ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS

 ದಿನಾಂಕ 28-10-2022 ರಂದು ಪ್ರಕರಣದ ಪಿರ್ಯಾದಿದಾರರಾದ ಇಬ್ರಾಹಿಂ ಸಿನಾನ್ ರವರು ಮಾರಾಟದ ಬಗ್ಗೆ ಮೊಟ್ಟೆಯನ್ನು ತುಂಬಿಸಿಕೊಂಡು ಬಂದಿದ್ದ KA-19-AA-4558  ನೋಂದಣಿ ನಂಬ್ರದ ಪಿಕಪ್ ವಾಹನದ ಚಾಲಕರಾಗಿದ್ದು, ಸದ್ರಿ ವಾಹನವನ್ನು ಮಂಗಳೂರು ನಗರದ ವೆಲೆನ್ಸಿಯಾ ರಸ್ತೆಯಲ್ಲಿರುವ ಮರಿಯಮ್ ಟ್ರೇಡರ್ಸ್ ಎದುರುಗಡೆ ರಸ್ತೆಯ ತೀರ ಎಡಬದಿಯಲ್ಲಿ ನಿಲ್ಲಿಸಿ ಸದ್ರಿಯವರು ಮರಿಯಮ್ ಟ್ರೇಡರ್ಸ್ ಕಡೆಯಿಂದ ಪಿಕಪ್ ವಾಹನದ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಮತ್ತು ಪಿರ್ಯಾದಿದಾರರ ಜೊತೆಯಿದ್ದ ಸೇಲ್ಸ್ ಎಕ್ಸಿಕ್ಯೂಟಿವ್ ಮುಹಮ್ಮದ್ ನಿಹಾಲ್ ರವರು KA-19-AA-4558 ವಾಹನದ ಹಿಂಬದಿ ಬಳಿ ನಿಂತುಕೊಂಡಿದ್ದಾಗ ಸಮಯ ಸುಮಾರು ಬೆಳಿಗ್ಗೆ 9.15 ಗಂಟೆಗೆ ಕೋಟಿ ಚೆನ್ನಯ್ಯ ಸರ್ಕಲ್ ಕಡೆಯಿಂದ ಕಂಕನಾಡಿ ಜಂಕ್ಷನ್ ಕಡೆಗೆ ಹಾದು ಹೋಗಿರುವ ಕಾಂಕ್ರೀಟ್ ರಸ್ತೆಯಲ್ಲಿ KA-20-B-3544   ಮತ್ತು KA-19-AD-8532 ನೋಂದಣಿ ನಂಬ್ರದ ಬಸ್ಸುಗಳನ್ನು ಅದರ ಚಾಲಕರು ನಾ ಮುಂದು ತಾ ಮುಂದು ಎಂದು ರೇಸಿಂಗ್ ಮಾಡಿಕೊಂಡು ಬರುತ್ತಾ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಮತ್ತು ಅಪಾಯಕಾರಿಯಾಗಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ಒಬ್ಬರನ್ನೊಬ್ಬರು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ಎಡಬದಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ KA-20-B-3544 ನೋಂದಣಿ ನಂಬ್ರದ ಬಸ್ ಚಾಲಕ ಪಿರ್ಯಾದಿದಾರರ ಬಾಬ್ತು KA-19-AA-4558  ನೋಂದಣಿ ನಂಬ್ರದ ಪಿಕಪ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಿಲ್ಲಿಸಿದ್ದ ಪಿಕಪ್ ವಾಹನದ ಪಕ್ಕ ನಿಂತುಕೊಂಡಿದ್ದ ಮುಹಮ್ಮದ್ ನಿಹಾಲ್ ರವರ ಎಡ ಕೈಗೆ ಗುದ್ದಿಕೊಂಡು ಮುಂದಕ್ಕೆ ಚಲಿಸಿ ಪಿಕಪ್ ವಾಹನದ ಎದುರುಗಡೆ ನಿಂತಿದ್ದ KA-19-AC-2428  ನೋಂದಣಿ ನಂಬ್ರದ ಕ್ಯಾರಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿಯಾಗಿರುತ್ತದೆ. ಅಪಘಾತದಲ್ಲಿ ಪಿರ್ಯಾದಿದಾರರ ಬಾಬ್ತು KA-19-AA-4558  ನೋಂದಣಿ ನಂಬ್ರದ ಪಿಕಪ್ ವಾಹನಕ್ಕೆ ಮುಂಬದಿ ಮತ್ತು ಹಿಂಬದಿ ಬಲ ಭಾಗದಲ್ಲಿ ಹೆಚ್ಚಿನ ಜಖಂ ಉಂಟಾಗಿರುತ್ತದೆ. ಗಾಯಾಳು ಮುಹಮ್ಮದ್ ನಿಹಾಲ್ ರವರನ್ನು ಸಾರ್ವಜನಿಕರು ಉಪಚರಿಸಿ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಅಪಘಾತದ ವೇಳೆ ಪಿಕಫ್ ವಾಹನದಲ್ಲಿದ್ದ 1,65,000/- ರೂ ಮೌಲ್ಯದ ಮೊಟ್ಟೆಗಳು ಜಖಂಗೊಂಡು ಒಡೆದು ಹೋಗಿ ನಷ್ಟ ಉಂಟಾಗಿರುತ್ತದೆ.  ಮುಖ್ಯ ರಸ್ತೆಯಲ್ಲಿ ರೇಸಿಂಗ್ ಮಾಡಿದ KA-19-AD-8532 ಬಸ್ಸು ಚಾಲಕನ ಮೇಲೆ ಮತ್ತು ಜೊತೆಯಲ್ಲಿ ಮುಖ್ಯ ರಸ್ತೆಯಲ್ಲಿ ರೇಸಿಂಗ್ ಮಾಡಿ ಅಪಘಾತಪಡಿಸಿದ KA-20-B-3544 ಬಸ್ಸ್  ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

2) ಪಿರ್ಯಾದಿದಾರರಾದ ದೇವೆಂದ್ರ ಗೌಡ ಎಂಬುವರು ದಿನಾಂಕ 27-10-2022 ರಂದು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಿಂದ ವಾಪಾಸ್ ತನ್ನ ಬಾಬ್ತು ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-27-Q-9272 ನೇಯದನ್ನು ಚಲಾಯಿಸಿಕೊಂಡು ಪಂಪ್ವೆಲ್, ನಂತೂರು ಮಾರ್ಗವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ರಸ್ತೆಯಲ್ಲಿ ತಮ್ಮ ಮನೆಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 7.15 ಗಂಟೆಗೆ ನಂತೂರು ವೆಸ್ಟ್ ಲೈನ್ ಬಿಲ್ಡಿಂಗ್ ಬಳಿಯ ಸ್ವಾಗತ್ ಆಟೋ ವರ್ಕ್ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಸದರಿ ಹೆದ್ದಾರಿಯಲ್ಲಿ ವಿರುದ್ದ ದಿಕ್ಕಿನಿಂದ KA-19-MM-0918 ನೊಂದಣಿ ನಂಬ್ರದ ಕಾರೊಂದನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೊಣಕಾಲು ಕೆಳಗೆ ಚರ್ಮಹರಿದ ಆಳವಾದ ರಕ್ತಗಾಯವಾಗಿದ್ದು ಅಲ್ಲದೇ ಅವರ ಬೈಕ್ ಜಖಂಗೊಂಡಿದ್ದು, ಅಲ್ಲಿದ್ದ ಸಾರ್ವಜನಿಕರು ಸ್ಥಳದಲ್ಲಿ ಉಪಚರಿಸಿ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ, ಸದ್ರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಎ.ಜೆ. ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಹೆಚ್ಚಿನ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಆದುದರಿಂದ ಈ ರಸ್ತೆ ಅಪಘಾತದ ಬಗ್ಗೆ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Mangalore North PS                 

