Crime Reported in : Mangalore Rural PS
ಪಿರ್ಯಾದಿ Harshalatha J Shetty ಗಂಡ ಜಗದೀಶ್ ಕೆ. ಶೆಟ್ಟಿ (58) ಮತ್ತು ಮಗನೊಂದಿಗೆ ಉಳಾಯಿಬೆಟ್ಟು ಗ್ರಾಮದ ನಡಿಗುತ್ತುಮನೆ ಎಂಬಲ್ಲಿ ವಾಸವಾಗಿದ್ದು ಗಂಡ ಜಗದೀಶ್ ಕೆ ಶೆಟ್ಟಿರವರು ಕುಲಶೇಖರದ ಕೆ.ಎಂ.ಎಫ್ ಕಂಪೆನಿಯಲ್ಲಿ ಸುಮಾರು 10 ವರ್ಷಗಳಿಂದ ಹಾಗೂ ಬೆಳಗಾವಿಯ ವಿ.ಟಿ.ಯು ಕಾಲೇಜಿನಲ್ಲಿ ಸುಮಾರು 06 ತಿಂಗಳುಗಳಿಂದ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರ ಮಾಲಕತ್ವದ ದುರ್ಗಾ ಫೆಸಿಲಿಟಿ ಅಂಡ್ ಮ್ಯಾನೇಜ್ ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಕ್ಯಾಂಟೀನ್ ವ್ಯವಹಾರ ನಡೆಸಿಕೊಂಡಿರುತ್ತಾರೆ ಸದ್ರಿಯವರು ನಡೆಸುತ್ತಿದ್ದ ಕ್ಯಾಂಟಿನ್ ವ್ಯವಹಾರವು ನಷ್ಟದಲ್ಲಿ ನಡೆಯುತ್ತಿದ್ದು ಪ್ರತೀ ತಿಂಗಳು ವ್ಯಾಪಾರ ವಹಿವಾಟಿನ ಬಾಬ್ತು ಕ್ಯಾಂಟೀನ್ ಮಾಲಕರಿಗೆ ಕಮೀಷನ್ ಕೊಡುತ್ತಿದ್ದರು. ಬೆಳಗಾವಿಯ ವ್ಯವಹಾರದ ಲೆಕ್ಕಾಚಾರವನ್ನು ಸರಿ ಮಾಡದೇ ಇದ್ದರೆ ಇಲ್ಲಿಯ ಹಣವನ್ನು ನಿಮಗೆ ಕೊಡುವುದಿಲ್ಲ ಎಂಬುದಾಗಿ ತಿಳಿಸಿದಲ್ಲದೆ ಪಿರ್ಯಾದಿದಾರರ ಗಂಡ ಮತ್ತು ಅಕೌಂಟೆಂಟ್ ಅಂಕಿತವರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದಿದ್ದರು ದಿನಾಂಕ: 27-03-2023 ರಂದು ವಾಮಂಜೂರಿನ ಮೋಹನದಾಸ್ ಬಂಗೇರಾ ರವರು ಕೆ.ಎಂ.ಎಫ್ ಕಂಪನಿಗೆ ಹೋದಾಗ ಅಲ್ಲಿ ಪಿರ್ಯಾದಿದಾರರ ಗಂಡ ಇಲ್ಲದೇ ಇರುವುದನ್ನು ನೋಡಿ ಪೋನ್ ಕರೆ ಮಾಡಿ ನನಗೆ ಕೊಡಬೇಕಾದ ಹಣವನ್ನು ನಾಳೆ ಕೊಡದಿದ್ದರೆ, ಕ್ಯಾಂಟೀನ್ ಬಂದ್ ಮಾಡಿಸುತ್ತೇನೆ ಎಂದು ಹೇಳಿದರು. ಆ ವಿಷಯ ಪಿರ್ಯಾದಿದಾರರ ಗಂಡನಿಗೆ ತಿಳಿದು ತುಂಬಾ ಬೇಸರವಾಗಿ ಮನೆಯಲ್ಲಿದ್ದ ನೋಟ್ ಪುಸ್ತಕದಲ್ಲಿ ನನ್ನನ್ನು ಹುಡುಕಬೇಡಿ ಎಂಬಿತ್ಯಾದಿಯಾಗಿ ಪಿರ್ಯಾದಿದಾರರಿಗೆ ತಿಳಿಯದಂತೆ ಬರೆದಿಟ್ಟು ಮನೆಯಲ್ಲಿದ್ದ ಪಿರ್ಯಾದಿದಾರರಲ್ಲಿ ನಾನು ಬೆಳಗಾವಿಗೆ ಹೋಗಿ ಅಲ್ಲಿನ ಲೆಕ್ಕವನ್ನು ಮುಗಿಸಿ ಬರುತ್ತೇನೆ ಎಂದು ಹೇಳಿ ದಿನಾಂಕ 27/03/2023 ರಂದು ಸಂಜೆ 19.00 ಗಂಟೆಗೆ ಬಟ್ಟೆಬರೆಗಳನ್ನು ಬ್ಯಾಗಿನಲ್ಲಿ ತುಂಬಿಸಿಕೊಂಡು ಹೋಗಿರುತ್ತಾರೆ. ಅನಂತರ ಪಿರ್ಯಾದಿದಾರರು ಗಂಡನಿಗೆ ಫೋನ್ ಮಾಡಿದಾಗ ಎರಡೂ ಫೋನ್ ಗಳು ಸ್ವಿಚ್ ಆಫ್ ಆಗಿದ್ದು ಮನೆಯಲ್ಲಿ ಹುಡುಕಿದಾಗ ಮನೆಯಲ್ಲಿರುವ ಸೋಫಾದ ಕೆಳಗೆ ಕಾಣದಂತೆ ಫೋನ್ ಗಳನ್ನು ಇಟ್ಟು ಹೋಗಿರುತ್ತಾರೆ. ಪಿರ್ಯಾದಿದಾರರು ಬೆಳಗಾವಿಯ ಕ್ಯಾಂಟೀನಿಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೆ ಪಿರ್ಯಾದಿದಾರರ ಗಂಡ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದುದರಿಂದ ಕಾಣೆಯಾದ ಜಗದೀಶ್ ಕೆ. ಶೆಟ್ಟಿ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.
ಕಾಣೆಯಾದವರ ಚಹರೆ ವಿವರಗಳು
ಹೆಸರು : ಜಗದೀಶ ಕೆ ಶೆಟ್ಟಿ
ತಂದೆಯ ಹೆಸರು : ದಿ| ಕೃಷ್ಣ ಶೆಟ್ಟಿ
ತಾಯಿಯ ಹೆಸರು : ದಿ| ವಾರಿಜ
ಪ್ರಾಯ: : 58 ವರ್ಷ ಜನ್ಮ ದಿನಾಂಕ: 25-05-1965
ಎತ್ತರ : 05 ಅಡಿ ೦6 ಇಂಚು
ಮೈಬಣ್ಣ : ಗೋಧಿ ಮೈಬಣ್ಣ
ಚಹರೆ : ದೃಢಕಾಯ, ಕಪ್ಪು ಬಿಳಿ ಮಿಶ್ರಿತ ಕೂದಲು, ತಲೆಯ ಮುಂಭಾಗದಲ್ಲಿ ಕೂದಲು ಇರುವುದಿಲ್ಲ, ತೆಳು ಕಪ್ಪು ಬಿಳಿ ಮಿಶ್ರಿತ ಗಡ್ಡ ಮತ್ತು ಮೀಸೆ ಹೊಂದಿರುತ್ತಾರೆ, ಹಣೆಯಲ್ಲಿ ಕುಂಕುಮ ಧರಿಸುತ್ತಾರೆ.
ಧರಿಸಿರುವ ಬಟ್ಟೆ :ಬಿಳಿ ಅರ್ಧ ತೋಳೀನ ಅಂಗಿ ಮತ್ತು ಕಪ್ಪು ಪ್ಯಾಂಟ್
ಮಾತನಾಡುವ ಭಾಷೆಗಳು: ಕನ್ನಡ, ತುಳು, ಹಿಂದಿ.
