ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS                        

ಪಿರ್ಯಾದಿ R PADMANABHA SHENOY ದಾರರು ದಿನಾಂಕ:24-09-2022 ರಂದು ಮಗಳು ಮತ್ತು ಮೊಮ್ಮಗ ಗಂಡನ ಮನೆಯಾದ ಕುಂದಾಪುರದಿಂದ ಬಸ್ಸಿನಲ್ಲಿ ಪಿರ್ಯಾದಿದಾರರ ಮನೆಗೆ ಬರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ತನ್ನ ಮಗಳು ಮತ್ತು ಮೊಮ್ಮಗನನ್ನು ಕರೆದುಕೊಂಡು ಬರಲೆಂದು ಮಂಗಳೂರು ಸರ್ವಿಸ್ ಬಸ್ಸು ನಿಲ್ದಾಣಕ್ಕೆ ಬಂದು ಕಾಯುತ್ತಾ ಇದ್ದು ಸಮಯ ಸುಮಾರು 4-15 ಗಂಟೆಯ ವೇಳೆಗೆ ಅಗತ್ಯ ಕೆಲವು ವಸ್ತುಗಳನ್ನು ಖರೀದಿಸುವ ಸಲುವಾಗಿ ಮೀನಿನ ಮಾರ್ಕೆಟ್ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಮಯ ಬಸ್ಸುಗಳು ಬಸ್ಸು ನಿಲ್ದಾಣದಿಂದ ಹೊರಗಡೆ ಹೋಗುವ ರಸ್ತೆಯ ವಿರುದ್ದ ದಿಕ್ಕಿನಿಂದ ಸರ್ವಿಸ್ ಬಸ್ಸು ನಿಲ್ದಾಣದ ಒಳಗಡೆ KA-19-ML-6906 ನೇ ಕಾರನ್ನು ಅದರ ಚಾಲಕ ಫಯಾಜ್   ಎಂಬವರು ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲ ಬದಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲ ಕಾಲಿನ ಪಾದದ ಬಳಿ ಮೂಳೆ ಮುರಿತ ಹಾಗೂ ಬಲ ಕೈಗೆ ಗುದ್ದಿದ ನಮೂನೆಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ತಾರಾ ಕ್ಲಿನಿಕ್ ಮಂಗಳೂರನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Crime Reported in : CEN Crime PS

