ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                                

ಪಿರ್ಯಾದಿದಾರರಾದ ಮಹಮ್ಮದ್ ಪೈರೋಜ್ ಮುಶ್ರಫ್ ಎಂಬುವರು ದಿನಾಂಕ: 18/10/2022 ರಂದು ತಮ್ಮ ಬಾಬ್ತು ಸ್ಕೂಟರ್ ನೊಂದಣಿ ಸಂಖ್ಯೆ: KA-19-HF-4251 ನೇಯದನ್ನು ಚಲಾಯಿಸಿಕೊಂಡು ಮಾರ್ಗನ್ಸ್ ಗೇಟ್ ಕಡೆಯಿಂದ ನಂದಿಗುಡ್ಡೆ ವೃತ್ತದ ಮೂಲಕ ಕೆ.ಎಂ.ಸಿ ಅತ್ತಾವರದ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12-00 ಗಂಟೆಗೆ ನಂದಿಗುಡ್ಡೆ ವೃತ್ತದ ಬಳಿ ತಲುಪುತ್ತಿದ್ದಂತೆ ನಂದಿಗುಡ್ಡೆ ಸ್ಮಶಾನ ರಸ್ತೆಯಿಂದ ನಂದಿಗುಡ್ಡೆ ಕಡೆ ವೃತ್ತದ ಕಡೆಗೆ ಹಾದು ಬರುವ ಸಾರ್ವಜನಿಕ ರಸ್ತೆಯಲ್ಲಿ ಕಾರು ನೊಂದಣಿ ಸಂಖ್ಯೆ: KA-19-MJ-8251 ನೇಯದನ್ನು ಅದರ ಚಾಲಕ ಆಲೈನ್ ರೆಫಾಯಿಲ್ ಡಿಸೋಜಾ ಎಂಬುವರು ದುಡುಕುತನ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಎಡಕೈ ತಟ್ಟಿಗೆ ಮೂಳೆ ಮುರಿತದ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಢಿಕ್ಕಿಪಡಿಸಿದ ಕಾರಿನ ಚಾಲಕರೇ ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ,. ಆದುದರಿಂದ ಈ ರಸ್ತೆ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ.

         

2)  ದಿನಾಂಕ 13-10-2022 ರಂದು ಗಾಯಾಳು ಕೆ.ಎಸ್. ಸನುರಾಗ್ ರವರನ್ನು ಪ್ರಕರಣದ ಆರೋಪಿತ ಆಲ್ಬಿನ್ ಬಾಬು ರವರು KL-56-P-8127 ನೋಂದಣಿ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಸದ್ರಿ ಮೋಟಾರ್ ಸೈಕಲನ್ನು ಆಲ್ಬಿನ್ ಬಾಬು ರವರು ಸವಾರಿ ಮಾಡುತ್ತಾ ರಾತ್ರಿ ಸಮಯ ಸುಮಾರು 10.05 ಗಂಟೆಗೆ ಬಂಟ್ಸ್ ಹಾಸ್ಟೇಲ್ ಕಡೆಯಿಂದ ಪಿ.ವಿಎಸ್ ಜಂಕ್ಷನ್ ಕಡೆಗೆ ಸಾಗಿರುವ ರಸ್ತೆಯಲ್ಲಿ ಕರಂಗಲ್ಪಾಡಿ ಬಳಿ ಇರುವ ರಾಧಾ ಮೆಡಿಕಲ್ಸ್ ಎದುರಿನ ರಸ್ತೆಗೆ ಬಂದು ತಲುಪುತ್ತಿದ್ದಂತೆ ಸ್ಕೂಟರೊಂದನ್ನು ಅದರ ಸವಾರನು ಕೋರ್ಟ್ ರಸ್ತೆಯಿಂದ ಮುಖ್ಯ ರಸ್ತೆ ಕಡೆಗೆ ಚಲಾಯಿಸಿಕೊಂಡು ಬಂದ ವೇಳೆ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲನ್ನು ಸವಾರ ಆಲ್ಬಿನ್ ಬಾಬು ರವರಿಗೆ ನಿಯಂತ್ರಿಸಲಾಗದೇ  ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಕಾಂಕ್ರೀಟ್ ರಸ್ತೆ ಮೇಲೆ ಬಿದ್ದಿದ್ದು, ಗಾಯಾಳು ಕೆ.ಎಸ್. ಸನುರಾಗ್ ರವರು ಮೋಟಾರ್ ಸೈಕಲ್ ನಿಂದ ಕಾಂಕ್ರೀಟ್ ರಸ್ತೆಗೆ ಎಸೆಯಲ್ಪಟ್ಟು ಹಣೆಯ ಮದ್ಯಭಾಗ, ಎಡ ಹುಬ್ಬಿನ ಬಳಿ, ತುಟಿಗೆ ಮತ್ತು ಸೊಂಟದ ಬಲ ಬದಿ ತರಚಿದ ಗಾಯಗಳಾಗಿದ್ದು, ತಲೆಯ ಒಳ ಭಾಗದಲ್ಲಿ ಮತ್ತು ಹೊಟ್ಟೆಯ ಒಳಭಾಗದಲ್ಲಿ ಗಾಯಗಳಾದವರನ್ನು ಸವಾರ ಆಲ್ಬಿನ್ ಬಾಬು ರವರು ಕೆ.ಎಂ.ಸಿ ಜ್ಯೋತಿ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ. ಆರೋಪಿತ ಸವಾರ ಆಲ್ಬಿನ್ ಬಾಬು ರವರಿಗೆ ಕೈ ಕಾಲುಗಳಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದ್ದು, ಕೆ.ಎಂ.ಸಿ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

