ಅಭಿಪ್ರಾಯ / ಸಲಹೆಗಳು

Crime Reported in : Konaje PS

ದಿನಾಂಕ 16.08.1997 ರಿಂದ 10.08.2021 ರವರೆಗೆ ಅಂಬ್ಲಮೊಗರು ಶಾಖಾ ಅಂಚೆ ಕಛೇರಿಯಲ್ಲಿ ಗ್ರಾಮೀಣ ಶಾಖಾ ಅಂಚೆ ಪಾಲಕರಾಗಿ ಕೆಲಸ ಮಾಡುತ್ತಿದ್ದ ಶ್ರೀ ಬಾಬು, ಎಂಬವರು ದಿನಾಂಕ 21.02.2019 ರಿಂದ 10.08.2021 ರ ಅವಧಿಯಲ್ಲಿ ಸಾರ್ವಜನಿಕ ಗ್ರಾಹಕರಿಗೆ ಸಂಬಂಧಿಸಿಸದ 1 ಎಸ್.ಬಿ, 2 ಟಿ.ಡಿ, ಹಾಗೂ 3 ಎಸ್.ಎಸ್.ಎ. ಪಾಸ್ ಪುಸ್ತಕಗಳಲ್ಲಿ ಜಮಾ ಮಾಡಿದ ಒಟ್ಟು ಹಣ 2,01,500/- ರೂ ನ್ನು ಇಲಾಖಾ ಲೆಕ್ಕಕ್ಕೆ ಜಮಾ ಮಾಡದೆ ಸ್ವಂತ ಉಪಯೋಗಕ್ಕೆ ಬಳಸಿಕೊಂಡು, ಖಾತೆಗಳಲ್ಲಿ ಅವ್ಯವಹಾರ ಮಾಡಿ ಇಲಾಖೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿದೆ.

Bajpe PS

ಪಿರ್ಯಾದಿದಾರರ  ಅಕ್ಕ ಸರಿತಾಳು ಸುಮಾರು 12 ವರ್ಷಗಳ ಹಿಂದೆ ತೆಂಕ ಎಕ್ಕಾರು ಗ್ರಾಮದ ದುರ್ಗೇಶ್ ಎಂಬುವರೊಂದಿಗೆ ಪ್ರೀತಿಸಿ ವಿವಾಹವಾಗಿದ್ದು   ದುರ್ಗೇಶನು ಸರಿತಾ ರವರಿಗೆ ಯಾವಾಗಲೂ  ಬೈಯ್ಯುವುದು ಹೊಡೆಯುವುದು ಮಾಡುತಿದ್ದನು.  ದಿನಾಂಕ 28.11.2022 ರಂದು ಸುಮಾರು ಬೆಳಗ್ಗೆ  07.45 ಗಂಟೆಗೆ ಎಕ್ಕಾರಿನ ಕೃಷ್ಣ ಎಂಬುವರು ಪಿರ್ಯಾದಿದಾರರಿಗೆ ಪೋನ್ ಮಾಡಿ ನಿಮ್ಮ ಅಕ್ಕ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ತಮ್ಮ ಕುಟುಂಬದೊಂದಿಗೆ ದುರ್ಗೇಶನ ಮನೆಯಿರುವ ಮಂಗಳೂರು ತಾಲೂಕು ತೆಂಕ ಎಕ್ಕಾರು ಗ್ರಾಮದ ಪಲ್ಲದ ಕೋಡಿ ಎಂಬಲ್ಲಿಗೆ ಹೋಗಿ ನೋಡಿದಾಗಿ ಪಿರ್ಯಾದಿದಾರರ ಅಕ್ಕ ಸರಿತಾಳ ಎಡ ಕಣ್ಣಿನ ಬಳಿ ಹಣೆಯಲ್ಲಿ ಹರಿತವಾದ ಸೀಳು ಗಾಯ, ,ಎಡಕಣ್ಣಿನಲ್ಲಿ ಕೂಡಾ ಗಾಯ, ಕೈಕಾಲುಗಳಲ್ಲಿ ಸಣ್ಣ ಪುಟ್ಟ ಗಾಯವಾಗಿದ್ದು ಕಂಡು ಬಂದಿದ್ದು ಪಿರ್ಯಾದಿದಾರರು ತನ್ನ ಅಕ್ಕ ಸರಿತಾ ರವರ ಸಾವಿನ ಬಗ್ಗೆ ಕೃಷ್ಣ ರವರಲ್ಲಿ ವಿಚಾರಿಸಿದಾಗ ದಿನಾಂಕ:27.11.2022 ರಂದು ರಾತ್ರಿ ಸುಮಾರು 8.30 ಗಂಟೆಗೆ ದುರ್ಗೇಶನು ಸರಿತಾ ರವರಿಗೆ  ಯಾವುದೋ ವಿಚಾರಕ್ಕೆ ಬೈಯುತ್ತಾ ಮರದ ರಿಪೀಸ್ ನಿಂದ ಹೊಡೆದಿದ್ದು ಇದರಿಂದ ಸರಿತಾ ರವರು  ಮರಣ ಹೊಂದಿರುತ್ತಾಳೆ ಎಂಬುದಾಗಿ ಪಿರ್ಯಾದಿದಾರರು ನೀಡಿದ ಹೇಳಿಕೆಯಾಗಿದೆ ಎಂಬಿತ್ಯಾದಿ   