 ಪಿರ್ಯಾದಿದಾರರು ಹೊಟೇಲ್ ಉದ್ಯಮ ನಡೆಸಿಕೊಂಡಿರುತ್ತಾರೆ.  ಮಂಗಳೂರು ತಾಲೂಕು  ಇಡ್ಯಾ ಗ್ರಾಮದಲ್ಲಿರುವ ಸುರತ್ಕಲ್ ನ ಅತಿಕಾರಿ ಅಕ್ರೋಪೋಲೀಸ್ ಕಟ್ಟಡದಲ್ಲಿ ಅಶೋಕ್ ಭಟ್ ಮತ್ತು ಅವರ ಹೆಂಡತಿ ಶ್ರೀಮತಿ ವಿದ್ಯಾ ಹಾಗೂ ಅವರ ಮಗಳು ಪ್ರಿಯಾಂಕ ಭಟ್ ರವರು ಭಾರ್ಗವಿ ಫೈನಾನ್ಸ್ ನ್ನು ನಡೆಸಿಕೊಂಡಿದ್ದು ಹಾಗೂ ಇವರುಗಳು ಸುಮಾರು ವರ್ಷಗಳಿಂದ ಚಿಟ್ ಫಂಡ್ ವ್ಯವಹಾರ ನಡೆಸಿಕೊಂಡಿರುತ್ತಾರೆ.  ಪಿರ್ಯಾದಿ ಹಾಗೂ ಇತರರು ಆರೋಪಿತರನ್ನು  ನಂಬಿ ಆರೋಪಿತರು ನಡೆಸುತ್ತಿದ್ದು  10 ಲಕ್ಷದ ಚಿಟ್ ಫಂಡ್ ಗೆ ಪಿರ್ಯಾದಿದಾರರು  ಮತ್ತು ಇತರರು 2019 ನೇ ಇಸವಿಯ ಸಪ್ಟೆಂಬ ರ್  ತಿಂಗಳಿನಿಂದ  ಪ್ರತಿ ತಿಂಗಳಿಗೆ 50,000/-  ರೂಪಾಯಿ  ಕಟ್ಟುವಂತೆ ಅಶೋಕ್ ಭಟ್, ಶ್ರೀಮತಿ ವಿದ್ಯಾಭಟ್ ಮತ್ತು ಪ್ರಿಯಾಂಕ ಭಟ್ ತಿಳಿಸಿ ಪ್ರತಿ ದಿನ ಪಿರ್ಯಾದಿದಾರರ ಹೋಟೆಲ್ ಗೆ  ಬಂದು ರೂ.1500/- ಹಣವನ್ನು  ಪಡೆದುಕೊಂಡು  ಹೋಗುತ್ತಿದ್ದು , ತಿಂಗಳಿಗೊಮ್ಮೆ  ಪಿರ್ಯಾದಿದಾರರು ಚಿಟ್ ಫಂಡ್ ಕಛೇರಿಗೆ ಹೋಗಿ ತನ್ನಲ್ಲಿರುವ  ಚಿಟ್ ಫಂಡ್  ವ್ಯವಹಾರ ಪುಸ್ತಕದಲ್ಲಿ ಆರೋಪಿತರು ಹಣ ಪಡೆದ ಬಗ್ಗೆ ನಮೂದಿಸಿ   ಬರೆದು ಸಹಿ ಮಾಡುತ್ತಿದ್ದು,  ದಿನಾಂಕ 28-03-2021 ರಂದು 10 ಲಕ್ಷ ರೂಪಾಯಿಯ ಚಿಟ್ ಫಂಡ್ ಮುಕ್ತಾಯವಾಗಿದ್ದು, ನಂತರದ ದಿನಗಳಲ್ಲಿ ಪಿರ್ಯಾದಿದಾರರು ಅಶೋಕ್ ಭಟ್ , ಅವರ ಪತ್ನಿ ವಿದ್ಯಾ ಭಟ್ ಹಾಗೂ ಪ್ರಿಯಾಂಕ ಭಟ್ ರವರಲ್ಲಿ ಚಿಟ್ ಫಂಡ್  ಹಣ ನೀಡುವಂತೆ ಕೇಳುತ್ತಿದ್ದಾಗ ಹಣ ಕೊಡುತ್ತೇನೆ ಎಂದು ನಂಬಿಸಿ ನಂತರ ಒಂದಲ್ಲಾ ಒಂದು ಕಾರಣ ಕೊಟ್ಟು ಹಣ ಕೊಡದೇ ಇದ್ದು, ಪೋನ್ ಮಾಡಿದಾಗ ಪೋನ್ ಸ್ವಿಕರಿಸದೇ  ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಸುಮಾರು 2 ಕೋಟಿ ರೂಪಾಯಿಯಷ್ಟು ಹಣ ಕೊಡದೇ ನಂಬಿಕೆದ್ರೋಹ ಮಾಡಿ ವಂಚಿಸಿರುವುದು ಎಂಬಿತ್ಯಾದಿಯಾಗಿರುತ್ತದೆ.

