Feedback / Suggestions

Surathkal PS     

ದಿನಾಂಕ: 26-03-2023 ರಂದು ಸಂಜೆ ಪಿರ್ಯಾದಿದಾರರಾದ ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ್  ಇವರು   ಸಿಬ್ಬಂದಿಗಳೊಂದಿಗೆ ಸಮವಸ್ತ್ರದೊಂದಿಗೆ ಠಾಣಾ ಇಲಾಖಾ ಪಿ. ಸಿ.ಆರ್. ವಾಹನ ಸಂಖ್ಯೆ KA_19/G 551 ನೇದರಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಹೋದವರು ವಾಪಾಸು ಠಾಣೆ ಕಡೆಗೆ ಬರುತ್ತಿರುವಾಗ  ಇಡ್ಯಾ ಗ್ರಾಮದ ಸುರತ್ಕಲ್ ಗೊವಿಂದಾಸ್  ದಾಸ್ ಪದವಿ ಪೂರ್ವ ಕಾಲೇಜ್ ನ ಮುಂಭಾಗದ ವಿದ್ಯುತ್ ಕಂಬದ ಬಳಿ ನಿಂತಿದ್ದ ಬಿಳಿ ಬಣ್ಣದ ಕ್ಯಾಪ್ ಧರಿಸಿ ಹೆಗಲ್ಲಿನಲ್ಲಿ ಬ್ಯಾಗ್ ಹಾಕಿದ ದೂಬಾ ಹಾಗೂ ಆತನ ಜೊತೆಯಲ್ಲಿದ್ದ ಚಿಂತಾಮಣಿ ಇವರನ್ನು ರಾತ್ರಿ 7:10 ಗಂಟೆಗೆ ವಶಕ್ಕೆ ಪಡೆದು ವಿಚಾರಿಸಿದಾಗ ಅವರು ಒರಿಸ್ಸಾ ರಾಜ್ಯದಿಂದ ಪ್ರತಿ ಕೆ.ಜಿಗೆ ರೂ. 2,000/ ರಂತೆ ಖರೀದಿಸಿ ಮಂಗಳೂರಿಗೆ ತಂದು ಅದನ್ನು ಪ್ರತಿ ಕೆಜಿಗೆ ರೂ 15,000/ ರಂತೆ ಮಾರಾಟ ಮಾಡಲು ತಂದಿರುವುದ್ದಾಗಿಯೂ ತಿಳಿಸಿದ್ದು, ಆರೋಪಿ ದೂಬಾ ಇವರ ಬ್ಯಾಗ್ ನಲ್ಲಿದ್ದ ಸುಮಾರು 2 ಕೆ ಜಿ ತೂಕದ ಎಲೆ ಕಾಂಡ, ಹೂ ಮತ್ತು ಮೊಗ್ಗುಗಳಿಂದ ಕೂಡಿರುವ  ಗಾಂಜಾದಂತೆ ತೋರುವ ಮಾದಕ ವಸ್ತು, ಕಪ್ಪು ಬಣ್ಣದ Cellecor ಕಂಪೆನಿಯ C4I ಮಾದರಿಯ ಕಿಪ್ಯಾಡ್ ಮೊಬೈಲ್ ತಲೆಗೆ ಧರಿಸಿದ ಕ್ಯಾಪ್ ನ್ನು ಸ್ವಾಧೀನಪಡಿಸಿದ್ದು,  ಆರೋಪಿ ಚಿಂತಾಮಣಿ ಇವರ ಬ್ಯಾಗ್ ನಲ್ಲಿದ್ದ  ಸುಮಾರು 1 ತೂಕದ ಕೆ ಜಿ ಎಲೆ ಕಾಂಡ, ಹೂ ಮತ್ತು ಮೊಗ್ಗುಗಳಿಂದ ಕೂಡಿರುವ ಗಾಂಜಾದಂತೆ ತೋರುವ ಮಾದಕ ವಸ್ತುವಿರುವ ಪ್ಯಾಕೇಟ್ ಹಾಗೂ  ಪ್ಲಾಸ್ಟೀಕ್ ಕವರಿನೊಳಗೆ ಇದ್ದ ಸುಮಾರು 180 ಗ್ರಾಮ್  ತೂಕದ ಕೆ ಜಿ ಎಲೆ ಕಾಂಡ, ಹೂ ಮತ್ತು ಮೊಗ್ಗುಗಳಿಂದ ಕೂಡಿರುವ  ಗಾಂಜಾದಂತೆ ತೋರುವ ಮಾದಕ ವಸ್ತು  ಹಾಗೂ ಖಾಲಿ 5 ಪ್ಲಾಸ್ಟೀಕ್ ಕವರ್ POCO ಕಂಪೆನಿಯ Andriod ಮೊಬೈಲ್ ನ್ನು ಸ್ವಾಧೀನಪಡಿಸಿದ್ದಾಗಿದೆ. ಸ್ವಾಧೀನಪಡಿಸಿದ ಮೇಲ್ಕಾಣಿಸಿದ ಗಾಂಜಾದ ಒಟ್ಟು ಅಂದಾಜು ಮೌಲ್ಯ ರೂ 45.000 ಆಗಬಹುದು. ಅರೋಪಿಗಳಾದ  ದೂಬಾ ಮತ್ತು ಚಿಂತಾಮಣಿ ಇವರು ತಮ್ಮ ಸ್ವಂತ ಲಾಭಗೋಸ್ಕರ ಮೇಲ್ಕಾಣಿಸಿದ ಎಲೆ ಕಾಂಡ, ಹೂ ಮತ್ತು ಮೊಗ್ಗುಗಳಿಂದ ಕೂಡಿರುವ ಗಾಂಜಾದಂತೆ ತೋರುವ ಮಾದಕ ವಸ್ತು  ಖರೀದಿಸಿದ ಬಗ್ಗೆ  ಯಾವುದೇ ದಾಖಲೆ ಪತ್ರಗಳು ಇಲ್ಲದೇ ಹಾಗೂ ಅದನ್ನು ಮಾರಾಟ ಹಾಗೂ ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಟ ಮಾಡಿಕೊಂಡು  ಮಾರಾಟ ಮಾಡಿದ್ದಾಗಿದೆ

