ಅಭಿಪ್ರಾಯ / ಸಲಹೆಗಳು

Crime Reported in : : Mangalore East Traffic PS

ದಿನಾಂಕ: 27/09/2022 ರಂದು ಪಿರ್ಯಾದಿದಾರರಾದ ವಿನುತ್ ಯು  ರವರ ಅಕ್ಕ ವಿದ್ಯಾರವರು ಎಂದಿನಂತೆ ಕೆಲಸಕ್ಕಾಗಿ ದಿನಾಂಕ; 26/09/2022 ರಂದು ಬೆಳಿಗ್ಗೆ ಹೋಗುತ್ತಿರುವಾಗ ಮಂಗಳಾದೇವಿ ದೇವಸ್ಥಾನದ ಕಡೆಗೆ ಬರುತ್ತಿರುವಾಗ ಅಲ್ಲಿನ ಶ್ರೀ ದೇವಿ ಹೋಟೇಲ್ ಎದುರು ತಲುಪುತ್ತಿದ್ದಂತೆ ಸುಮಾರು ಬೆಳಿಗ್ಗೆ  ಅವರ ಹಿಂಬದಿಯಿಂದ ಮೋಟಾರ್ ಸೈಕಲ್ ಸವಾರ ರಕ್ಷಿತ್ ಎಂಬಾತನು ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸುತ್ತಾ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತನಗೆ ಢಿಕ್ಕಿಪಡಿಸಿದ್ದು ಈ ಢಿಕ್ಕಿ ರಭಸಕ್ಕೆ ತಾನು ರಸ್ತೆಬದಿಗೆ ಬಿದ್ದಿದ್ದು ಕೂಡಲೇ ಢಿಕ್ಕಿ ಪಡಿಸಿದ ಬೈಕ್ ಸವಾರನು ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿದೆ, ಸದ್ರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ವಿದ್ಯಾರವರ ಎಡ ಕಾಲಿನ ಬಳಿ ಮೂಳೆ ಮುರಿತಕ್ಕೊಳಗಾದ ಬಗ್ಗೆ ತಿಳಿಸಿರುತ್ತಾರೆ  ಈ ಬಗ್ಗೆ ಸೂಕ್ತ ಕಾನೂನೂ ಕ್ರಮ ಕೈಗೊಳ್ಳುವಂತೆ ಕೋರಿಕೆ.

                                   

2) ಪಿರ್ಯಾದಿದಾರರಾದ ರಾಜೇಶ್ ಎಂಬುವರು ದಿನಾಂಕ 24-09-2022 ರಂದು ರಾತ್ರಿ ತನ್ನ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಸಮಯ ರಾತ್ರಿ ಸುಮಾರು 9.15 ಗಂಟೆಗೆ  ಎ.ಬಿ. ಶೆಟ್ಟಿ ಜಂಕ್ಷನ್ ತಲುಪುತ್ತಿದ್ದಂತೆ ಸ್ಕೂಟರ ಚಾಲಕ  ಬೈತರ್ ಸಾದು ರುಮಿತ್ ಎಂಬಾತನು ಪಾಂಡೇಶ್ವರ ಕಡೆಯಿಂದ ಚಲಾಯಿಸಿಕೊಂಡು ಬಂದು ಎ.ಬಿ ಶೆಟ್ಟಿ ಜಂಕ್ಷನ್ ಬಳಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಬಲಕ್ಕೆ ವಾಲಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಕೂಡಲೇ ಅಪಘಾತಪಡಿಸಿದ ಸ್ಕೂಟರ್ ಸವಾರನು ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಬಲ ಭುಜದಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿಕೆ ಎಂಬಿತ್ಯಾದಿ.