Crime Reported in : Mangalore North PS

ಪಿರ್ಯಾದಿದಾರರು ಅವರ  ಹೆಂಡತಿಯನ್ನು  ಹೆರಿಗೆಯ ಬಗ್ಗೆ  ಮಂಗಳೂರಿನ ಲೇಡಿಗೋಶನ್  ಆಸ್ಪತ್ರೆಗೆ 16-09-2022 ರಂದು  ದಾಖಲಿಸಿದ್ದು, ಪಿರ್ಯಾದಿದಾರರು ಅವರ ಗೆಳೆಯ ರವೀಂದ್ರ ಎಂಬವರ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-EX -9021 ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲಿನಲ್ಲಿ  ದಿನಾಲೂ ಮನೆಯಿಂದ ಲೇಡಿಗೋಶನ್ ಆಸ್ಪತ್ರೆಗೆ ಬರುತ್ತಿದ್ದರು , ಪಿರ್ಯಾದಿದಾರರು ದಿನಾಂಕ 20/09/2022 ರಂದು ಬೆಳಿಗ್ಗೆ ಸುಮಾರು 09.00 ಗಂಟೆಯ ಸಮಯಕ್ಕೆ KA-19-EX -9021 ನೇದರಲ್ಲಿ ,ಲೇಡಿಗೋಶನ್  ಆಸ್ಪತ್ರೆಗೆ ಬಂದವರು ಮೋಟಾರ್ ಸೈಕಲನ್ನು ಲೇಡಿಗೋಶನ್  ಆಸ್ಪತ್ರೆಯ  ಕಂಪೌಂಡ್ ಒಳಗಡೆ ಪಾರ್ಕ್ ಮಾಡಿ   ಆ ದಿನ ರಾತ್ರಿ ಸಿಟಿ ಲಾಡ್ಜ್ ನಲ್ಲಿ ರೂಮ್  ಮಾಡಿದ್ದು ಅಲ್ಲಿಗೆ ಹೋಗಿರುತ್ತಾರೆ. ಮರುದಿನ ದಿನಾಂಕ 21/09/2022 ರಂದು ಬೆಳಿಗ್ಗೆ  ಪಿರ್ಯಾದಿದಾರರು ಸಿಟಿ ಲಾಡ್ಜ್ ನಿಂದ ಹೊರಟು  ಲೇಡಿಗೋಶನ್ ಆಸ್ಪತ್ರೆಯ  ಒಳಗಡೆ  ಪಾರ್ಕ್  ಮಾಡಿದ ಮೋಟಾರ್ ಸೈಕಲಿನ  ಬಳಿಗೆ  ಬೆಳಿಗ್ಗೆ 09.00 ಗಂಟೆಗೆ ಬಂದಾಗ  ಪಾರ್ಕ್ ಮಾಡಿದ್ದ ಸ್ಥಳದಲ್ಲಿದ್ದ KA-19-EX -9021 ನೊಂದಣಿ ನಂಬ್ರದ ನೀಲಿ  ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ಬಗ್ಗೆ ಅವರ ಸ್ನೇಹಿತರಲ್ಲಿ ವಿಚಾರ ತಿಳಿಸಿ  ಈವರೆಗೂ ಹುಡುಕಾಡಿದರೂ ಪಿರ್ಯಾದಿದಾರರ  ಮೋಟಾರ್ ಸೈಕಲ್ ಸಿಗದೇ ಇದ್ದುದರಿಂದ  KA-19-EX -9021 ನೊಂದಣಿ ನಂಬ್ರದ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಪಿರ್ಯಾದಿದಾರರು ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

ಕಳವಾದ ಸ್ಕೂಟರ್  ನ ವಿವರಗಳು ಈ ಕೆಳಗಿನಂತಿದೆ:

KA-19-EX -9021 ನೊಂದಣಿ ನಂಬ್ರದ ನೀಲಿ ಬಣ್ಣದ 

ಬಜಾಜ್ ಮೋಟಾರ್ ಸೈಕಲ್  

ಮಾಡೆಲ್ 2018, ಅಂದಾಜು ಮೌಲ್ಯ ರೂ. 50,000/-

ಇಂಜಿನ್ ನಂಬ್ರ: DHYWJK67593 ಚಾಸಿಸ್ ನಂಬ್ರ:MD2A11CY3JWK18080 ಆಗಿರುತ್ತದೆ.

ಇತ್ತೀಚಿನ ನವೀಕರಣ​ : 26-09-2022 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080