Kankanady Town PS

ಪಿರ್ಯಾದಿ ಗೋಡ್ವಿನ್ ಪೀಟರ್ ಡಿ ಸೋಜಾ ರವರ ಪತ್ನಿ ಲಿಝಿ ಡಿ ಸೋಜಾ  ಹಾಗೂ ಮಕ್ಕಳು,  ಲಿಝಿ ಡಿ ಸೋಜಾರವರ  ಅಣ್ಣ ಲಾರೆನ್ಸ್ ಡಿ ಸೋಜಾ ರವರ ಮನೆಯ ಕಾರ್ಯಕ್ರಮಕ್ಕೆ ದಿನಾಂಕ:26-03-2023 ರಂದು ಹೋಗಿ ಸಂಜೆ ಸಮಯ  ಮನೆಗೆ ಬಂದಿರುತ್ತಾರೆ.   ವಾಪಾಸ್ಸು ರಾತ್ರಿ 10-00 ಗಂಟೆಗೆ ಲಿಝಿ ಡಿ ಸೋಜಾ ಹಾಗೂ  ಮಕ್ಕಳು ಪುನಃ ಲಾರೆನ್ಸ್ ಡಿ ಸೋಜಾ ರವರ ಮನೆಗೆ ಹೋಗುತ್ತೇವೆ ಎಂದು ಕೇಳಿದಾಗ, ಪಿರ್ಯಾದಿದಾರರು ಹೋಗುವುದು ಬೇಡ ಎಂದು ಹೇಳಿದಾಗ, ಲಿಝಿ ಡಿ ಸೋಜಾರವರು, ಪಿರ್ಯಾದಿದಾರರಿಗೆ,  ತನ್ನ ಅಣ್ಣನನ್ನು ಮನೆಗೆ ಕರೆಯಿಸಿ  ನಿನಗೆ  ಬುದ್ದಿ ಕಳುಹಿಸುತ್ತೇನೆ .  ಎಂದು ಅವಾಚ್ಯ  ಶಬ್ಸಗಳಿಂದ ಬೈದು, ನಂತರ ತನ್ನ ಅಣ್ಣ ಲಾರೆನ್ಸ್ ಡಿ ಸೋಜಾರವರಿಗೆ  ಫೋನ್ ಮಾಡಿ ಹೇಳಿ, ಲಾರೆನ್ಸ್ ಡಿ ಸೋಜಾರವರು ಪಿರ್ಯಾದಿದಾರರಿಗೆ ಫೋನ್ ಮಾಡಿದಾಗ,ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿರುತ್ತದೆ. ನಂತರ ಆರೋಪಿಗಳಾದ ಲಾರೆನ್ಸ್ ಡಿ ಸೋಜಾ, ಲ್ಯಾನೆಲ್ ಡಿ ಸೋಜಾ,   ಲೆನಿಶಾ ಡಿ ಸೋಜಾ,   ಮೆಲ್ಟನ್ ಡಿ ಸೋಜಾ,    ಆನ್ಸನ್ ಡಿ ಸೋಜಾ ರವರು  ಕೃತ್ಯ ನಡೆಸುವ ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿಕೊಂಡು, ಪಿರ್ಯಾದಿದಾರರ ಮನೆಗೆ ರಾತ್ರಿ ಸುಮಾರು 11-00 ಗಂಟೆಗೆ ಅಕ್ರಮ ಪ್ರವೇಶ ಮಾಡಿ,   ಲಾರೆನ್ಸ್ ಡಿ ಸೋಜಾ ಪಿರ್ಯಾದಿದಾರರನ್ನು  ಉದ್ದೇಶಿಸಿ, ನಾಯಿ ನೀನಾಗಿ ನಮ್ಮ ಮನೆಗೆ ಬರುವುದಿಲ್ಲ. ಹೆಂಡತಿ ಹಾಗೂ ಮಕ್ಕಳನ್ನು ಕಳುಹಿಸಿಕೊಡಲು ಏನು ನಿನಗೆ ರೋಗಾ, ಎಂಬುದಾಗಿ ಹಾಗೂ  ಲೆನಿಶಾ ಡಿ ಸೋಜಾ, ಪಿರ್ಯಾದಿದಾರರನ್ನು ಉದ್ದೇಶಿಸಿ, ಬೇವರ್ಷಿ, ನಾಯಿ, ಮರ್ಯಾದೆಯಲ್ಲಿ ಅವರನ್ನು ಮನೆಗೆ ಕಳುಹಿಸಿಕೊಡು ಎಂಬುದಾಗಿ ಅವಾಚ್ಯ ಶಬ್ಸಗಳಿಂದ ಬೈದಿರುತ್ತಾರೆ. ಪಿರ್ಯಾದಿದಾರರು ಕಳುಹಿಸಿಕೊಡುವುದಿಲ್ಲ ಎಂದು ಹೇಳಿದಾಗ, ಲ್ಯಾನೆಲ್ ಡಿ ಸೋಜಾ   ಕೈಯ್ಯಿಂದ  ಪಿರ್ಯಾದಿದಾರರ ಎಡ ಕಣ್ಣಿನ ಬಳಿ ಹಾಗೂ  ಕುತ್ತಿಗೆಯ ಬಳಿ ಹಲ್ಲೆ ನಡೆಸಿದ್ದು, ಲಾರೆನ್ಸ್ ಡಿ ಸೋಜಾ  ಮಗನೇ ಮುಂದೆ ಈ ರೀತಿ ಮಾಡಿದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಘಟನೆಯನ್ನು ನೋಡಿದ ಪಿರ್ಯಾದಿದಾರರ ಅಕ್ಕ ಬೊಬ್ಬೆ ಹೊಡೆದಾಗ,  ಮೆಲ್ಟನ್ ಡಿ ಸೋಜಾ, ಹಾಗೂ  ಆನ್ಸನ್ ಡಿ ಸೋಜಾರವರು ಪಿರ್ಯಾದಿದಾರರ  ಅಕ್ಕನನ್ನು ಉದ್ದೇಶಿಸಿ, “ಬೊಬ್ಬೆ ಹೊಡೆದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

