Crime Reported in Traffic North Police Station
ಪಿರ್ಯಾದಿ Mahammed Navaz ವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಡೆಕ್ಕನ್ ಪ್ಲಾಸ್ಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 24-12-2022 ರಂದು ಬೆಳಿಗ್ಗೆ 08:00 ಘಂಟೆಗೆ ಕೆಲಸ ಬಿಟ್ಟು ಮನೆಗೆ ಹೋಗುವರೇ ಕಂಪೆನಿಯಿಂದ ಹೊರಟು ಬೈಕಂಪಾಡಿ ದೀಪಕ್ ಪೆಟ್ರೋಲ್ ಪಂಪ್ ಬಳಿಗೆ ಬಸ್ಸಿನಲ್ಲಿ ಹೋಗುವರೇ ನಡೆದುಕೊಂಡು ಬರುತ್ತಾ ಸಮಯ ಸುಮಾರು 08:20 ಘಂಟೆಗೆ ಜೋಕಟ್ಟೆ ಕ್ರಾಸ್ ನಿಂದ ಸುಮಾರು 200 ಮೀಟರ್ ಹಿಂದಕ್ಕೆ ತಲುಪುತ್ತಿದ್ದಂತೆ ಜೋಕಟ್ಟೆ ಕ್ರಾಸ್ ಕಡೆಯಿಂದ KA-19-MH-9661 ನಂಬ್ರದ ಕಾರೊಂದನ್ನು ಅದರ ಚಾಲಕ ಮಹಮ್ಮದ್ ಆರೀಶ್ ಎಂಬಾತನು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಮಹಮ್ಮದ್ ನವಾಜ್ ರವರಿಗೆ ಡಿಕ್ಕಿಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಮೊಣ ಗಂಟಿಗೆ ಗುದ್ದಿದ ರೀತಿಯ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.
Crime Reported in Mangalore North PS
ಫಿರ್ಯಾದಿದಾರರಾದ ರಸೀನಾ ಖಾತುನ್ ಗಂಡನಾದ ಎಂ.ಡಿ ಶಗೀರ್ ಮತ್ತು ಅವರ ಮೂರು ಮಂದಿ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು, ಮನೆವಾರ್ತೆ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 25-12-2022 ರಂದು ಅರ್ಜಿದಾರರ ಗಂಡನಿಗೆ ಆದಿತ್ಯವಾರದ ರಜೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದರು. ಅವರ ಬಾಡಿಗೆ ಮನೆಯ ಪಕ್ಕದಲ್ಲಿ ಉತ್ತರ ಪ್ರದೇಶದ ಲಕ್ನೋ ವಾಸಿಗಳಾದ ಬರ್ಕತ್ ಆಲಿ ಮತ್ತು ಆತನ ಪತ್ನಿ ವಾಸವಾಗಿದ್ದು, ಫಿರ್ಯಾದಿದಾರರಿಗೆ ಮತ್ತು ಆತನ ಪತ್ನಿಗೆ ಪದೇ ಪದೇ ಮಾತಿನ ಜಗಳವಾಗುತ್ತಿತ್ತು ಇದೇ ವಿಚಾರದಲ್ಲಿ ಬರ್ಕತ್ ಆಲಿಯು ಫಿರ್ಯಾದಿದಾರರ ಗಂಡನೊಂದಿಗೆ ಹಲವಾರು ಮಾತಿನ ಜಗಳವಾಡಿದ್ದು, ಆ ಸಮಯದಲ್ಲಿ ಬರ್ಕತ್ ಆಲಿಯು ಫಿರ್ಯಾದಿದಾರರ ಗಂಡನಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಹೆದರಿಸುತ್ತಿದ್ದನು. ಈ ದಿನ ದಿನಾಂಕ 25-12-2022 ರಂದು ಸಂಜೆ 4-00 ಗಂಟೆ ಸಮಯಕ್ಕೆ ಫಿರ್ಯಾದಿದಾರರ ಗಂಡನು ಮನೆಯಲ್ಲಿದ್ದ ಸಮಯ ನೆರೆ ಮನೆಯ ವಾಸಿ ಬರ್ಕತ್ ಆಲಿಯು ಏಕಾಏಕಿಯಾಗಿ ಮನೆಯೊಳಗೆ ಪ್ರವೇಶಿಸಿ ನಮ್ಮ ಮನೆಯ ವಿಚಾರಕ್ಕೆ ಯಾಕೇ ಬರುತ್ತಿಯಾ, ನಿನ್ನ ಸುಮ್ಮನೆ ಕೊಲ್ಲದೆ ಬಿಡುವುದಿಲ್ಲವಾಗಿ ಜೋರುಮಾಡಿ, ಬರ್ಕತ್ ಆಲಿಯು ಫಿರ್ಯಾದಿದಾರರ ಗಂಡನನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾದಿದಾರರ ಗಂಡನ ಕುತ್ತಿಗೆಗೆ ಕಡಿಯಲು ಪ್ರಯತ್ನಿಸಿದ್ದು, ಆ ಸಮಯ ಫಿರ್ಯಾದಿದಾರರ ಗಂಡನು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಕತ್ತಿಯು ಬೆನ್ನಿನ ಬಲ ಭಾಗಕ್ಕೆ ಮತ್ತು ಬಲ ಕೈಗೆ ಜೋರಾಗಿ ಏಟು ಬಿದ್ದಿರುವುದನ್ನು ಕಂಡು ಬರ್ಕತ್ ಆಲಿಯು ಅಲ್ಲಿಂದ ಓಡಿಹೋಗಿರುತ್ತಾನೆ. ಬರ್ಕತ್ ಆಲಿಯು ಫಿರ್ಯಾದಿದಾರರ ಗಂಡನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕಡಿದಿದ್ದು ತೀವೃ ರಕ್ತಗಾಯವಾಗಿದ್ದ ಫಿರ್ಯಾದಿದಾರರ ಗಂಡನನ್ನು ಪಕ್ಕದ ಮನೆಯ ವಾಸಿಯೊಬ್ಬರು ಫಿರ್ಯಾದಿದಾರರ ಗಂಡನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಫಿರ್ಯಾದಿದಾರರ ಗಂಡನನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ನಮ್ಮ ಮನೆಯೊಳಗೆ ನುಗ್ಗಿ ಫಿರ್ಯಾದಿದಾರರ ಗಂಡನಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಬರ್ಕತ್ ಆಲಿಯ ಬರ್ಕತ್ ಆಲಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.
Crime Reported in Kankanady Town PS
ಪಿರ್ಯಾದಿ Vinod Kumar Rao ಮಂಗಳೂರು ನಗರದ ಉಜ್ಜೋಡಿಯ ಎವರೆಸ್ಟ್ ಫ್ಲಾಟ್ ಕೋರ್ಟ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದು ದಿನಾಂಕ 25/12/2022 ರಂದು ಪಿರ್ಯಾದುದಾರರು ತಮ್ಮ ಅಪಾರ್ಟ್ ಮೆಂಟ್ ನ ನೀರಿನ ಮೋಟಾರನ್ನು ಚಾಲು ಮಾಡಿದ್ದ ಸಮಯ ಅಲ್ಲಿಗೆ ಸಚ್ಚಿದಾನಂದ ಶೆಟ್ಟಿ ಎಂಬುವವರು ಹಿಂದಿನಿಂದ ಬಂದು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದ್ದು, ಅಲ್ಲದೇ ಅಲ್ಲಿಯ ಪಂಪ್ ಹೌಸ್ ಬಳಿ ಇದ್ದ ಕೋಲಿನಿಂದ ಪಿರ್ಯಾದುದಾರರ ಮುಖಕ್ಕೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದು ಪರಿಣಾಮ ಪಿರ್ಯಾದುದಾರರ ಮುಖದಲ್ಲಿ, ಬೆನ್ನಿನ ಭಾಗದಲ್ಲಿ ರಕ್ತ ಗಾಯ ಉಂಟಾಗಿರುತ್ತದೆ ಬಳಿಕ ಸಚ್ಚಿದಾನಂದ ಶೆಟ್ಟಿಯು ಪಿರ್ಯಾದುದಾರರಿಗೆ ಹಾಗೂ ಅವರ ಮನೆಯವರಿಗೆ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ.