Kavoor PS
ಪಿರ್ಯಾದಿ SURESH ದಿನಾಂಕ 27/03/2023 ರಂದು ರಾತ್ರಿ 9.30 ಗಂಟೆಗೆ ಮೂಡುಶೆಡ್ಡೆಯ ಅಮೃತ ಬಾರ್ ನಲ್ಲಿ ಓಪನ್ ಕ್ಯಾಬಿನ್ ನಲ್ಲಿ ಕುಳಿತು ಮಧ್ಯ ಸೇವಿಸುತ್ತಿರುವ ಸಮಯ ಬಾರಿನ ವೇಟರ್ ಬಳಿ ಮಾತನಾಡುತ್ತಿರುವಾಗ ಪಿರ್ಯಾದಿದಾರರ ಎದುರಿನ ಟೇಬಲ್ ನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತ ಯುವಕರು ಪಿರ್ಯಾದಿದಾರರಿಗೆ ಮಾತನಾಡದಂತೆ “ ಬಾಯಿ ಮುಚ್ಚಿದ ಮನಿಪಂದೆ ಕುಲ್ಲುಯ” ಎಂದು ಹೇಳಿದಾಗ ಪಿರ್ಯಾದಿದಾರರು “ ನಾನು ಕೂಡಾ ಬಾರಿಗೆ ಕುಡಿಯಲು ಬಂದಿದ್ದು” ಎಂದು ಹೇಳಿ ಬಾರ್ ನಲ್ಲಿ ಬಿಲ್ ನ್ನು ನೀಡಿ ಬಾರ್ ಹೊರಗಡೆ ಬಂದಾಗ ಕುಳಿತಿದ್ದ ಇಬ್ಬರು ಅಪರಿಚಿತ ಯುವಕರು ಪಿರ್ಯಾದಿದಾರರನ್ನು ಹಿಂಬಾಲಿಸಿ ಬಂದು ಮಾತುಕತೆ ನಡೆಸಿದ ಸಮಯ ಪಿರ್ಯಾದಿದಾರರು ಇಬ್ಬರಿಗೆ ಕೈಯಿಂದ ಹೊಡೆದಿದ್ದರಿಂದ ಇಬ್ಬರು ಅಪರಿಚಿತ ಯುವಕರು ಪಿರ್ಯಾದಿದಾರರಿಗೆ ಕೈಯಿಂದ ರಸ್ತೆಗೆ ದೂಡಿ ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಮುಖಕ್ಕೆ ಹೊಡೆದು ವಾಮಂಜೂರು ಕಡೆಗೆ ಹೋಗಿರುತ್ತಾರೆ, ಎಂಬಿತ್ಯಾದಿ
Mangalore South PS
ದಿನಾಂಕ 27-03-2023 ರಂದು 14-50 ಗಂಟೆಯಿಂದ ಸಂಜೆ 16-10 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ವೆಲೆನ್ಸಿಯಾ ಎಕ್ಸಿಸ್ ಬ್ಯಾಂಕ್ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದಿ NITHESH KUMAR ಆರ್. ಸಿ. ಮಾಲಕತ್ವದ KA 19 EW 3809 ನೊಂದಣಿ ಸಂಖ್ಯೆಯ ಸಂಖ್ಯೆಯ, MD2A36FYXHCF32620 ಚೆಸಿಸ್ ನಂಬ್ರದ, JLYCHF89184 ಇಂಜೀನ್ ನಂಬ್ರದ 09/2017ನೇ ಮೋಡಲ್ ನ ಕಪ್ಪು-ಗ್ರೇ ಬಣ್ಣದ ಅಂದಾಜು ರೂಪಾಯಿ 75,000/- ಬೆಲೆ ಬಾಳುವ BAJAJ PULSAR NS 200 ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ನಂತರ ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.