Ullal PS    

ಪಿರ್ಯಾದಿ Abdulla ಸುರತ್ಕಲ್ ಮುಕ್ಕದಲ್ಲಿ ಇರುವ ಶ್ರೀನಿವಾಸ್ ಇನ್ ಸ್ಟಿಟ್ಯೂಟ್ ಆಫ್ ಸಯನಸ್ಸ್  ಕಾಲೇಜಿನಲ್ಲಿ 3 ನೇ ವರ್ಷದ ಎಲೆಕ್ಟ್ರಾನಿಕ್ ಇಂಜನಿಯರಿಂಗ್ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ 26/03/2023 ರಂದು ಕಾಲೇಜಿಗೆ ರಜೆ ಇದ್ದ ಕಾರಣ ದೇರಳಕಟ್ಟೆ ಬ್ಯಾರೀಸ್ ಅಪಾರ್ಟ್ ಮೆಂಟ್ ನಲ್ಲಿರುವ ಸ್ನೇಹಿತ ಬಾಸಿ ರವರ ಮನೆಗೆ ಅದೇ ಕಾಲೇಜಿನಲ್ಲಿ ಫಾರೇನ್ಸಿಕ್ ಸಾಯನ್ಸ್ ನಲ್ಲ್ಲಿ ಕಲಿಯುತ್ತಿರುವ ಪಿರ್ಯಾದಿದಾರರ ಸ್ನೇಹಿತೆ ಅವಂತಿಕಾ ರವರ ಜೊತೆಯಲ್ಲಿ ಪಿರ್ಯಾಧಿದಾರರ ಪೆರಿಚಯದ ಅಜ್ಮಲ್ ರವರ ಬಾಬ್ತು KL-13-AH-8573 ನೇ YAMAHA FZ ನೇ ಮೋಟಾರ್ ಸೈಕಲ್ಲಿನಲ್ಲಿ ಕುಳ್ಳಿರಿಸಿಕೊಂಡು ದೇರಳಕಟ್ಟೆಗೆ ಬಂದು ರಾತ್ರಿ ಅಲ್ಲಿಯೇ ಉಳಕೊಂಡು  ದಿನ ದಿನಾಂಕ 27/03/2023 ರಂದು ಬೆಳಗಿನ ಜಾವ 04-30 ಗಂಟೆಗೆ ಬಾಸಿಯವರ ಮನೆಯಿಂದ ಹೊರಟು ಮೋಟಾರ್ ಸೈಕಲ್ಲಿನಲ್ಲಿ ವಾಪಾಸ್ ಸುರತ್ಕಲ್ ಗೆ ಹೋಗುವರೇ ದೇರಳಕಟ್ಟೆ ಬೀರಿ ರಸ್ತೆಯಲ್ಲಿ ಹೋಗುತ್ತಾ ಬೆಳಿಗ್ಗೆ  05-00 ಗಂಟೆ ಸಮಯಕ್ಕೆ ಸೋಮೇಶ್ವರ ಗ್ರಾಮದ ಉಚ್ಚಿಲ ಜಿಯೋ ಪೆಟ್ರೋಲ್ ಪಂಪ್ ಬಳಿ ತಲುಪುವಾಗ ಪಿರ್ಯಾದಿದಾರರ ಹಿಂದುಗಡೆಯಿಂದ ಎರಡು ಜ ದ್ವಿಚಕ್ರ ವಾಹನದಲ್ಲಿ 3 ಮಂದಿ ಪಿರ್ಯಾದಿದಾರರ ಬೈಕನ್ನು ಹಿಂಬಾಲಿಸಿಕೊಂಡು ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ 3-ಜನ ಯುವಕರು ಪಿರ್ಯಾದಿದಾರರ ಬಳಿ ಬಂದು ಜೊತೆಯಲ್ಲಿದ್ದ ಅವಂತಿಕಾಳನ್ನು ಮೋಟಾರ್ ಸೈಕಲ್ ನಿಂದ ಬಲಾತ್ಕಾರವಾಗಿ ಎಳೆದು ಹಾಕಿ ಕೈಯಲ್ಲಿದ್ದ ಮೊಬೈಲ್ ಫೋನ್ ಹಾಗೂ ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಕಿತ್ತುಕೊಂಡು ಹೋಗಿರುವುದಾಗಿದೆ. ಸೊತ್ತುಗಳಾದ ಐಫೋನ್-11 ಮೊಬೈಲ್ ಫೋನ್ ನ ಅಂದಾಜು ಮೌಲ್ಯ 50,000/-,  ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ 40,000/- ಎಂಬುದಾಗಿ ಪಿರ್ಯಾದಿಯು ನೀಡಿದ ದೂರಿನ ಸಾರಾಂಶ.

 

     