Crime Reported in Traffic North Police Station
ಪಿರ್ಯಾದಿದಾರರ MANJUNATH ರವರ ತಮ್ಮ ರವಿಕುಮಾರ ಎಂಬವರು ದಿನಾಂಕ 19/12/2022 ರಂದು ರಾತ್ರಿ ತನ್ನ ಬ್ರೈಟ್ ಕಂಪನಿಯ ಸೆಕ್ಯೂರಿಟಿ ಕೆಲಸ ಮುಗಿಸಿಕೊಂಡು ಅವರ ಬಾಬ್ತು KA-19-HH-8408 ನೇ ಸ್ಕೂಟರಿನಲ್ಲಿ ಮಂಗಳೂರಿನಿಂದ ತನ್ನ ಮನೆಯಾದ ಲಿಂಗಪ್ಪಯ್ಯಕಾಡಿಗೆ NH66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 22.45 ಗಂಟೆಗೆ ಕೂಳೂರಿನ KIOCL ಜಂಕ್ಷನ್ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಕೂಳೂರು ಕಡೆಯಿಂದ ಬಂದ ಯಾವುದೋ ವಾಹನ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಮ್ಮನ ಸ್ಕೂಟರಿಗೆ ಹಿಂದಿನಿಂದ ಬಂದು ಡಿಕ್ಕಿ ಪಡಿಸಿ ನಿಲ್ಲಿಸದೇ ಹೋಗಿರುತ್ತಾರೆ, ಸದ್ರಿ ಅಪಘಾತದಿಂದ ಪಿರ್ಯಾದಿದಾರರ ತಮ್ಮ ತಲೆಗೆ ಗುದ್ದಿದಂತಹ ಪೆಟ್ಟಾಗಿದ್ದು, ಮುಖದ ಎಡಭಾಗ ಮತ್ತು ಹೊಟ್ಟೆಯ ಭಾಗದಲ್ಲಿ ತರಚಿದ ಗಾಯವಾಗಿರುತ್ತದೆ, ತಲೆಗೆ ಆದ ಪೆಟ್ಟಿನಿಂದ ಪಿರ್ಯಾದಿದಾರರ ತಮ್ಮ ಪ್ರಜ್ಞೆ ಕಳೆದುಕೊಂಡಿದ್ದು ಅವರನ್ನು ಅಲ್ಲಿದ್ದ ಸಾರ್ವಜನಿಕರು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಪಿರ್ಯಾದಿದಾರರ ತಮ್ಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ಮತ್ತು ಘಟನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇದ್ದುದ್ದರಿಂದ ಈ ತನಕ ಯಾವುದೇ ದೂರನ್ನು ನೀಡದೇ ಇದ್ದು, ಈಗ ಪಿರ್ಯಾದಿದಾರರ ತಮ್ಮನಿಗೆ ಪ್ರಜ್ಞೆ ಬಂದಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.
Crime Reported in Traffic North Police Station
ಪಿರ್ಯಾದಿದಾರರ LAXMAN S KULAL ದಿನಾಂಕ 24/12/2022 ರಂದು ತನ್ನ ಬಾಬ್ತು KA-19-HH-1155 ನಂಬ್ರದ ಮೋಟಾರ್ ಸೈಕಲಿನಲ್ಲಿ ಬೈಕಂಪಾಡಿಯ ಪಾಸ್ಟಿಕ್ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ ಬೈಕಂಪಾಡಿಯಿಂದ ಕಾಟಿಪಳ್ಳ ಮನೆಯ ಕಡೆಗೆ ಹೋಗುವಾಗ ಸುರತ್ಕಲ್ ಜಂಕ್ಷನ್ ಆಗಿ ಸಂಜೆ ಸುಮಾರು 7.30 ಗಂಟೆಗೆ ರೈಲ್ವೆ ಬ್ರಿಡ್ಜ್ ಹತ್ತಿರ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ KA-19-HK-9423 ನಂಬ್ರದ ಸ್ಕೂಟರ್ ಸವಾರ ಅಬ್ದುಲ್ ಖಾದರ್ ಇಸ್ಮಾಯಿಲ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಬಲಕೈಯ ಮೊಣಗಂಟಿಗೆ ರಕ್ತಗಾಯ ಹಾಗೂ ಬಲಕೈ ಬೆರಳಿನ ಹತ್ತಿರ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಅಥರ್ವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿ ಎಂಬಿತ್ಯಾದಿ.
Crime Reported in Traffic North Police Station
ಪಿರ್ಯಾದಿದಾರರು KRISHNA SINDHUR MARUVALA ದಿನಾಂಕ 25/12/2022 ರಂದು ತನ್ನ ಸ್ನೇಹಿತನ ಮದುವೆಯ ಬಗ್ಗೆ ಅಶೋಕನಗರದ ತಮ್ಮ ಮನೆಯಿಂದ ಕಟೀಲಿಗೆ ಕೂಳುರು ಕಾವೂರು ಮಾರ್ಗವಾಗಿ ಅವರ ತಾಯಿಯ ಮಾಲೀಕತ್ವದ KA-19-EL-9848 ನೇ ಆಕ್ಟೀವಾ ಸ್ಕೂಟರಿನಲ್ಲಿ ಒಬ್ಬನೇ ಸವಾರಿ ಮಾಡಿಕೊಂಡು ಹೊರಟು ಮಧ್ಯಾಹ್ನ ಸಮಯ ಸುಮಾರು 12.45 ಗಂಟೆಗೆ ಕಾವೂರಿನ ಬಿ ಜಿ ಎಸ್ ಶಾಲಾ ಮುಂಭಾಗ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರುಗಡೆಯಿಂದ KA-13-EL-6087 ನೇ ಪಲ್ಸರ್ ಮೋಟಾರ್ ಸೈಕಲನ್ನು ಅದರ ಸವಾರ ನಿಂಗರಾಜು ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು, ಬಂದು ರಸ್ತೆಗೆ ಅಳವಡಿಸಿದ್ದ ಹಂಪ್ಸ್ ಮೇಲೆ ಎಕಾಎಕಿಯಾಗಿ ಮೋಟಾರ್ ಸೈಕಲನ್ನು ಹಾರಿಸಿ, ಅದರ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿರುತ್ತಾರೆ, ಇದರ ಪರಿಣಾಮ ಎರಡೂ ಬೈಕಿನವರು ಕೂಡ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕೈ ಮತ್ತು ಬಲಕೈಗೆ ಅಲ್ಲಲ್ಲಿ ತರಚಿದ ರೀತಿಯ ರಕ್ತಗಾಯವಾಗಿರುತ್ತದೆ ಹಾಗೂ ಪಿರ್ಯಾದಿದಾರರ ಸ್ಕೂಟರ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.
