ಅಭಿಪ್ರಾಯ / ಸಲಹೆಗಳು

Crime Reported in   Konaje PS                                                                             

ಪಿರ್ಯಾದಿದಾರರಾದ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿರವರಿಗೆ ಈ ದಿನ ದಿನಾಂಕ 26.12.2022 ರಂದು ಬೆಳಿಗ್ಗೆ 06-00 ಗಂಟೆಗೆ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  ಚೆಳೂರು ಚೆಕ್ ಪೋಸ್ಟ್ ನ ಹತ್ತಿರ  ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಕಾರು ನಂಬ್ರ KL14-T-2133 ನೇ ಮಾರುತಿ ಸುಜುಕಿ ಆಲ್ಟೋ 800 ನೇದನ್ನು ನಿಲ್ಲಿಸಿ ಧಾಳಿ ನಡೆಸಿ ಪಂಚರರ ಸಮಕ್ಷಮ ಪರಿಶೀಲಿಸಿದಾಗ ಕಾರಿನಲ್ಲಿದ್ದ ಆರೋಪಿಗಳಾದ, 1) ಮಹಮ್ಮದ್  ಅಶ್ರಫ್ 2) ಮಹಮ್ಮದ್ ಭಾತೀಶ 3) ಜಂಶೀರ್ ಎಂ ಹಾಗೂ 4) ಮಹಮ್ಮದ್ ನೌಫಲ್, ಎಂಬವರನ್ನು ಹಾಗೂ ಕಾರಿನ ಹಿಂಭಾಗದ ಸೀಟಿನಲ್ಲಿ ಹಳದಿ ಕಪ್ಪು ಬಣ್ಣದ ಟ್ರಾವೆಲ್  ಬ್ಯಾಗ್ ನಲ್ಲಿ  ಕಂದು ಬಣ್ಣದ ಟೇಪ್ ನಿಂದ  ಸುತ್ತಿದ ಪ್ಯಾಕೇಟ್ ಗಾಂಜಾ ಇದ್ದು ಒಟ್ಟು ರೂ 3,19,000/- ಮೌಲ್ಯದ 32.195 ಕೆ.ಜಿ. ಗಾಂಜಾ ಮತ್ತು ಆರೋಪಿಗಳ ವಶದಲ್ಲಿದ್ದ  ರೂ 13,000/- ಮೌಲ್ಯದ  4 ಮೊಬೈಲ್ ಪೋನ್ ಗಳು, ರೂ 3,00,000/- ರೂಪಾಯಿ ಮೌಲ್ಯದ KL14-T-2133 ನೇ ಮಾರುತಿ ಸುಜುಕಿ ಆಲ್ಟೋ 800 ಕಾರು ನ್ನು ಮತ್ತು ಗಾಂಜಾವನ್ನು ಹಾಕಲು ಬಳಸಿದ ಎರಡು ಟ್ರಾವೆಲ್ ಬ್ಯಾಗ್ ಗಳನ್ನು  ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವರದಿ ನೀಡಿರುವುದಾಗಿದೆ ಎಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿದೆ.

 

Crime Reported in   Traffic North Police Station                                                  

ಪಿರ್ಯಾದಿದಾರರ Smt Vimala  ಗಂಡನಾದ ಮಲ್ಲೇಶ ರವರು (42) MCF ನಲ್ಲಿ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 25-12-2022 ರಂದು ಪಿರ್ಯಾದಿದಾರರ ಗಂಡ MCF ನಲ್ಲಿ ಕೆಲಸ ಮುಗಿಸಿಕೊಂಡು ಅವರ ಬಾಬ್ತು KA-19-HK-3726 ನಂಬ್ರದ ಮೋಟಾರ್ ಸೈಕಲಿನಲ್ಲಿ ಮನೆ ಕಡೆಗೆ ಬರುತ್ತಾ ಮದ್ಯಾಹ್ನ ಸಮಯ ಸುಮಾರು 2-30 ಗಂಟೆಗೆ ಪಾವಂಜೆ ದೇವಸ್ಥಾನದ ಜಂಕ್ಷನ್ ಬಳಿ NH 66 ನೇ ಡಾಮಾರು ರಸ್ತೆಯಲ್ಲಿ ZIG ZAG ರೀತಿಯಲ್ಲಿ ಅಳವಡಿಸಲಾಗಿರುವ ಕಬ್ಬಿಣದ ಬ್ಯಾರಿಕೇಡ್ ಗಳ ಮದ್ಯ ಭಾಗದಲ್ಲಿ ತಾನೇ ಸ್ವತಃ ಸ್ಕಿಡ್ ಆಗಿ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಗಂಡನಾದ ಮಲ್ಲೇಶರವರಿಗೆ ತಲೆಗೆ ಗುದ್ದಿದ ರೀತಿಯ ಒಳಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬಲ ಕಣ್ಣಿನ ಬಲಬದಿ ಕೆನ್ನೆಯಲ್ಲಿ ಹಾಗೂ ಎಡಕಾಲಿನ 4ನೇ ಮತ್ತು 5ನೇ ಬೆರಳಿನಲ್ಲಿ ಸಣ್ಣ ಪ್ರಮಾಣದ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