Panambur PS

ದಿನಾಂಕ 27-11-2022 ರಂದು ಸಮಯ 16-15  ಗಂಟೆಗೆ ಕುರಿಕಟ್ಟ ಹತ್ತಿರ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ ನಾಗರಾಜ್ ತಳವಾರು ಪ್ರಾಯ-19 ವರ್ಷ,  ವಾಸ: ಮೀನಕಳಿಯಾ, ಬೈಕಂಪಾಡಿ,  ಮಂಗಳೂರು ತಾಲೂಕು  ಎಂಬವನನ್ನು   ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ  ವೈದ್ಯಾಧಿಕಾರಿಗಳು, ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ಕಳುಹಿಸಿ ಕೊಟ್ಟಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid (Marijuna) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತನಾದ ನಾಗರಾಜ್ ತಳವಾರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಆಪಾದಿತನ ವಿರುದ್ದ  ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

Mangalore North PS

 ಪಿರ್ಯಾದುದಾರರಾದ ಫ್ರಾಂಕ್ ರಾಡ್ರಿಗಸ್ ಎಂಬವರು ಮಂಗಳೂರು ನಗರದ ಬೋಳೂರು ಎಂಬಲ್ಲಿ ಶರೋನ್ ಎಂಟರ್ ಪ್ರೈಸಸ್ ಎಂಬ ಪೈಂಟಿಂಗ್ ಅಂಗಡಿಯನ್ನು ಇಟ್ಟುಕೊಂಡು 2015 ನೇ ಇಸವಿಯಿಂದ ವ್ಯಾಪಾರ ಮಾಡಿಕೊಂಡಿದ್ದು 2020ನೇ ಇಸವಿಯಿಂದ ಪಿರ್ಯಾದಿದಾರರು ಬೆಂಗಳೂರು ನಾಗಸಾಂದ್ರದ ಕರಿಬೊಮ್ಮನಹಳ್ಳಿಯಲ್ಲಿರುವ ಮೆ/ ಹಾಕ್ಸಿಜನ್  ಪೈಂಟ್ ಪ್ರೈ. ಲಿ. ಎಂಬ ಕಂಪೆನಿಯ ಮಾರಾಟದ ಪೈಂಟಿಂಗ್ ಉತ್ಪನ್ನದ ಪೂರೈಕೆಗೆ ಸಂಬಂಧಿಸಿದಂತೆ ಪಿರ್ಯಾದಿದಾರರೊಂದಿಗೆ ಕರಾರು ಪತ್ರ ಮಾಡಿಕೊಂಡಿದ್ದು ಕರಾರು ಪತ್ರದ ಷರತ್ತಿನಂತೆ ಪಿರ್ಯಾದಿದಾರರು ನಂಬಿ 2020 ನೇ ಇಸವಿಯಲ್ಲಿ ರೂ. 12 ಲಕ್ಷದ ಡಿಡಿ ಮುಖಾಂತರ ಕುಲಶೇಖರ ಸಿಲ್ವರ್ ಗೇಟ್ ನಲ್ಲಿರುವ ಎಸ್ ಬಿ ಐ ಬ್ರ್ಯಾಂಚ್ ನಲ್ಲಿ ಆರೋಪಿ ಹೊಂದಿದ  ಪೈಂಟ್ ನ್ನು ಸರಬರಾಜು ಮಾಡಲು ಕಳುಹಿಸಿಕೊಟ್ಟಿದ್ದು ಅದರಂತೆ ಮೆ/ ಹಾಕ್ಸಿಜನ್  ಪೈಂಟ್ ಪ್ರೈ. ಲಿ ಇದರ ಮಾಲಕ/ಪ್ರತಿನಿಧಿಯಾದ ಆರೋಪಿ ರಾಜ್ ಕುಮಾರ್ ಎನ್. ಹೆಚ್. ಎಂಬಾತನು ಕಡಿಮೆ ಗುಣಮಟ್ಟದ ರೂ. 4,35,806/- ಮೌಲ್ಯದ ಪೈಂಟನ್ನು ಸರಬರಾಜು ಮಾಡಿದ್ದು ಬಾಕಿ ಉಳಿದ ರೂ. 7,65,000/- ಮೌಲ್ಯದ ಪೈಂಟ್ ವಸ್ತುಗಳನ್ನು ವ್ಹೇ ಬಿಲ್ ನಲ್ಲಿ ನಮೂದಿಸಿದ ಒಪ್ಪಂದದ ನಿಯಮದ ಪ್ರಕಾರ ಪಿರ್ಯಾದಿದಾರರಿಗೆ ಕಳುಹಿಸಿಕೊಡದೇ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.

ಇತ್ತೀಚಿನ ನವೀಕರಣ​ : 28-11-2022 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080