Crime Reported in : Mangalore East Traffic PS      

ಪಿರ್ಯಾದಿನವೀನ್ ಚಂದ್ರ (55 ವರ್ಷ) ರವರು ಈ ದಿನ ದಿನಾಂಕ 26-03-2023 ರಂದು ತನ್ನ ಸ್ನೇಹಿತ ಶೋಭಿತ್ ಕುಮಾರ ರವರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-EY-9531 ನೇಯದರಲ್ಲಿ ಸಹ ಸವಾರರಾಗಿ ಕುಳಿತುಕೊಂಡು ತಮ್ಮ ಮನೆಯಾದ ಕದ್ರಿ ಕಂಬ್ಳ ಕಡೆಯಿಂದ ಆರ್ಯ ಸಮಾಜ ರಸ್ತೆಯ ಮಾರ್ಗವಾಗಿ ಬಲ್ಮಠ ಕಡೆಗೆ ಹೋಗುತ್ತಿರುವಾಗ ಸಂಜೆ ಸಮಯ 6-00 ಗಂಟೆಗೆ ಆರ್ಯ ಸಮಾಜ ರಸ್ತೆಯ ಸಂಗಮ್ ಎಂಬ ಹೆಸರಿನ ಮನೆಯ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಬಲ್ಮಠ ಕಡೆಯಿಂದ ಹಾದು ಬರುವ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರ್ ನೊಂದಣಿ ಸಂಖ್ಯೆ: KA-19-EJ-4418 ನೇಯದನ್ನು ಅದರ ಸವಾರ ದೀಪಕ್ ಎಂಬಾತನು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸುತ್ತಾ ರಸ್ತೆಯ ತೀರಾ ಬಲಕ್ಕೆ ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಬೈಕ್ ಸವಾರ ಶೋಭಿತ್ ಕುಮಾರ್ ರವರು ರಸ್ತೆಗೆ ಬಿದ್ದು ಗುದ್ದಿದ ರೀತಿಯ ಗಾಯಗೊಂಡಿದ್ದು ಸಾರ್ವಜನಿಕರು ಸ್ಥಳದಲ್ಲಿ ಉಪಚರಿಸಿ ಢಿಕ್ಕಿ ಪಡಿಸಿದ ಸ್ಕೂಟರ್ ಸವಾರನೊಂದಿಗೆ ಚಿಕಿತ್ಸೆಗಾಗಿ ಅಥೇನಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಬೈಕ್ ಸವಾರ ಶೋಭಿತ್ ಕುಮಾರ್ ರವರಿಗೆ ಬಲಕೈ ಮೊಣಕೈ ಬಳಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Mangalore East PS

ಪಿರ್ಯಾದಿ ಶ್ರೀ ಶ್ಯಾಮ್. ವಿ ಪಾವಸ್ಕರ್ ಪೊಲೀಸ್ ಉಪ-ನಿರೀಕ್ಷಕರು ಮಂಗಳೂರು ಪೂರ್ವ ಪೊಲೀಸ್ ಠಾಣೆ ರವರು ಈ ದಿನ ದಿನಾಂಕ: 26-03-2023 ರಂದು ಮೇಲಾಧಿಕಾರಿಗಳ ಆದೇಶದಂತೆ ನಂತೂರು ಪೊಲೀಸ್  ಚೆಕ್ ಪಾಯಿಂಟ್ ನಲ್ಲಿ ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದು ವಾಹನಗಳನ್ನು ಚೆಕ್ ಮಾಡುತ್ತಿದ್ದ ಸಮಯ ರಾತ್ರಿ 7-35 ಗಂಟೆಗೆ ನಂತೂರಿನಿಂದ ಮಲ್ಲಿಕಟ್ಟೆ ಕಡೆಗೆ ಹೋಗುತ್ತಿದ್ದ ಬಿಳಿ ಬಣ್ಣದ ಕೆ.ಎಲ್-14-ಯು-6959 ನೇ ಹುಂಡೈ ಕಂಪೆನಿಯ ಇಯಾನ್ ಕಾರ್ ನ್ನು ನಿಲ್ಲಿಸಿ ಚೆಕ್ ಮಾಡಿದಾಗ ಕಾರಿನಲ್ಲಿದ್ದ ವ್ಯಕ್ತಿ  (1) ಅನಿಲ್, ಪ್ರಾಯ: 35 ವರ್ಷ,  ತಂದೆ: ನಾರಾಯಣ, ವಾಸ: ಮೂಲ್ಯಡ್ಕ ಹೌಸ್, ಮೂಲಿಯೂರು ಅಂಚೆ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂದು ತಿಳಿಸಿರುತ್ತಾರೆ, ಮುಂದುವರೆದು ಚಾಲಕ ಸೀಟ್ ನ ಪಕ್ಕದಲ್ಲಿ ಕುಳಿತಿದ್ದ  ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಕೇಳಲಾಗಿ (2) ಶಮೀಲ್, ಪ್ರಾಯ: 38 ವರ್ಷ, ತಂದೆ: ಹರಿದಾಸನ್, ವಾಸ: ಮುಳ್ಳಿಪ್ಪಾಡಿ, ಚೆನ್ನಿಕರ್, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂದು ತಿಳಿಸಿದ್ದು, ಕಾರಿನ ಹಿಂಬದಿಯ ಸೀಟಿನಲ್ಲಿ ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ನಲ್ಲಿ ನಗದು  ರೂ. 1,10,000/- ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಆರೋಪಿತರಲ್ಲಿ ಕೇಳಿದಾಗ ಯಾವುದೇ ದಾಖಲೆ ಪತ್ರ ಮತ್ತು ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಸ್ವಾಧೀನಪಡಿಸಿಕೊಂಡು ಮತ್ತು ಆರೋಪಿತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಬಗ್ಗೆ ಸಿಬ್ಬಂದಿಯವರ ಮೂಲಕ ವರದಿಯನ್ನು ಠಾಣೆಗೆ ಮುಂದಿನ ಕ್ರಮಕ್ಕೆ ಕಳುಹಿಸಿಕೊಟ್ಟಿದ್ದಾಗಿದೆ, ಎಂಬಿತ್ಯಾದಿ.

