ಅಭಿಪ್ರಾಯ / ಸಲಹೆಗಳು

Crime Reported in : Urva PS   

ಪಿರ್ಯಾದಿ ಶ್ರೀಮತಿ ಶೋಭಾ ಎಚ್ ರವರು ಎಸ್.ಎನ್.ಡಿ.ಪಿ, 5ನೇ ಕ್ರಾಸ್, ಜಗದಾಂಬ ದೇವಸ್ಥಾನದ ಬಳಿ, ಕೋಡಿಕಲ್, ಮಂಗಳೂರಿನಲ್ಲಿ ವಾಸವಾಗಿದ್ದು. ದಿನಾಂಕ 20-01-2023 ರಂದು ವಾಣಿಜ್ಯ ತೆರಿಗೆ ಇಲಾಖೆಯ ಹೊರಾಂಗಣದಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಸಂಜೆ 06:45 ಗಂಟೆಗೆ ಹೋಗಿ ರಾತ್ರಿ ಸುಮಾರು 10:00 ಗಂಟೆಗೆ ವಾಪಾಸು ಬಂದಿರುತ್ತಾರೆ. ಪಿರ್ಯಾದಿದಾರರು ನಾಟಕಕ್ಕೆ ಹೋದ ವಿಚಾರದಲ್ಲಿ ಅವರ ಗಂಡನಲ್ಲಿ ಸ್ವಲ್ಪ ಗಲಾಟೆ ಮಾಡಿ ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರ ಗಂಡನಾದ ಶ್ರೀ ಚಂದ್ರಶೇಖರ್ ಎಚ್, ಪ್ರಾಯ 68 ವರ್ಷ, ರವರು ಬೆಡ್ ರೂಂ ನಲ್ಲಿ ಮಲಗಿರುತ್ತಾರೆ. ಮಾರನೇ ದಿನ ದಿನಾಂಕ 21-01-2023 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿದಾರರು ಎಳುವಾಗ ಮಂಚದ ಮೇಲೆ ಮಲಗಿದ್ದ ಪಿರ್ಯಾದಿದಾರರ ಗಂಡ ಇರದೇ ಇದ್ದು ಪಿರ್ಯಾದಿದಾರರು ಮನೆಯಲ್ಲಿ ಎಲ್ಲಾಕಡೆ ಹುಡುಕಾಡಿ, ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಎಲ್ಲಾಕಡೆ ವಿಚಾರಿಸಿದಲ್ಲಿ ಪಿರ್ಯಾದಿದಾರರ ಗಂಡನಾದ ಚಂದ್ರಶೇಖರ್ ಎಚ್ ರವರು ಸಿಗದೇ ಇದ್ದು ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

ಕಾಣೆಯಾದವರ ವಿವರ: ಹೆಸರು ಶ್ರೀ ಚಂದ್ರಶೇಖರ್ ಎಚ್, ಪ್ರಾಯ 68 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಸಪೂರ ಮೀಸೆ ಬಿಟ್ಟಿರುತ್ತಾರೆ, ಬಿಳಿ ಮಿಶ್ರಿತ ಗುಂಗರ ತಲೆಕೂದಲು, ನಸು ಗುಲಾಬಿ ಬಣ್ಣದ ಉದ್ದ ತೋಳಿನ ಅಂಗಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.    