Crime Reported in Traffic South Police Station
ದಿನಾಂಕ: 24-12-2022 ರಂದು ಪಿರ್ಯಾದಿದಾರರಾದ ನಸೀಮ ಕೆ,ಎ ರವರು ಅವರ ಮಕ್ಕಳಾದ ಅಹಮ್ಮದ್ ಶಾಹಿದ್ (15 ವರ್ಷ), ಅಬ್ದುಲ್ ಶಹಲ್ (9 ವರ್ಷ) ಮತ್ತು ಮಹಮ್ಮದ್ ನಿಹಾಲ್ (7 ವರ್ಷ) ರವರನ್ನು ಜೊತೆಯಲ್ಲಿ ಕರೆದುಕೊಂಡು ಅವರ ಮನೆಯಿಂದ ಕುಂಜ್ಜತ್ತೂರು ಕಡೆಗೆ ಹೋಗಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಗುಡ್ಡೆ ಬಳಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-66 ರ ರಸ್ತೆಯ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 12:00 ಗಂಟೆಗೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ KA-19-HJ-8035 ನೇದನ್ನು ಅದರ ಸವಾರ ಅಬುಬುಕ್ಕರ್ ನವಾಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರು ಹಾಗೂ ಅವರ ಮಕ್ಕಳಿಗೆ ಡಿಕ್ಕಿ ಪಡಿಸಿ ಪರಾರಿಯಾಗಿರುತ್ತಾನೆ ಪರಿಣಾಮ ಅವರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಗೈಗೆ ಗುದ್ದಿದ ಗಾಯ ಹಾಗೂ ತಲೆಗೆ ಎಡಕಾಲಿಗೆ ತರಚಿದ ಗಾಯ ಹಾಗೂ ಅಬ್ದುಲ್ ಶಹಲ್ ಗೆ ಬಲಗೈ ಕಿರು ಬೆರಳಿಗೆ ಗಲ್ಲಕ್ಕೆ ತರಚಿದ ಗಾಯ ಹಾಗೂ ಮಹಮ್ಮದ್ ನಿಹಾಲ್ ಗೆ ಮುಖಕ್ಕೆ ಗುದ್ದಿದ ಗಾಯ ಮತ್ತು ಬಲಗಾಲಿಗೆ ಮೂಳೆ ಮುರಿತದ ಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.
Crime Reported in Moodabidre PS
ದಿನಾಂಕ 24-12-2022 ರಂದು ಸಂಜೆ 6.30 ಗಂಟೆ ಸುಮಾರಿಗೆ ಮೂಡಬಿದ್ರೆ ತಾಲೂಕು, ಮೂಡುಕೊಣಜೆ ಗ್ರಾಮದ, ಕುಕ್ಕುದಕಟ್ಟೆ ಎಂಬಲ್ಲಿ ಪಿರ್ಯಾದಿ Chetan ರ ತಂದೆ ಕೂಕ್ರ ಎಂಬುವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ರಸ್ತೆ ದಾಟಲೆಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಶಿರ್ತಾಡಿ ಕಡೆಯಿಂದ ಮೂಡಬಿದರೆ ಕಡೆಗೆ KA-19-HC-2194 ನೇ ಸ್ಕೂಟರ್ ನ್ನು ಅದರ ಸವಾರನಾದ ನಿಧಿ ಕೃಷ್ಣ ಎಂಬುವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಕೂಕ್ರರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಬಿದ್ದು ಬಲಗಾಲಿನ ಪಾದದ ಬಳಿ ರಕ್ತಗಾಯವಾಗಿದ್ದು ದೇಹದ ಇತರೇ ಕಡೆಗಳಲ್ಲಿ ತರಚಿದ ಸಣ್ಣಪುಟ್ಟ ಗಾಯದ ನೋವುಗಳು ಆಗಿರುತ್ತವೆ. ಚಿಕಿತ್ಸೆಗಾಗಿ ಮೂಡಬಿದರೆಯ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.