ಅಭಿಪ್ರಾಯ / ಸಲಹೆಗಳು

Crime Reported in : Moodabidre PS

ಪಿರ್ಯಾದು Ravindra C Poojary ದಾರರ ತಮ್ಮ ಜಯಚಂದ್ರ ಪೂಜಾರಿ ರವರು ದಿನಾಂಕ 24.11.2022 ರಂದು ಮಧ್ಯಾಹ್ನ ಸುಮಾರು 01.30 ಗಂಟೆಗೆ ಪ್ರಾಂತ್ಯ ಗ್ರಾಮದ ವಿಶಾಲ್ ನಗರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ಮೂಡಬಿದ್ರೆ ಕಡೆಯಿಂದ ಮಹಾವೀರ ಕಾಲೇಜು ಕಡೆಗೆ ಕೆಎ-70-ಹೆಚ್-3434 ನಂಬ್ರದ ಮೋಟಾರ್ ಸೈಕಲ್ ವೊಂದನ್ನು ಅದರ ಸವಾರ ಸಹಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ತಮ್ಮನಾದ ಜಯಚಂದ್ರ ಪೂಜಾರಿಯವರಿಗೆ ಡಿಕ್ಕಿಪಡಿಸಿದ್ದು, ಇದರ ರಭಸಕ್ಕೆ ಜಯಚಂದ್ರ ಪೂಜಾರಿ ರವರು ರಸ್ತೆಗೆ ಎಸೆಯಲ್ಪಟ್ಟು ತಲೆಯ ಹಿಂಬದಿ, ಎದೆಗೆ ಮತ್ತು ಕೆನ್ನೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 03.05 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

 

2) ಪಿರ್ಯಾದಿ Ismail Sharief ದಾರರಾದ ದಿನಾಂಕ 24.11.2022 ರಂದು ತನ್ನ ತಾಯಿ ಮತ್ತು ಹೆಂಡತಿಯೊಂದಿಗೆ ಮೂಡಬಿದ್ರೆಗೆ ಬಂದಿದ್ದು, ತನ್ನ ತಾಯಿಯನ್ನು ವಿನಯ ಹೆಗ್ಡೆಯವರ ಕ್ಲಿನಿಕ್ ನಲ್ಲಿ ಬಿಟ್ಟು ಪಿರ್ಯಾದುದಾರರು ತನ್ನ ಬಾಬ್ತು ಕೆಎ-19-ಎಂಎಫ್-3077 ನಂಬ್ರ ಕಾರಿನಲ್ಲಿ ಹೆಂಡತಿಯೊಂದಿಗೆ ಮೂಡಬಿದ್ರೆಯ ಅಪೂರ್ವ ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗುವುದಾಗಿ ಹೊರಟು ಮೂಡಬಿದ್ರೆ-ಬೆಳ್ತಂಗಡಿ ರಸ್ತೆಯಲ್ಲಿ ಚಲಾಯಿಕೊಂಡು ಹೋಗುತ್ತಾ ಅಪೂರ್ವ ನಗರಕ್ಕೆ ಹೋಗುವರೇ ಮುಖ್ಯ ರಸ್ತೆಯಿಂದ ಮದ್ಯಾಹ್ನ 1.00 ಗಂಟೆ ಸಮಯಕ್ಕೆ ಕಾರನ್ನು ಬಲಕ್ಕೆ ತಿರುಗಿಸುವ ಸಮಯ ಕಾರಿನ ಇಂಡಿಕೇಟರ್ ಲೈಟ್ ನ್ನು ಹಾಕಿ ಕೈ ಸನ್ನೆಯನ್ನು ಮಾಡಿ ತಿರುಗಿಸಿದ್ದು ಈ ಸಮಯ ಮೂಡಬಿದ್ರೆ ಕಡೆಯಿಂದ ಕೆಎ-19-ಇಡಿ-9614 ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಕಾರಿನ ಎದುರು ಬಲಬದಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿದ್ದು, ಈ ಸಮಯ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ನಿಂದ ಎಸೆಯಲ್ಪಟ್ಟು ರಸ್ತೆಯ ಬದಿಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ ಮೋಟಾರು ಸೈಕಲ್ ಸವಾರ ವಿಜ್ಞೇಶ್ ರವರ ಬಲ ಕಾಲಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಗಿದೆ ಎಂಬಿತ್ಯಾದಿ.