Kankanady Town PS
ಪಿರ್ಯಾದಿ Sujeeth Kumar ಶಕ್ತಿನಗರ ಪದವು ಗ್ರಾಮದವರಾಗಿದ್ದು ಮಂಗಳೂರು ಕಪಿತಾನ್ಯು ಬಳಿಯ ನೇತ್ರಾವತಿ ಕಟ್ಟಡದಲ್ಲಿರುವ 2 ನೇ ಮಹಡಿಯಲ್ಲಿ ಸಿಎನ್ ಸಿ ಕಟಿಂಗ್ ಶಾಪ್ ನ್ನು ಹೊಂದಿದ್ದು, ಅಲ್ಲಿ ಕೆಲಸವನ್ನು ಮಾಡುತ್ತಿರುವುದಾಗಿದೆ. ದಿನಾಂಕ: 27.03.2023 ರಂದು ಎಂದಿನಂತೆ ಪಿರ್ಯಾದಿದಾರರು ಮಧ್ಯಾಹ್ನ ಸುಮಾರು 2.45 ಗಂಟೆಗೆ ಶಕ್ತಿನಗರದ ಮನೆಯಿಂದ ಊಟ ಮುಗಿಸಿ ಪಿರ್ಯಾದಿದಾರರ ಬಾಬ್ತು KA 19 E 0977 ನೇ ಯಮಾಹಾ RX-100 ಬೈಕ್ ನಲ್ಲಿ ಹೊರಟು ಪಿರ್ಯಾದಿದಾರರ ಶಾಪ್ ಇರುವ ಬಿಲ್ಡಿಂಗ್ ನ ಪಕ್ಕದಲ್ಲಿ ಮಧ್ಯಾಹ್ನ ಸಮಯ ಸುಮಾರು 3.05 ಗಂಟೆಗೆ ಬೈಕ್ ನ್ನು ನಿಲ್ಲಿಸಿ ಅಂಗಡಿಗೆ ಹೋಗಿರುತ್ತಾರೆ .ನಂತರ ಅದೇ ದಿನ ಸಂಜೆ 5.30 ಗಂಟೆಗೆ ಪಿರ್ಯಾದಿದಾರರು ಬೈಕ್ ಇಟ್ಟ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಅಲ್ಲಿ ಇಲ್ಲದೇ ಇದ್ದು, ಕೂಡಲೇ ಪಿರ್ಯಾದಿದಾರರ ಸುತ್ತುಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಬೈಕ್ ಕಂಡು ಬರದೇ ಇದ್ದು ಯಾರೋ ಕಳ್ಳರು ಕಳವು ಮಾಡಿ ಹೋಗಿರುವುದು ಕಂಡು ಬಂದಿರುತ್ತದೆ. ಕಳ್ಳತನವಾದ ಪಿರ್ಯಾದಿದಾರರ KA 19 E 0977 ನೇ ಯಮಾಹಾ RX-100 ಬೈಕ್ ಕೆಂಪು ಬಣ್ಣದ್ದಾಗಿದ್ದು ಅಂದಾಜು ಮೌಲ್ಯ ರೂ 10,000/- ಆಗಬಹುದು ಎಂಬಿತ್ಯಾದಿ
Crime Reported in : Mangalore East Traffic PS
ಪಿರ್ಯಾದಿ SHIVAMURTHY NAIK ದಿನಾಂಕ: 24-03-2023 ರಂದು ಹೆಚ್ ಸಿ-893 ನೇ ಮಂಜುನಾಥ ರವರೊಂದಿಗೆ ಮಂಗಳೂರು ನಗರದ ಕಂಕನಾಡಿ ವೃತ್ತದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 14:10 ಗಂಟೆಗೆ ವೆಲೆನ್ಸಿಯಾ ಕಡೆಯಿಂದ ಕಂಕನಾಡಿ ಕಡೆಗೆ ಒರ್ವ ಮೋಟಾರು ಸೈಕಲ್ ಸವಾರನು ಹೆಲ್ಮೆಟ್ ನ್ನು ಧರಿಸದೇ ತನ್ನ ಜೊತೆ ಇನ್ನಿಬ್ಬರು ಸಹಸವಾರರನ್ನು ಕುಳ್ಳಿರಿಸಿಕೊಂಡು ಸಹಸವಾರರೂ ಹೆಲ್ಮೆಟ್ ಧರಿಸದೇ ವೆಲೆನ್ಸಿಯಾ ಕಡೆಯಿಂದ ಕಂಕನಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವುದನ್ನು ಕರ್ತವ್ಯದಲ್ಲಿದ್ದ ನಾವುಗಳು