 

 

Crime Reported in Traffic South Police Station

 ದಿನಾಂಕ;26-12-2022 ರಂದು ಪಿರ್ಯಾದಿ APARNA SHETTY ರವರ ತಾಯಿಯಾದ ಮಲ್ಲಿಕಾ ಶೆಟ್ಟಿ (60 ವರ್ಷ) ರವರು ಅವರ ಮನೆಯಿಂದ ಹೊರಟು ಮಹಾಕಾಳಿ ಪಡ್ಪು ಎಂಬಲ್ಲಿಗೆ ಬಸ್ಸೊಂದರಲ್ಲಿ ಬಂದು ನಂತರ ಮಹಾಕಾಳಿ ಪಡ್ಪು ಜಂಕ್ಷನ್ ಬಳಿ ಬಸ್ಸಿನಿಂದ ಇಳಿದು ಸಮಯ ಸುಮಾರು ಬೆಳಿಗ್ಗೆ 11-00 ಗಂಟೆಗೆ ಮಹಾಕಾಳಿ ಪಡ್ಪು ಜಂಕ್ಷನ್ ಹತ್ತಿರ ರಾ.ಹೆ-66 ರ ತೊಕ್ಕೊಟ್ಟು ಕಡೆಯಿಂದ ಪಂಪ್ ವೇಲ್ ಕಡೆಗೆ ಹಾದು ಹೋಗಿರುವ ಡಾಂಬಾರು ರಸ್ತೆಯನ್ನು ದಾಟುತ್ತಿರುವಾಗ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಪಿಕ್ ಆಫ್ ಟೆಂಪೋ ನಂಬ್ರ;KA-19-AD-8502 ನೇದನ್ನು ಅದರ ಚಾಲಕ ನವಾಜ್ ಎಂ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮಲ್ಲಿಕಾಶೆಟ್ಟಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಂಬಾರು ರಸ್ತೆಗೆ ಬಿದ್ದು ಅವರ ಎಡಬದಿ ಕುತ್ತಿಗೆ ಹತ್ತಿರ ಗಂಭೀರ ಸ್ವರೂಪದ ಗುದ್ದಿದ ಗಾಯ,ಬಲಕೈಗೆ ಮೊಣಕೈಗೆ ಗುದ್ದಿದ ರಕ್ತಗಾಯ ಕಾಲುಗಳಿಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಹಾಗೂ ಡಿಕ್ಕಿ ಪಡಿಸಿದ ಪಿಕ್ ಆಪ್ ಟೆಂಪೋ ಚಾಲಕ ಸೇರಿ ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿರುತ್ತಾರೆ ಎಂಬುತ್ಯಾದಿ.

 

Crime Reported in  Bajpe PS    

ಪಿರ್ಯಾದಿದಾರರು Rajesh Kini Yekkaru ದಿನಾಂಕ 26.12.2022 ರಂದು ಮನೆಯಿಂದ ಹೊರೆಟು ಸಮಯ ಬೆಳಗ್ಗೆ 08.20 ಗಂಟೆಗೆ ಮಂಗಳೂರು ತಾಲೂಕು ಬಡಗ ಎಕ್ಕಾರು ಗ್ರಾಮದ ಎಕ್ಕಾರು ಪಂಚಾಯತಿಯ ಬಳಿ ತಲುಪಿದಾಗ  KA19HG2199 ನಂಬ್ರನ   ಮೋಟಾರ್ ಸೈಕಲ್  ಕಟೀಲ್ ಕಡೆಯಿಂಧ ಬಜಪೆ ಕಡೆಗೆ ಹೋಗುತಿದ್ದು ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಕಟೀಲ್ ಕಡೆಗೆ ಹೋಗುತಿದ್ದ KA20EU4036 ನೇ ಸವಾರನಾದ ಪಯಾಜ್ ಅಹಮ್ಮದ್ ಎಂಬಾತನು ಅತೀ ವೇಗ ಮತ್ತು ಅಜಾಗರುಕತೆಯಿಂದ ತೀರಾ ಬಲಕ್ಕೆ ಬೈಕ್ ಚಲಾಯಿಸಿ ಬೈಕ್ ನಂ KA19HG2199 ನೇ ದಕ್ಕೆ ಡಿಕ್ಕ ಹೊಡೆದ ಪರಿಣಾಮ ಮೊಟಾರ್ ಸೈಕಲ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಹತ್ತಿರ ಬಂದು ನೀಡಿದಾಗ ಬೈಕ್ ಸವಾರನು ಪಿರ್ಯಾದಿದಾರರ ಹಿರಿಯ ಮಗ ಶಶಾಂಕ ಎಂಬುವನಾಗಿದ್ದು ಇವನಿಗೆ ಬುಲಕೈ ಮಧ್ಯದ ಬೆರಳಿಗೆ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯವಾಗಿದ್ದು ಕೂಡಲೇ ಕಿನ್ನಿಗೋಳಿಯ ಕಸ್ಟಟ್ಟಾ ಆಸ್ಪತ್ರೆಗೆ ದಾಖಲಿಸಿದ್ದ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 26-12-2022 09:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080