Crime Reported in : Mangalore North PS  

ಪಿರ್ಯಾದಿ ಶ್ರೀ ಗೋಪಾಲಕೃಷ್ಣರಾವ್ ರವರು ಮಗಳೂರು ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ರಿಕವರಿ ಡಿಪಾರ್ಟ್ ಮೆಂಟ್ ನ ಮ್ಯಾನೇಜರ್ ಆಗಿದ್ದು ಸದ್ರಿ ಬ್ಯಾಂಕಿನಿಂದ ಆರೋಪಿ 1 ನೇ MAHESH(A1),D NO 15-255 AKSHAYA ,NILAY,KODIBETTU, HOUSEMangaluru City ರವರು ಮಾರುತಿ ಸಿಫ್ಟ್ ಕಾರನ್ನು ಖರೀದಿಸಲು ಸುಮಾರು 6,20,000 ಸಾವಿರ ವಾಹನ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಿ 2   BHARATH(A2)  ಮತ್ತು 3  AKSHAY(A3)  ನೇ ಆರೋಪಿಯವರು  ಸದ್ರಿ ಲೋನಿಗೆ ಜಾಮೀನು ದಾರರಾಗಿ ಸದ್ರಿ ಲೋನ್ ಗೆ ಸಹಿ ಮಾಡಿರುತ್ತಾರೆ. ನಂತರ ಬ್ಯಾಂಕಿನ ಸಾಲದ ಕಾರಾರಿನಂತೆ ಪ್ರತಿ ತಿಂಗಳ ಕಂತನ್ನು ಬ್ಯಾಂಕಿಗೆ ಸಂದಾಯ ಮಾಡಬೇಕಾಗಿದ್ದು ಸರಿಯಾಗಿ ಕಂತು ಕಟ್ಟದೇ ಇರುವುದರಿಂದ ಸದ್ರಿ ಕಾರನ್ನು ಬ್ಯಾಂಕ್ ನವರು ಸಿಜ್ ಮಾಡಿದಾಗ ದಿನಾಂಕ: 04-11-2021 ರಂದು ಬ್ಯಾಂಕಿಗೆ ಬರವಣಿಗೆ ಮುಖಾಂತರ ಸರಿಯಾಗಿ ಹಣವನ್ನು ಕಟ್ಟುತ್ತೇನೆಂದು ಪ್ರತಿ ತಿಂಗಳಿಗೆ 20,000 ರಂತೆ  ಪಾವತಿಸುವುದಾಗಿ  ತಿಳಿಸಿದ್ದರಿಂದ ಪಿರ್ಯಾದುದಾರರು ಆತನ ಮಾತನ್ನು ನಂಬಿ ಮಾನವೀಯತೆ ದೃಷ್ಟಿಯಿಂದ ಸ್ವಾದೀನಪಡಿಸಿಕೊಂಡ  ಕಾರನ್ನು 1 ನೇ ಆರೋಪಿಯವರಿಗೆ ಬಿಟ್ಟು ಕೊಟ್ಟಿರುತ್ತಾರೆ.ನಂತರದ ದಿನಗಳಲ್ಲಿಆರೋಪಿಯು ಹಣ ಪಾವತಿಸದೇ ಇರುವುದರಿಂದ ಪಿರ್ಯಾದಿದಾರರು ಸದ್ರಿ ಕಾರನ್ನು ಸಿಜ್ ಮಾಡುವರೇ ತೆರಳಿದಾಗ 1,2 ಮತ್ತು 3 ನೇ ಆರೋಪಿಗಳು ಸೇರಿ ಕಾರನ್ನು ಮರೆ ಮಾಚಿ ಪಿರ್ಯಾದುದಾರರಿಗೆ ಮೋಸ ಮತ್ತು ವಂಚನೆ ಮಾಡಿರುತ್ತಾರೆ  ಎಂಬಿತ್ಯಾದಿ ಖಾಸಗಿ ಪಿರ್ಯಾದುವಿನ ಸಾರಾಂಶವಾಗಿರುತ್ತದೆ