 

Crime Reported in : : Panambur PS

ಪಿರ್ಯಾದಿ  ಟೈಲ್ಸ್ ಹೋಲ್ ಸೇಲರ್ ಫಾರ್ಮ್ ನ್ನು ಹೊಂದಿದ್ದು ಈ ಕಂಪೆನಿಯಲ್ಲಿ ಪಿರ್ಯಾದಿದಾರರ ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸಿಕೊಂಡು ಕಳೆದ 4 ವರ್ಷಗಳಿಂದ ಗುಮಾಸ್ತನಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ 1 ಇಮ್ರಾನ್ ರೆಹೆಮಾನ್  ಮತ್ತು 2  ಸುನಿಲ್ ರೆಹೆಮಾನಿ ನೇ  ಆರೋಪಿತರುಗಳು ಪಿರ್ಯಾದಿರರ ನಂಬಿಕಸ್ತ ಉದ್ಯೋಗಿಗಳಾಗಿದ್ದು 1 ನೇ ಆರೋಪಿತನು ಪಿರ್ಯಾದಿದಾರರ ಬಾಬ್ತು ಗೋದಾಮಿನಿಂದ ಟೈಲ್ಸ್ ಗಳನ್ನು ಹಲವಾರು ಗ್ರಾಹಕರಿಗೆ ಮತ್ತು ಏಜೆಂಟ್ ಮಹ್ಮದ್ ನೌಫಾಲ್ ನ ಮುಖಾಂತರ ಮಾರಾಟವನ್ನು ಮಾಡಿ ಅದರ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ತನ್ನದೆ ಗೂಗಲ್ ಪೇ ಮೂಲಕ ಜಮಾ ಮಾಡಿಕೊಂಡಿದ್ದು, ಅಲ್ಲದೇ 1 ನೇ ಆರೋಪಿತನು ಹಲವಾರು ಗ್ರಾಹಕರಿಂದ ಟೈಲ್ಸ್ ಪಡೆದ ಮಾರಾಟದ ಹಣವನ್ನು ಪಿರ್ಯಾದಿ ಹಾಗೂ ಸಂಸ್ಥೆಗೆ ತಿಳಿಯದಂತೆ ತನ್ನ ಖಾತೆಗೆ ಜಮಾ ಮಾಡಿಕೊಂಡು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾನೆ. ಪಿರ್ಯಾದಿದಾರು ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ ಸದ್ರಿ ಆರೋಪಿತನ ಕೃತ್ಯವು ತಿಳಿದು ಬಂದಿದ್ದು, ಸದ್ರಿ ಆರೋಪಿತನು ಪಿರ್ಯಾದಿದಾರರ ಸಂಸ್ಥೆಯಿಂದ ಆತನ ಖಾತೆಗೆ 19,62,953 ಲಕ್ಷ ರೂಪಾಯಿಗಳನ್ನು ತನ್ನ ಗುಜರಾತಿನ ಮಾರ್ವಿ ಬ್ರಾಂಚಿನ ಪಂಜಾಬ್  ನ್ಯಾಷನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿರುತ್ತಾನೆ. ಇದೇ ರೀತಿ ಸದ್ರಿ ಆರೋಪಿತನು ಹಲವು ಬಾರಿ ಪಿರ್ಯಾದಿದಾರರ ಸಂಸ್ಥೆಯ ವ್ಯವಹಾರದ ಹಣವನ್ನು ನಿರಂತರವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದವ ಈವರೇಗೆ 1,50,00,000 ಕೋಟಿ ರೂಪಾಯಿಗಳಷ್ಟು ಹಣವನ್ನು ಪಿರ್ಯಾದಿದಾರರ  ಸಂಸ್ಥೆಗೆ ನಷ್ಟವನ್ನುಂಟು ಮಾಡಿದ್ದಲ್ಲದೆ, ಈ ಹಣದ ಪೈಕಿ ಆರೋಪಿತನು ಇತರ ಆರೋಪಿತರಾದ 2,3 ನೇ ಹಿನಾಯತ್, 4 ನೇ ನೂರಾಜ ಮತ್ತು 5 ನೇ ಸ್ವರ ಶೆಟ್ಟಿ ಆರೋಪಿತರುಗಳ ಖಾತೆಗೆ ಹಣವನ್ನು ವರ್ಗಾಯಿಸಿ ಡಿಪಾಸಿಟ್ ಮಾಡಿಸಿಕೊಂಡಿರುತ್ತಾನೆ. ಸದ್ರಿ ಆರೋಪಿತನು ಪಿರ್ಯಾದಿದರರ ಸಂಸ್ಥೆಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಸಮಯ ಪಿರ್ಯಾದಿಗೆ ತಿಳಿಯದೇ ತಾನು ಕೆಲಸ ಮಾಡಿಕೊಂಡಿದ್ದ ಸಂಸ್ಥೆಯಿಂದ ಹಣವನ್ನು ಕದ್ದು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾನೆ. ಸದ್ರಿ ಆರೋಪಿತನು ಇತರ ಆರೋಪಿತರುಗಳೊಂದಿಗೆ ಸೇರಿಕೊಂಡು ಸಮಾನ ಉದ್ದೇಶದಿಂದ ಪಿರ್ಯಾದಿ ಹಾಗೂ ಪಿರ್ಯಾದಿದಾರರ ಸಂಸ್ಥೆಗೆ ನಂಬಿಕೆ ದ್ರೋಹವೆಸಗಿ ವಂಚನೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