ಗಮನಿಸಿ ಸದ್ರಿ ಮೋಟಾರು ಸೈಕಲ್ ಸವಾರನನ್ನು ನಿಲ್ಲಿಸಲು ಸೂಚನೆಯನ್ನು ಕೊಟ್ಟರೂ ಮೋಟಾರು ಸೈಕಲ ನ್ನು ನಿಲ್ಲಿಸದೇ ಹೋಗಿರುತ್ತಾನೆ. ಮೋಟಾರು ಸೈಕಲ್ ನ ಮುಂಭಾಗದಲ್ಲಿ ನೊಂದಾಣಿ ಸಂಖ್ಯೆ KA-19-EP-9031 ಎಂಬುದಾಗಿ ನಮೂದಿಸಿದ್ದು, ಮೋಟಾರು ಸೈಕಲ್ ನ ಹಿಂಬದಿಯಲ್ಲಿ ನೊಂದಾಣಿ ಸಂಖ್ಯೆಯನ್ನು ಅಳವಡಿಸಿರುವುದಿಲ್ಲ. ಮೋಟಾರು ಸೈಕಲ್ ನ ನೊಂದಾಣಿ ಮಾಲಕರನ್ನು ಪತ್ತೆ ಮಾಡಿ, ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, KA-19-EP-9031 ನಂಬ್ರದ ಮೋಟಾರು ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
Mangalore North PS
ಪಿರ್ಯಾದಿ ಸುದೀಪ್ ಎಮ್ ವಿ ಪಿಎಸ್ಐ ಸಿಸಿಬಿ ಘಟಕ ಮಂಗಳೂರು ನಗರ ದಿನಾಂಕ: 27-3-2023 ರಂದು ಸಂಜೆ: 5-00 ಗಂಟೆಗೆ ಕಚೇರಿಯಲ್ಲಿದ್ದ ಸಮಯ ಮಂಗಳೂರು ಕಾರ್ ಸ್ಟ್ರೀಟ್ ನಿಂದ ಬಂಟ್ವಾಳ ಕಡೆಗೆ ಯಾವುದೇ ದಾಖಲೆ ಇಲ್ಲದ ಹಣವನ್ನು ಕೆಎ-21-ಪಿ-0097ನೇ ಕಾರಿನಲ್ಲಿ ವಶದಲ್ಲಿರಿಸಿಕೊಂಡು ಹೋಗುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಅವರ ಸಿಬ್ಬಂದಿಯವರೊಂದಿಗೆ ಕಾರ್ ಸ್ಟೀಟ್ ನ ಹತ್ತಿರ ಹೋಗಿ ಅಲ್ಲಿ ತಾರಾ ಕ್ಲೀನಿಕ್ ಹತ್ತಿರ ರಸ್ತೆಯಲ್ಲಿ ಹೋಗುತ್ತಿದ್ದ ಕೆಎ-21-ಪಿ-0097ನೇ ಕಾರನ್ನು ಸಂಜೆ : 5-30 ಗಂಟೆಗೆ ತಡೆದು ನಿಲ್ಲಿಸಿ ಚಾಲಕನಲ್ಲಿ ಹೆಸರು ವಿಳಾಸ ಕೇಳಲಾಗಿ ಸಿ ಎಮ್ ಹಝಿಮ್ ಪ್ರಾಯ: 21 ವರ್ಷ ವಾಸ: ನಂಬರ್: 2-120, ಸಿ ಎಮ್ ಹೌಸ್, ಮೂಡಾಯಿ ಕೋಡಿ, ಅಮ್ಮುಂಜೆ ಪೋಸ್ಟ್ ಬಂಟ್ವಾಳ ತಾಲೂಕು ಎಂದು ತಿಳಿಸಿರುತ್ತಾನೆ. ಆತನಲ್ಲಿ ಹಣದ ಬಗ್ಗೆ ವಿಚಾರಿಸಲಾಗಿ ತನ್ನ ಕಾರಿನ ಢ್ಯಾಶ್ ಬೋರ್ಡ್ ನಲ್ಲಿ ರೂ: 3,23,600/- ಇರುವುದಾಗಿ ತಿಳಿಸಿದ್ದು, ಈ ಹಣಕ್ಕೆ ಯಾವುದಾದರೂ ದಾಖಲೆ ಪತ್ರ ಇದೇಯೇ ಎಂದು ವಿಚಾರಿಸಿದಾಗ ಯಾವುದೇ ದಾಖಲೆ ಪತ್ರ ಇರುವುದಿಲ್ಲ ಎಂದು ತಿಳಿಸಿ, ಈ ಹಣವನ್ನು ತನ್ನ ಚಿಕ್ಕಪ್ಪನನಾದ ಇಸ್ಮಾಯಿಲ್ ಎಂಬವರು ಪೋನ್ ಮಾಡಿ ಕಾರ್ ಸ್ಟ್ರೀಟ್ ನ ಚಿನ್ನದ ಶಾಪ್ ನಿಂದ ಹಣ ಇದೆ ಅದನ್ನು ಬಿ ಸಿ ರೋಡ್ ನಲ್ಲಿರುವ ಇಸ್ಮಾಯಿಲ್ ರವರ ಹೆಂಡತಿಯವರಿಗೆ ನೀಡುವಂತೆ ತಿಳಿಸಿದ ಮೇರೆಗೆ ನಾನು ಕಾರ್ ಸ್ಟ್ರೀಟ್ ಗೆ ಬಂದು ಅಲ್ಲಿ ಚಿಕ್ಕಪ್ಪ ತಿಳಿಸಿದ ಒಂದು ಚಿನ್ನದ ಅಂಗಡಿಗೆ ಹೋಗಿ ರೂ: 3,23,600/- ನ್ನು ನಗದನ್ನು ಪಡೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನ ವಶದಲ್ಲಿದ್ದ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ರೂ: 3,23,600/- ಹಣವನ್ನು , ಸಾಗಾಟ ಮಾಡುತ್ತಿದ್ದ ಕಾರು ನಂಬರ್ : ಕೆಎ-21-ಪಿ-0097 ನೇ ಅಲ್ಟೋ -800 ಬಿಳಿ ಬಣ್ಣದ ಕಾರನ್ನು ಮತ್ತು ಆತನ ಮೊಬೈಲ್ ಪೋನ್ ನ್ನುವಶಪಡಿಸಿಕೊಂಡಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ
Konaje PS
ದಿನಾಂಕ 27.03.2023 ರಂದು 16.30 ಗಂಟೆಗೆ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಬೋಳಿಯಾರು ಕೆಎಫ್ ಸಿ ಕ್ಲಬ್ ಬಳಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಚೀಟಿ ಬರೆದು ಕೊಟ್ಟು ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಎಂಬ ನಸೀಬಿನ ಆಟವನ್ನು ಆಡುತ್ತಿರುವುದಾಗಿ ಠಾಣಾ ಸಿಬ್ಬಂದಿಯಾದ ಹೆಚ್ ಸಿ ಶೈಲೇಂದ್ರರವರು ಠಾಣೆಗೆ ನೀಡಿದ ಲಿಖಿತ ಮಾಹಿತಿಯಂತೆ, , ಸಿಬ್ಬಂದಿಯವರು ಹಾಗೂ ಪಂಚಾಯತುದಾರರನ್ನು ಜೊತೆಯಲ್ಲಿ ಕರೆದುಕೊಂಡು ಇಲಾಖಾ ಜೀಪು ನಂಬ್ರ ಕೆಎ-19-ಜಿ-0548 ನೇದರಲ್ಲಿ ಕುರ್ನಾಡು ಗ್ರಾಮದ ಬೋಳಿಯಾರು ಕೆಎಫ್ ಸಿ ಕ್ಲಬ್ ಬಳಿ 19.30 ಗಂಟೆಗೆ ಹೋದಾಗ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು ಮಟ್ಕಾ ಆಟವನ್ನು ಆಡಿಸುತ್ತಿದ್ದ ಆರೋಪಿ ಪ್ರವೀಣ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ ನಗದು ಹಣ ರೂ 1650/-, ಅಂಕೆಗಳನ್ನು ಬರೆದ ಸಣ್ಣ ಪುಸ್ತಕ-1, ಪೆನ್-1 ಇವುಗಳನ್ನು ಪಂಚರ ಸಮಕ್ಷಮ ಮಹಜರು ಮೂಖೇನ ಸ್ವಾಧೀನಪಡಿಸಿಕೊಂಡು, ಠಾಣೆಗೆ ಕರೆತಂದು ಪ್ರವೀಣ್ ಹಾಗೂ ಹಣ ಸಂಗ್ರಹ ಮಾಡಿ ನೀಡುತ್ತಿದ್ದ ಬೋಳಿಯಾರು ರವಿ ಸ್ಟುಡಿಯೋ ಮಾಲಕರಾದ ರವಿ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ.