Urva PS

ಪಿರ್ಯಾದಿ B Narayana Nayak ದಾರರು ವಾಸ ಮಾಡುತ್ತಿರುವ ಲೇ ಔಟ್ ನಲ್ಲಿ  ಸುಮಾರು 1 ವಾರದಿಂದ ಮಂಗಳೂರು ಮಹಾ ನಗರ ಪಾಲಿಕೆಯ ವತಿಯಿಂದ  ಚರಂಡಿ ನಿರ್ಮಾಣ ಕಾಮಗಾರಿಕೆ ನಡೆಯುತ್ತಿದ್ದು ಅದರಂತೆ ಪಿರ್ಯಾದಿದಾರರ ಮನೆಯ ಮುಂದುಗಡೆ ಇರುವ ಕಂಪೌಂಡ್ ಆವರಣದ ಗೋಡೆಯ ಹೊರಗಡೆ ಕಂಪೌಂಡಿಗೆ ತಾಗಿಕೊಂಡು  ಸುಮಾರು 2 ಅಡಿ ಆಳದಲ್ಲಿ ಚರಂಡಿಯನ್ನು ನಿರ್ಮಾಣ ಮಾಡಿರುತ್ತಾರೆ. ಈ ಬಗ್ಗೆ ಕಾಮಗಾರಿಕೆ ಗುತ್ತಿಗೆ ವಹಿಸಿದ ಆರೋಪಿ ಗುತ್ತಿಗೆದಾರರಾದ ಶ್ರೀ  ಹರಿಪ್ರಸಾದ್ ರವರಿಗೆ ಪಿರ್ಯಾದಿದಾರರ  ಮನೆಯ ಮುಂದುಗಡೆ ಇರುವ ಕಂಪೌಂಡ್ ಆವರಣದ ಗೋಡೆಯು ಕುಸಿದು ಬೀಳುವ ಸಂಭವ ಇರುವ ಬಗ್ಗೆ  ಮನವರಿಕೆ ಇದ್ದರೂ ಈ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮವನ್ನು ವಹಿಸದೇ ಪಿರ್ಯಾದಿದಾರರ ಕಂಪೌಂಡ್ ಆವರಣದ ಗೋಡೆಗೆ ಯಾವುದೇ ಆಧಾರ ನೀಡದೇ ದಿನಾಂಕ 27-10-2022 ರಂದು ಬೆಳಿಗ್ಗೆ ಸುಮಾರು 08-45 ಗಂಟೆಗೆ ಕಾಮಗಾರಿಕೆ ಕೆಲಸವನ್ನು 5 ಜನ  ಕೂಲಿ ಕಾರ್ಮಿಕರ ಮುಖಾಂತರ ಮುಂದುವರಿಸಿದಾಗ ಬೆಳಿಗ್ಗೆ ಸುಮಾರು 09-00 ಗಂಟೆಗೆ ಪಿರ್ಯಾದಿದಾರರ ಮನೆಯ ಮುಂದುಗಡೆ ಇರುವ ಕಂಪೌಂಡ್ ಆವರಣದ ಗೋಡೆಯ ಹೊರಗಡೆ  ಚರಂಡಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಈರಪ್ಪ ರವರ  ಮೇಲೆ ಪಿರ್ಯಾದಿದಾರರ ಮನೆಯ ಮುಂದುಗಡೆ ಇರುವ ಕಂಪೌಂಡ್ ಆವರಣದ ಗೋಡೆ ಕುಸಿದು ಬಿದ್ದಿರುತ್ತದೆ. ಆ ಸಮಯದಲ್ಲಿ   ಪಿರ್ಯಾದಿದಾರರು  ಹಾಗೂ ನೆರೆ ಮನೆ ನಿವಾಸಿಗಳು ಹಾಗೂ ಇತರ  ಕೂಲಿ ಕಾರ್ಮಿಕರು ಸೇರಿ ಈರಪ್ಪ ರವರ ಮೇಲೆ ಬಿದ್ದಿದ್ದ ಕಂಪೌಂಡ್ ಕಲ್ಲುಗಳನ್ನು ತೆಗೆದು ಈರಪ್ಪ ರವರನ್ನು  ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ  ಈರಪ್ಪ ರವರು ಮೃತಪಟ್ಟಿರುವುದಾಗಿ ಎ ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿರುವುದಾಗಿ ಸಾರಾಂಶ ಆಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 27-10-2022 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080