 

Crime Reported in : Mangalore North PS

ಪಿರ್ಯಾದಿದಾರ GANGAMMA DONAGUDDE ಕುದ್ರೋಳಿಯಲ್ಲಿ ವಾಸವಾಗಿದ್ದು, ಮೂಲತಃ ಧಾರವಾಡ ಜಿಲ್ಲೆ ಹುಬ್ಬಳ್ಳಿರಾಗಿದ್ದು, ಪಿರ್ಯಾದಿದಾರರ ಮಗ ಮುತ್ತು ಪ್ರಾಯ 25 ವರ್ಷ ಮಂಗಳೂರಿನ  ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು  ,ದಿನಾಂಕ-24-09-2022 ರಂದು ಶನಿವಾರ ಬೆಳಿಗ್ಗೆ 07-00 ಗಂಟೆಗೆ ಕುದ್ರೋಳಿಯ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋದವನು ಈ ತನಕ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಪಿರ್ಯಾದಿದಾರರು ತಮ್ಮ ಹುಬ್ಬಳ್ಳಿಯಲ್ಲಿರುವ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಮತ್ತು ನೆರೆಕರೆಯವರಲ್ಲಿಕೇಳಲಾಗಿ  ಹುಬ್ಬಳ್ಳಿಗೆ ಹೋದ ವಿಚಾರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಆತನ ಮೊಬೈಲ್ ನಂ- ಎರಡು ದಿನಗಳ ತನಕ ಮೊಬೈಲ್ ಪೋನ್ ಆನ್ ಇದ್ದು ಈಗ ಸ್ವೀಚ್ ಆಫ್ ಆಗಿರುತ್ತದೆ, ಆದುದರಿಂದ ಕಾಣೆಯಾದ ನನ್ನ  ಮಗನಾದ ಮುತ್ತುನನ್ನು ಪತ್ತೆ ಮಾಡಿ ಕೊಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ.   

