ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                                                  

ಪಿರ್ಯಾದಿದಾರರಾದ ನವಾಝ್ ಪಿ.ವಿ ಎಂಬುವರು ದಿನಾಂಕ; 26/09/2022 ರಂದು ಬೆಳಿಗನ ಜಾವ ತಮ್ಮ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಕೆ.ಪಿ.ಟಿ ಕಡೆಯಿಂದ ನಂತೂರು ಮಾರ್ಗವಾಗಿ ಪಂಪವೆಲ್ ಕಡೆಗೆ ಹಾದು ಹೋಗಿರುವ ರಾ.ಹೆ 66 ನೇಯದರ ಮಾರ್ಗವಾಗಿ ಹೋಗುತ್ತಿರುವಾಗ ಸಮಯ ಬೆಳಗಿನ ಜಾವ ಸುಮಾರು 02-00 ಗಂಟೆ ವೇಳೆಗೆ ನಂತೂರು ಜಂಕ್ಷನ್ ಬಳಿ ಸಿಗುವ ಶಾಂತಿ ಕಿರಣ ಚರ್ಚ ಎದುರು ತಲುಪುತ್ತಿದ್ದಂತೆ ಅವರ ಮುಂದುಗಡೆಯಿಂದ ಅಜಿನ್ ರವರು ಸವಾರರಾಗಿಯೂ ಶ್ರೀತುಲ್ ರವರು ಸಹ ಸವಾರರಾಗಿಯೂ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ KL-09-AT-8075 ನೇಯದನ್ನು ಸವಾರ ಅಜಿನ್ ರವರು ದುಡುಕುತನ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಸದ್ರಿ ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರು ರಸ್ತೆಗೆ ಬಿದ್ದಿರುತ್ತಾರೆ, ಇದರಿಂದ ಸವಾರ ಅಜಿನ್ ರವರಿಗೆ ಬಲಕಾಲಿನ ತೊಡೆಗೆ ಗುದ್ದಿದ ರೀತಿಯ, ಗದ್ದಕ್ಕೆ ಹಾಗೂ ಬಲ ಕಾಲು ಪಾದಕ್ಕೆ ತರಚಿದ ಗಾಯಗಳಾಗಿದ್ದು ಹಿಂಬದಿ ಸವಾರ ಶ್ರೀ ತುಲ್ ರವರಿಗೆ ಬಲ ಪಕ್ಕೆಲುಬು ಬಳಿ ಗುದ್ದಿದ ರೀತಿ ಗಾಯ ಹಾಗೂ ಬಲ ಸೊಂಟದ ಕೆಳಗೆ ಚರ್ಮ ಹರಿದ ರಕ್ತಗಾಯವಾಗಿದ್ದು ಕೂಡಲೇ ಪಿರ್ಯಾದಿದಾರರು ಗಾಯಾಳುಗಳನ್ನು ಉಪಚರಿಸಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾರಿನವರ ಸಹಾಯದಿಂದ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಶ್ರೀತುಲ್ ರವರಿಗೆ ತೀವೃತರದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ, ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in Mangalore North PS                                                     

1) ಪಿರ್ಯಾದಿ RAJKUMAR ರವರು ದಿನಾಂಕ:25-09-2022 ರಂದು ಮಧ್ಯಾಹ್ನ 2,45 ಗಂಟೆಗೆ  ಸ್ಟೇಟ್ ಬ್ಯಾಂಕ್ ನ ರಾವ್ ಆಂಡ್ ರಾವ್ ಸರ್ಕಲ್ ನಲ್ಲಿರುವ ನಿವ್ ಮೆಡಿಕಲ್ ಸ್ಟೋರ್ ಎದುರುಗಡೆ ರಿಕ್ಷಾ ಪಾರ್ಕ್ ನಲ್ಲಿ ಇದ್ದಾಗ ಸಂಪತ್ ಕುಮಾರ ಮತ್ತು ಚಿತ್ರ ಪ್ರಭ ಹಾಗೂ ಅವರ ಗಂಡ ರಾಜೇಶ್ ಶೆಟ್ಟಿ ಎಂಬುವರು ಭಜರಂಗ ದಳದ ಕಾರ್ಯಕರ್ತರು ಎಂದು ಹೇಳಿಕೊಂಡು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಅದೇ ಸಮಯದಲ್ಲಿ ಪಕ್ಕದಲ್ಲಿ ಇರುವ ರಾಜೇಶ್ ಬಾರ್ ನಲ್ಲಿದ್ದ ದಿನೇಶ್ ಪೂಜಾರಿ ಯವರು ಮದ್ಯವಹಿಸಿ ಅವರನ್ನು ವಿಚಾರಿಸಿದಾಗ ಅವರಿಗೆ ಕೈಯಿಂದ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದು ಅದೇ ಸಮಯಕ್ಕೆ ಪಿರ್ಯಾದಿದಾರರು ಅವರನ್ನು ಹಿಂದೆ ಸರಿಸಿದ ತಕ್ಷಣ ಸಂಪತ್ ಎಂಬುವವರು ಪಿರ್ಯಾಧಿದಾರರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದು, ಗಾಯಕ್ಕೋಳಗಾದ ಫಿರ್ಯಾದಿದಾರರು ವೆನ್ ಲಾಕ್ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆದು ಠಾಣೆಗೆ ಬಂದು ದೂರು ನೀಡಿರುವುದಾಗಿ ಎಂಬಿತ್ಯಾದಿಯಾಗಿದೆ.

