತೀವೇಗ ಮತ್ತು ಅಜಾಗರುಕತೆಯಿಂದ  ಬೈಕ್ ನ್ನು ಚಲಾಯಿಸಿ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆಯವರಿಗೆ ತಲೆಗೆ ,ಬಲಭುಜಕ್ಕೆ ಮತ್ತು ಬಲಕಾಲಿಗೆ ರಕ್ತಗಾಯವಾಗಿದ್ದು ನಂತರ ಪಿರ್ಯಾದಿದಾರರ ತಂದೆಯನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 25-10-2022 07:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080