Panambur PS

ದಿನಾಂಕ 26-03-2023 ರಂದು 17-00 ಗಂಟೆಗೆ  ಪಿರ್ಯಾದಿ ಸೋಮಶೇಖರ್ ಪಿ.ಐ ಪಣಂಬೂರು  ಪೊಲೀಸ್ ಠಾಣೆರವರಿಗೆ  ಮೇಲಾಧಿಕಾರಿಗಳು ಸೂಚನೆ ನೀಡಿ ಬೈಕಂಪಾಡಿ ಮೀನಕಳಿಯಾ ರಸ್ತೆಯ ಎಡಭಾಗದ ಕಾಡುಪೊದರುಗಳು ಬೆಳೆದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟವಾಡುತ್ತಿದ್ದಾರೆಂದು ಮಾಹಿತಿ ಇರುತ್ತದೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ ಪ್ರಕಾರ ಪಿ.ಐ ರವರು ಠಾಣಾ ಗುಪ್ತವಾರ್ತಾ ಸಿಬ್ಬಂದಿ ಹೆಚ್.ಸಿ 1733 ನೇಯವರನ್ನು ಸದ್ರಿ ಇಸ್ಪೀಟ್ ಜುಗಾರಿ ನಡೆಯುವ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದಾಗ, ರಮನಾಥ್ ಬೈಕಂಪಾಡಿ, ಪ್ರಕಾಶ್ ಕೆಂಜಾರು, ಅರ್ಪಿತ್ ಉಳ್ಳಾಲ, ಶಂಶೀರ್ ಅಮ್ಮೆಮಾರ್ ಹಾಗೂ ಇತರರು  ಇಸ್ಪೀಟ್ ಜುಗಾರಿ ಆಟವಾಡುತ್ತಿರುವುದು ಕಂಡು ಬಂದ ಬಗ್ಗೆ  ವರದಿ ನೀಡಿರುತ್ತಾರೆ. ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

Bajpe PS

ಪಿರ್ಯಾದಿ Ameer Hussain ಅಳಿಯ ಸಮೀಮ್ ಎಂಬುವವರು ದಿನಾಂಕ 25-03-2023 ರಂದು ಬೆಳಿಗ್ಗೆ ಕೈಕಂಬ ಕಡೆಯಿಂದ ಬಜಪೆ ಕಡೆಗೆ ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆ ಎ 19 ಇಎಸ್ 9248 ನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 09-45 ಗಂಟೆಗೆ  ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೊಲೀಸ್ ಠಾಣೆಯ ಎದುರಿನ ಓಲ್ಡ್ ಎರ್ ಪೊರ್ಟ್  ಕ್ರಾಸ್ ರಸ್ತೆ ಬಳಿ ತಲುಪುವಾಗ ಸಮಿಮ್ ರವರ ಮುಂದಿನಿಂದ ಅಂದರೆ ಕೈಕಂಬ ಕಡೆಯಿಂದ ಬಜಪೆ ಕಡೆಗೆ ವೇಗವಾಗಿ ಹೋಗುತ್ತಿದ್ದ ಟಿಪ್ಪರ್ ಲಾರಿ ನಂಬ್ರ ಕೆಎ 25 ಬಿ 3034 ನ್ನು ಅದರ ಚಾಲಕ ಮಹಮ್ಮದ್ ರಪೀಕ್ ಎಂಬಾತನು ಓಲ್ಡ್ ಎರ್ ಪೊರ್ಟ್  ಕ್ರಾಸ್ ರಸ್ತೆ ಬಳಿ ಯಾವುದೇ ಸೂಚನೆ ನೀಡದೇ ಟಿಪ್ಪರ ಲಾರಿಯನ್ನು ಓಲ್ಡ್ ಎರ್ ಪೊರ್ಟ್ ರಸ್ತೆಗೆ ಚಲಾಯಿಸಿದ ಪರಿಣಾಮ ಟಿಪ್ಪರ್ ಲಾರಿಯ ಮುಂಬಾಗದ ಬಾಡಿ ಸ್ಕೂಟರ್ ಗೆ ಡಿಕ್ಕಿಯಾಗಿ ಸಮೀಮ್ ಸ್ಕೂಟರ್ ಸಮೇತ್ ರಸ್ತೆಗೆ ಬಿದ್ದು ಗಾಯಗೊಂಡು ಅಥರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ.

Traffic South Police Station

ಪಿರ್ಯಾದಿ ಹಸೈನಾರ್ (43 ವರ್ಷ) ರವರು ದಿನಾಂಕ:26-03-2023 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ: KA-19-HH-9585 ನೇದನ್ನು ಚಲಾಯಿಸಿಕೊಂಡು ಸಮಯ ಸುಮಾರು ಮದ್ಯಾಹ್ನ 3-45 ಗಂಟೆಗೆ ಮಂಜನಾಡಿಯ ಕಲ್ಕಟ ಎಂಬಲ್ಲಿರುವ ಇಲಿಯಾಸ್ ಜುಮ್ಮಾ ಮಸೀದಿ ಬಳಿ ಬಂದು ಕಂಪೌಂಡ್ ನ ರಸ್ತೆ ಬದಿಯಲ್ಲಿ ಮೋಟಾರ್ ಸೈಕಲ್ ನ್ನು ನಿಲ್ಲಿಸಿದ್ದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಪಕ್ಕದಲ್ಲೆ ಅವರ ನೆರೆಮನೆಯ ಮೊಹಮ್ಮದ್ ಮೋಹಾಜ್ ಅವರ ಸ್ಕೂಟರ್ ನಂಬ್ರ: KA-19-HA-1886 ನೇದನ್ನು ನಿಲ್ಲಿಸಿದ್ದು  ಅವರು ಮಸೀದಿ ಕಂಪೌಂಡ್ ನಿಂದ ಹೊರಗಡೆ ಬರುತ್ತಿದ್ದಂತೆ ಮಂಜನಾಡಿ ಕಡೆಯಿಂದ ನಾಟೆಕಲ್ ಕಡೆಗೆ  ಬಿಳಿ ಬಣ್ಣದ ಸೆಲೆರೋ ಕಾರು ನಂಬ್ರ:KA-19-MM-7617 ನೇದನ್ನು ಅದರ ಚಾಲಕ ತ್ಯಾಂಪ್ ಮೂಲ್ಯ ಎಂಬಾತನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಮಸೀದಿಯ ಕಂಪೌಂಡ್ ಹೊರಗಡೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಹಾಗೂ ನೆರೆಮನೆಯ ಮೊಹಮ್ಮದ್ ಮೋಹಾಜ್ ಅವರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲ್ KA-19-HH-9585 ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಹಾಗೂ ಮೊಹಮ್ಮದ್ ಮೊಹಾಜ್ ನ ಸ್ಕೂಟರ್ KA-19-HA-1886 ನ ಮುಂಭಾಗ ಜಖಂಗೊಂಡಿರುತ್ತದೆ ಮತ್ತು ಅಪಘಾತ ಪಡಿಸಿದ ಕಾರು KA-19-MM-7617 ನೇದರ ಮುಂದಿನ ಬಲಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