2)ಪಿರ್ಯಾದಿದಾರರು SHRAVANSING ಮಂಗಳೂರು ನಗರದ ಮೈದಾನ 4 ನೇ ಅಡ್ಡ  ರಸ್ತೆಯಲ್ಲಿ    ಪೂಟ್ ವೇರ್ ವ್ಯಾಪಾರದ  ಹೋಲ್ ಸೇಲ್   ಅಂಗಡಿ ಇಟ್ಟುಕೊಂಡು ವ್ಯಾಪಾರಮಾಡುತ್ತಿದ್ದು ಪಿರ್ಯಾದಿದಾರರು ಪ್ರತಿದಿನ ಬೆಳಿಗ್ಗೆ 8.00 ಗಂಟೆಗೆ ವ್ಯಾಪಾರಕ್ಕೆ ಬಂದವರು ರಾತ್ರಿ 9.00 ಗಂಟೆಗೆ ಅಂಗಡಿಯನ್ನು  ಬಂದ್ ಮಾಡಿ ಹೋಗುತ್ತಿರುವುದಾಗಿದೆ.  ಪಿರ್ಯಾದಿದಾರರು ವ್ಯಾಪಾರ ಮಾಡಿದ  ಹಣವನ್ನು ಮನೆಗೆ ಕೊಂಡು ಹೋಗುತ್ತಿದ್ದು , ದಿನಾಂಕ: 26-09-2022 ರಂದು  ರೂ. 75,000/- ನಗದು ಹಣವನ್ನು ಬ್ಯಾಂಕ್ ಗೆ ಕಟ್ಟುವ ಸಲುವಾಗಿ ಪಿರ್ಯಾದಿದಾರರು ಬೆಳಿಗ್ಗೆ ಮನೆಯಿಂದ ಹಣ ತಂದಿದ್ದು ಬ್ಯಾಂಕ್ ಗೆ ಹಣ ಕಟ್ಟಲು ಆಗದೇ ಇದ್ದು  ದಿನಾಂಕ 27.09.2022 ರಂದು ಕಟ್ಟಬಹುದೆಂದು ಯೋಚಿಸಿ  ವ್ಯಾಪಾರದ ಸುಮಾರು ರೂ. 75,000/- ನಗದು ಹಣವನ್ನು  ಪಿರ್ಯಾದಿದಾರರು ಅಂಗಡಿಯ ಮರದ ಟೇಬಲ್ ನ ಡ್ರಾವರ್ ನಲ್ಲಿಟ್ಟು ಲಾಕ್ ಮಾಡಿ  ರಾತ್ರಿ ಸುಮಾರು 9.00 ಗಂಟೆಗೆ ಅಂಗಡಿಯ ಮುಖ್ಯ ದ್ವಾರದ ಶಟರನ್ನು ಬೀಗ ಹಾಕಿ  ಮನೆಗೆ ಹೋಗಿದ್ದು , ದಿನಾಂಕ 27/09/2022 ರಂದು  ಬೆಳಿಗ್ಗೆ 08.00 ಗಂಟೆಗೆ  ಪಿರ್ಯಾದಿದಾರರು ಅಂಗಡಿ ತೆರೆಯಲು  ಬಂದ ಸಮಯದಲ್ಲಿ ಅಂಗಡಿಯ ಶಟರ್ ಬೀಗ ಮುರಿದಿರುವುದು  ಕಂಡುಬಂದಿದ್ದು ಶಟರ್  ಓಪನ್ ಇದ್ದು ಅಂಗಡಿಯ ಒಳಗಡೆ  ಬಂದು ನೋಡಿದಾಗ ಟೇಬಲ್ ನ ಡ್ರಾವರ್ ನ ಲಾಕ್  ಮುರಿದಿದ್ದು ಅದರ ಒಳಗಡೆ ಇರಿಸಿದ್ದ  ರೂ. 75,000/- ನಗದು ಹಣವು ಕಳವು ಆಗಿದ್ದು ಅಲ್ಲದೆ  ಪಿರ್ಯಾದಿದಾರರ ಅಂಗಡಿಯಪಕ್ಕದ 3 ನೇ ಅಂಗಡಿಯ ಮಾಲೀಕರಾದ  ಜೋರಾ ರಾಮ್  ಎಂಬವರ ಮಹಾರಾಜ ಮಾರ್ಕೆಟಿಂಗ್ ಕಟ್ಲೇರಿ  ಐಟಂ ಸಾಮಾನಿನ ಅಂಗಡಿಯಲ್ಲಿ ಕೂಡಾ  ಇದೇ ರೀತಿ ಶಟರ್ ಬಾಗಿಲು ತೆರೆದು ಅಂಗಡಿಯ ಡ್ರಾವರ್ ನಲ್ಲಿದ್ದ ರೂ, 25,000/ ಹಣವು ಕಳವಾಗಿದ್ದು ಯಾರೋ ಕಳ್ಳರೂ ನಿನ್ನೆ ದಿನಾಂಕ: 26-09-2022 ರಂದು ರಾತ್ರಿ 9.00 ಗಂಟೆಯಿಂದ ಈ ದಿನ 27-09-2022 ರಂದು ಬೆಳಿಗ್ಗೆ 08.00 ಗಂಟೆ ಮಧ್ಯೆ ಅವಧಿಯಲ್ಲಿ  ಅಂಗಡಿಯ ಬಾಗಿಲನ್ನು ಬಲತ್ಕಾರವಾಗಿ ಮುರಿದು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿದೆ .

ಇತ್ತೀಚಿನ ನವೀಕರಣ​ : 27-09-2022 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080