Crime Reported in : Mangalore North PS

ಪಿರ್ಯಾದಿ ಶ್ರೀ ಅಸ್ಲಾಂ ಕಸ್ಸಾಂ ಮರ್ಚಂಟ್ ರವರು ಝಡ್ ಕೆ ಬ್ಯೂಟಿ ಆ್ಯಂಡ್ ಫಿಟ್ನೆಸ್ ಪ್ರೈ.ಲಿ. ಕರಂಗಲಪಾಡಿ, ಬಂಟ್ಸ್ ಹಾಸ್ಟೆಲ್, ಮಂಗಳೂರು ನ ಮಾಲೀಕರಾಗಿರುತ್ತಾರೆ. ಆರೋಪಿತರಾದ 1. ದಾವೂದ್ (37 ವರ್ಷ), 2. ಸಾಹಿಲ್ (40 ವರ್ಷ), 3. ಗೌತಮ್ (31 ವರ್ಷ), ಎಂಬುವರು ಸದ್ರಿಯವರ ಕರಂಗಲ್ಪಾಡಿಯಲ್ಲಿರುವ ಜುಬೈದಾ ಕಸ್ಸಾಂ ಚೇಂಬರ್ ನಲ್ಲಿರುವ  ಒಂದು ಮತ್ತು ಎರಡನೇ ಮಹಡಿಯನ್ನು ಮೌಖಿಕ ಒಪ್ಪಂದದಂತೆ ಲೀಸ್ ಗೆ ಪಡೆದಿರುತ್ತಾರೆ. ನಂತರದ ದಿನಗಳಲ್ಲಿ ಆರೋಪಿತರು ಫಿರ್ಯಾದಿದಾರರಿಗೆ ಸರಿಯಾಗಿ ಹಣ ನೀಡದೇ ಇದ್ದು, ಸುಮಾರು 13 ತಿಂಗಳ ಸೇವಾ ತೆರಿಗೆಯನ್ನು ಕಟ್ಟಿರುವುದಿಲ್ಲ. ಈ ಬಗ್ಗೆ ಫಿರ್ಯಾದಿದಾರರಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಸೇವಾ ತೆರಿಗಯನ್ನು ಪಾವತಿಸುವಂತೆ ನೋಟೀಸ್ ಬಂದಿರುತ್ತದೆ. ಅದರಂತೆ ಪಿರ್ಯಾದಿದಾರರು ಹಲವಾರು ಬಾರಿ 1, 2 ಮತ್ತು 3ನೇ ಆರೋಪಿಗಳಲ್ಲಿ ಹಣವನ್ನು ಕರಾರು ಪತ್ರದಂತೆ  ವಾಪಾಸು ನೀಡುವಂತೆ ಹಲವಾರು ಬಾರಿ ತಿಳಿಸಿದರೂ ಕೂಡಾ ನೀಡದೇ ಇದ್ದು ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಮಾಡಿ ದುರ್ಲಾಭ ಪಡೆಯುವ ಉದ್ದೇಶದಿಂದ ಮೋಸ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ ಖಾಸಗಿ ಪಿರ್ಯಾದುವಿನ ಸಾರಾಂಶವಾಗಿರುತ್ತದೆ.

Crime Reported in :Bajpe PS

ಪಿರ್ಯಾದಿ Padmanabha Acharya ಮಾವ ಹರಿಶ್ಚಂದ್ರ ಆಚಾರ್ಯ(67) ರವರು ದಿನಾಂಕ 25-01-2023 ರಂದು ಕೈಕಂಬ ಕಡೆಯಿಂದ ಗುರುಪುರದ ಕಡೆಗೆ KA 20 B 3269 ನೇ ನಂಬ್ರದ ಬಸ್ಸಿನಲ್ಲಿ ಹೋಗುತ್ತಿದ್ದವರು ಸಂಜೆ ಸುಮಾರು 6-30 ಗಂಟೆಗೆ ಬಸ್ಸು ಗುರುಪುರ ಸೊಸೈಟಿಯಿಂದ ಸ್ವಲ್ಪ ಹಿಂದೆ ತಲುಪುತ್ತಿದಂತೆ ಬಸ್ಸಿನ ಚಾಲಕನು ಬಸ್ಸನ್ನು ನಿಲ್ಲಿಸುವಂತೆ ಮಾಡಿದ್ದು ಆ ಸಮಯ ಹರಿಶ್ಚಂದ್ರ ಆಚಾರ್ಯ ರವರು ಬಸ್ಸಿನಿಂದ ಇಳಿಯುತ್ತಿದ್ದ ಸಮಯ ಬಸ್ಸನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೆ ಒಮ್ಮೇಲೆ ಅತೀ ವೇಗ ಮತ್ತು ಅಜಾಗರುಕತೆಯಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಹರಿಶ್ಚಂದ್ರ ಆಚಾರ್ಯ ರವರು ಬಸ್ಸಿನಿಂದ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಗೊಂಡಿದ್ದ ಹರಿಶ್ಚಂದ್ರ ಆಚಾರ್ಯ ರವರನ್ನು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಹರಿಶ್ಚಂದ್ರ ಆಚಾರ್ಯ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-01-2023 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080