Traffic North Police Station    

ಪಿರ್ಯಾದಿ ಶ್ರೀಪತಿ ಕೆ (50 ವರ್ಷ) ರವರು ದಿನಾಂಕ: 24-03-2023 ರಂದು ಅವರ ಬಾಬ್ತು KA-19-ME-5417 ನಂಬ್ರದ ಕಾರಿನಲ್ಲಿ ಮುರುಡೇಶ್ವರದಿಂದ ಮನೆ ಕಡೆಗೆ ಉಡುಪಿ- ಮಂಗಳೂರು ರಾಹೆ 66ರಲ್ಲಿ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 7:30 ಘಂಟೆಗೆ ಕೊಟ್ಟಾರ ಚೌಕಿ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ KL-64-K-7040 ನಂಬ್ರದ ಲಾರಿಯನ್ನು ಅದರ ಚಾಲಕ ಪಿರ್ಯಾದಿದಾರರ ಕಾರನ್ನು ಓವರ್ ಟೇಕ್ ಮಾಡಿ ಲಾರಿಯನ್ನು ದುಡುಕುತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಎಡಕ್ಕೆ ಚಲಾಯಿಸಿದ ಪರಿಣಾಮ ಲಾರಿಯು ಪಿರ್ಯಾದಿದಾರರ ಕಾರಿನ ಬಲಬದಿಗೆ ಒರೆಸಿಕೊಂಡು ಮುಂದೆ ಕಾರಿನ ಬಲಬದಿಗೆ ಡಿಕ್ಕಿ ಹೊಡೆದು ಪರಿಣಾಮ ಪಿರ್ಯಾದಿದದಾರರ ಕಾರಿನ ಮಡ್ ಗಾರ್ಡ್ ನ ಬಲಬದಿ, ಬಲಬದಿ ಹಿಂದಿನ ಡೋರ್, ಬಲಬದಿಯ ಮುಂದಿನ ಡೋರ್ ಮತ್ತು ಬಲಬದಿಯ ಸೈಡ್ ಮಿರರ್ ಜಖಂಗೊಂಡಿರುತ್ತದೆ ಬಳಿಕ ಅಪಘಾತ ಪಡಿಸಿದ ಲಾರಿಯ ಚಾಲಕನು ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸದೇ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾನೆ ಮತ್ತು ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ.

Traffic North Police Station                 

ಪಿರ್ಯಾದಿ ಮುತ್ತಪ್ಪ ಚಲವಾದಿ (29 ವರ್ಷ) ರವರು ಈ ದಿನ ದಿನಾಂಕ: 26-03-2023 ರಂದು ಅವರ ಬಾಬ್ತು KA-19-HF-4748 ನಂಬ್ರದ ಮೋಟಾರ್ ಸೈಕಲಿನಲ್ಲಿ ಸಂಗಮೇಶ (37 ವರ್ಷ) ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಚಿತ್ರಾಪುರದಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ವಾಪಾಸು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಡೆಗೆ ಹೋಗುವರೇ ಚಿತ್ರಾಪುರ ಕ್ರಾಸಿನ ತೆರೆದ ಡಿವೈಡರ್ ಜಾಗದಲ್ಲಿ ಬಲಬದಿಯ ಇಂಡೀಕೇಟರ್ ಹಾಕಿ ನಿಧಾನವಾಗಿ ತಿರುಗಿಸುತ್ತಿದ್ದಂತೆ ಸಮಯ ಸುಮಾರು ಬೆಳಿಗ್ಗೆ 10:30 ಘಂಟೆಗೆ ಕುಳಾಯಿ ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ KA-20-EV-0550 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ KIRAN ACHARY ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಎಡಭಾಗಕ್ಕೆ ಡಿಕ್ಕಿ ಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರ ಮೋಟಾರ್ ಸೈಕಲ್ ಸಮೇತ ರಾಹೆ 66ನೇ ಡಾಮಾರು ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತಿದ್ದ ಸಂಗಮೇಶ ರವರ ಎಡಕಾಲು ಕೋಲು ಭಾಗದಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು ಎಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಪಿರ್ಯಾದಿದಾರರಾದ ಮುತ್ತಪ್ಪ ಚಲವಾದಿ ರವರಿಗೆ ಸಣ್ಣ ಪ್ರಮಾಣದ ಗಾಯಾವಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

Traffic South Police Station   

ಪಿರ್ಯಾದಿ NARAYANA ಅಣ್ಣನ ಮಗನಾದ ಶ್ರೀನಿವಾಸ್ (28 ವರ್ಷ) ರವರು ದಿನಾಂಕ:26-03-2023 ರಂದು ಅವರ ಬಾಬ್ತು ಸ್ಕೂಟರ್ ನಂಬ್ರ: KA-19-HL-6639 ನೇದನ್ನು ಮಂಗಳೂರಿನಿಂದ ಅವರ ಮನೆಯಾದ ಶಕ್ತಿನಗರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 16:00 ಗಂಟೆಗೆ ಶಕ್ತಿನಗರದ ಸ್ಮಶಾನ ತಲುಪುತ್ತಿದ್ದಂತೆ ಶ್ರೀನಿವಾಸ್ ರವರು ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಹಂಪನ್ನು ದಾಟಿಸುವಾಗ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದ ಪರಿಣಾಮ ಅವರ ತಲೆಗೆ ತೀವ್ರ ತರದ ಗುದ್ದಿದ ಗಾಯ, ಮುಖಕ್ಕೆ ಕೈ ಕಾಲುಗಳಿಗೆ ತರಚಿದ ರಕ್ತಗಾವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಎ,ಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀನಿವಾಸ್ ರವರನ್ನು ಅಲ್ಲಿನ ವೈಧ್ಯರು ಪರೀಕ್ಷಿಸಿ ತೀವ್ರ ನಿಗಾ ಘಟಕದಲ್ಲಿ ಒಳರೋಗಿಯಾಗಿ ದಾಖಲುಮಾಡಿಕೊಂಡಿರುವುದಾಗಿದೆ, ಎಂಬಿತ್ಯಾದಿ.