ಕಾಣೆಯಾದ ನನ್ನ ಮಗ ಮುತ್ತುನ ಚಹರೆ ಗುರುತುಗಳು:ಸಪೂರ ಶರೀರ, ಕೋಲು ಮುಖ ,ಎಣ್ಣೆಕಪ್ಪು ಮೈಬಣ್ಣ ,ಎತ್ತರ-5 ಅಡಿ 10 ಇಂಚು, ಸುಮಾರು 1.5 ಇಂಚು ಉದ್ದದ ಕಪ್ಪು ಕೂದಲು, ½ ಇಂಚು ಉದ್ದದ ತೆಳುವಾದ ಮೀಸೆ, ಕೊರಳಲ್ಲಿ ಕಪ್ಪು ದಾರ ಧರಿಸಿರುತ್ತಾನೆ, ಬಲಕೈಯ ಮಣಿಕಟ್ಟಿನ ಬಳಿ ಹದ್ದಿನ ಚಿತ್ರದ ಹಚ್ಚೆ ಇರುತ್ತದೆ, ಬಟ್ಟೆ ಬರೆಗಳು-ಬಿಳಿ ಗುಲಾಬಿ ಬಣ್ಣದ ಉದ್ದ ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ ಧರಿಸಿರುತ್ತಾನೆ.ವಿದ್ಯಾಭ್ಯಾಸ: 7 ನೇ ತರಗತಿ ಉತ್ತೀರ್ಣನಾಗಿರುತ್ತಾನೆ ,ಕನ್ನಡ ಭಾಷೆ ಮಾತನಾಡುತ್ತಾನೆ.

 

Crime Reported in :Traffic North Police Station

ಫಿರ್ಯಾದಿದಾರ Rafeeq K. ದಿನಾಂಕ 27.09.2022 ರಂದು ಬೆಳಿಗ್ಗೆ ಬೈಕಂಪಾಡಿಯಿಂದ ಎ.ಜೆ. ಆಸ್ಪತ್ರೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ಮಂಗಳೂರು ನಗರದ ಕೂಳೂರು ಸರ್ವೀಸ್ ರಸ್ತೆಯ ರಿಲಯನ್ಸ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆಯೇ ಹಿಂದಿನಿಂದ ಕಾರು ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡುವ ಸಮಯ ಒಮ್ಮೆಲೇ ಎಡಕ್ಕೆ  ಚಲಾಯಿಸಿದ ಪರಿಣಾಮ ಕಾರು ದ್ವಿಚಕ್ರ ವಾಹನದ ಹ್ಯಾಂಡಲಿಗೆ ತಾಗಿ ಫಿರ್ಯಾದಿದಾರರು ದ್ವಿಚಕ್ರ ವಾಹನ ಸಮೇತ ರಸ್ತೆ ಬಿದ್ದು ಅವರ ಬಲಭುಜಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಬಲಕಾಲಿನ ಮೊಣಗಂಟಿಗೆ ಬಲ ಕೈಯ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಗಾಯಾಳು ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

 

2) ಫಿರ್ಯಾದಿದಾರ Sayyad Khalandar ಹೆಂಡತಿಯ ಮಾವ ಹನುಮಂತ (35 ವರ್ಷ ) ರವರು  ದಿನಾಂಕ 27.09.2022 ರಂದು ರಾತ್ರಿ ಉಡುಪಿ ಮಂಗಳೂರು ರಸ್ತೆಯನ್ನು ಪಶ್ಚಿಮ ಕಡೆಯಿಂದ ಪೂರ್ವಕ್ಕೆ ದಾಟುತ್ತಿದ್ದಂತೆ ಅದೇ ರಸ್ತೆಯಲ್ಲಿ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಈಚರ್ ಲಾರಿಯನ್ನು ಅದರ ಚಾಲಕ ಪ್ರವೀಣ್ ಕುಮಾರನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು ಹನುಮಂತರವರಿಗೆ ಲಾರಿಯ ಮುಂಭಾಗದ ಎಡಬದಿಯ ಸೈಡ್ ಮಿರರ್ ತಾಗಿ ಡಿಕ್ಕಿಯಾದ ಪರಿಣಾಮ ಹನುಮಂತರವರು ಎಡಕೈಯ ಭುಜಕ್ಕೆ ಮೂಳೆ ಬಿರುಕು ಬಿಟ್ಟಂತಹ ಗಂಭೀರ ಸ್ವರೂಪದ ಗಾಯ ಹಾಗೂ ಎಡಕೈಯ ಮುಂಗೈ ಬಳಿ ಚರ್ಮ ಹರಿದ ರೀತಿಯ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-09-2022 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080