 

Crime Reported in : Mangalore East PS   

ಫಿರ್ಯಾದಿದಾರರಾದ ಸೈಯದ್ ರಶೀಮ್ ಉಮರ್ (20) ರವರು ಕಾರ್ಕಳ ಖಾಸಗೀ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 24/11/2022 ರಂದು ಕಾರ್ಕಳ ನಿಟ್ಟೆ ಮಾರ್ಗವಾಗಿ ಪದ್ಮಾಂಬಿಕಾ ಎಂಬ ಬಸ್ಸಿನಲ್ಲಿ ಮನೆಗೆ ಹಿಂತಿರುಗುತ್ತಿರುವಾಗ ಸಮಯ ಸುಮಾರು 04:00 ಗಂಟೆಗೆ ಬಸ್ಸು ನಂತೂರು ಜಂಕ್ಷನ್ ಬಳಿ ತಲುಪಿದಾಗ 3-4 ಅಪರಿಚಿತ ಜನರ ತಂಡ ಬಸ್ಸಿನ ಒಳಗೆ ಬಂದು ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆದು ನಂತರ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಸುಮಾರು 4-5 ಜನ ದೊಣ್ಣೆ ಹಾಗೂ ಬೆತ್ತದಿಂದ ಹಲ್ಲೆ ಮಾಡಿರುತ್ತಾರೆ ಎಂಬಿತ್ಯಾದಿ

 

Crime Reported in : Traffic North Police Station                       

“ಫಿರ್ಯಾದಿ LAVA B KOTAIN ದಾರರು ದಿನಾಂಕ 23.11.2022 ರಂದು ಮದ್ಯಾಹ್ನ ವೇಳೆಗೆ ತಮ್ಮ ಬಾಬ್ತು ಜುಪಿಟರ್ ದ್ವಿಚಕ್ರ ವಾಹನ ನಂಬ್ರ KA-19EV-2603ನೇ ದರಲ್ಲಿ ಅಂಗಡಿಗೆ ಸಾಮಾನು ಖರೀದಿಸುವರೇ ಕುದುರೆಮುಖಕ್ಕೆ ಹೋಗಿ ಸಾಮಾನು ಖರೀದಿಸಿ ವಾಪಾಸು ತಣ್ಣೀರುಬಾವಿ ಕಡೆಗೆ ದ್ವಿಚಕ್ರ ವಾಹವನ್ನು ಸವಾರಿ ಮಾಡಿಕೊಂಡು ಕೂಳೂರು-ತಣ್ಣೀರುಬಾವಿ ಕಾಂಕ್ಟ್ರೀಟ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 01:00 ಗಂಟೆಗೆ ಮಂಗಳೂರು ತಾಲೂಕು ತಣ್ಣಿರುಬಾಬಿ ಸಿಲ್ವರ್ ಗೇಟ್ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ರಸ್ತೆಯ ಎಡಭಾಗದಲ್ಲಿ ಪಾರ್ಕ್ ಮಾಡಿ ನಿಲ್ಲಿಸಿದ್ದ ಲಾರಿ ನಂಬ್ರ KA-06-C-7845 ನೇಯದನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೇ ಒಮ್ಮೆಲೇ ದುದುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ಬಲ ಭಾಗಕ್ಕೆ ಚಲಾಯಿಸಿ ಫಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಅವರ ಎಡಕೈ ಅಂಗೈಗೆ, ಬಲಕಣ್ಣಿನ ಕೆಳಗೆ ರಕ್ತಗಾಯ, ಬಲಕಾಲಿನ ಪಾದಕ್ಕೆ ಮತ್ತು ಎಡಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಗಾಯಾಳು ಚಿಕಿತ್ಸೆ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಆಗಿರುವುದಾಗಿದೆ. ಅಫಘಾತ ಪಡಿಸಿದ ಲಾರಿಯ ಚಾಲಕ ಮತ್ತು ಮಾಲಕರು ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು ಬಳಿಕ ನಿರಾಕರಿಸಿರುವುದಿಂದ ಈ ದಿನ ತಡವಾಗಿ ದೂರು ನೀಡಿರುವುದಾಗಿದೆ”’ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 25-11-2022 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080