Surathkal PS

ಪಿರ್ಯಾದಿ Yathish ಹೆಂಡತಿ ಶ್ರೀಮತಿ ಮಾನಸ ಪ್ರಾಯ 22 ವರ್ಷ ರವರು ನಿನ್ನೆ ದಿನಾಂಕ 25-03-2023 ರಂದು ಮಧ್ಯಾಹ್ನ 1:30 ಗಂಟೆಗೆ ಮನೆಯಲ್ಲಿ ಇದ್ದ ಅತ್ತೆಗೆ ಮದ್ದು ತರಲು ಮೆಡಿಕಲ್ ಗೆ ಹೋಗಿ ಬರುತ್ತೇನೆ ಎಂಬುವುದಾಗಿ ಹೇಳಿ ಹೋದರವರು ವಾಪಸ್ಸು ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಪಿರ್ಯಾದಿದಾರರು ತಮ್ಮ ಪರಿಚಿತರಲ್ಲಿ, ನೆರೆಕರೆಯವರಲ್ಲಿ  ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ಮಾನಸಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಈ ವರೆಗೂ ಎಲ್ಲಾ ಕಡೆ ಹುಡುಕಿದ್ದು ಪತ್ತೆಯಾಗದೇ ಇರುವುದರಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

Surathkal PS

ದಿನಾಂಕ 26-03-2023 ರ ಸಂಜೆ 6.00 ಗಂಟೆಗೆ ಸುರತ್ಕಲ್ ಠಾಣಾ ವ್ಯಾಪ್ತಿಯ  ಕುಳಾಯಿ ಗ್ರಾಮದ ರತ್ನಾವತಿ ಎಂಬುವವರ ಮನೆಗೆ ತಾಗಿಕೊಂಡಿರುವ ಕೊಣೆಯೊಂದರಲ್ಲಿ ಕೆಲ ಯುವಕರು  ಸೇರಿಕೊಂಡು ಮಾದಕ ವಸ್ತು ಗಾಂಜಾವನ್ನು  ಮಾರಾಟ ಮಾಡುವುದು ಮತ್ತು ಸೇದುವುದು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಪಿ.ಎಸ್.ಐ ಪ್ರದೀಪ್ ಟಿ.ಆರ್. ಸಿಬ್ಬಂದಿಗಳ ಜೊತೆಯಲ್ಲಿ ಸದರಿ ಸ್ಥಳಕ್ಕೆ ದಾಳಿ ಮಾಡಿದ್ದು ಸದರಿ ಸ್ಥಳದ ರೂಮ್ ನಲ್ಲಿ ನಾಲ್ಕು ಜನ ವ್ಯಕ್ತಿಗಳು ಗಾಂಜಾವನ್ನು  ಚಿಲ್ಲಮ್ ನಲ್ಲಿ  ಹಾಕಿಕೊಂಡು  ಸಿಗರೇಟ್ ಮಾದರಿಯಲ್ಲಿ ಸೇದುತ್ತಿರುವುದು ಕಂಡು ಬಂದಿದ್ದು ರೂಮ್ ನೊಳಗೆ ಹೋಗಿ ನೋಡಲಾಗಿ ಗಾಂಜಾ ತುಂಬಿದ ಪಾಕೆಟ್ ಗಳು  ದೊರೆತಿದ್ದು ಸದರಿಯವರಲ್ಲಿ ವಿಕ್ರಂ @ ಜಯರಾಂ ಎಂಬಾತನು ಇತರರಿಗೆ ಗಾಂಜಾ ಮಾದಕ ವಸ್ತುವನ್ನು ತಂದು ಹಣಕ್ಕೆ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದು ಸದರಿ ವ್ಯಕ್ತಿಯನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆತನು ಬಂದಿದ್ದ ಆಟೋರಿಕ್ಷಾದಲ್ಲಿ 750 ಗ್ರಾಂ ಗಾಂಜಾ ಮತ್ತು ತೂಕದ ಮಾಪನ ಮತ್ತು ಗಾಂಜಾ ಪ್ಯಾಕ್ ಮಾಡುವ ಖಾಲಿ ಪ್ಯಾಕೆಟ್ ಗಳು ದೊರೆತಿರುತ್ತವೆ ಸದರಿ ಸ್ವತ್ತುಗಳನ್ನು  ಮತ್ತು ಆರೋಪಿತರನ್ನು ವಶಪಡಿಸಿಕೊಳ್ಳಲಾಗಿದೆ... ಮಾದಕ ದ್ರವ್ಯ ಮಾರಾಟ ಜಾಲ ಮತ್ತು ಸೇವನೆ ಮಾಡುತ್ತಿದ್ದವರ ಹೆಸರು ವಿಳಾಸ 1) ವಿಕ್ರಂ @ ಜಯರಾಂ ಪ್ರಾಯ 30 ವರ್ಷ ತಂದೆ: ದೇವದಾಸ್, ಮಿನಾಕಳಿಯ, ಬೈಕಂಪಾಡಿ, ಮಂಗಳೂರು ( ಗಾಂಜಾ ಮಾರಾಟ ಮಾಡುವವ) 2) ಸತೀಶ್ ಪ್ರಾಯ 50 ವರ್ಷ ತಂದೆ: ಸಂಜೀವ ಪೂಜಾರಿ, ಅಬೀರಾಮ್ ಅಪಾರ್ಟ್ಮೆಂಟ್, ಕೋಡಿಯಲ್ ಬೈಲ್, ಮಂಗಳೂರು. 3) ಸರ್ಫರಾಜ್ ಪ್ರಾಯ 37 ವರ್ಷ, ತಂದೆ: ಅಬ್ದುಲ್ ಖಾದರ್, ಹೊನ್ನಕಟ್ಟೆ, ಕುಳಾಯಿ, ಮಂಗಳೂರು 4) ಅಕ್ಷಯ್ ಪ್ರಾಯ 33 ವರ್ಷ ತಂದೆ: ದಾಮೋದರ ಸಾಲಿಯಾನ್, ಶ್ರೀ ಸಾಯಿ ಹೌಸ್, ಬೈಕಂಪಾಡಿ, ಮಂಗಳೂರು  ಆಗಿರುತ್ತದೆ. ಆರೋಪಿತರಿಂದ ಒಟ್ಟು 790 ಗ್ರಾಂ ಗಾಂಜಾ (ಅಂದಾಜು ಮೌಲ್ಯ-8000 ರೂ ಗಳು)  4 ಮೊಬೈಲ್ ಪೋನ್ (ಒಟ್ಟು ಅಂದಾಜು ಮೌಲ್ಯ 6000) , ನಗದು ಹಣ -2470, ಒಂದು ಆಟೋರಿಕ್ಷಾ ( ಮೌಲ್ಯ -70000 ರೂಪಾಯಿಗಳು ), ತೂಕ ಮಾಪನ (ಅಂದಾಜು ಮೌಲ್ಯ -1000 ರೂ ಗಳು )  ಆಗಿದ್ದು ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ - 87470 ರೂಪಾಯಿಗಳು ಆಗಿರುತ್ತದೆ, ನಿಷೇದಿತ  ಮಾದಕ  ದ್ರವ್ಯ ಮಾರಾಟ  ಮತ್ತು  ವ್ಯಸನ ಮಾಡುತ್ತಿದ ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೊಂಡಿರುವುದಾಗಿ ಎಂಬಿತ್ಯಾದಿ.