Konaje PS Ganesh H Naik
ದಿನಾಂಕ 27.03.2023 ರಂದು 16.45 ಗಂಟೆಗೆ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ್ ನಲ್ಲಿರುವ ಗೂಡಂಗಡಿ ಬಳಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಚೀಟಿ ಬರೆದು ಕೊಟ್ಟು ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಎಂಬ ನಸೀಬಿನ ಆಟವನ್ನು ಆಡುತ್ತಿರುವುದಾಗಿ ಠಾಣಾ ಸಿಬ್ಬಂದಿಯಾದ ಹೆಚ್ ಸಿ ಅಶ್ವಿನ್ ಕುಮಾರರವರು ಠಾಣೆಗೆ ನೀಡಿದ ಲಿಖಿತ ಮಾಹಿತಿಯಂತೆ, , ಪಿಎಸ್ಐ ಗಣೇಶ್ ಹೆಚ್ ನಾಯ್ಕ್ ಸಿಬ್ಬಂದಿಯವರು ಹಾಗೂ ಪಂಚಾಯತುದಾರರನ್ನು ಜೊತೆಯಲ್ಲಿ ಕರೆದುಕೊಂಡು ಇಲಾಖಾ ವಾಹನದಲ್ಲಿ ಮುಡಿಪು ಜಂಕ್ಷನ್ ನಿಂದ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆಯ ಬಳಿ ಇರುವ ಗೂಡಂಗಡಿ ಬಳಿ 19.30 ಗಂಟೆಗೆ ಹೋದಾಗ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು ಮಟ್ಕಾ ಆಟವನ್ನು ಆಡಿಸುತ್ತಿದ್ದ ಆರೋಪಿ ಅಬೂಬಕ್ಕರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ ನಗದು ಹಣ ರೂ 750/-, ಅಂಕೆಗಳನ್ನು ಬರೆದ ಸಣ್ಣ ಚೀಟಿ -1, ಪೆನ್-1 ಇವುಗಳನ್ನು ಪಂಚರ ಸಮಕ್ಷಮ ಮಹಜರು ಮೂಖೇನ ಸ್ವಾಧೀನಪಡಿಸಿಕೊಂಡು, ಠಾಣೆಗೆ ಕರೆತಂದು ಅಬೂಬಕ್ಕರ್ ಎಂಬಾತರ ವಿರುದ್ದ ಪ್ರಕರಣ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ.
Moodabidre PS
ದಿನಾಂಕ: 27-03-2023 ರಂದು ಬೆಳುವಾಯಿ ಬಳಿ ಇರುವ ಬ್ಲೋಸಂ ಶಾಲೆಯ ಮುಂಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಾಹುಲ್ ನಾಗರ್ ಎಂಬಾತನು ಮಣ್ಣನ್ನು ಸಮತಟ್ಟು ಮಾಡುವ ಕೆ.ಎ-35-ಎ-9716 ನಂಬ್ರದ ಮೋಟರ್ ಗ್ರೇಡರ್ ನಲ್ಲಿ ಅಪರೇಟರ್ ಆಗಿ ಕೆಲಸ ಮಾಡುತಿದ್ದು ಸಮಯ ಸುಮಾರು 10.30 ಗಂಟೆಗೆ ನೆಲ ಸಮತಟ್ಟು ಮಾಡುತಿದ್ದ ಮೋಟಾರು ಗ್ರೇಡರನ್ನು ಒಮ್ಮೆಲೆ ನಿರ್ಲಕ್ಷತನದಿಂದ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ವಿವೇಕ್ ನಾಮ್ ದೇವ್ ರವರಿಗೆ ಡಿಕ್ಕಿಪಡಿಸಿದ್ದು, ಅದರಿಂದ ಅವರು ನೆಲಕ್ಕೆ ಎಸೆಯಲ್ಟಟ್ಟಿದ್ದು, ಈ ಅಪಘಾತದ ಪರಿಣಾಮ ಆತನ ತಲೆಯ ಹಿಂಬದಿಗೆ ಗಂಭೀರ ರೀತಿಯ ಗಾಯವಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದವರನ್ನು ಪಿರ್ಯಾದಿದಾರರು Suresh Poojary ಅಲ್ಲಿಯೇ ಕೆಲಸ ಮಾಡುತಿದ್ದವರ ಹಾಗು ಅಲ್ಲಿ ನೆರೆದವರ ಸಹಾಯದಿಂದ ಗಾಯಾಳು ವಿವೇಕ್ ನಾಮ್ ದೇವ್ ರವರನ್ನು ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ವಿವೇಕ್ ನಾಮ್ ದೇವ್ ರವರು ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಎಂಬಿತ್ಯಾದಿ