ಪಿರ್ಯಾದಿದಾರರು ಮಂಗಳೂರಿನ ಹಂಪನಕಟ್ಟೆಯ ಹಳೆಯ ಬಸ್ ನಿಲ್ದಾಣದ ಬಳಿಯಿರುವ ದಿ ಫಿಷ್ ಎಂಬ ಹೊಟೇಲನ್ನು ನಡೆಸಿಕೊಂಡಿದ್ದು, ಪಿರ್ಯಾದಿದಾರರ ಬಾವ ಮಹೇಶ್ ಮೇಸ್ತಾ ಎಂಬವರು ಗೋವಾದಲ್ಲಿ ವ್ಯಾಪಾರ ಮಾಡುತ್ತಿದ್ದು ಅವರ ಬಾಬ್ತು GA-03-AD-5264 ನೊಂದಣಿ ನಂಬ್ರದ FZ ಯಮಹಾ ಮೋಟಾರ್ ಸೈಕಲನ್ನು ಪಿರ್ಯಾದಿದಾರರು ಸುಮಾರು 1 ವರ್ಷದಿಂದ ಮಂಗಳೂರಿನಲ್ಲಿರುವ ಹೊಟೇಲ್ ವ್ಯವಹಾರಕ್ಕಾಗಿ ಉಪಯೋಗಿಸಿಕೊಂಡು ಬರುತ್ತಿದ್ದು, ಎಂದಿನಂತೆ ದಿನಾಂಕ: 14-10-2022 ರಂದು ರಾತ್ರಿ 6.00 ಗಂಟೆ ಸುಮಾರಿಗೆ  ಪಿರ್ಯಾದಿದಾರರು ಮೋಟಾರ್ ಸೈಕಲಿನಲ್ಲಿ ಹೊರಗಡೆ ಹೋಗಿ ವಾಪಾಸು ಬಂದು ಪಿರ್ಯಾದಿದಾರರ ಹೊಟೇಲಿನ ಬಳಿಯಿರುವ ಹಳೆಯ ಬಾಟಾ ಕಟ್ಟಡದ ಎದುರುಗಡೆ ಪಾರ್ಕ್ ಮಾಡಿ ಹೊಟೇಲಿಗೆ ಹೋಗಿದ್ದು ರಾತ್ರಿ ಸುಮಾರು 10.30 ಗಂಟೆಗೆ ಪಾರ್ಕ್ ಮಾಡಿದ ಮೋಟಾರ್ ಸೈಕಲಿನ ಬಳಿಗೆ ಬಂದಾಗ ಸದ್ರಿ ಸ್ಥಳದಲ್ಲಿ ಮೋಟಾರ್ ಸೈಕಲ್  ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ಬಗ್ಗೆ ಪಿರ್ಯಾದಿದಾರರ ಬಾವನಿಗೆ ತಿಳಿಸಿ ಪಿರ್ಯಾದಿದಾರರು ಇಷ್ಟರವರೆಗೆ ಹುಡುಕಾಡಿದರೂ ಮೋಟಾರ್  ಸೈಕಲ್  ಸಿಗದೇ ಇದ್ದುದರಿಂದ  ಪಿರ್ಯಾದಿದಾರರ  ಬಾವನ ಬಾಬ್ತು GA-03-AD-5264 ನೊಂದಣಿ ನಂಬ್ರದ FZ ಯಮಹಾ ಮೋಟಾರ್ ಸೈಕಲಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

ಕಳವಾದ ಮೋಟಾರ್ ಸೈಕಲ್  ನ ವಿವರಗಳು ಈ ಕೆಳಗಿನಂತಿದೆ:

GA-03-AD-5264 ನೊಂದಣಿ ನಂಬ್ರದ FZ ಯಮಹಾ ಮೋಟಾರ್ ಸೈಕಲ್ ಮಾಡೆಲ್ 2016 ಕಪ್ಪು ಬಣ್ಣ ಮತ್ತು ಕೆಂಪು ಸ್ಟಿಕ್ಕರ್  ಇದ್ದು,ಅಂದಾಜು   ಮೌಲ್ಯ ರೂ. 30,000/-

ಇಂಜಿನ್ ನಂಬ್ರ: 21CK078259 ಚಾಸಿಸ್ ನಂಬ್ರ:ME121COK1G2078209 ಆಗಿರುತ್ತದೆ.

 

               

ಇತ್ತೀಚಿನ ನವೀಕರಣ​ : 28-10-2022 07:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080