Kankanady Town PS

ಪಿರ್ಯಾದಿ ದಿನಾಂಕ: 26.03.2023 ರಂದು ಮಂಗಳೂರು ನಗರದ ಮರೋಳಿಯ ಸೂರ್ಯ ವುಡ್ಸ್ ನ ಪಾರ್ಕಿಂಗ್ ಸ್ಥಳದಲ್ಲಿ ‘ರಂಗ್ ದೇ ಬರ್ಸ’ ಎಂಬ ಹೋಳಿ ಕಾರ್ಯಕ್ರಮವನ್ನು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 7:00 ಗಂಟೆಯ ತನಕ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದು, ಪಿರ್ಯಾದುದಾರರು ಮತ್ತು ಅವರ ಸ್ನೇಹಿತರು ಎಲ್ಲಾ ಏರ್ಪಾಡುಗಳನ್ನು ಮಾಡಿಕೊಂಡು ಮಧ್ಯಾಹ್ನ 2-00 ಗಂಟೆಗೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು. ಕಾರ್ಯಕ್ರಮ ತಯಾರಿಯಲ್ಲಿರುವಾಗ ಮಧ್ಯಾಹ್ನ  1-30 ಗಂಟೆಗೆ ಆರೋಪಿಗಳಾದ ಬಾಲಚಂದ್ರ, ಗಣೇಶ್, ಜಯಪ್ರಶಾಂತ್, ಅಕ್ಷಯ್, ಮಿಥುನ್ ರಾಜ್ ಮತ್ತು ಚಿರಾಗ್ ಎಂಬುವರುಗಳು ಕೃತ್ಯ ನಡೆಸುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಅದರಲ್ಲಿ ಒಬ್ಬಾತ ಕೈಯಲ್ಲಿ ಮಾರಾಕಾಯುಧವಾದ ರಾಡ್ ನ್ನು ಹಿಡಿದುಕೊಂಡು ಬಂದು ಕಾರ್ಯಕ್ರಮ ನಡೆಯಲಿರುವ ಸ್ಟೇಜ್ ಬಳಿಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿ ಅಳವಡಿಸಿದ್ದ ಕಾರ್ಯಕ್ರಮದ ಪ್ಲೆಕ್ಸ್ ನ್ನು ಹರಿದು ಅಲ್ಲಿದ್ದ ಬ್ಯಾಕ್ ಡ್ರಾಪ್ ಸ್ಟ್ರಕ್ಚರ್ ನ್ನು ಅವರ ಕೈಯಲ್ಲಿದ್ದ ರಾಡ್ ನಿಂದ ಹೊಡೆದು ಹಾನಿ ಮಾಡಿ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಎಳೆದಾಡಿ. ಅಂದಾಜು ಸುಮಾರು 2-3 ಲಕ್ಷ ನಷ್ಟ ಉಂಟು ಮಾಡಿ ರಾಡ್ ನ್ನು ಅಲ್ಲೆ ಬಿಸಾಡಿ. ನಂತರ ಪಿರ್ಯಾದುದಾರರಿಗೆ ಮತ್ತು ಆತನ ಸ್ನೇಹಿತರಿಗೆ ಹಾಗೂ ಕಾರ್ಯಕ್ರಮಕ್ಕೆ ಬಂದಿದ್ದ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ  ಬೈದು ನಂತರ ಪಿರ್ಯಾದುದಾರರ ಸ್ನೇಹಿತ ಜೀವನ್ ಎಂಬಾತನಿಗೆ “ ನಿನ್ನ ಮಂಡೆ ದರ್ಪುವೆ’ (ನಿನ್ನ ತಲೆ ಒಡೆಯುತ್ತೇನೆ) ಎಂದು   ಜೀವ ಬೆದರಿಕೆ ಹಾಕಿರುತ್ತಾರೆ.  ಎಂಬಿತ್ಯಾದಿಯಾಗಿರುತ್ತದೆ.

 

 

 

        

 

                 

 

 

 

                                 

 

Last Updated: 21-08-2023 12:20 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080